ಹವಾಮಾನ ಬದಲಾವಣೆಯಿಂದ  ಬಳಲುತ್ತಿರುವ ಸಣ್ಣ ರೈತರು

0
ಸಾಂದರ್ಭಿಕ ಚಿತ್ರ

ಲೇಖಕರು: ಜಿತೇಂದ್ರ ಚೌಬೆ

ನವದೆಹಲಿ: ಅಭಿವೃದ್ಧಿ ಗುಪ್ತಚರ ಘಟಕ (ಡಿಐಯು) ಸಹಯೋಗದೊಂದಿಗೆ ಫೋರಂ ಆಫ್ ಎಂಟರ್‌ಪ್ರೈಸಸ್ ಫಾರ್ ಇಕ್ವಿಟಬಲ್ ಡೆವಲಪ್‌ಮೆಂಟ್ (ಫೀಡ್) ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಹವಾಮಾನ ಬದಲಾವಣೆ-ಪ್ರೇರಿತ ಹವಾಮಾನ ವೈಪರೀತ್ಯಗಳು ಶೇಕಡ  60 ಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಳೆ ನಷ್ಟ ಮತ್ತು ಇಳುವರಿ ನಷ್ಟದ ರೂಪದಲ್ಲಿ ಸಣ್ಣ  ರೈತರ ಮೇಲೆ ದುಷ್ಪರಿಣಾಮ ಬೀರಿವೆ. ಬರಗಾಲದ ನಂತರದ ಪ್ರವಾಹದಂತಹ ಪರಿಸ್ಥಿತಿಗಳು ಸಹ ಗಮನಾರ್ಹವಾದ ಬೆಳೆ ನಷ್ಟಕ್ಕೆ ಕಾರಣವಾಗಿದೆ.

ಹಸಿರುಮನೆ ಅನಿಲಗಳ ಹೆಚ್ಚುತ್ತಿರುವ ಸಾಂದ್ರತೆಯು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ.  ಇದು ಪ್ರಾದೇಶಿಕ ಹವಾಮಾನ ಮಾದರಿಯನ್ನು ಬದಲಾಯಿಸುತ್ತಿದೆ . ‘ಸಣ್ಣ ರೈತರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ’ ವರದಿಯು ಯಾವುದೇ ಬೆಳೆ ವಿಮೆ ಮತ್ತು ಸಾಲ ಸೌಲಭ್ಯಗಳೂ ದೊರೆಯದೇ ವಂಚಿತರಾದವರ ಬಗ್ಗೆಯೂ ಹೇಳಿದೆ.

ಸಣ್ಣ ರೈತರೆಂದರೆ  ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು. ಇವರು ಭಾರತದ ಕೃಷಿ ರಂಗದಲ್ಲಿ ಶೇಕಡ  68.5% ರಷ್ಟು ಪ್ರಮಾಣದಲ್ಲಿದ್ದಾರೆ. ಆದರೆ ಈ ಸಮೂಹ ಹೊಂದಿರುವ ಕೃಷಿ ಪ್ರದೇಶವು ಒಟ್ಟು ಕೃಷಿ ಪ್ರದೇಶದ ಶೇಕಡ  24% ರಷ್ಟು ಮಾತ್ರ.

ಸುಮಾರು ಶೇಕಡ  41 ನಷ್ಟು ರೈತರು ಬರಗಾಲವನ್ನು ಅನುಭವಿಸಿದ್ದಾರೆ, ಆದರೆ ಶೇಕಡ  33% ರಷ್ಟು  ರೈತರು ಅತಿವೃಷ್ಟಿ ಮತ್ತು ಕಾಲೋಚಿತವಲ್ಲದ ಪ್ರವಾಹವನ್ನು ಎದುರಿಸಿದ್ದಾರೆ, ಇದು ಗಮನಾರ್ಹ ಬೆಳೆ ನಷ್ಟಕ್ಕೆ ಕಾರಣವಾಗಿದೆ.

ಚಂಡಮಾರುತಗಳು, ದೀರ್ಘಕಾಲದ ಬೇಸಿಗೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಏರಿಕೆಯಿಂದ ಸಹ ರೈತರು ನಷ್ಟಕ್ಕೀಡಾಗಿದ್ದಾರೆ.

