- ಡಾ. ಗೌತಮ್ ಗೌಡ
ಒಂದು ದಿನ ಬೆಳಗ್ಗೆ ಒಬ್ಬ ವೃದ್ಧರ ತಮ್ಮ ಪ್ರೀತಿಯ ನಾಯಿ ಸೋನಿಯನ್ನು ಆಸ್ಪತ್ರೆಗೆ ಲಗುಬಗೆಯಿಂದ ಕರೆದುಕೊಂಡು ಬಂದರು. ಅವರ ಪ್ರಕಾರ ನಾಯಿಗೆ ಈಗ ಎರಡು ತಿಂಗಳು ಗರ್ಭ, ಎರಡು ದಿನಗಳಿಂದ ಮೊಲೆಗಳು ಊದಿ ಧಾರಾಕಾರವಾಗಿ ಹಾಲು ಒಸರುತ್ತಿದೆ, ನಾಯಿಯು ಮೂಲೆಗಳಲ್ಲಿ ಮತ್ತು ಮಂಚದ ಕೆಳಗೆ ಅವಿತುಕೊಳ್ಳುತ್ತಿದೆ, ಒಂದು ಕಡೆ ಕುಳಿತುಕೊಳ್ಳುತ್ತಿಲ್ಲ, ಮರಿ ಹಾಕುವ ಎಲ್ಲ ಲಕ್ಷಣಗಳಿದ್ದರೂ ಮರಿ ಮಾತ್ರ ಹೊರಗೆ ಬರುತ್ತಿಲ್ಲ ಎಂದರು.
ಈ ಎಲ್ಲ ಲಕ್ಷಣಗಳನ್ನು ಕೇಳಿದ ನಂತರ ನಾವು ಸೋನಿಯನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ಗೆ ಒಳಪಡಿಸಿದೆವು. ಆಗ ನಮಗೆ ತಿಳಿದು ಬಂದ ಸತ್ಯವನ್ನು ನಾವು ಆ ವೃದ್ಧರಿಗೆ ತಿಳಿಸಿದೆವು. ಆದರೆ ಅವರಿಗೆ ಆಶ್ಚರ್ಯ ಹಾಗೂ ನಂಬಲಾಗದ ಮನಸ್ಥಿತಿ, ಯಾಕೆಂದರೆ ನಾಯಿಯು ಗರ್ಭವನ್ನೇ ಧರಿಸಿಲ್ಲ ಎಂದು ನಾವು ಹೇಳಿದ ಸತ್ಯವನ್ನು ಅವರಿಗೆ ಜೀರ್ಳ್ಳಣಿಸಿಕೊಳ್ಳಲಾಗುತ್ತಿಲ್ಲ. ನಾಯಿಯ ಮೊಲೆಯಿಂದ ಹಾಲು ಒಸರುತ್ತಿದೆ, ನಾಯಿಯು ಕುಳಿತು ಏಳುತ್ತಿದೆ, ಮರಿ ಹಾಕುವ ಎಲ್ಲ ಲಕ್ಷಣಗಳಿವೆ, ಆದರೂ ನಾಯಿಯು ಗರ್ಭವೇ ಧರಿಸಿಲ್ಲ ಎಂದರೆ ಏನರ್ಥ?
ಹೌದು ಈ ಪರಿಸ್ಥಿತಿಯನ್ನು ಪಶುವೈದ್ಯಕೀಯ ಭಾಷೆಯಲ್ಲಿ ಮಿಥ್ಯಗರ್ಭ(PSEUDO PREGNANCY)ಎಂದು ಕರೆಯಲಾಗುವುದು.
ಯಾವಾಗ ಮಿಥ್ಯಗರ್ಭ ಸಂಭವಿಸುತ್ತದೆ?
