Home Blog Page 102
ಬೆಂಗಳೂರು: ರಾಜ್ಯದ ಕೃಷಿವಿಶ್ವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಈ ಮೂಲಕವೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತೀ ಜರೂರಿನ ಕಾರ್ಯ ಎಂದು ಕೃಷಿ ಸಚಿವ, ಕೃಷಿವಿಶ್ವದ್ಯಾಲಯಗಳ  ಸಹ ಕುಲಾಧಪತಿ ಬಿ.ಸಿ. ಪಾಟೀಲ್ ಕರೆ ನೀಡಿದರು. ಕೃಷ ವಿಶ್ವವಿದ್ಯಾಲಯ ಬೆಂಗಳೂರು 54ನೇ ಘಟಿಕೋತ್ವವದಲ್ಲಿ ಪದವಿದಧರು, ಸ್ನಾತಕೋತ್ತರ ಪದವಿಧರರು, ಪಿ.ಎಚ್.ಡಿ. ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವವಿದ್ಯಾಲಯಗಳಿವೆ. ಇವುಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ...
ಬೆಂಗಳೂರು: ನವೆಂಬರ್ 28, 2020 ರಂದು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಆಯೋಜಿತವಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಪಿಎಚ್,ಡಿ. ಪಡೆದವರಿಗೆ ಪದವಿ ಪ್ರಮಾಣಪತ್ರ ಪ್ರಧಾನ ಮಾಡಲಾಗುವುದು ಎಂದು ಕುಲಪತಿ ಡಾ.‌ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು. ಅವರಿಂದು ಜಿಕೆವಿಕೆ ಆವರಣದಲ್ಲಿರುವ ನಾಯಕ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದೇ ಕ್ಯಾಂಪಸಿನಲ್ಲಿರುವ ಡಾ.‌ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಈ ಘಟಿಕೋತ್ಸವವನ್ನು ಕಳೆದ ಏಪ್ರಿಲ್‌ನಲ್ಲಿಯೇ ನಡೆಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಬಾರಿ ಒಟ್ಟು 986 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ...
ಕರ್ನಾಟಕದ ಡೈರಿ ಉದ್ಯಮದಲ್ಲಿ "ಅಕ್ಷಯಕಲ್ಪ" ಒಂದು ವಿಶಿಷ್ಟ ಮತ್ತು ಮಹತ್ವಪೂರ್ಣ ಪ್ರಯೋಗ. ಮೂಲಪ್ರವರ್ತಕರಾದ ಡಾ. ಜಿ.ಎನ್.ಎಸ್. ರೆಡ್ಡಿ ಮತ್ತು ಈಗಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕುಮಾರ್ ಅವರ ನೇತೃತ್ವದಲ್ಲಿ ಸರಿಯಾಗಿ ಹತ್ತು ವರ್ಷದ ಹಿಂದೆ ತಿಪಟೂರು, ಚನ್ನರಾಯಪಟ್ಟಣ, ಅರಸೀಕೆರೆ ಭಾಗದಲ್ಲಿ ಆರಂಭ ಇಂದು ಈ ಸಾವಯವ ಹಾಲು ಉದ್ಯಮ ಗಟ್ಟಿಯಾಗಿ ನೆಲೆಯೂರಿ, ಯಶಸ್ಸಿನತ್ತ ಸಾಗುತ್ತಿದೆ. ಮೊದಲೇ ಹೇಳಿದಂತೆ ಅಕ್ಷಯಕಲ್ಪ ವಿಶಿಷ್ಟ ಪ್ರಯೋಗ. ಸುಮಾರು ನಾಲ್ಕೈದು ಎಕರೆ ಜಮೀನು ಇರುವ ರೈತ ಕುಟುಂಬವೊಂದು 15-25 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆ ಮಾಡಿ ಸಾವಯವ ಹಾಲು (Organic Milk)...
ಯಾವುದೇ ಸಿಹಿತಿಂಡಿಯಾಗಲಿ ಗೋಡಂಬಿ ಹಾಕಿದರೆ ಅದರ ಅಂದ – ರುಚಿ ಎರಡೂ ಹೆಚ್ಚು. ಸಂಸ್ಕರಿತ ಗೇರಿಗೆ ಅಂದರೆ ಗೋಡಂಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇತ್ತೀಚಿಗೆ ಅದರ ಬೆಲೆ ಏರುತ್ತಾ ಹೋಗುತ್ತಿದೆ. ಇದು ಬೆಳೆಗಾರರಿಗೂ ಅನುಕೂಲ. ಏಕೆಂದರೆ ಇತರ ತೋಟಗಾರಿಕೆ ಬೆಳೆಗಳ ಕೃಷಿಗೆ ಮಾಡುವಷ್ಟು ವೆಚ್ಚವನ್ನಾಗಲಿ, ಶ್ರಮವನ್ನಾಗಲಿ ಇದು ಕೇಳುವುದಿಲ್ಲ, ತುಸು ಆರೈಕೆಗೆ ಸಂತೃಪ್ತಗೊಳ್ಳುವ ಸಸ್ಯಜೀವವಿದು. ನೀರನ್ನು ಸಹ ಹೆಚ್ಚು ಕೇಳುವುದಿಲ್ಲ. ಮೊದಲೆಲ್ಲ ಗೇರುಕೃಷಿ ಎಂದರೆ ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬ ಭಾವನೆ ಇತ್ತು. ಇತ್ತೀಚಿನ ದಶಕಗಳಲ್ಲಿ ವಿಜ್ಞಾನಿಗಳ ಪರಿಶ್ರಮದಿಂದ ಮಳೆಯಾಶ್ರಿತ ಬಯಲುಸೀಮೆ...
ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) ನಿಯಮಗಳು, 1999 ಜಾರಿಯಲ್ಲಿರುತ್ತದೆ.  ತದನಂತರ, 2014ರಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಕಳೆದ 20 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸಮಗ್ರ ಪರಿಷ್ಕರಣೆ ಮಾಡಿರಲಿಲ್ಲ.  ಪ್ರಸ್ತುತ ಅವಧಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗಿದೆ.   ಕೃಷಿ ಆಯುಕ್ತರು ಹಾಗೂ...
ಇಂದಿಗೂ ನಗರ – ಗ್ರಾಮೀಣ ಭಾಗದ ಸಾಕಷ್ಟು ಮಂದಿ ಯುವಜನತೆಯಲ್ಲಿ ಕೃಷಿ ಮಾಡುವು ಕುರಿತು ಕೀಳರಿಮೆ ಭಾವವಿದೆ. ಇದನ್ನವರು ತೊರೆಯಬೇಕು. ಅನ್ನದಾತರ ಮಹತ್ವ ಅರಿಯಬೇಕು. ಲಾಕ್ಡೌನ್ ಸಂದರ್ಭದಲ್ಲಿ ಬಹುತೇಕ ಕ್ಷೇತ್ರಗಳು ಸ್ಥಗಿತವಾಗಿತ್ತು. ಒಂದುವೇಳೆ ಕೃಷಿಕ್ಷೇತ್ರವೂ ತಟಸ್ಥವಾಗಿದ್ದರೆ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತಿತ್ತು. ಆದರೆ ಕೃಷಿಯೋಧರು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು. ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ 55ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಲಾಕ್ಢೌನ್ ಸಮಯದಲ್ಲಿ ಕೃಷಿಕಾರ್ಯಗಳಿಗೆ ಅಡಚಣೆಯಾಗದಂತೆ ಗ್ರೀನ್ ಕಾರ್ಡ್ ವಿತರಿಸಲಾಗಿತ್ತು. ಸದ್ಯದಲ್ಲಿಯೇ ಇವರೆಲ್ಲರಿಗೂ ಶಾಶ್ವತ ಗುರುತಿನಚೀಟಿ ನೀಡಲಾಗುವುದು. ಇದರಲ್ಲಿ ಅವರ ವೈಯಕ್ತಿಕ...
ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸುವ ನೇರ ಮಾರ್ಕೆಟಿಂಗ್ ಮಾಡಬೇಕು. ಕೃಷಿಗೆ ಕೃಷಿ ವಿಜ್ಞಾನಿಗಳು ಕೃಷಿ ಅಧಿಕಾರಿಗಳೇ ವೈದ್ಯರಾಗಬೇಕು. ವಿಶ್ವವಿದ್ಯಾಲಯದ ಜ್ಞಾನ ರೈತನಿಗೂ ಬಳಕೆಯಾಗಬೇಕು.. ಕೃಷಿ ವಿಶ್ವವಿದ್ಯಾಲಯಗಳು ಬರೀ ಕಾಂಪಾಂಡ್ಗಳಿಗೆ ಮಾತ್ರ ಮೀಸಲಾಗದೇ ರೈತಸ್ನೇಹಿಗಳಾಗಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಪಾದಿಸಿದರು. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಜಿಕೆವಿಕೆಯಲ್ಲಿ ಆವರಣದಲ್ಲಿನ ಕೃಷಿಮೇಳ ಸಮಾರೋಪ ಸಮಾರಂಭದಲ್ಲಿ ಅವರು ನೂತನ ತಳಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಗ್ರ ಕೃಷಿ ನೀತಿಯನ್ನು ಬಳಸಿ ವಿವಿಧ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಒತ್ತುಕೊಡಬೇಕು. ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು. ನವೀನ ತಂತ್ರಜ್ಞಾನ ಅಳವಡಿಕೆಯಿಂದ...
