ಚೆನ್ನಾಗಿ ಮಾಗಿರುವ ಕಾಂಪೋಸ್ಟ್ ಗೊಬ್ಬರವನ್ನು ಗುರುತಿಸಿ ಬೆಳೆಗಳಿಗೆ ಉಪಯೋಗಿಸುವುದು ಉತ್ತಮ, ಇಲ್ಲದಿದ್ದರೆ ಬೆಳೆಗಳಿಗೆ ಹಾನಿಯಾಗಬಹುದು. ಅಂದರೆ, ಸಾರಜನಕದ ಕೊರತೆ, ಭಾರಿ ಲೋಹಗಳ ನಂಜಾಗುವಿಕೆ, ಪೂರ್ತಿ ಮಾಗಿರದ ಗೊಬ್ಬರದಿಂದ ಉತ್ಪತ್ತಿಯಾಗುವ ಸಸ್ಯ ಹಾಗೂ ಪದಾರ್ಥಗಳು ಬಿತ್ತಿದ ಬೀಜದ ಮೊಳಕೆಯೊಡೆಯುವುದನ್ನು ತಡೆಗಟ್ಟಬಹುದು. ಇದರಿಂದ ಬೆಳೆಯ ಇಳುವರಿ ಕಡಿಮೆಯಾಗಬಹುದು. ಆದ್ದರಿಂದ ಕಾಂಪೋಸ್ಟ್ ತಯಾರಿಕೆ ಅವಧಿ ನಂತರ ಚೆನ್ನಾಗಿ ಮಾಗಿರುವುದನ್ನು ಗುರುತಿಸಿ ಪೂರೈಸಬೇಕು.
ಮಾಗಿದ ಕಾಂಪೋಸ್ಟ್ ಗುರುತಿಸಲು ಕೆಲವು ಸೂಚಿಗಳು: ಚೆನ್ನಾಗಿ ಮಾಗಿದ ಕಾಂಪೋಸ್ಟ್ ಗೊಬ್ಬರದಲ್ಲಿ ಉಷ್ಣಾಂಶವು ಸ್ಥಿರವಾಗಿರುತ್ತದೆ. ಹಾಗೂ ದುರ್ವಾಸನೆಯಿರುವುದಿಲ್ಲ. ಬಣ್ಣ ಕಂದುಯುಕ್ತ ಕಪ್ಪು ಅಥವಾ ಕಪ್ಪು, ರಸಸಾರ 7ರ ಹತ್ತಿರವಿರುತ್ತದೆ. ಹಾಗೂ ಇಂಗಾಲ ಮತ್ತು ಸಾರಜನಕ ಅನುಪಾತ 1:20 ಕ್ಕಿಂತ ಕಡಿಮೆ ಇರುತ್ತದೆ. ಮಾಗಿದ ಕಾಂಪೋಸ್ಟ್ನ್ನು ತೇವಾಂಶವಿಲ್ಲದ ಹಾಗೂ ತಂಪಾಗಿರುವ ಪ್ರದೇಶಗಳಲ್ಲಿ ಶೇಖರಿಸಿಡಬೇಕು.
ಫಾಸ್ಫೊಕಾಂಪೋಸ್ಟ್ (ರಂಜಕಯುಕ್ತ ಕಾಂಪೋಸ್ಟ್): ರಂಜಕಯುಕ್ತ ಕಾಂಪೋಸ್ಟ್ ಒಂದು ಪೌಷ್ಟೀಕರಿಸಿದ ಕಾಂಪೋಸ್ಟ್. ಇದನ್ನು ಶಿಲಾರಂಜಕ ಮತ್ತು ರಂಜಕ ಕರಗಿಸುವ ಸೂಕ್ಷ್ಮಜೀವಿಗಳನ್ನು ಉಪಯೋಗಿಸಿ ತಯಾರುಮಾಡುತ್ತಾರೆ. ಈ ರೀತಿ ಪೌಷ್ಟಿಕಗೊಳಿಸಲಾದ ಕಾಂಪೋಸ್ಟ್ನಲ್ಲಿ ರಂಜಕದ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ರಂಜಕಯುಕ್ತ ಕಾಂಪೋಸ್ಟ್ ಅನ್ನು ಎರಡು ವಿಧವಾಗಿ ಮಾಡಲಾಗುತ್ತದೆ:
- ಗುಂಡಿ ಪದ್ಧತಿ: ನೆಲದಲ್ಲಿ ಸಾಮಾನ್ಯವಾಗಿ 3 ರಿಂದ 4 ಅಡಿಗಳ ಅಗಲ, 3 ಅಡಿ ಎತ್ತರ ಮತ್ತು ಅನುಕೂಲಕರವಾದ ಉದ್ದ (10 ಅಡಿ) ಇರುವ ಕಲ್ಲಿನ ಚಪ್ಪಡಿ ಅಥವಾ ಇಟ್ಟಿಗೆಯಿಂದ ಮಾಡಿದ ತೊಟ್ಟಿಗಳಲ್ಲಿ ಕಾಂಪೋಸ್ಟ್ ತಯಾರಿಸಲಾಗುತ್ತದೆ.