ವರದಿಯು ಶೇಕ 50 ರಷ್ಟು ರೈತರು ತಮ್ಮ ಅರ್ಧದಷ್ಟು ಭತ್ತದ ಬೆಳೆ ನಷ್ಟವನ್ನು ಅನುಭವಿಸಿದ್ದಾರೆ ಗೋಧಿ ಬೆಳೆಯಲ್ಲಿಯೂ  ಶೇಕಡ  42% ರಷ್ಟು ಇದೇ ರೀತಿಯ ನಷ್ಟ ಉಂಟಾಗಿದೆ. ಅಕ್ಕಿ, ತರಕಾರಿಗಳು ಮತ್ತು ಬೇಳೆಕಾಳುಗಳಂತಹ ಬೆಳೆಗಳ ಮೇಲೂ  ಅಸಮ ಮಳೆ ಹಂಚಿಕೆಯು ಗಮನಾರ್ಹ ದುಷ್ಪರಿಣಾಮ ಬೀರಿದೆ.

“ಇಂತಹ ನಷ್ಟಗಳು ಆಹಾರ ಭದ್ರತೆಗೆ  ಬೆದರಿಕೆ ಒಡ್ಡುತ್ತವೆ,  ಮಾತ್ರವಲ್ಲದೆ ಸಣ್ಣ ರೈತರ   ಕುಟುಂಬಗಳ ಆರ್ಥಿಕ ಅಸ್ಥಿರತೆಯನ್ನು ಉಲ್ಬಣಗೊಳಿಸುತ್ತವೆ” ಎಂದು ಫೀಡ್ ಅಧ್ಯಕ್ಷ ಸಂಜೀವ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಅತಿವೃಷ್ಟಿ ಆದಾಗ ಭೌಗೋಳಿಕವಾಗಿ, ಉತ್ತರದ ರಾಜ್ಯಗಳಲ್ಲಿನ ಭತ್ತದ ಗದ್ದೆಗಳು ಒಂದು ವಾರಕ್ಕೂ ಹೆಚ್ಚು ಕಾಲ ಮುಳುಗಬಹುದು. ಇದರಿಂದ ಹೊಸದಾಗಿ ನಾಟಿ ಮಾಡಿದ ಸಸಿಗಳು ಹಾಳಾಗುತ್ತವೆ. ಇದರಿಂದ ರೈತರು  ಮರು ನಾಟಿ ಮಾಡುವ ಸಂದರ್ಭ ಉಂಟಾಗಬಹುದು.

ಮತ್ತೊಂದೆಡೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಮಳೆಯು ಭತ್ತ, ಜೋಳ, ಹತ್ತಿ, ಸೋಯಾಬೀನ್, ಶೇಂಗಾ ಮತ್ತು ದ್ವಿದಳ ಧಾನ್ಯಗಳ ನಾಟಿ/ಬಿತ್ತನೆ ಕಾರ್ಯವನ್ನು ವಿಳಂಬಗೊಳಿಸುತ್ತದೆ.

ವರದಿಯ ಒಂದು ನಿರ್ಣಾಯಕ ಒಳನೋಟವೆಂದರೆ ಪ್ರಸ್ತುತ ಹೊಂದಾಣಿಕೆಯ ತಂತ್ರಗಳ ಅಸಮರ್ಪಕತೆ. ಕೇವಲ 30% ರಷ್ಟು ಅಲ್ಪ ರೈತರು ಮಾತ್ರ ಬೆಳೆ ವಿಮೆಗೆ ಪ್ರವೇಶವನ್ನು ಹೊಂದಿದ್ದಾರೆ ಮತ್ತು ಕೇವಲ 25% ಜನರು ಸಕಾಲಿಕ ಆರ್ಥಿಕ ಸಾಲವನ್ನು ಪಡೆಯುತ್ತಾರೆ.

ಆರ್ಥಿಕ ಸಾಲ, ಬೆಳೆ ವಿಮೆ ಮತ್ತು ಸುಧಾರಿತ ತಾಂತ್ರಿಕ ಸಂಪನ್ಮೂಲಗಳಿಗೆ ಸುಧಾರಿತ ಪ್ರವೇಶದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ಇದು ನೇರ ಲಾಭ ವರ್ಗಾವಣೆಗಳ (DBTs) ಪ್ರಯೋಜನಗಳನ್ನು ಮತ್ತು ಹವಾಮಾನ ಆಘಾತಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ನೀರಾವರಿ ಸೌಲಭ್ಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

LEAVE A REPLY

Please enter your comment!
Please enter your name here