Home Blog Page 103
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳ ನವೆಂಬರ್ 11, 12 ಮತ್ತು 13 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಡಿಜಿಟಲ್ ಆಯಾಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಗರಿಷ್ಠ ಸಂಖ್ಯೆಯ ಕೃಷಿಕರು ಇದರ ಪ್ರಯೋಜನ ಪಡೆಯಬಹುದೆಂದು ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ತಿಳಿಸಿದರು. ಬೆಂಗಳೂರು ನಗರದ ಜಿಕೆವಿಕೆ ಆವರಣದಲ್ಲಿರುವ ಕುಲಪತಿ ಕಚೇರಿಯಲ್ಲಿ ಇಂದು ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೊರೊನಾದ ಕರಿಛಾಯೆ ಎಲ್ಲ ಕ್ಷೇತ್ರಗಳ ಬಿದ್ದಿದೆ. ಆದರೆ ಕೃಷಿಯೋಧರು ಅದನ್ನು ಎದುರಿಸಿ ಎಂದಿನಂತೆ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಆಹಾರದ...
  ಮುಂಗಾರು ಬೆಳೆ ಸಮೀಕ್ಷೆ ಶೇ.100 ರಷ್ಟು ಯಶಸ್ವಿಯಾಗಿದೆ. ಇದೇ ಮಾದರಿ ಹಿಂಗಾರು ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ತೀರ್ಮಾನಿಸಿದೆ.ಈ ದಿಶೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಲಾಖಾಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ರೈತರೇ ಹಿಂಗಾರು ಬೆಳೆ ಸಮೀಕ್ಷೆಯನ್ನು ಕೂಡ ಯಶಸ್ವಿಯಾಗಿ ನಡೆಸುವ ಬಗ್ಗೆ  ಚರ್ಚಿಸಿದರು. ಮಾಸ್ಟರ್ಸ್ ಗಳಿಗೆ ಹಿಂಗಾರು ಬೆಳೆ ಸಮೀಕ್ಷೆ ಬಗ್ಗೆ ತರಬೇತಿ ನೀಡುವುದು, ಮಾಸ್ಟರ್ಸ್ ತರಬೇತುದಾರರಿಂದ ಖಾಸಗಿ ನಿವಾಸಿಗಳಿಗೆ (ಪಿಆರ್ ಓ) ರೈತರ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ತರಬೇತಿ ನೀಡಲಾಗುವುದು. ಬಳಿಕ...
ಕೆಲವು ದಿನಗಳ ಹಿಂದೆ ಕೃಷಿ ಸಂಬಂಧಿತ ಮೂರು ಮಸೂದೆಗಳಿಗೆ ಅಂಗೀಕಾರ ದೊರೆಯಿತು.ಅವು ರೈತರಿಗೆ ವರವಾಗಲಿವೆ ಎಂಬಂತೆ ಪ್ರಚಾರ ಕೂಡ ನಡೆಯಿತು. ಇನ್ನೊಂದೆಡೆ ಅವು ರೈತರಿಗೆ ಅಷ್ಟೇ ಅಲ್ಲ, ಇಡೀ ಕೃಷಿವಲಯಕ್ಕೆ ಮಾರಕ ಎಂಬ ವಿರೋಧವೂ, ಪ್ರತಿಭಟನೆಗಳೂ ನಡೆದವು. ಈ ಸಂದರ್ಭದಲ್ಲಿ ನಾನು ವಾಟ್ಸಾಪಿನಲ್ಲಿ ಎರಡು ವಿಡಿಯೋ ನೋಡಿದೆ. ಒಂದು ರೈತಸಂಘದವರು ಪ್ರತಿಭಟನೆ ನಡೆಸುತ್ತ ಮಾರುಕಟ್ಟೆ ಬಂದ್ ಮಾಡುತಿದ್ದರು. ಅಲ್ಲೊಬ್ಬ ಅಜ್ಜನಿಗೆ ತಾವೇಕೆ ಹೀಗೆ ಮಾಡುತಿದ್ದೇವೆ ಎಂಬುದನ್ನು ವಿವರಿಸುತಿದ್ದರು. ಬಹುಶಃ ಆ ಅಜ್ಜ ರೈತನಾಗಿಲ್ಲದಿರಬಹುದು. ಅಥವಾ ಈ ಹಿಂದೆ ರೈತನಾಗಿರಲೂಬಹುದು. ಆದರೆ, ಆ ಸಮಯದಲ್ಲಿ...
ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ (ಜಿಕೆವಿಕೆ) ಆವರಣದಲ್ಲಿ ನವೆಂಬರ್ 11, 12 ಮತ್ತು 13ರಂದು ವಿಭಿನ್ನ ಕೃಷಿಮೇಳ ನಡೆಯಲಿದೆ. ಭಾಗವಹಿಸಲು ಇಚ್ಛಿಸುವವರು ಇದರ ವಿವರಗಳನ್ನು ತಿಳಿಯುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ಸ್ಥಳಕ್ಕೆ ತೆರಳಿದ ನಂತರ ನಿರಾಶೆಯಿಂದ ಹಿಂದಿರುಗುವಂಥ ಪ್ರಸಂಗ ಎದುರಾಗಬಹುದು. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ನೀಡಲಾಗಿದೆ. ಕೊರೊನಾ (ಕೋವಿಡ್-19) ಲಾಕ್ಡೌನ್ ಅವಧಿಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳ ಕಾರ್ಯಾಚರಣೆ ಸ್ಥಗಿತವಾಗಿತ್ತು. ಆದರೆ ಕೃಷಿಕರು ಆಹಾರ ಉತ್ಪಾದನೆಯ ಯೋಧರಾಗಿ ದಣಿವರಿಯದೇ ತಮ್ಮ ಕಾಯಕದಲ್ಲಿ ನಿರತರಾಗಿದ್ದರು. ಸಂದಿಗ್ಧ ಪರಿಸ್ಥಿಯಲ್ಲೂ ತಮ್ಮ ದಿನನಿತ್ಯದ ಕೆಲಸ...
ಶೀರ್ಷಿಕೆ ನೋಡಿ ಆಶ್ಚರ್ಯ- ಕುತೂಹಲವಾಗಿರಬಹುದಲ್ಲವೇ ? ಹಿರಿಯರು “ಮನೆಗೆದ್ದು ಮಾರುಗೆಲ್ಲು” ಎನ್ನುತ್ತಾರೆ. ಇದರ ಅರ್ಥ ವಿಶಾಲವಾಗಿದೆ. ಯಾವುದೇ ಪ್ರಕಾರದ ವಿಜ್ಞಾನಿಗಳಾಗಲಿ ಮೊದಲು ನಾವಿರುವ ಭೂ ಗ್ರಹವನ್ನು ಸಂಪೂರ್ಣ ಅರ್ಥಮಾಡಿಕೊಳ್ಳಬೇಕು. ಈ ನಂತರವೇ ಅನ್ಯಗ್ರಹಗಳ ಒಳಗೆ ಇಣುಕಿ ನೋಡಬೇಕು. ಪ್ರಜೆಗಳ ಅಪಾರ ಮೊತ್ತದ ತೆರಿಗೆ ಹಣವನ್ನೂ ಇದಕ್ಕಾಗಿ ವ್ಯಯಿಸುವ ಸರ್ಕಾರ ಕೂಡ ಇದಕ್ಕೆ ಆದ್ಯತೆ ನೀಡಬೇಕು. ಆದರೆ ನಮ್ಮಲ್ಲಿ ಇದು ಉಲ್ಟಾ ಆಗಿದೆ. ರೈತರು ಕೃಷಿ ಮಾಡುತ್ತಿರುವ ಸಾಕಷ್ಟು ಸಸ್ಯಗಳಿಗೆ ರೋಗ ತಗುಲಿದೆ. ಇದರ ಮೂಲ ಮತ್ತು ಔಷಧ ಸಂಶೋಧಿಸಲು ಇಂಬು ನೀಡಬೇಕಾದ ಸರ್ಕಾರ...
ಪ್ರಕೃತಿಯೊಂದಿಗೆ ಸದಾ ಒಡನಾಡುವ ಕೃಷಿಕರು ಹಂಗಾಮುಗಳಿನುಸಾರ ಅದರ ಚರಚರಾ ಜೀವಿಗಳಿಗೂ ಕೃತಜ್ಞತೆ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಈ ಆಚರಣೆಗಳು ಕಡಿಮೆಯಾಗಿವೆಯಾದರೂ ನಿಂತಿಲ್ಲ. ಇನ್ನೊಂದು ವಿಶೇಷ ಸಂಗತಿಯೇಂದರೆ ಓದು, ಉದ್ಯೋಗ ನಿಮಿತ್ತ ನಗರಗಳಿಗೆ ತೆರಳಿದ ಗಮನಾರ್ಹ ಸಂಖ್ಯೆಯ ಯುವಜನತೆ ಸ್ವಗ್ರಾಮಗಳಿಗೆ ಬಂದು ಪಾಲ್ಗೊಳ್ಳುತ್ತಿರುವುದು. ಈ ಆಚರಣೆ ಪರಿಚಯ ಇಲ್ಲದವರಿಗೆ “ಭೂಮಿತಾಯಿಗೆ ಬಯಕೆ ಹಾಕೋದು'” ಎನ್ನುವ ಮಾತೇ ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಮುಂಗಾರು ಹಂಗಾಮಿನಲ್ಲಿ ಬಿತ್ತಿದ/ನಾಟಿ ಮಾಡಿದ ವಿವಿಧ ಬೆಳೆಗಳು ಬಲು ಹಸಿರಾಗಿ ಬೆಳೆದು ಭೂಮ್ತಾಯಿ ಹಸಿರು ಸೀರೆಯುಟ್ಟು ಮುಗುಳ್ನಗೆ ಚೆಲ್ಲುತ್ತಿರುತ್ತಾಳೆ. ಇಂಥ ಸಂದರ್ಭವನ್ನು ಕೃಷಿಕರು ಮನೆಮಗಳಿಗೆ...
ಮಲೆನಾಡಿನಲ್ಲಿ ಕಾಡಂಚಿನಲ್ಲಿ ಇರುವ ಕೃಷಿಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗುತ್ತಿದೆ. ಕಷ್ಟಪಟ್ಟು ಬೆಳೆಸಿದ ಫಸಲು ಕೊಯ್ಲಿಗೆ ಮುನ್ನವೇ ವನ್ಯಪ್ರಾಣಿಗಳ ಪಾಲಾಗುತ್ತಿದೆ. ಕಾಡು ತೊರೆದ ಮಂಗಗಳು ಜನವಸತಿ ಇರುವ ಪ್ರದೇಶದೊಳಗೆ ಸೇರಿಕೊಂಡಿವೆ. ತೋಟದ ಹಣ್ಣಿನ ಫಸಲು ಭಕ್ಷಿಸುವುದಲ್ಲದೇ ಹೀಚುಗಳೂ ಕಾಯಿಗಳಾಗಲು ಬಿಡದೇ ಕಿತ್ತಾಕುತ್ತಿವೆ. ಮಂಗಗಳ ಹಾವಳಿ ನಿಯಂತ್ರಿಸಲು ಮಲೆನಾಡಿಗರು ಮಾಡಿದ ಉಪಾಯ ಒಂದೆರಡಲ್ಲ. ಅನುಸರಿಸಿದ ಒಂದೆರಡು ದಿನಗಳಷ್ಟೆ ಇವು ಪ್ರಯೋಜನಕಾರಿಯಂತೆ ಕಂಡರೂ ಮೂರನೇ ದಿನಕ್ಕೆ ಮತ್ತೆ ಯಥಾಸ್ಥಿತಿ. ಮತ್ತೊಂದು ಪ್ರಯೋಗಕ್ಕೆ ಅಣಿಯಾಗಬೇಕು. ಅದರದು ವಿಫಲತೆಯೇ. ಹೀಗಾಗಿ ನಿಸ್ಸಾಹಯಕವಾಗಿ...
ವನ್ಯಪ್ರಾಣಿಗಳಿಂದ ದಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನಜಿಲ್ಲೆಯೊಂದರಲ್ಲೇ ಇದುವರೆಗೆ ಇವುಗಳಿಂದ ಹತರಾದವರ ಸಂಖ್ಯೆ ಅರುವತ್ತು ದಾಟಿದೆ. ನಗರ ಪ್ರದೇಶಕ್ಕೆ ಇವುನೆಗಳು ಬಂದು ದಾಂಧಲೆ ಮಾಡಿದಾಗ ಮಾದ್ಯಮಗಳಲ್ಲಿ ಸಿಕ್ಕುವ ಪ್ರಚಾರ, ಕೂಲಿ ಕಾರ್ಮಿಕರು ಮಡಿದಾಗ ರೈತರ ಬೆಳೆ ನಾಶವಾದಾಗ ಸಿಕ್ಕುವುದಿಲ್ಲ. ಬದಲಿಗೆ ಇದೊಂದು ಮಾಮೂಲಿ ಪುಟ್ಟದೊಂದು ಸುದ್ದಿಯಾಗುತ್ತದೆ ಅಷ್ಟೆ. ಕೇವಲ ಮೂವತ್ತು ವರ್ಷಗಳ ಹಿಂದಿನ ವಿದ್ಯಮಾನ ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಇವುಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದವು ಮಾಡಿದ ಹಾವಳಿ...
ಬಹಳಷ್ಟು ಮಂದಿ ಹಾವು ಕಂಡ ಕೂಡಲೇ ಕೊಲ್ಲಲ್ಲು ಮುಂದಾಗುತ್ತಾರೆ. ಹಾವು ಎಂದರೆ ವಿಷ ಎಂಬ ತಪ್ಪು ತಿಳಿವಳಿಕೆಯೂ, ಅವುಗಳ ಬಗ್ಗೆ ಇರುವ ಕಪೋಲಕಲ್ಪಿತ ಕಥೆಗಳೂ ಇದಕ್ಕೆ ಕಾರಣ. ಪಟ್ಟಣ – ನಗರ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡವೆಂದರೆ ಅವುಗಳ ಸಾವು ಖಚಿತ ಎಂದಾಗಿಬಿಟ್ಟಿದೆ. ಈ ನಡುವೆ ಕೆಲವರು ಉರಗತಜ್ಞರಿಗೆ ಕರೆ ಮಾಡಿ ಹಾವನ್ನು ಹಿಡಿದು ಕಾಡಿಗೆ ಬಿಡುವಂತೆ ಮಾಡುತ್ತಾರೆ. ಇದೇ ಪ್ರವೃತ್ತಿಯನ್ನು ಎಲ್ಲರೂ ಅನುಕರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವಿಷ ಇರುವ ಹಾವುಗಳು ಯಾವುವು, ವಿಷ ಇಲ್ಲದ ಹಾವುಗಳು ಯಾವುವು, ಜನವಸತಿ ಪ್ರದೇಶದಲ್ಲಿ ಅವುಗಳು ಕಾಣಿಸಿಕೊಂಡಾಗ...

Recent Posts