- ರಾಶಿ ಪದ್ಧತಿ: ಭೂಮಿಯ ಮೇಲೆ ಸಾಮಾನ್ಯವಾಗಿ 3 ರಿಂದ 4 ಅಡಿ ಅಗಲ, 3 ಅಡಿ ಆಳ ಮತ್ತು ಅನುಕೂಲಕರವಾದ ಉದ್ದ (10 ಅಡಿ) ಇರುವ ಕಲ್ಲಿನ ಚಪ್ಪಡಿ ಅಥವಾ ಇಟ್ಟಿಗೆಯಿಂದ ಮಾಡಿದ ತೊಟ್ಟಿಗಳಲ್ಲಿ ಕಾಂಪೋಸ್ಟ್ ತಯಾರಿಸಲಾಗುತ್ತದೆ.
ಕಾಂಪೋಸ್ಟ್ ತಯಾರಿಕೆಗೆ ಉಪಯೋಗಿಸುವ ಸಾವಯವ ಪದಾರ್ಥಗಳು: ಸಗಣಿ, ಕೋಳಿ ತ್ಯಾಜ್ಯ, ಹುಲ್ಲು, ಕೊಳೆ, ಹಸಿರೆಲೆ, ವಿವಿಧ ಕಳೆ, ಬೆಳೆಗಳ ಅವಶೇಷ ಮುಂತಾದವುಗಳು. ಕೃಷಿ ಉತ್ಪನ್ನ ಅವಲಂಬಿಸಿರುವ ಕಾರ್ಕಾನೆಗಳ ತ್ಯಾಜ್ಯ ವಸ್ತುಗಳಾದ (ಅಗ್ರೋ ಇಂಡಸ್ಟ್ರಿಯಲ್ ವೇಸ್ಟ್) ಸಕ್ಕರೆ ಕಖರ್ಾನೆಯ ಪ್ರೆಸ್ಮಡ್, ತೆಂಗಿನ ಹುಂಡಿ, ರೇಷ್ಮೆ ಹುಳುವಿನ ಅವಶೇಷ, ಅಡಿಕೆ ಸಿಪ್ಪೆ ಮತ್ತು ಪಟ್ಟಣಗಳಲ್ಲಿ ದೊರೆಯುವ ತ್ಯಾಜ್ಯವಸ್ತುಗಳು ಮತ್ತು ಹಣ್ಣು ತರಕಾರಿ ಉಳಿಕೆಗಳು ಇತ್ಯಾದಿ.
ವಿಧಾನ: ಮೊದಲು ಸಾವಯವ ವಸ್ತುಗಳನ್ನು ಶೇಖರಿಸಿಕೊಳ್ಳಲು ಈ ಕ್ರೋಢೀಕರಿಸಿದ ಸಾವಯವ ವಸ್ತುಗಳನ್ನು ಪದರ ಪದರವಾಗಿ ಹರಡಬೇಕು. ಸಾವಯವ ವಸ್ತುಗಳನ್ನು ತುಂಬುವಾಗ ಕೆಳಭಾಗದಲ್ಲಿ ಅಂದರೆ ಮೊದಲನೆಯ ಪದರದಲ್ಲಿ ಶೀಘ್ರ ವಿಭಜನೆಯಾಗದ ಸಾವಯವ ಪದಾರ್ಥಗಳನ್ನು ಹರಡಬೇಕು (ಒಣ ಹುಲ್ಲು, ತೆಂಗಿನ ನಾರು, ಸೋಗೆ, ನೆಲಗಡಲೆ ಸಿಪ್ಪೆ, ಅಕ್ಕಿ ಹೊಟ್ಟು ಮುಂತಾದವುಗಳು). ಇವುಗಳಲ್ಲಿ ಲಿಗ್ನಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವುಗಳ ಮೇಲೆ ಎರಡನೆ ಪದರವಾಗಿ ಸಾಮಾನಗಯವಾಗಿ ಗಟ್ಟಿಯಾದ ಮತ್ತು ಒಣಗಿದ ಸಾವಯವ ವಸ್ತುಗಳನ್ನು ಹರಡಬೇಕು.
ಈ ಪದರದ ಮೇಲೆ ಸಗಣಿ, ಗಂಜಲ ಇವುಗಳನ್ನು ನೀರಿನಲ್ಲಿ ಕಲಸಿ ಸಮನಾಗಿ ಸಿಂಪಡಿಸಬೇಕು. ಇವುಗಳ ಮೇಲೆ ಶಿಲಾರಂಜಕವನ್ನು (ಸಾಮಾನ್ಯವಾಗಿ 100 ಕಿ.ಗ್ರಾಂ.ಶೀಲಾರಂ ಜಕವನ್ನು 1 ಟನ್ನ ಸಾವಯವ ವಸ್ತುಗಳಿಗೆ ಉಪಯೋಗಿಸಬಹುದು) ಸಿಂಪಡಿಸಬೇಕು. ಅದರ ಮೇಲೆ ಶಿಲಾರಂಜಕ ಕರಗಿಸುವ ಸೂಕ್ಷ್ಮ ಜೀವಿಗಳನ್ನು ಹರಡಬೇಕು (ಆಸ್ಪರ್ಜಿಲ್ಲಸ್ ಅವಮೋರಿ ಶಿಲೀಂದ್ರ, ಮೆಗಟೋರಿಯಂ ಬ್ಯಾಕ್ಟೀರಿಯ). ಒಂದು ಕಿ.ಗ್ರಾಂ. ಜೈವಿಕ ಗೊಬ್ಬರವನ್ನು 1 ಟನ್ ಸಾವಯವ ಪದಾರ್ಥಗಳಿಗೆ ಬಳಸಬೇಕು. ಇವುಗಳ ಮೇಲಿನ ಪದರವಾಗಿ ಹಸಿರೆಲೆ, ಕಳೆ ಅಥವಾ ಹಸಿರೆಲೆ ಗೊಬ್ಬರ ಗಿಡಗಳನ್ನು ಹರಡಬೇಕು.
ಇವು ಸಾಮಾನ್ಯವಾಗಿ ಹೆಚ್ಚಿನ ಸಾರಜನಕವನ್ನು ಹೊಂದಿರುತ್ತವೆ. ಈ ವಿಧಾನದಲ್ಲಿ ಅನೇಕ ಪದರಗಳನ್ನು 30 ರಿಂದ 40 ಸೆಂ.ಮೀ. ಎತ್ತರಕ್ಕೆ ಹರಡಬೇಕು. ಕೊನೆಯ ಅಥವಾ ಮೇಲಿನ ಪದರವಾಗಿ ಸಗಣಿಯ ಬಗ್ಗಡದಿಂದ ತೆಳುವಾಗಿ ಸಾರಿಸಿ ಸೂಕ್ಷ್ಮ ಜೀವಿಗಳ ಪರಿವರ್ತನೆಗೆ ಬಿಡಬೇಕು. 30 ದಿವಸಗಳ ನಂತರ ಪದರಗಳನ್ನು ಗಾಳಿಯಾಡಲು ತಿರುವಿ ಹಾಕಬೇಕು. ಸಾಮಾನ್ಯವಾಗಿ ಕಾಂಪೋಸ್ಟ್ ತಯಾರಿಕೆಯ ಅವಧಿ 90 ರಿಂದ 120 ದಿವಸಗಳವರೆಗೂ ಆಗುತ್ತದೆ. ಈ ಅವಧಿಯಲ್ಲಿ 3 ರಿಂದ 4 ಸಲ ಪದರವನ್ನು ತಿರುವಿಹಾಕಬೇಕಾಗುತ್ತದೆ. ಈ ಅವಧಿಯ ನಂತರ ಚೆನ್ನಾಗಿ ಕಳಿತ ಸಸ್ಯಪೋಷಕಾಂಶ ಹೆಚ್ಚಿರುವ ಕಾಂಪೋಸ್ಟ್ ಲಭ್ಯವಾಗುತ್ತದೆ.
V p hegde
Good information