ನಾಯಿಯು ಬೆದೆಗೆ ಬಂದು2-3 ತಿಂಗಳ ನಂತರ ಮಿಥ್ಯಗರ್ಭ ಸಂಭವಿಸಬಹುದು. ನಾಯಿಯು ಡೈಈಸ್ಟ್ರಸ್ ಹಂತದಲ್ಲಿಇದ್ದಾಗ ಸಂತಾನಹರಣ ಮಾಡಿಸುವುದರಿಂದ3-4 ದಿನಗಳಲ್ಲಿ ಮಿಥ್ಯಗರ್ಭ ಆಗುತ್ತದೆ. ನಾಯಿಯ ಜನನೇಂದ್ರಿಯಚಿಕಿತ್ಸೆಗೆ ಬಳಸಲಾಗುವ ಪ್ರೊಜೆಸ್ಟಿರಾನ್ ಎಂಬ ಹಾರ್ಮೋನ್ ಅನ್ನು ಒಮ್ಮೆಲೇ ನಿಲ್ಲಿಸುವುದರಿಂದ ಕೂಡ ಮಿಥ್ಯಗರ್ಭ ದಿನಗಳಲ್ಲಿ ಆಗಬಹುದು.
ಮಿಥ್ಯಗರ್ಭದ ಲಕ್ಷಣಗಳು:
ನಾಯಿಯ ಮೊಲೆಗಳು ಊದಿಕೊಂಡು ಅವುಗಳಿಂದ ಹಾಲು ಒಸರುವುದು. ಹೊಟ್ಟೆ ದಪ್ಪವಾಗುವುದು. ಮನೆಗಳಲ್ಲಿ ಮೂಲೆ ಹಾಗೂ ಮಂಚದ ಕೆಳಗೆ ಅವಿತು ಕುಳಿತುಕೊಳ್ಳುವುದು. ತನ್ನ ಮರಿಗಳ ಪೋಷಣೆಗಾಗಿ ಗೂಡುಕಟ್ಟುವುದು. ತಾಯಿಯ ನಡವಳಿಕೆಗಳಾದ ಮರಿಗಳ ಪೋಷಣೆ, ಸಂರಕ್ಷಣೆ, ಕೆಲವೊಂದು ಸಲ ನಿಜರ್ೀವ ವಸ್ತುಗಳ ಪೋಷಣ ೆಕೂಡ ಕಂಡು ಬರುತ್ತದೆ. ಕೆಲವೊಂದು ಅತಿರೇಕ ಸಂಧರ್ಭಗಳಲ್ಲಿ ನಾಯಿಯನ್ನು ಸಂಭಾಳಿಸುವುದು ಕಷ್ಟ ಸಾಧ್ಯವೇ ಸರಿ.
ಮಿಥ್ಯಗರ್ಭದ ವೈಜ್ಞಾನಿಕ ಕಾರಣಗಳು:
ನಾಯಿಯು ಬೆದೆಗೆ ಬಂದ 13-16 ದಿನಗಳಿಂದ ರಕ್ತದಲ್ಲಿ ಪ್ರೊಜೆಸ್ಟಿರಾನ್ ಎಂಬ ಹಾಮರ್ೋನು ಹೆಚ್ಚಾಗುತ್ತ ಹೋಗುತ್ತದೆ. ಈ ಅಂಶವು ಎರಡು ತಿಂಗಳವರೆಗೆ ಹಾಗೆ ಮುಂದುವರೆಯುತ್ತದೆ. ಡೈಈಸ್ಟ್ರಸ್ ಹಂತವು ಮುಗಿದತಕ್ಷಣವೇ ಪ್ರೊಜೆಸ್ಟಿರಾನ್ ಪ್ರಮಾಣವುರಕ್ತದಲ್ಲಿ ದಿಢೀರ್ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯುಈಸ್ಟ್ರೋಜನ್ ಮತ್ತು ಪ್ರೋಲ್ಯಾಕ್ಟಿನ್ ಎಂಬ ಹಾಮರ್ೋನುಗಳನ್ನು ಒಮ್ಮೆಲೇ ಬಿಡುಗಡೆ ಮಾಡಲು ಪ್ರಚೋದಿಸುತ್ತದೆ.
ದೇಹದಲ್ಲಿ ಬಹಳ ದಿನಗಳವರೆಗೆ ಪ್ರೊಜೆಸ್ಟಿರಾನ್ ಅಂಶವಿರುವುದರಿಂದ ನಾಯಿಯ ಮೊಲೆಗಳು ಬೆಳವಣಿಗೆ ಹೊಂದುತ್ತವೆ. ಒಮ್ಮೆಲೇ ಪೋಲ್ಯಾಕ್ಟಿನ್ ಹಾಮರ್ೋನಿನ ಬಿಡುಗಡೆಯಿಂದ ಹಾಲಿನ ಉತ್ಪಾದನೆಯು ಹೆಚ್ಚಾಗುತ್ತ ಹೋಗುತ್ತದೆ. ಈ ಎಲ್ಲ ಕಾರ್ಯಗಳು ನಾಯಿಯ ಗರ್ಭಾವಸ್ಥೆಯನ್ನು ಅವಲಂಭಿಸಿರುವುದಿಲ್ಲ, ಅಂದರೆ ನಾಯಿಯು ಗರ್ಭ ಧರಿಸಿದರೂ, ಧರಿಸದಿದ್ದರೂ ಈ ಕಾರ್ಯಗಳು ದೇಹದಲ್ಲಿ ನಡೆಯುತ್ತವೆ. ಯಾವಾಗ ನಾಯಿಗಳು ಗರ್ಭಧರಿಸುವುದಿಲ್ಲವೋ ಆ ಸಂಧರ್ಭಗಳಲ್ಲಿ ಮಿಥ್ಯಗರ್ಭಕ್ಕೆ ಎಡೆಯಾಗುತ್ತವೆ.
ಮಿಥ್ಯಗರ್ಭದ ಕೆಲವು ಸತ್ಯಗಳು:
ಮಿಥ್ಯಗರ್ಭಎಂಬುದು ಒಂದು ರೋಗವಲ್ಲ, ಬದಲಾಗಿ ಇದು ಹಾಮರ್ೋನುಗಳ ಏರಿಳಿತಗಳಿಂದಾಗುವ ದೇಹದ ಒಂದು ಅವಸ್ಥೆ ಅಷ್ಟೆ.
ಮಿಥ್ಯಗರ್ಭವು ನಾಯಿಯ ಜನನಾಂಗ ಸಂಭಂಧಿತ ರೋಗಗಳಿಗೆ ಎಡೆ ಮಾಡಿಕೊಡುವುದಿಲ್ಲ. ಅರವತ್ತು ಪ್ರತಿಶತ ಮಿಥ್ಯಗರ್ಭದಿಂದ ಬಳಲುವ ನಾಯಿಗಳು ತಮ್ಮಷ್ಟಕ್ಕೆ ತಾವೇ ಗುಣಮುಖರಾಗುತ್ತವೆ. ಮಿಥ್ಯಗರ್ಭಧ ಸಂಧರ್ಭಗಳಲ್ಲಿ ಸ್ರವಿಸುವ ಹಾಲು ಹಾಗೂ ನಿಜವಾದ ಗರ್ಭಾವಸ್ಥೆಯಲ್ಲಿ ಸ್ರವಿಸುವ ಹಾಲು ನೋಡಲು ಒಂದೇ ತೆರನಾಗಿಕಂಡರೂ ರಾಸಾಯನಿಕವಾಗಿ ಬೇರೆ ಬೇರೆಯಾಗಿರುತ್ತವೆ.