ರೈತಾಪಿ ಕುಟುಂಬದಿಂದ ಬಂದಿರುವ ಸ್ವತಃ ಕೃಷಿಕರು ಆಗಿರುವ ನಾನು, ಸ್ವತಃ ಕೃಷಿಯಲ್ಲಿನ ಅನುಭವದಿಂದ ಅನ್ನದಾತರ ಕಷ್ಟನಷ್ಟಗಳನ್ನು ಬಹಳ ಹತ್ತಿರದಿಂದ ಬಲ್ಲೆ. ಈ ಹಿನ್ನೆಲೆಯಲ್ಲಿ ಇವರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುವತ್ತ ಗಮನಹರಿಸಿದ್ದೇನೆ. ಕರ್ನಾಟಕ ರಾಜ್ಯ ಭೌಗೋಳಿಕವಾಗಿಯೂ – ಬೆಳೆ ವೈವಿಧ್ಯತೆಯಿಂದಲೂ ಕೂಡಿದೆ. ಆದ್ದರಿಂದ ಪ್ರತಿಜಿಲ್ಲೆ – ತಾಲ್ಲೂಕುಗಳ ರೈತಸಮಸ್ಯೆಗಳನ್ನು ಅರಿಯುವುದು ಅಗತ್ಯವಾಗಿದೆ. ಆದ್ದರಿಂದ ನನ್ನ ಜನ್ಮದಿನವಾದ ಅಕ್ಟೋಬರ್ 14 ರಿಂದ  “ರೈತರೊಂದಿಗೊಂದು ದಿನ” ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇನೆ.  “ರೈತರೊಂದಿಗೊಂದು ದಿನ” ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಿಂದ ಪ್ರಾರಂಭಿಸುತ್ತಿದ್ದೇನೆ. ಈ ಕಾರ್ಯಕ್ರಮವನ್ನು...
ನಮ್ಮ ದೈನಂದಿನದ ಆಹಾರ ಪದ್ಧತಿಯನ್ನು ಕೋವಿಡ್-19 ಸಾಂಕ್ರಾಮಿಕ ಪುನರ್ ವ್ಯಾಖ್ಯಾನಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರದ ಸೇವನೆ, ಸಾರ್ವಜನಿಕ-ಆರೋಗ್ಯ, ಆಹಾರ ಮತ್ತು ಕೃಷಿ ಕ್ಷೇತ್ರಗಳ ಸಹಯೋಗದ ಸಬಲೀಕರಣ,  ಮತ್ತಷ್ಟೂ ವೈವಿಧ್ಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರನ್ನು ಉತ್ತೇಜಿಸಬೇಕಾಗುತ್ತದೆ. ಇದಕ್ಕಾಗಿ ದೀರ್ಘಕಾಲಿಕ ಕ್ರಮಗಳನ್ನು ಅಳವಡಿಸುವುದು ಅಗತ್ಯವಾಗಿದೆ. ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಿ ಕೈಗೆಟುಕುವಂತಹ ಆರೋಗ್ಯಕಾರಿ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ, ಕೃಷಿ ಸಂಶೋಧನೆಯು ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಪರಿಸ್ಥಿತಿಗೆ ಆದ್ಯತೆ ನೀಡುತ್ತ ಕೃಷಿ ವಿಶ್ವವಿದ್ಯಾನಿಲಯವು 2019-20ರ ಸಂಶೋಧನಾ ಕಾರ್ಯಕ್ರಮಗಳನ್ನು ಮರು-ಸಂಘಟಿಸಿ ಕಾರ್ಯಗತಗೊಳಿಸಿತು. .ಪ್ರಸ್ತುತ ವರ್ಷದಲ್ಲಿ ಪೋಷಕಾಂಶಭರಿತ...
ಬೆಳೆ ಇಳುವರಿ ಹೆಚ್ಚಿಸಲು, ಹೊಸಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು, ಕೀಟಬಾಧೆ ನಿಯಂತ್ರಣ ಮಾಡಲು – ಸಸ್ಯರೋಗಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯಲು, ಅವಾರ್ಚೀನ – ಆಧುನಿಕ ಎರಡೂ ಪದ್ಧತಿ ಸಮನ್ವಯಗೊಳಿಸ ಸಂಶೋಧನೆಗಳನ್ನು ಮಾಡಲು, ಕೃಷಿಕಾರ್ಯಗಳನ್ನು ಸರಾಗವಾಗಿ ಮಾಡಲು ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಲು. ಕೃಷಿವೆಚ್ಚ ತಗ್ಗುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಬೇರೆಬೇರೆ ವಿಭಾಗಗಳ ವಿಜ್ಞಾನಿಗಳು ನಿರಂತರ ಶ್ರಮಿಸುತ್ತಿರುತ್ತಾರೆ. ಇವರ ಪರಿಶ್ರಮ ಸಕಾಲದಲ್ಲಿ ಸಮುದಾಯಗಳಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಘಟಕದ ಮೇಲಿರುತ್ತದೆ. ಇದಕ್ಕಾಗಿ ಇಲ್ಲಿನ ಹಿರಿಯ – ಕಿರಿಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಆದ್ದರಿಂದ ಸಹಜವಾಗಿಯೇ...

Recent Posts