ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳ 2023 ಕೊನೆಯ ದಿನ ದಿನವಾದ ಇಂದು 25000 ಹೆಚ್ಚು ಜನರು ಪಾಲ್ಗೊಂಡಿದ್ದರು ನಾಲ್ಕು ದಿನದ ಕಾರ್ಯಕ್ರಮದಲ್ಲಿ 60000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಇಂದು ರೈತರ ಅನುಕೂಲಕ್ಕಾಗಿ ದ್ರೋಣ್ ತಂತ್ರಜ್ಞಾನವನ್ನು ಬಳಸಿ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಸಿಂಪಡಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿಕೊಡಲಾಯಿತು. ಈ ಪ್ರಾತ್ಯಕ್ಷಿಕೆಯಿಂದ 4000ಕ್ಕೂ ಹೆಚ್ಚು ರೈತರು ಅನುಕೂಲ ಪಡೆದುಕೊಂಡರು.
ತೋಟಗಾರಿಕಾ ತಂತ್ರಜ್ಞಾನದ ಕಾರ್ಯಗಾರದಲ್ಲಿ ಇಂದು ಸಹ 30 ಉತ್ಸಾಹಿ ಯುವಕರು ಪಾಲ್ಗೊಂಡು ಒಟ್ಟಾರೆ 100 ಜನ ಯುವಕರು ಇದರ ಅನುಕೂಲ ಪಡೆದುಕೊಂಡರು. ಇಂದಿನ ಐ ಹೆಚ್ ಆರ್ ವೈವಾಟು 5 ಲಕ್ಷಕ್ಕೂ ಹೆಚ್ಚಾಗಿದ್ದು ಒಟ್ಟಾರೆ ಮೇಳದ ವಹಿವಾಟು ಮೂರು ಕೋಟಿಗೂ ಅಧಿಕವಾಗಿತ್ತು. ಮೇಳದ ಅಂತಿಮ ದಿನವಾದ ಇಂದು ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್ ವಿ ಸುರೇಶ್ ಅವರು ಮಾತನಾಡಿ ಸಂಸ್ಥೆಯ ತಂತ್ರಜ್ಞಾನಗಳನ್ನು ಮೇಳದ ಮೂಲಕ ರೈತರು ಮತ್ತು ಇತರೆ ಪಾಲುದಾರರಿಗೆ ತಲುಪಿಸುವಲ್ಲಿ ಸಂಸ್ಥೆಯ ಉದ್ಯೋಗಿಗಳ ಶ್ರಮವನ್ನು ಶ್ಲಾಘಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್ ಅವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಚೇತನ್ ಕುಮಾರ್ ರಾಥೋಡ್ ಮುಖ್ಯ ಪಾಸ್ಪೋರ್ಟ್ ಅಧಿಕಾರಿ ಇವರು ಮೇಳದ ಅಭೂತಪೂರ್ವ ಯಶಸ್ಸನ್ನು ಶ್ಲಾಘಿಸಿದರು. ಎಸ್ಪಿಎಚ್ ನ ಉಪಾಧ್ಯಕ್ಷ ಡಾ. ಅಶ್ವಥ್ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಏಳು ಅತ್ಯುತ್ತಮ ರೈತರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಮಳಿಗೆ ಬಹುಮಾನಗಳನ್ನು ಸಹ ವಿತರಿಸಲಾಯಿತು. ಇದಲ್ಲದೆ ಶಾಲಾ ಮಕ್ಕಳಿಂದ ಸಿರಿಧಾನ್ಯಗಳ ಬಗ್ಗೆ ಏರ್ಪಡಿಸಿದ್ದ ಪೋಸ್ಟರ್ ರಚನಾ ಸ್ಪರ್ಧೆಯಲ್ಲಿ ಜಯಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತದನಂತರ ಮೇಳದಲ್ಲಿ ಸಹಕರಿಸಿದ ಪೊಲೀಸ್ , ಸಾರಿಗೆ ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು.