
ಬೆಳೆ ವಿಮೆಗೆ ಸರ್ಕಾರ ಉತ್ಪಾದನಾ ವೆಚ್ಚದ ಶೇ 90% ಮೊತ್ತವನ್ನು ಪರಿಗಣಿಸಿ ರೈತರು ಪವತಿಸಬೇಕಾದ ಪ್ರೀಮಿಯಂ ನಿಗದಿಪಡಿಸುತ್ತಾರೆ.ಕೆಳಗಿನ ಪಟ್ಟಿಯಲ್ಲಿ ಭತ್ತದ ಉದಾಹರಣೆ ತೆಗೆದುಕೊಂಡರೆ ಒಂದು ಎಕರೆಯಲ್ಲಿ ಭತ್ತದ ಉತ್ಪಾದನೆ ಮಾಡಲು ರೂ 39,000/ವೆಚ್ಚ ತಗುಲುವ ಬಗ್ಗೆ ಸರ್ಕಾರವೇ ಅಧಿಕೃತವಾಗಿ ದೃಢಪಡಿಸಿರುತ್ತದೆ.
ಸರಾಸರಿ ಇಳುವರಿ 20 ಕ್ವಿಂಟಲ್ ರೀತಿ ಪ್ರತಿ ಕ್ವಿಂಟಲ್ ಭತ್ತದ ಉತ್ಪಾದನಾ ವೆಚ್ಚ ರೂ 1900/, ಇದಕ್ಕೆ ಕನಿಷ್ಟ ಶೇ 50% ಸೇರಿಸಿದಾಗ ಒಂದು ಕ್ವಿಂಟಲ್ ಭತ್ತದ ಬೆಲೆ ರೂ 2850/ ಆಗಬೇಕು,ಈ ರೀತಿ ಪ್ರತಿಯೊಂದು ಬೆಳೆಗೂ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು.ವಿಮೆ ಕಂಪನಿಗೆ ಒಂದು ನೀತಿ, ರೈತರ ಬೆಲೆ ನಿಗಧಿಗೆ ಒಂದು ನೀತಿ ಅನುಸರಿಸುತ್ತಿರುವುದು ತಾರತಮ್ಯ ನೀತಿ ಅಲ್ಲವೇ?
ಪ್ರತಿಯೊಂದು ಬೆಳೆ ಬೆಳೆಯಲು ತಗುಲುವ ಉತ್ಪಾದನಾ ವೆಚ್ಚವನ್ನು ಸರ್ಕಾರ ಪ್ರತಿ ವರ್ಷ ಅಧಿಕೃತವಾಗಿ ಪ್ರಕಟಿಸುವಂತೆ ರೈತರು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ರೈತರು ಬೆಳೆ ಬೆಳೆಯಲು ಹಾಕುವ ಬಂಡವಾಳ ಮತ್ತು ಶ್ರಮ ತಿಳಿದಾಗ ಆಹಾರದ ಮೌಲ್ಯದ ಬಗ್ಗೆ ಜನಸಾಮಾನ್ಯರಿಗೆ ಆರಿವು ಬರುತ್ತದೆ ಮತ್ತು ರೈತರಿಗೆ ಆಗುತ್ತಿರುವ ಶೋಷಣೆ ಬಗ್ಗೆ ತಿಳಿಯುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530