ಲೇಖಕರು: ಡಾ. ಮೋಹನ್ ತಲಕಾಲುಕೊಪ್ಪ, ಕೃಷಿವಿಜ್ಞಾನಿ, ರಾಷ್ಟ್ರೀಯ ಗೇರು ಸಂಶೋಧನಾ ಸಂಸ್ಥೆ, ಪುತ್ತೂರು

ಯಾವುದೇ ಸಿಹಿತಿಂಡಿಯಾಗಲಿ ಗೋಡಂಬಿ ಹಾಕಿದರೆ ಅದರ ಅಂದ – ರುಚಿ ಎರಡೂ ಹೆಚ್ಚು. ಸಂಸ್ಕರಿತ ಗೇರಿಗೆ ಅಂದರೆ ಗೋಡಂಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇತ್ತೀಚಿಗೆ ಅದರ ಬೆಲೆ ಏರುತ್ತಾ ಹೋಗುತ್ತಿದೆ. ಇದು ಬೆಳೆಗಾರರಿಗೂ ಅನುಕೂಲ. ಏಕೆಂದರೆ ಇತರ ತೋಟಗಾರಿಕೆ ಬೆಳೆಗಳ ಕೃಷಿಗೆ ಮಾಡುವಷ್ಟು ವೆಚ್ಚವನ್ನಾಗಲಿ, ಶ್ರಮವನ್ನಾಗಲಿ ಇದು ಕೇಳುವುದಿಲ್ಲ, ತುಸು ಆರೈಕೆಗೆ ಸಂತೃಪ್ತಗೊಳ್ಳುವ ಸಸ್ಯಜೀವವಿದು. ನೀರನ್ನು ಸಹ ಹೆಚ್ಚು ಕೇಳುವುದಿಲ್ಲ.

ಮೊದಲೆಲ್ಲ ಗೇರುಕೃಷಿ ಎಂದರೆ ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬ ಭಾವನೆ ಇತ್ತು. ಇತ್ತೀಚಿನ ದಶಕಗಳಲ್ಲಿ ವಿಜ್ಞಾನಿಗಳ ಪರಿಶ್ರಮದಿಂದ ಮಳೆಯಾಶ್ರಿತ ಬಯಲುಸೀಮೆ ಪ್ರದೇಶಗಳಲ್ಲಿಯೂ ಉತ್ತಮವಾಗಿ ಬೆಳೆದು ಸಾಕಷ್ಟು ಇಳುವರಿ ನೀಡುವ ತಳಿಗಳ ಅಭಿವೃದ್ಧಿ ಆಗಿದೆ.

ಕೋಲಾರ – ಚಿತ್ರದುರ್ಗ – ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಪ್ರಗತಿಪರ ರೀತಿಯಲ್ಲಿ ಗೇರುಕೃಷಿ ಮಾಡುತ್ತಿರುವವ ಬೆಳೆಗಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇವರು ತಜ್ಞರ ಮಾರ್ಗದರ್ಶನದಲ್ಲಿ ಸೂಕ್ತ ಪೋಷಕಾಂಶಗಳನ್ನು ನೀಡಿ ಉತ್ತಮ ಇಳುವರಿಯನ್ನೂ ಪಡೆಯುತ್ತಿದ್ದಾರೆ.

ಗೇರುಕೃಷಿ ಮಾಡುವವರನ್ನು ಪ್ರೋತ್ಸಾಹಿಸಲು ಯೋಜನೆಗಳಿವೆ. ದಕ್ಷಿಣ ಕನ್ನಡಜಿಲ್ಲೆ ಪುತ್ತೂರು ಪಟ್ಟಣದಲ್ಲಿರುವ  ರಾಷ್ಟ್ರಿಯ ಗೇರು ಸಂಶೋಧನಾ ಕೇಂದ್ರದವರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 2020 – 21 ನೇ ಸಾಲಿನಲ್ಲಿ ಗೇರು ಕೃಷಿಗೆ ಪ್ರೋತ್ಸಾಹಧನವನ್ನು ನೀಡಲು ಅರ್ಜಿ ಆಹ್ವಾನಿಸಿದ್ದಾರೆ. ಪ್ರಸ್ತುತ ಇದು ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಅನ್ವಯಿಸುತ್ತದೆ. ಇಲ್ಲಿಯ ಆಸಕ್ತ ರೈತರು ಅರ್ಜಿ ಹಾಕಿಕೊಳ್ಳಬಹುದು.

ಇದು ೨೦೨೦-೨೧ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಗೇರು ಗಿಡಗಳ ಖರೀದಿ, ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಸೀಮಿತ. ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ಡಿಸೆಂಬರ್ ೩೧, ೨೦೨೦; ಮೊದಲು ಬಂದವರಿಗೆ ಆದ್ಯತೆ. ಅರ್ಜಿ ಫಾರ್ಮ್ ಡೌನ್ ಲೋಡ್ ಮಾಡಲು ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಜಾಲತಾಣಕ್ಕೆ https://cashew.icar.gov.in/rkvy ಭೇಟಿ ನೀಡಿ.

6 COMMENTS

  1. ತುಂಬಾ ಉಪಯ್ತ ಮಾಯಿಯನ್ನ ಕೊಡುತಿರುವುದಕ್ಕೆ ತುಂಬಾ ದನ್ಯವಾದಗಳು

  2. ಒಳ್ಳೆ ಒಳ್ಳೆ ಮಾಹಿತಿ ಪಡೀತಿದೀವಿ ನಿಮಗೆ ಧನ್ಯವಾದಗಳು ಇನ್ನು ಹೆಚ್ಛಾ ಗಿ ತಿಳಿಸಿಕೊಡಿ

LEAVE A REPLY

Please enter your comment!
Please enter your name here