ಕೊಳೆರೋಗ ತಡೆಗೆ ಕಂಟ್ರೋಲ್, ಸಿರಿ, ಕೀಟಬಾಧೆ ತಡೆಗೆ ಸ್ಟಿಕ್ಕಿ ಟ್ರಾಪ್ಸ್ !

0
ಲೇಖಕರು: ಸೋಮಣ್ಣ ಗೌಡ, ಕೃಷಿಕರು

ನಮ್ಮ ಜಮೀನಿನ 18 ಎಕರೆಯಲ್ಲಿ ಮೆಣಸಿನ ಗಿಡಗಳಿವೆ. ಪ್ರತಿ ಬೆಳೆ ಅವಧಿಯಲ್ಲಿ ಮೂರು ಬಾರಿ ಬ್ಯಾರಿಕ್ಸ್ ಕಂಟ್ರೋಲ್, ಬ್ಯಾರಿಕ್ಸ್ ಸಿರಿ ಸಿಂಪಡಣೆ ಮಾಡುತ್ತೇವೆ. ಜೊತೆಗೆ ಕೀಟ, ನುಶಿ ಬಾಧೆ ನಿಯಂತ್ರಣಕ್ಕೆ ಯೆಲ್ಲೋ, ವೈಟ್, ಬ್ಲೂ ಸ್ಟಿಕ್ಕಿ ಟ್ರಾಪ್ ಗಳನ್ನು ಬಳಸುತ್ತಿದ್ದೇವೆ. ಮೊದಲನೇ ಹಂತ ಹಾಕಿದ ನಂತರ ಮತ್ತೆ ಎರಡು ಅಥವಾ ಎರಡೂವರೆ ತಿಂಗಳು ಬಿಟ್ಟು ಮತ್ತೊಂದು ಹಂತ ಹಾಕುತ್ತೇವೆ.

ಬೂದಿ ರೋಗ, ಕೋಳೆರೋಗ, ಹೂವು ಉದುರುವುದನ್ನು  ತಡೆಯುವುದು  ಮುಖ್ಯ. ಮೊದಲು ಇದಕ್ಕೆ ರಾಸಾಯನಿಕ ದ್ರಾವಣಗಳನ್ನು ಬಳಸುತ್ತಿದ್ದೆವು. ಏನೂ ಪ್ರಯೋಜನವಾಗಿರಲಿಲ್ಲ. ನಾಲ್ಕು ವರ್ಷದ ಹಿಂದೆ ಪರಿಚಯದ ರೈತರೊಬ್ಬರು ಬ್ಯಾರಿಕ್ಸ್ ಕಂಟ್ರೋಲ್, ಬ್ಯಾರಿಕ್ಸ್ ಸಿರಿ ಬಗ್ಗೆ ಹೇಳಿದರು. ಅಂದಿನಿಂದ ಸಿಂಪಡಣೆ ಮಾಡುತ್ತಿದ್ದೇವೆ.

ಕಳೆದ ಬಾರಿ ನಮ್ ಏರಿಯಾದಲ್ಲಿ ಬ್ಲಾಕ್ ಥ್ರಿಪ್ಸ್ ಬಾಧೆ ಹೆಚ್ಚಾಗಿತ್ತು. ಬಹಳಷ್ಟು ಮಂದಿ ವಿವಿಧ ರಾಸಾಯನಿಕ ದ್ರಾವಣಗಳನ್ನು ಭಾರಿ ಖರ್ಚು ಮಾಡಿ ಸಿಂಪಡಿಸಿದರೂ ಬೆಳೆ ಲುಕ್ಸಾನಾಗಿತ್ತು. ಆದರೆ ನಾವು ಬ್ಯಾರಿಕ್ಸ್ ಕಂಟ್ರೋಲ್, ಸಿರಿ ಜೊತೆಗೆ ಸ್ಟಿಕ್ಕಿ ಟ್ರಾಪ್ ಗಳನ್ನು ಬಳಸಿದ್ದ ಕಾರಣ ಥ್ರಿಪ್ಸ್ ಬಾದಿಸಲಿಲ್ಲ.

ನಮ್ಮ ಜಮೀನಿನ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಇದೆ.     ಇದಕ್ಕೆ ಕಾರಣ ಸಂಪೂರ್ಣ ಸಾವಯವವಾಗಿರುವ ಕಂಟ್ರೋಲ್ ಮತ್ತು ಸಿರಿ. ಸ್ಟಿಕ್ಕಿ ಟ್ರಾಪ್ಸ್ ಕೂಡ ರಾಸಾಯನಿಕ ದ್ರಾವಣಗಳನ್ನು ಸಿಂಪಡಿಸಿದೇ ಕೀಟ, ನುಸಿ ಬಾಧೆ ನಿಯಂತ್ರಣ ಮಾಡುವ ವ್ಯವಸ್ಥೆ. ಇವೆಲ್ಲದರ ಪರಿಣಾಮವಾಗಿ ಕಳೆದ ನಾಲ್ಕು ವರ್ಷದಿಂದ ಇಳುವರಿಯೂ ಶೇಕಡ 30ರಷ್ಟು ಹೆಚ್ಚಾಗಿದೆ.

ನಾವು ಇಂಡಾಫ್ ಮೆಣಸಿನಕಾಯಿ ಹಾಕಿದ್ದೇವೆ. ಇದು ಐದನೇ ತಿಂಗಳಿನಲ್ಲೇ ಕೊಯ್ಲಿಗೆ ಶುರುವಾಗುತ್ತದೆ. 6ನೇ ತಿಂಗಳಿನಿಂದಲೂ ಕೊಯ್ಲು ಶುರು ಮಾಡಬಹುದು. ಮೂರನೇ ಕೊಯ್ಲಿಗೆ ಗರಿಷ್ಠ ಅಂದರೆ ಒಂದು ಎಕರೆಗೆ ಸರಾಸರಿ 20 ಕ್ವಿಂಟಾಲ್ ಇಳುವರಿ ಬರುತ್ತದೆ. ಇದು ಆಯಾ ತಳಿ ಮೇಲೆ ಅವಲಂಬಿತ. ಒಂದು ಎಕರೆಗೆ 30 ಕ್ವಿಂಟಾಲ್ ಇಳುವರಿ ಕೊಡುವ ತಳಿಗಳೂ ಇವೆ.

ಜಾಸ್ತಿ ಇಳುವರಿ ನೀಡುವ ತಳಿಗಳ ಬಿತ್ತನೆ ಬೀಜಗಳು ಸಹ ಬಹು ದುಬಾರಿ. ಬರೇ ಒಳ್ಳೆ ಬಿತ್ತನೆಬೀಜ ತೆಗೆದುಕೊಂಡು ಬಿತ್ತನೆ ಮಾಡಿದಾಕ್ಷಣ ಉತ್ತಮ  ಇಳುವರಿ ಬರುವುದಿಲ್ಲ. ರೋಗ, ಕೀಟ ಬಾಧೆ ತಡೆಗಟ್ಟಬೇಕು. ಇಲ್ಲದಿದ್ದರೆ ಮಾಡಿದ ಖರ್ಚೆಲ್ಲ ನಷ್ಟವಾಗುತ್ತದೆ.

ಮುಖ್ಯವಾಗಿ ನಾವು ಭೂಮಿ ಹದ ಮಾಡಿದ ನಂತರ ಸಾವಯವ ಗೊಬ್ಬರಗಳನ್ನು ಹಾಕುತ್ತಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆ ಉತ್ತಮವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಸೋಮಣ್ಣ ಗೌಡ, ಕೃಷಿಕರು

ಮೂಡಬುಳ ಗ್ರಾಮ, ಶಹಾಪುರ ತಾ,

ಯಾದಗಿರಿ ಜಿಲ್ಲೆ

ಮೊಬೈಲ್: 99024 24975

LEAVE A REPLY

Please enter your comment!
Please enter your name here