ಮಿಥ್ಯಗರ್ಭಧ ನಾಯಿಗಳ ಕಾಳಜಿ ಹಾಗೂ ನಿರ್ವಹಣೆ:
ಹೆಚ್ಚಿನ ಹಾಲು ಉತ್ಪಾದನೆಯನ್ನುಕಡಿಮೆ ಮಾಡಲು ನಾಯಿಗೆ ಕಡಿಮೆ ಕ್ಯಾಲೋರಿಯ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ನಾಯಿಯ ಮೊಲೆಗಳಿಂದ ಹಾಲನ್ನು ಕರೆಯಬಾರದು, ಇದರಿಂದ ಹೆಚ್ಚು ಹೆಚ್ಚು ಹಾಲು ಉತ್ಪಾದನೆಯಾಗಿ ಮೊಲೆ ಬಾವು ಉಂಟಾಗಿ ನೋವು ಹೆಚ್ಚಾಗುತ್ತದೆ. ಮೊಲೆಗಳ ಬಿಗಿತದ ನೋವು ಕಡಿಮೆ ಮಾಡಲು ಮಂಜುಗಡ್ಡೆಯ ತುಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ಮೊಲೆಗಳ ಮೇಲೆ ಇರಿಸಬೇಕು. ನಾಯಿಗೆ ಕೊಡುವ ಆಹಾರದಲ್ಲಿ ಒಂದು ಹೊತ್ತು ಆಹಾರವನ್ನು ನಿಲ್ಲಿಸುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ. ಈ ಎಲ್ಲ ಸಂಧರ್ಭಗಳಲ್ಲಿ ಪಶುವೈದ್ಯರ ಸಲಹೆ ಪ್ರಮುಖ ಪಾತ್ರ ವಹಿಸುತ್ತದೆ.
ಔಷಧೋಪಚಾರಗಳು:
ಮಿಥ್ಯಗರ್ಭದ ಚಿಕಿತ್ಸೆಗಾಗಿ ಡೋಪಮಿನ್ ಅಗೋನಿಷ್ಟ್ ಅಥವಾ ಸೆರಟೋನಿನ್ ಅಂಟಾಗೋನಿಷ್ಟ್ಗಳನ್ನು ಬಳಸಲಾಗುವುದು. ಕೆಬರಗೋಲಿನ್ ಮಾತ್ರೆ (2-8 ದಿನಗಳವರೆಗೆ) ಬ್ರೋಮೋಕ್ರಿಪ್ಟಿನ್ ಮಾತ್ರೆ (16 ದಿನಗಳವರೆಗೆ) ಈ ಔಷದಿಗಳ ಬಳಕೆಯಿಂದ ಕ್ರಮೇಣ ಒಂದು ವಾರದಲ್ಲಿ ಮಿಥ್ಯಗರ್ಭದ ಲಕ್ಷಣಗಳು ಕಡಿಮೆಯಾಗುತ್ತವೆ ಹಾಗೂ ನಾಯಿಯ ಮೊಲೆಗಳ ಊತ ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ. ಆದರೆ ಈ ಔಷದಿಗಳ ಅಡ್ಡ ಪರಿಣಾಮಗಳಿಂದ ಕೆಲವೊಮ್ಮೆ ವಾಂತಿಯಾಗುವುದು, ಊಟ ಬಿಡುವುದುಉಂಟು. ಆದ್ದರಿಂದ ಪಶುವೈದ್ಯರ ಸಲಹೆಯನ್ನು ಪಾಲಿಸುವುದು ಒಳಿತು.
ಕೆಲವೊಂದು ಗಂಭೀರ ಸಂಧರ್ಭಗಳಲ್ಲಿ ನಾಯಿಯನ್ನು ಹತೋಟಿಗೆ ತರಲು ಸಣ್ಣ ಪ್ರಮಾಣದ ಅರವಳಿಕೆಗಳನ್ನು ಕೊಡಬಹುದಾಗಿದೆ. ಈ ಎಲ್ಲಾ ಅಂಶಗಳು ನಮಗೆ ತಿಳಿದಿದ್ದರೆ ನಾವು ಮಿಥ್ಯಗರ್ಭದ ನಾಯಿಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಬಹುದಾಗಿದೆ.