ಬೆಂಗಳೂರು: ರಾಜ್ಯದ ಕೃಷಿವಿಶ್ವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಈ ಮೂಲಕವೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತೀ ಜರೂರಿನ ಕಾರ್ಯ ಎಂದು ಕೃಷಿ ಸಚಿವ, ಕೃಷಿವಿಶ್ವದ್ಯಾಲಯಗಳ  ಸಹ ಕುಲಾಧಪತಿ ಬಿ.ಸಿ. ಪಾಟೀಲ್ ಕರೆ ನೀಡಿದರು.

ಕೃಷ ವಿಶ್ವವಿದ್ಯಾಲಯ ಬೆಂಗಳೂರು 54ನೇ ಘಟಿಕೋತ್ವವದಲ್ಲಿ ಪದವಿದಧರು, ಸ್ನಾತಕೋತ್ತರ ಪದವಿಧರರು, ಪಿ.ಎಚ್.ಡಿ. ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವವಿದ್ಯಾಲಯಗಳಿವೆ. ಇವುಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದರು.

ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ – ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ. ಾನು ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದರ ಬಗ್ಗೆ ಆಸಕ್ತಿ ವಹಿಸಿದೆ. ಅದು ಇತ್ತೀಚೆಗೆ ತಿದ್ದುಪಡಿಯಾಗಿದೆ. ಆಹಾರ ಮತ್ತು ಕೃಷಿ ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇಕಡ 15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

ಪದವಿ, ಅತೀಹೆಚ್ಚು ಚಿನ್ನದ ಪದಕಗಳನ್ನು ಪಡೆದವರಲ್ಲಿ ವಿದ್ಯಾರ್ಥಿನಿಯರೇ ಅಧಿಕವಾಗಿದ್ದಾರೆ. ಇದು ಸಂತೋಷದ ಸಂಗತಿ. ಆದರೆ ಉದ್ಯಮಿಗಳಾದವರು, ಸರ್ಕಾರಿ  ಉದ್ಯೋಗಿಗಳಾದವರ ಸಂಖ್ಯೆ ಗಮನಿಸಿದರೆ ಮಹಿಳೆಯರು ಕಡಿಮೆ ಇದ್ದಾರೆ. ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೃಷಿ ನವೋದ್ಯಮಿಗಳಾಗಿ  ಹೊರಹೊಮ್ಮಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಈ ಮಾದರಿಯಲ್ಲಿ ಇಂಥ ವಿದ್ಯಾರ್ಥಿನಿಯರ ಜೀವನಪಥ ಮುಂದುವರಿಯಲು ಕೃಷಿ ವಿಶ್ವವಿದ್ಯಾಲಯ ಆಸಕ್ತಿ ವಹಿಸಬೇಕು ಎಂದು ಸೂಚಿಸಿದರು.

ಪದವಿಗಳನ್ನು ಪಡೆದ ಎಲ್ಲರನ್ನೂ ಶ್ಲಾಘಿಸಿದ ಅವರು ನಿಮ್ಮೆಲ್ಲರ ಸಾಧನೆ ಚಿನ್ನದ ಪದಕ –ಪಟ್ಟಿಗಳ್ನು ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು. ನಿಮ್ಮ ಜ್ಞಾನ ಕೃಷಿಕರ ಏಳಿಗೆಗೆ ಸದುಪಯೋಗವಾಗಬೇಕು. ನೀವು ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ. ನೊಂದ ರೈತ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕು.

ಭಾರತೀಯ ರೈತರದು ಮುಂಗಾರು ಮಳೆಯೊಂದಿಗಿನ ಜೂಜಿನ ಬದುಕು. ಮಳೆ ಅತಿಯಾದರೂ ಕಷ್ಟ – ತೀರಾ ಕಡಿಮೆಯಾದರೂ ಕಷ್ಟ. ಚಂಡಮಾರುತಗಳಿಂದಲೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಕೃಷಿಕರ ಏಳಿಗೆಗೆ ಕಾರಣವಾಗುವ ಕಾರ್ಯಗಳನ್ನು ನೀವೇಲ್ಲರೂ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಅಖಿಲ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಕೈಲಾಸವಡಿವೊ ಶಿವನ್ ಅವರು ಆನ್ ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು. ಬಲವಿದ್ದವರೇ ಬದುಕುತ್ತಾರೆ ಎಂದು ಡಾರ್ವೀನ್ ಥಿಯರಿ ಹೇಳುತ್ತದೆ. ಅಶಕ್ತರೂ ಬದುಕಬಲ್ಲ ಸಮಾಜವನ್ನು ಇನ್ನಷ್ಟು ಸದೃಢವಾಗಿ ಕಟ್ಟುವಲ್ಲಿ ನಿಮ್ಮ ಪಾತ್ರ ಗಣನೀಯ ಎಂದ ಅವರು ತಮ್ಮ ಕೃಷಿಕ ಕುಟುಂಬದ ಹಿನ್ನೆಲೆ, ವಿದ್ಯಾರ್ಥಿ ದೆಶೆಯಲ್ಲಿ ಕೃಷಿಕಾರ್ಯದಲ್ಲ ಕುಟುಂಬದ ಹಿರಿಯರಿಗೆ ಸಹಾಯ ಮಾಡುತ್ತಿದ್ದನ್ನು ನೆನೆದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರು ಸ್ವಾಗತ ಕೋರಿ ಶೈಕ್ಷಣಿಕ ವರದಿ ಮಂಡಿಸಿದರು. ಕುಲಸಚಿವರು ಸಾಂಪ್ರದಾಯಿಕ ಘಟಿಕೋತ್ಸವ ನಡವಳಿ ನೇತೃತ್ವ ವಹಿಸಿದ್ದರು.

ಪದವಿಧರರು ನೇರವಾಗಿ ಮತ್ತು ಆನ್ ಲೈನ್ ಮಖಾಂತರವೂ ಭಾಗವಹಿಸಿದ್ದರು.ಸಮಾರಂಭಕ್ಕೆ ಬಂದ ಇವರ ಕುಟುಂಬ ಸದಸ್ಯರು, ಆಸಕ್ತರಿಗೆ ನಡವಳಿಯ ಕಲಾಪವನ್ನು ಸಭಾಂಗಣದ ಹೊರಗೆ ಹಾಕಿದ್ದ ಬೃಹತ್ ಸಿಸಿಟಿವಿ ಪರದೆಗಳ ಮೂಲಕ ನೇರ ಪ್ರಸಾರ ಮಾಡಲಾಯಿತು

LEAVE A REPLY

Please enter your comment!
Please enter your name here