ಮುಂಗಾರು ಆರಂಭವಾದಗಿನಿಂದ ಕರ್ನಾಟಕದ ಹಲವೆಡೆ ಮಳೆ ಕೊರತೆಯಾಗಿತ್ತು. ಕರಾವಳಿ ಕರ್ನಾಟಕದಲ್ಲಿ 60% ಕೊರತೆ ಉಂಟಾಗಿತ್ತು. ಸದ್ಯ ಮುಂಗಾರು ಚುರುಕುಗೊಂಡಿದೆ. ಕೊರತೆ ದೂರವಾಗುವ ನಿರೀಕ್ಷೆ ಮೂಡಿಸಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಭಾರೀಯಿಂದ ಅತೀ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಮೇಲೆ ದುರ್ಬಲ ಮಾನ್ಸೂನ್ ಅಂತಿಮವಾಗಿ ಮಹಾರಾಷ್ಟ್ರದ ದಕ್ಷಿಣ ಕರಾವಳಿ ಮತ್ತು ಕರ್ನಾಟಕದ ಉತ್ತರ ಕರಾವಳಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸೈಕ್ಲೋನಿಕ್ ಪರಿಚಲನೆಯಿಂದಾಗಿ ಬಲಗೊಂಡಿದೆ. ಈ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ಶೀಘ್ರದಲ್ಲೇ ಮಳೆ ಚಟುವಟಿಕೆಯನ್ನು ಗಮನಾರ್ಹವಾಗಿ ತೀವ್ರಗೊಳಿಸುವ ನಿರೀಕ್ಷೆಯಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವಾರು ಜಿಲ್ಲೆಗಳು ಭಾರೀ ಮತ್ತು ಅತಿ ಭಾರೀ ಮಳೆ ಮುನ್ಸೂಚನೆಯಿಂದ ರೆಡ್ ಅಲರ್ಟ್ ಸೂಚನೆಯಲ್ಲಿವೆ. ಇದು ಸ್ಥಳೀಯ ಪ್ರವಾಹ ಮತ್ತು ಜಲಾವೃತಕ್ಕೆ ಕಾರಣವಾಗಬಹುದು. ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗ, ರಾಯಗಢ, ಕೊಲ್ಲಾಪುರ, ಸಾಂಗ್ಲಿ, ಸತಾರ, ಪುಣೆ ಮತ್ತು ಸೊಲ್ಲಾಪುರ ಮತ್ತು ಕರ್ನಾಟಕದ ಬೆಳಗಾವಿ, ಕಾರವಾರ, ಉತ್ತರ ಕನ್ನಡ, ಧಾರವಾಡ ಇವುಗಳು ರೆಡ್ ಅಲರ್ಟ್ ಪರಿಧಿಗೆ ಸೇರಿವೆ.
.ಮಾನ್ಸೂನ್‌ನ ಈ ಬಹುನಿರೀಕ್ಷಿತ ಪ್ರಗತಿಯು ಮುಂಬೈ ಮತ್ತು ಪುಣೆಗೆ ಮಳೆಯನ್ನು ತರಬಹುದು. ಒಟ್ಟಾರೆ, ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ ಮಳೆ ಕೊರತೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗಣನೀಯವಾಗಿ ನಿವಾರಣೆಯಾಗುವ ನಿರೀಕ್ಷೆಯಿದೆ. ಭಾರೀ ಮಳೆಯು ಜಲಾಶಯಗಳ ನೀರಿನ ಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಆಶಾಭಾವನೆ ಇದೆ.