ಕೇಂದ್ರ ಸರ್ಕಾರದ ಸಚಿವ ಸಂಪುಟವು ಭಾರತೀಯ ಕೃಷಿರಂಗದ ಮೂಲಭೂತ ಯೋಜನೆಗಳಿಗೆ 13,966 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ. ಸಂಪುಟವು ತನ್ನ ಇತ್ತೀಚಿನ ಸಭೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವ ಮತ್ತು ರಾಷ್ಟ್ರದಾದ್ಯಂತ ಆಹಾರ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಏಳು ಮಹತ್ವದ ನಿರ್ಧಾರಗಳನ್ನು ಅನುಮೋದಿಸಿದೆ.
ಕೃಷಿ ಕ್ಷೇತ್ರವನ್ನು ಬೆಂಬಲಿಸಲು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಎಲ್ಲ ನಾಗರಿಕರಿಗೆ ಆಹಾರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ನಡೆದ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಏಳು ಯೋಜನೆಗಳ ಒಟ್ಟು ವೆಚ್ಚ 13,966 ಕೋಟಿ ರೂ.ಗಳಾಗಿದೆ ಎಂದು ಸಚಿವರು ಪುನರುಚ್ಚರಿಸಿದರು. “ರೈತರ ಜೀವನ ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಇಂದು ಸಚಿವ ಸಂಪುಟ ಸಭೆಯಲ್ಲಿ ಏಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲನೆಯದು ಡಿಜಿಟಲ್ ಕೃಷಿ ಮಿಷನ್, ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕೃಷಿಗೆ ಮೂಲಸೌಕರ್ಯದ ಅಡಿ ಕೆಲವು ಉತ್ತಮ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಾಗಿದೆ. ಅದರ ಆಧಾರದ ಮೇಲೆ, ಒಟ್ಟು 2,817 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಡಿಜಿಟಲ್ ಕೃಷಿ ಮಿಷನ್ ಅನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ಕೇಂದ್ರ ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು:
- ಡಿಜಿಟಲ್ ಅಗ್ರಿ ಮಿಷನ್ ಸ್ಥಾಪನೆಗೆ 2,817 ಕೋಟಿ ರೂ.
- ಆಹಾರ, ಪೌಷ್ಠಿಕ ಭದ್ರತೆಗಾಗಿ 3,979 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದೆ.
- 2,291 ಕೋಟಿ ಮೌಲ್ಯದ ಕೃಷಿ ಶಿಕ್ಷಣ, ನಿರ್ವಹಣಾ ಯೋಜನೆಗೆ ಒಪ್ಪಿಗೆ
- 860 ಕೋಟಿ ಮೌಲ್ಯದ ತೋಟಗಾರಿಕೆ ಯೋಜನೆಗೆ ಅನುಮೋದನೆ
- ಜಾನುವಾರು ಆರೋಗ್ಯ ನಿರ್ವಹಣೆ, ಉತ್ಪಾದನಾ ಯೋಜನೆಗೆ ರೂ 71,702 ಕೋಟಿ ಅನುದಾನ
- ಕೃಷಿ ವಿಜ್ಞಾನ ಕೇಂದ್ರಗಳನ್ನು ಬಲಪಡಿಸಲು ರೂ 1,202 ಕೋಟಿ ಯೋಜನೆಗೆ ಸಂಪುಟ ಅನುಮೋದನೆ
- ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗಾಗಿ 1,115 ಕೋಟಿ ರೂ.
ಇತರ ಪ್ರಮುಖ ನಿರ್ಧಾರಗಳು
ಭಾರತದ ಪ್ರಾಥಮಿಕ ವಲಯದ ಕಲ್ಯಾಣಕ್ಕೆ ಗುರಿಪಡಿಸಿದ ನಿರ್ಧಾರಗಳ ಜೊತೆಗೆಸಚಿವ ಸಂಪುಟವು ಮೂಲಭೂತ ಸಂಬಂಧಿತ ಯೋಜನೆಗಳಿಗೆ ಅನುಮೋದನೆಯನ್ನು ನೀಡಿದೆ.
ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬೈ ಮತ್ತು ಇಂದೋರ್ ನಡುವೆ ರೈಲು ಸಂಪರ್ಕವನ್ನು ಒದಗಿಸುವ 309 ಕಿಮೀ ಉದ್ದದ ಹೊಸ ಮಾರ್ಗದ ಯೋಜನೆಯನ್ನು ಒಟ್ಟು 18,036 ಕೋಟಿ ರೂ ವೆಚ್ಚದಲ್ಲಿ 2028-29 ರ ವೇಳೆಗೆ ಪೂರ್ಣಗೊಳಿಸಲು ಅನುಮೋದನೆ ನೀಡಲಾಗಿದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್‌ನ ಮತ್ತೊಂದು ಸೆಮಿಕಂಡಕ್ಟರ್ ಘಟಕವನ್ನು ರೂ 3,300 ಕೋಟಿ ಹೂಡಿಕೆಯೊಂದಿಗೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಗುಜರಾತ್‌ನ ಸನಂದ್‌ನಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸಲಾಗುವುದು.