ಬೆಳೆಗಳನ್ನು ಕಾಪಾಡುವ ಕಪ್ಪು ಸೈನಿಕರು !

ಈಗ ಹೇಳಿ ಸ್ವಾಮಿ ಅವುಗಳು ಎಷ್ಟೊಂದು ಬಗೆಯ ಕೆಲಸಗಳನ್ನು ಮಾಡುತ್ತವೆ ಎಂದು ! ಇನ್ನೊಂದು ಆಸಕ್ತಿದಾಯ ವಿಚಾರ ಈ ಕಪ್ಪು ಇರುವೆಗಳು ತಮ್ಮ ಗೂಡಿನಿಂದ ಮೊಟ್ಟೆಗಳು ಮತ್ತು ಆಹಾರವನ್ನು ಬೇರೆಡೆಗೆ ಸಾಗಿಸುತ್ತಿದ್ದರೆ ಮೂರು ದಿನದೊಳಗಾಗಿ ನಿಶ್ಚಿತವಾಗಿ ಮಳೆ ಬರುತ್ತದೆ, ಇರುವೆಗಳು ತಮ್ಮ ಸ್ಥಳ ಬದಲಾಯಿಸುವಿಕೆ, ಮಳೆ ಬರುವ ಸೂಚನೆಯಾಗಿರುತ್ತದೆ.

1

ನನ್ನೊಂದಿಗೆ ನನಗಿಂತಲು ಹೆಚ್ಚಾಗಿ ಕೆಲಸ ಮಾಡುವ ಸೈನಿಕರುಗಳಿದ್ದಾರೆ. ಹೌದು “ಸರಗೂರು ಕರಿಯರು” ಅಂದರೆ ಕಪ್ಪು ಇರುವೆ ಅಥವಾ “ ಬ್ಲಾಕ್ ಗಾರ್ಡನ್ ಆಂಟ್ಸ್” ಅದು ಹೇಗೆ ಇಲ್ಲಿ ನೋಡಿ.ಇದು ಮಣ್ಣಿನ ಮೇಲಿರುವ ರೈತನ ಮಿತ್ರ ಎಂದರು ತಪ್ಪಾಗುವುದಿಲ್ಲ, ರೀ ರಘು ಎನ್ರಿ ಸುಮ್ನೆ ಕಥೆ ಹೊಡಿಯುತ್ತಿರಿ, ಅದು ಕಚ್ಚೊದಿಲ್ಲವಾ? ಅಂತಾ ಕೇಳುತ್ತಿರಾ ? ಇಲ್ಲ, ಇದರ ಚಮತ್ಕಾರದ ಕೆಲಸ ನೋಡಿ ಸ್ವಾಮಿ.. ಒಂದಾ, ಎರಡಾ ?
ಬಹುತೇಕ ಇದರ ಗೂಡುಗಳು ಮಣ್ಣಿನ ಒಳಗೆ ಇರುತ್ತದೆ, ಚಕ್ರವ್ಯೂಹದಂತೆ (ತೊಡಕಾದ ದಾರಿಗಳು) ಮಣ್ಣನ್ನು ತೊಡಿಕೊಂಡು ಗಿಡದ ಬೇರುಗಳಿಗೆ ಸಮನಾದ ನೀರು ಮತ್ತು ಗಾಳಿಯನ್ನು ಕೊಡಲು ಇವು ದಾರಿ ಮಾಡಿಕೊಡುತ್ತವೆ. ಹಾಗೆಯೇ ಅವು ಸಹ ಒಳಗಿನ ಸಣ್ಣಸಣ್ಣ ಕಲ್ಲುಗಳನ್ನು ಮೇಲೆ ತಂದು ಉಳುಮೆ ಮಾಡುತ್ತವೆ.
ಸುತ್ತಮುತ್ತಲಿನ ಗಿಡಗಳ ಕೀಟಗಳನ್ನು ಮತ್ತು ಎಲೆಗಳನ್ನು ತನ್ನಗೂಡಿಗೆ ತಂದು ಕಳಸಿ ಗೊಬ್ಬರ ಮಾಡುತ್ತವೆ.. ಡೀಕಂಪೊಸರನಂತೆ ಕೆಲಸ ಮಾಡುತ್ತದೆ ಹೌದು, ಸಾವಯವ ತ್ಯಾಜ್ಯ ಮತ್ತು ಸತ್ತ ಪ್ರಾಣಿ,ಹುಳಗಳನ್ನು ತಿಂದು ಪೊಷಕಾಂಶಗಳನ್ನು ಒದಗಿಸುತ್ತವೆ.
ತಮ್ಮ ಗೂಡನ್ನು ತಯಾರಿಸಿಕೊಳ್ಳಲು ಕೊಳೆತ/ಖಾಯಿಲೆಗೆ ಬಿದ್ದ ಮರದ ಕೊಂಬೆ ಅಥವಾ ಒಣಗಿದ ಕಡ್ಡಿಗಳನ್ನು ತೆಗದುಕೊಂಡು ಅಕ್ಷರಸಹ ಪರಿಸರವನ್ನು ಸ್ವಚ್ಚಗೊಳಿಸುತ್ತವೆ. ಅವುಗಳು ಹೋದ ನಂತರ ಫಂಗೈ ಮತ್ತು ಬ್ಯಾಕ್ಟೀರಿಯಾ ಬೆಳೆಯಲು ಸಹಕಾರಿಯಾಗುತ್ತವೆ ಮತ್ತು ದೊಡ್ಡ ಪ್ರಮಾಣದಲ್ಲಿ ಲೆಗ್ನೀನ್ ಮತ್ತು ಸೆಲ್ಲೂಲಸ್ ಕರಗಿಸಲು ಸಹಕಾರಿಯಾಗುತ್ತದೆ.
ಬಹುತೇಕ ಇರುವೆಗಳು ಪರಭಕ್ಷಕಗಳೂ (predators) ಹೌದು, ಸಸ್ಯಗಳು, /ಬೆಳೆಗಳ ಮೇಲೆ ದಾಳಿ ಇಡುವ ಕೀಟಗಳನ್ನು ಭಕ್ಷಿಸಿ ರಕ್ಷಿಸುತ್ತವೆ. ಹಾಗೇಯೇ ಅದರ ಊಟವನ್ನು ಹೆಕ್ಕಿಕೊಂಡು ಹೊಗುವ ಕಾರ್ಯದಲ್ಲಿ ಅವು ಪುಷ್ಪ(ಹೂ)ಗಳನ್ನು ಪರಾಗಸ್ಪರ್ಶಿ ಬೀಜಗಳನ್ನು ವಿಸ್ತರಿಸುತ್ತವೆ. ಪಾಪ ಅವುಗಳೂ ಇನ್ನಿತರ ಎಷ್ಟೋ ಕೀಟ, ಪಕ್ಷಿ ಮತ್ತು ಸಸ್ತನಿಗಳಿಗೆ ಆಹಾರವಾಗುತ್ತವೆ ನಮ್ಮ ಪರಿಸರ ವ್ಯವಸ್ಥೆಯಲ್ಲಿ ಇವೇಲ್ಲವು ಬಹುಮುಖ್ಯ ಅದುವೆ ಪರಿಸರದ ನಿಯಮ.
ನಿಮ್ಮ ತೋಟಗಳಲ್ಲಿ ಒಂದು ದೊಡ್ಡ ಸಂಖ್ಯೆಯಲ್ಲಿ ಕಪ್ಪು ಇರುವೆಗಳು ಮರದಿಂದ ಮೇಲೆ ಕೇಳಗೆ ಒಡಾಡುತ್ತಿದ್ದರೆ ಅಲ್ಲಿ ಆಫೀಡ್ಸ್ ಮತ್ತು ಮೀಲಿಬಗ್ಸ್ ಹಾಗು ರಸಹೀರುವ ಕೀಟಗಳು ಇವೆ ಎಂದು ಅರ್ಥ, ಈ ಕೀಟಗಳು ಸಿಹಿಹಂಟಿನ ದ್ರವ್ಯವನ್ನು ಉತ್ಪಾದಿಸುತ್ತವೆ. ಅದನ್ನು ಹನಿಡ್ಯೂ ಅಂತಲೂ ಕರೆಯುತ್ತಾರೆ.
ಈ ಇರುವೆಗಳು ಸಿಹಿದ್ರವ್ಯವನ್ನು ಪಡೆಯಲು ತನ್ನ ಮೀಸೆಯಂತಿರುವ ಅಂಟೆನಾದಿಂದ ಕೀಟಗಳನ್ನು ಬಡಿದು ಹೀರಿಕೊಳ್ಳುತ್ತವೆ ಮತ್ತು ತಮ್ಮ ವಿ಼ಶೇಷವಾಗಿ ರಚಿತವಾದ ಹೊಟ್ಟೆಯಲ್ಲಿ ಶೇಖರಿಸುತ್ತವೆ ಅದನ್ನು ಕ್ರಾಪ್ ಎಂದು ಕರೆಯುತ್ತಾರೆ. ಹಾಗೆಯೇ ಅವಗಳನ್ನು ತಂದು ರಾಣಿ ಇರುವೆ ಮತ್ತು ಕೆಲಸಗಾರ ಇರುವೆಗಳಿಗೆ ಕೊಡುತ್ತವೆ.. ಇನ್ನೂ ಕೆಲವು ಇರುವೆಗಳು ಮನುಷ್ಯರಂತೆ ಬುದ್ದಿ ಉಪಯೋಗಿಸಿ ಆಫೀಡ್ಸ್ ಗಳನ್ನು ತನ್ನ ಗೂಡಿಗೆ ಕೊಂಡುಹೋಗಿ ಅದಕ್ಕೆ ಬೇಕಾದ ಊಟಗಳನ್ನು ಒದಗಿಸಿ ಸಿಹಿದ್ರವ್ಯವನ್ನು ಪಡೆಯುತ್ತವೆ.


ಈಗ ಹೇಳಿ ಸ್ವಾಮಿ ಅವುಗಳು ಎಷ್ಟೊಂದು ಬಗೆಯ ಕೆಲಸಗಳನ್ನು ಮಾಡುತ್ತವೆ ಎಂದು ! ಇನ್ನೊಂದು ಆಸಕ್ತಿದಾಯ ವಿಚಾರ ಈ ಕಪ್ಪು ಇರುವೆಗಳು ತಮ್ಮ ಗೂಡಿನಿಂದ ಮೊಟ್ಟೆಗಳು ಮತ್ತು ಆಹಾರವನ್ನು ಬೇರೆಡೆಗೆ ಸಾಗಿಸುತ್ತಿದ್ದರೆ ಮೂರು ದಿನದೊಳಗಾಗಿ ನಿಶ್ಚಿತವಾಗಿ ಮಳೆ ಬರುತ್ತದೆ, ಇರುವೆಗಳು ತಮ್ಮ ಸ್ಥಳ ಬದಲಾಯಿಸುವಿಕೆ, ಮಳೆ ಬರುವ ಸೂಚನೆಯಾಗಿರುತ್ತದೆ.
ಮನುಷ್ಯರು ಮಾತ್ರ ಬುದ್ದಿವಂತರಲ್ಲ; ಇತರ ಪ್ರತಿಯೊಂದು ಜೀವಿ ಕಣವು ಬುದ್ದಿ ಉಪಯೋಗಿಸುತ್ತವೆ ಅದರೆ ಅವು ತಮ್ಮ ಸ್ವಾರ್ಥಕ್ಕೆ ಅಲ್ಲ, ತನ್ನ ಜೀವನವನ್ನು ಸಾಗಿಸುವುದಕ್ಕೆ ಅವಗಳು ಬದುಕುತ್ತವೆ ಬದುಕಿಸುತ್ತವೆ. ನಾವು ಇವುಗಳಿಂದ ಕಲಿಯಬೇಕು ಬದುಕಿ ಬದುಕಲುಬಿಡಿ. ಗಾಂಧಿಯವರ ಮಾತಿನಲ್ಲಿ ಪ್ರಕೃತಿ ಮನುಷ್ಯನ ಆಸೆಗಳನ್ನು ತೀರಿಸುತ್ತದೆ ಆದರೆ ಅವನ ದುರಾಸೆಯನ್ನಲ್ಲ. ಇಂತಹ ಅದೆಷ್ಟೊ ಸೂಕ್ಷ್ಮಜೀವಿಗಳು ಭೂಮಿಯಲ್ಲಿವೆ ಅದರೆ ನಾವುಗಳು ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳನ್ನು ಬಳಸಿ ಅವುಗಳ ಜೀವಗಳನ್ನು ತೆಗೆದು, ನಾವು ಸಾಯುತ್ತಿದ್ದೇವೆ; ಭೂಮಿಯನ್ನೂ ನಾಶ ಮಾಡುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗಳಿಗೆ ಒಂದು ಸುಂದರ – ಸುಸ್ಥಿರ – ಪರಿಸರ ಬಿಟ್ಟು ಹೋಗೊಣ.
– ರಘು ರಾಮಾನುಜಂ.

1 COMMENT

  1. ಹೌದು.
    ಇವೆಲ್ಲದರ ಜೊತೆಗೆ ಈ ಇರುವೆಗಳು ತೋಡುವ ಬಿಲಗಳಿಗೂ ನೈಸರ್ಗಿಕ ಮಹತ್ವವಿದೆ. ಅವು ಮಳೆನೀರಿಂಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

LEAVE A REPLY

Please enter your comment!
Please enter your name here