ಮೊದಲು ನಮ್ಮ ಬೆಳೆ ಹಾಗೂ ರೈತರನ್ನು ರಕ್ಷಣೆ ಮಾಡಬೇಕು; ಮುಖ್ಯಮಂತ್ರಿ ಸೂಚನೆ

0

ಮೊದಲು ನಮ್ಮ ಬೆಳೆಗಳಿಗೆ ನೀರು ನೀಡಿ ಬೆಳೆಗಳ ರಕ್ಷಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರಿಂದು ಮೈಸೂರು  ಜಿಪಂನಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೈಸೂರು ಜಿಲ್ಲೆಗೆ ಕೆಆರ್ಎಸ್, ಕಬಿನಿ, ಹಾರಂಗಿಯಿಂದ ನೀರನ್ನು ರೈತರಿಗೆ ನೀಡಲಾಗುತ್ತಿದೆ. ನೀರಾವರಿ ಸಲಹಾ ಸಮಿತಿಯಿಂದ ನೀರಿನ ಸಂಗ್ರಹದ ಸಾಮರ್ಧ್ಯದ ಮೇಲೆ ಕಟ್ಟು ಪದ್ಧತಿಯ ಆಧಾರದ ಮೇಲೆ ನೀರು ಬಿಡಲಾಗುತ್ತಿದೆ. ಕೆಆರ್ ಎಸ್, ಕಬಿನಿ, ಹಾರಂಗಿಯ ಕಟ್ಟು ಪದ್ದತಿಯಲ್ಲಿ ಅರೆ ಬೇಸಾಯ ಪದ್ದತಿಯಲ್ಲಿ ನೀರು ಬಿಟ್ಟಿಧ್ದೇವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರಾದ ವೆಂಕಟೇಶ್ ವಿವರಿಸಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಬಿಡಬೇಕೆಂದಿಲ್ಲ. ಇಷ್ಟು ನೀರು ಇದ್ದರೂ ಆನ್ ಅಂಡ್ ಆಫ್ ನಲ್ಲಿ ಯಾಕೆ ನೀರು ಬಿಟ್ಟಿದ್ದೀರಾ ನಮ್ಮ ರೈತರ ಬೆಳೆಗಳಿಗೆ ಏಕೆ ನೀರು ಬಿಡಲಿಲ್ಲ.  ಮೊದಲು ನಮ್ಮ ಬೆಳೆ ಹಾಗೂ ರೈತರನ್ನು ರಕ್ಷಣೆ ಮಾಡಬೇಕು ಎಂದರು.

ತಮಿಳುನಾಡಿನಲ್ಲಿ 1.85  ಲಕ್ಷ ಎಕರೆ ಬದಲು ಈಗ 3 ಲಕ್ಷ ಎಕರೆಯಲ್ಲಿ ಬೆಳೆ ವಿಸ್ತರಣೆ ಮಾಡಿಕೊಂಡಿದ್ದಾರೆ. ಕೆಆರ್ ಎಸ್ ನಲ್ಲಿ 113 ಅಡಿ ಇತ್ತು, 102 ಅಡಿ ಈಗ ಇದೆ. ನಮ್ಮ ಬೆಳೆ ಉಳಿಸಿಕೊಳ್ಳಬೇಕು. ಆನ್ ಅಂಡ್ ಆಫ್ ನಲ್ಲಿ ಯಾಕೆ ನೀರು ಬಿಟ್ಟಿದ್ದೀರಾ. ಪೂರ್ಣ ಪ್ರಮಾಣದಲ್ಲಿ ಏಕೆ ನೀರು ಬಿಡಲಿಲ್ಲ. ನಮ್ಮ ಬೆಳೆ ಹಾಳಾಗುವಾಗ ಆನ್ ಅಂಡ್ ಆಫ್ ನಲ್ಲಿ ನೀರು ಬಿಡಲು ನೀರಾವರಿ ಸಲಹಾ ಸಮಿತಿ( ಐಸಿಸಿ) ನಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಇದು ಸರಿಯಾದದ್ದು ಅಲ್ಲ  ಎಂದು ಮುಖ್ಯಮಂತ್ರಿ ಹೇಳಿದರು.

ಸಂಕಷ್ಟ ಸೂತ್ರ ಇದ್ದಾಗ ಮಾತ್ರ ಆನ್ ಅಂಡ್ ಆಫ್ ನಲ್ಲಿ ನೀರು ಬಿಡಬೇಕು. ನಮ್ಮ ಜಲಾಶಯ ಭರ್ತಿ ಆಗಿರುವಾಗ ಆನ್ ಅಂಡ್ ಆಫ್ ನಲ್ಲಿ ಏಕೆ ನೀರು ಬಿಡಬೇಕು ಎಂದು  ಸಿದ್ದರಾಮಯ್ಯ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಕಮಿಟಿಯಲ್ಲಿ ಸಂಕಷ್ಟ ಸೂತ್ರದಂತೆ ಎಷ್ಟು ನೀರು ಬಿಡಬೇಕು ಎಂದು ನಿರ್ಧಾರ ಆಗುತ್ತದೆ. ಮೊದಲು ನಮ್ಮ ಬೆಳೆಗಳಿಗೆ ನೀರು ನೀಡಿ ಬೆಳೆಗಳ ರಕ್ಷಣೆ ಮಾಡಿ- ಎಂದು ಮುಖ್ಯಮಂತ್ರಿ ಮತ್ತೆ ಸೂಚಿಸಿದರು.

LEAVE A REPLY

Please enter your comment!
Please enter your name here