ಬಹಳಷ್ಟು ಮಂದಿ ಹಾವು ಕಂಡ ಕೂಡಲೇ ಕೊಲ್ಲಲ್ಲು ಮುಂದಾಗುತ್ತಾರೆ. ಹಾವು ಎಂದರೆ ವಿಷ ಎಂಬ ತಪ್ಪು ತಿಳಿವಳಿಕೆಯೂ, ಅವುಗಳ ಬಗ್ಗೆ ಇರುವ ಕಪೋಲಕಲ್ಪಿತ ಕಥೆಗಳೂ ಇದಕ್ಕೆ ಕಾರಣ. ಪಟ್ಟಣ – ನಗರ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡವೆಂದರೆ ಅವುಗಳ ಸಾವು ಖಚಿತ ಎಂದಾಗಿಬಿಟ್ಟಿದೆ. ಈ ನಡುವೆ ಕೆಲವರು ಉರಗತಜ್ಞರಿಗೆ ಕರೆ ಮಾಡಿ ಹಾವನ್ನು ಹಿಡಿದು ಕಾಡಿಗೆ ಬಿಡುವಂತೆ ಮಾಡುತ್ತಾರೆ. ಇದೇ ಪ್ರವೃತ್ತಿಯನ್ನು ಎಲ್ಲರೂ ಅನುಕರಿಸುವುದು ಅಗತ್ಯ.
ಈ ನಿಟ್ಟಿನಲ್ಲಿ ವಿಷ ಇರುವ ಹಾವುಗಳು ಯಾವುವು, ವಿಷ ಇಲ್ಲದ ಹಾವುಗಳು ಯಾವುವು, ಜನವಸತಿ ಪ್ರದೇಶದಲ್ಲಿ ಅವುಗಳು ಕಾಣಿಸಿಕೊಂಡಾಗ...
ಭತ್ತದ ಗದ್ದೆಗಳಲ್ಲಿ ಇಲಿಗಳ ಹಾವಳಿ ವಿಪರೀತವಾಗಿದೆ. ಇವುಗಳು ಕೊಯ್ಲಿಗೆ ಸಿದ್ದವಾದ ಪೈರುಗಳನ್ನು ನಾಜೂಕಾಗಿ ಕತ್ತರಿಸಿ ಬಿಲಗಳ ಒಳಗೆ ಒತ್ತರಿಸಿ ಇಟ್ಟುಕೊಳ್ಳುತ್ತವೆ. ಒಂದೊ ಎರಡೋ ಇಲಿ ಆದರೆ ನಷ್ಟ ನಗಣ್ಯ ಎನ್ನಬಹುದು. ಆದರೆ ಒಂದು ಸೀಮಿತ ಪ್ರದೇಶದಲ್ಲಿ ಇವುಗಳ ಸಂಖ್ಯೆ ನೂರಾರು, ಸಾವಿರಾರು ಆದರೆ ಭತ್ತದ ಬೆಳೆಗಾರರು ಬದುಕುವುದಾದರೂ ಹೇಗೆ ? ಮೊದಲು ಕೆರೆಹಾವುಗಳು ಹೆಚ್ಚಾಗಿದ್ದವು. ಇವುಗಳು ಇಲಿಗಳನ್ನು ನಿಯಂತ್ರಿಸುತ್ತಿದ್ದವು. ಆದರೆ ಇತ್ತೀಚಿನ 20 ವರ್ಷಗಳಲ್ಲಿ ಇವುಗಳು ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆಯಾಗಿವೆ. ಇದರಿಂದ ಬೆಳೆನಷ್ಟವೂ ಹೆಚ್ಚುತ್ತಿದೆ. ಇಂಥ ಸಮಸ್ಯೆ ಬಗ್ಗೆ ಮಲೆನಾಡಿನ ಕೃಷಿಕರಾದ...
ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಅದು ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ ! ಎಂಬೆಲ್ಲ ಮಾತುಗಳು ಹರಿದಾಡತೊಡಗಿದವು.
ಬ್ರೆಜಿಲ್ ಮಾದರಿಯೆಂದರೆ ಹೇಗೆ ಬೆಳೆಯುತ್ತಾರೆ !? ಒಮ್ಮೆ ಹೋಗಿ ನೋಡಬೇಕೆಂಬ ಕುತೂಹಲ ಪ್ರಾರಂಭವಾಯಿತು. ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ...
ನನ್ನೊಂದಿಗೆ ನನಗಿಂತಲು ಹೆಚ್ಚಾಗಿ ಕೆಲಸ ಮಾಡುವ ಸೈನಿಕರುಗಳಿದ್ದಾರೆ. ಹೌದು “ಸರಗೂರು ಕರಿಯರು” ಅಂದರೆ ಕಪ್ಪು ಇರುವೆ ಅಥವಾ “ ಬ್ಲಾಕ್ ಗಾರ್ಡನ್ ಆಂಟ್ಸ್” ಅದು ಹೇಗೆ ಇಲ್ಲಿ ನೋಡಿ.ಇದು ಮಣ್ಣಿನ ಮೇಲಿರುವ ರೈತನ ಮಿತ್ರ ಎಂದರು ತಪ್ಪಾಗುವುದಿಲ್ಲ, ರೀ ರಘು ಎನ್ರಿ ಸುಮ್ನೆ ಕಥೆ ಹೊಡಿಯುತ್ತಿರಿ, ಅದು ಕಚ್ಚೊದಿಲ್ಲವಾ? ಅಂತಾ ಕೇಳುತ್ತಿರಾ ? ಇಲ್ಲ, ಇದರ ಚಮತ್ಕಾರದ ಕೆಲಸ ನೋಡಿ ಸ್ವಾಮಿ.. ಒಂದಾ, ಎರಡಾ ?
ಬಹುತೇಕ ಇದರ ಗೂಡುಗಳು ಮಣ್ಣಿನ ಒಳಗೆ ಇರುತ್ತದೆ, ಚಕ್ರವ್ಯೂಹದಂತೆ (ತೊಡಕಾದ ದಾರಿಗಳು) ಮಣ್ಣನ್ನು ತೊಡಿಕೊಂಡು ಗಿಡದ ಬೇರುಗಳಿಗೆ...
ಬೆಳೆಗಳಿಗೆ ಯಾವುದೇ ಸಾವಯವ ಗೊಬ್ಬರ ,ಹಸಿರೆಲೆ ಗೊಬ್ಬರ, ಕೋಳಿ ಗೊಬ್ಬರ, ಆಡಿನ ಹಿಕ್ಕೆ,ತೆಂಗಿನ ನಾರು, ಅಡಿಕೆ ಸಿಪ್ಪೆ......ಕೊಡುವಾಗ ಅದನ್ನು ಕಾಂಪೋಸ್ಟ್ ಮಾಡಿಕೊಡುವುದು ಒಳ್ಳೆಯದು. ಎಷ್ಟು ಸಾಧ್ಯವೋ ಅಷ್ಟು ಹಸಿಯಾಗಿರುವಾಗಲೇ ಕಾಂಪೋಸ್ಟ್ ಮಾಡುವುದು ಒಳಿತು. ಯಾಕೆಂದರೆ ಸಸ್ಯಭಾಗಗಳು ಒಣಗುವಾಗ ಲಿಗ್ನೈನ್ ಅಂಶ ಹೆಚ್ಚಾಗುತ್ತದೆ, ಆಗ ಕರಗುವಿಕೆ ನಿಧಾನವಾಗುತ್ತದೆ.
ಇಂಗಾಲ ಸಾರಜನಕ ಅನುಪಾತ ಕರಗುವಿಕೆಯ ವೇಗವನ್ನು ನಿರ್ಧರಿಸುತ್ತದೆ. ತೆಂಗಿನ ನಾರು,ಅಡಿಕೆ ಸಿಪ್ಪೆ, ಒಣ ವಸ್ತುಗಳಲ್ಲಿ ಇಂಗಾಲದ ಅಂಶ ತೀರಾ ಹೆಚ್ಚು ಇರುತ್ತದೆ.ಕರಗುವಿಕೆ ವೇಗವಾಗಿ ನಡೆಯಬೇಕಾದರೆ ಇಂಗಾಲ ಸಾರಜನಕದ ಅನುಪಾತ 20:1 ಆಗಬೇಕು.ಅದಕ್ಕಾಗಿ ಸಾರಜನಕ ಗಂಜಲ,ಸಗಣಿ, ಯೂರಿಯಾ ರೂಪದಲ್ಲಿ...
ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ ಕೃಷಿಭೂಮಿಗೆ ಹಾಗೆಯೇ ಬಂದು ಠಿಕಾಣಿ ಹಾಕುತ್ತವೆ. ಗೊಬ್ಬರ - ನೀರು ಕೊಡದಿದ್ದರೂ ಪರವಾಗಿಲ್ಲ - ತನಗೇನಾಗಲ್ಲ ಎಂಬಂತೆ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ. ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ. ಇವನ್ನು ನಿರ್ನಾಮ ಮಾಡಲು ರೈತರು ಕಾರ್ಕೋಟಕ ವಿಷವಾಗಿರುವ ಕಳೆನಾಶಕಗಳನ್ನು ಬಳಸುತ್ತಾರೆ. ಕಳೆಗಳು ಕಣ್ಮರೆಯಾಗುತ್ತವೋ - ಇಲ್ಲವೋ ಗೊತ್ತಿಲ್ಲ. ಆದರೆ ಕಳೆನಾಶಕದ ದುಷ್ಪರಿಣಾಮ ಮಣ್ಣಲ್ಲಿನ ಉಪಯುಕ್ತ ಜೀವಾಣುಗಳ ಮೇಲಂತೂ ನಿರಂತರವಾಗಿ ಆಗುತ್ತಿದೆ.
ಕಳೆಗಿಡಗಳು ಮಣ್ಣಿನ ಆರೋಗ್ಯದ ಸ್ಥಿತಿ - ಗತಿಗಳನ್ನು ತಿಳಿಸುವ...
ಕೊರೊನಾ ಸಾಂಕ್ರಮಿಕ ಪಿಡುಗಿನ ಕಾರಣದಿಂದ ದೇಶ ಹಿಂದೆಂದೂ ಕಂಡರಿಯದ ಲಾಕ್ ಡೌನ್ ಕ್ರಮಕ್ಕೆ ಒಳಗಾಯಿತು. ಈ ಅವಧಿಯಲ್ಲಿ ಬಹುತೇಕ ಕ್ಷೇತ್ರಗಳ ವ್ಯವಹಾರ ಸ್ಥಗಿತವಾದವು. ಆದರೆ ಈ ಸಮಯದಲ್ಲಿಯೂ ಅತ್ಯಂತ ಸಕ್ರಿಯವಾಗಿದ್ದ ಕ್ಷೇತ್ರವೆಂದರೆ “ಕೃಷಿಕ್ಷೇತ್ರ” ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಕರು ಅಂಜದೇ ಅಳುಕದೇ ತಮ್ಮ ಕಾಯಕ ಮುಂದುವರಿಸಿದರು. ಇದರಿಂದಾಗಿಯೇ ಇಂದು ಅತ್ಯವಶ್ಯಕ ಆಹಾರಧಾನ್ಯಗಳು, ತರಕಾರಿಗಳು ಮತ್ತು ಹಣ್ಣು ಹಂಪಲುಗಳಿಗೆ ಕೊರತೆಯಾಗಿಲ್ಲ. ಇದಕ್ಕಾಗಿ ಅನ್ನದಾತರಿಗೆ ಜನತೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಕೃಷಿಕರು ತಮ್ಮ ಕಾಯಕ ಮುಂದುವರಿಸಲು ಅನುಕೂಲವಾಗುವಂತೆ ವ್ಯವಸಾಯಕ್ಕೆ ಬೇಕಾದ ಒಳಸುರಿಗಳು ಮತ್ತು ಯಂತ್ರೋಪಕರಣಗಳ ಮಳಿಗೆಗಳನ್ನು...
ಕುಪ್ಪಣ್ಣಯ್ಯಂಗಾರ್ರವರ ಕಾಲಾನಂತರ ಅವರ ಮಕ್ಕಳು ಬ್ಯಾಟರಾಯಸ್ವಾಮಿ ದೇವಸ್ಥಾನದ ಅರ್ಚಕರಾಗಿ ಮುಂದುವರೆದಿದ್ದರು. ಅವರಲ್ಲಿ ನಾಗರಾಜು ಮತ್ತು ರಮೇಶ ಇಬ್ಬರೂ ದೇವಸ್ಥಾನದ ಕೆಲಸದ ಜೊತೆ ತೋಟ- ಮನೆಯ ಕೆಲಸವನ್ನೂ ನೋಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೆರಡು ಮಿಶ್ರತಳಿ ಹಸುಗಳಿದ್ದೇ ಇರುತ್ತಿದ್ದವು. ಆ ಹಾಲನ್ನೇ ಅವರು ಮನೆಯ ಬಳಕೆಗೆ ಇಟ್ಟುಕೊಂಡು ಡೈರಿಗೂ ಹಾಕುತ್ತಿದ್ದರು.
ನೊಣವಿನಕೆರೆಯ ಡೈರಿಯು ಆಗ ನಾನಿದ್ದ ಬಾಡಿಗೆ ಮನೆಯ ಪಕ್ಕದಲ್ಲಿತ್ತು. ದಿನವೂ ಬೆಳಿಗ್ಗೆ ಮತ್ತು ಸಾಯಂಕಾಲ ಹಾಲು ಹಾಕಲು ಬಂದ ನೂರಾರು ರೈತರು ಕಾಣಸಿಗುತ್ತಿದ್ದರು. ಅವರೆಲ್ಲರೂ ಯಾವ ಕೃತ್ರಿಮತೆಯಿಲ್ಲದೆ ತಮ್ಮ ಕಷ್ಟ ಸುಖಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು....
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಅಧಿಕವಾಗುತ್ತಿದ್ದು ಪ್ರತೀ ವರ್ಷ ಅನೇಕ ಜನರು ಪರದಾಡುವಂತಾಗುತ್ತಿದೆ. ದೇಶದಾದ್ಯಂತ ಪ್ರವಾಹ, ಭೂಕುಸಿತ, ಬರ, ಚಂಡಮಾರುತ, ಬಿಸಿಗಾಳಿ, ಸಿಡಿಲು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಒಂದಿಲ್ಲೊಂದು ಪ್ರದೇಶದಲ್ಲಿ ಘಟಿಸುತ್ತಲಿವೆ. ಇಂತಹ ಸಂದರ್ಭಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ ವಿಕೋಪ ನಿರ್ವಹಣಾ ಸಂಸ್ಥೆಯ ಸಮಯೋಚಿತ ಮುನ್ಸೂಚನೆ ಮತ್ತು ಮುಂಜಾಗ್ರತಾ ಕ್ರಮಗಳಿಂದಾಗಿ ಪ್ರಾಣ ಹಾನಿ ಕಡಿಮೆಯಾಗುತ್ತಿದೆ. ಆರ್ಥಿಕ ನಷ್ಟದಲ್ಲಿಯೂ ಇಳಿಕೆಯಾಗುತ್ತಿದೆ.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಮತ್ತು ಭೂಕುಸಿತದಂತಹ ವಿಕೋಪಗಳು ಘಟಿಸಿವೆ. ಈ ವರ್ಷವೂ ಹವಾಮಾನ ಇಲಾಖೆಯು...
Horticulture
ಕ್ಯಾಶ್ಯೂ ಇಂಡಿಯಾ ಆಪ್ : ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ವಿನೂತನ ಹೆಜ್ಜೆ
Agriculture India - 0
ಬಹಳ ಖುಷಿಯ ಸುದ್ದಿ!! ನಮ್ಮ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನಿಂದ “ಕ್ಯಾಶ್ಯೂ ಇಂಡಿಯಾ (Cashew India)” ಆಪ್ ನ್ನು ಗೇರು ಕೃಷಿಕರು ಹಾಗೂ ಗೇರಿಗೆ ಸಂಬಂಧಿಸಿದ ಎಲ್ಲರಿಗಾಗಿ ಅಭಿವೃದ್ಧಿಗೊಳಿಸಿದ್ದೇವೆ. ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಇದು ಕೃಷಿ ಆಸಕ್ತರೆಲ್ಲರೂ ನೋಡಲೇಬೇಕಾದ ಅನನ್ಯ ಆಪ್. ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ಇದೊಂದು ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ನಮ್ಮದು. ಸುಮಾರು ಒಂದು ವರ್ಷದ ಹಲವರ ಶ್ರಮ ಇದರ ಹಿಂದಿದೆ.
‘ಕೃಷಿಕಸ್ನೇಹಿ’, ‘ಸಮಗ್ರ ಮಾಹಿತಿ’, ‘ಸುಲಭ ಬಳಕೆ’ ‘ದೇಶವ್ಯಾಪಿ‘ ಮಾನದಂಡಗಳನ್ನಿಟ್ಟುಕೊಂಡು ರೂಪಿಸಿದ ಈ ‘ಕ್ಯಾಶ್ಯೂ ಇಂಡಿಯಾ’...