Home Blog Page 91
"ಗೊಬ್ಬರ ಕೊಳೆಸಬೇಕು" ಎಂದು ಕೆಲವರು ಹೇಳುತ್ತಿರುತ್ತಾರೆ. ಇದು ತಪ್ಪು. ಅದು ಕೊಳೆಸುವುದಲ್ಲ; ಕಳಿಸುವುದು. ಹಣ್ಣು ಚೆನ್ನಾಗಿ ಕಳಿತಿರಬೇಕು ಅಥವಾ ಮಾಗಿರಬೇಕು ಎನ್ನುತ್ತಿವಲ್ಲ; ಹಾಗೆ ಗೊಬ್ಬರ ಚೆನ್ನಾಗಿ ಕಳಿತಿರಬೇಕು ಅಥವಾ ಮಾಗಿರಬೇಕು. ಹೀಗೆ ಮಾಡಲು ವಿವಿಧ ವಿಧಾನಗಳಿವೆ. ಸಾವಯವ ಪೋಷಕಾಂಶ ವಿಧಗಳು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಎರೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು, ಪ್ರೆಸ್‌ಮಡ್, ಜೈವಿಕ ಅನಿಲದ ಬಗ್ಗಡ, ಜೈವಿಕ ಗೊಬ್ಬರಗಳು, ದ್ರವರೂಪದ ಗೊಬ್ಬರಗಳು ಪ್ರಮುಖವಾದವುಗಳು. ಕಾಂಪೋಸ್ಟ್‌ ಗೊಬ್ಬರ ಸಸ್ಯ ಹಾಗೂ ಪ್ರಾಣಿಗಳ ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸುವ ಸಾವಯವ ಗೊಬ್ಬರವೇ ಕಾಂಪೋಸ್ಟ್. ಇದನ್ನು ತಯಾರು ಮಾಡುವ ವಿಧಾನಕ್ಕೆ...
ಕೃಷಿಯಲ್ಲಿ ಸಸ್ಯ ಪೋಷಕಾಂಶಗಳ ನಿರ್ವಹಣೆ ಒಂದು ಪ್ರಮುಖ ಅಂಶ. ಬೆಳೆಗಳಿಗೆ ಬೇಕಾಗುವ ಅವಶ್ಯಕ ಪೋಷಕಾಂಶಗಳನ್ನು ರಸಗೊಬ್ಬರ ಹಾಗೂ ಸಾವಯವ ಮೂಲ ಗೊಬ್ಬರಗಳ ಮೂಲಕ ಒದಗಿಸಲಾಗುತ್ತವೆ. ಕೃಷಿ ಆಧುನಿಕ ತಾಂತ್ರಿಕತೆಗಳಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆ, ಅಧಿಕ ಇಳುವರಿ ನೀಡುವ ಬೆಳೆ ತಳಿಗಳ ಬಳಕೆ, ನೀರಾವರಿ ಕ್ಷೇತ್ರದಲ್ಲಾದ ಹೆಚ್ಚಳ, ಸಾಗುವಳಿ ಕ್ಷೇತ್ರದ ಹೆಚ್ಚಳ ಹಾಗೂ ರೈತರ ಪರಿಶ್ರಮದಿಂದ ನಾವು 1960ರ ದಶಕದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆವು. ಹಸಿರು ಕ್ರಾಂತಿ ದಿಶೆಯಲ್ಲಿ  ರಾಸಾಯನಿಕ ಗೊಬ್ಬರ ಹಾಗೂ ಪೀಡೆನಾಶಕಗಳನ್ನು  ಬಳಸಲಾಯಿತು. ಸಾವಯವ ಗೊಬ್ಬರದ ಬಳಕೆಗೆ ಆಗ ಹೆಚ್ಚು...
"ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರು" ಎಂಬ ಗಾದೆ ಇದೆ. ಕೃಷಿಗೆ ಬೇಕಾದ ಬಹುತೇಕ ಪರಿಕರಗಳು ಗ್ರಾಮೀಣ ಮನೆಯ ಪರಿಸರದಲ್ಲಿಯೇ ಇರುತ್ತವೆ. ಆದರೂ ಹೆಚ್ಚಿನ ರೈತರು ಒಳಸುರಿಗಳಿಗಾಗಿ ಪೇಟೆಯತ್ತಲೇ ಮುಖ ಮಾಡುತ್ತಾರೆ. ಇಂಥ ಪರಿಸ್ಥಿತಿ ತಪ್ಪಬೇಕಾದ ಅವಶ್ಯಕತೆ ಇದೆ. ಸಾವಯವ ಪೋಷಕಾಂಶ ಭತ್ತದಲ್ಲಿ ಗಣನೀಯ ಇಳುವರಿಗೆ ಸಾವಯವ ದ್ರವ ಪೋಷಕಾಂಶ ಬಳಸಬಹುದು. ನಾಟಿ ಮಾಡಿದ ಒಂದು ತಿಂಗಳ ನಂತರ ೨೦ ಕೆಜಿ ಸಗಣಿಯನ್ನು ೨೦೦ ಲೀಟರ್‌ ನೀರಿನಲ್ಲಿ ಚೆನ್ನಾಗಿ ಕದಡಬೇಕು. ಅದನ್ನು ಭತ್ತದ ಗದ್ದೆಗೆ ಹಾಯಿಸಬೇಕು. ಈ ಪ್ರಮಾಣದ ಸಗಣಿ ಒಂದು ಎಕರೆಗೆ ಸಾಕಾಗುತ್ತದೆ....
ಪ್ರಪಂಚದಲ್ಲಿ ಸಾವಯವ ಕೃಷಿಯ ಚಕ್ರ ತಿರುಗುತ್ತಲೇ ಇದೆ. ಸಾವಯವದಲ್ಲಿ ವೈಜ್ಞಾನಿಕ ಕೃಷಿಗೆ ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ರಾಸಾಯನಿಕ ಕೃಷಿಗೆ ಅಬಬ್ಬಾ ಎಂದರೆ ೧೨೦ ವರ್ಷ ಇರಬಹುದು. ಇಂದು ಜಗತ್ತಿನಾದ್ಯಂತ ರಾಸಾಯನಿಕ ಕೃಷಿಯದೇ ಮೇಲುಗೈ. ಇದರ ಪರಿಣಾಮಗಳು ಅರಿವಾಗಿದ್ದರೂ ಇನ್ನೂ ಸಾವಯವ ಕೃಷಿಯ ಅಗತ್ಯವೇನು ? ಅದೆಲ್ಲ ಸುಳ್ಳು ಎಂದು ವಾದಿಸುವವರೂ ಇದ್ದಾರೆ. ರಾಸಾಯನಿಕ ಕೀಟನಾಶಕಗಳು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಬಹುತೇಕರು ಯೋಚಿಸಿರುವುದಿಲ್ಲ. ಕೃಷಿಭೂಮಿಯಲ್ಲಿ ಕೆಲಸ ಮಾಡುವವರಿಗೆ ಅದರ ಪರಿಣಾಮ ಉಂಟಾಗಬಹುದು ಎಂದೇ ಅನೇಕರು ತಿಳಿಸಿದ್ದಾರೆ. ಆದರೆ...
ಉತ್ತರ ಅಮರಿಕಾದ ಸಸ್ಯ ಸೂರ್ಯಕಾಂತಿ ಮೂಲತಃ ಉತ್ತರ ಉತ್ತರ ಅಮೆರಿಕಾದ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಹೆಲಿಯಾಂತಸ್ . ಇದರ ಒಂದು ಪ್ರಬೇಧ ಹೆಲಿಯಾಂತಸ್ ಅನ್ನಸ್ ಸೂರ್ಯಕಾಂತಿಯನ್ನು ಮಾತ್ರ ಖಾದ್ಯ ತೈಲ ತೆಗೆಯಲು ಬಳಸುತ್ತಾರೆ. ಉತ್ತರ ಅಮೆರಿಕಾದಲ್ಲಿ ಐದು ಸಾವಿರ ವರ್ಷಗಳಷ್ಟು ಹಿಂದೆಯೇ ಇದನ್ನು ಗುರುತಿಸಲಾಗಿದೆ. ವಿಶ್ವದ ಎಲ್ಲೆಡೆ ವಾಣಿಜ್ಯ ಬೆಳೆಯಾಗಿರುವ ಸೂರ್ಯಕಾಂತಿ ಬೆಳೆಯ ವೈಜ್ಞಾನಿಕ ವಿವರಗಳು ನಿಮ್ಮ ಮುಂದಿದೆ. ಸೂರ್ಯಕಾಂತಿ ಏಕವಾರ್ಷಿಕ ಸಸ್ಯ. ಬೀಜಗಳ ಸಲುವಾಗಿಯೇ ಇದನ್ನು ಬೆಳೆಸಲಾಗುತ್ತದೆ. ಕ್ರಿಸ್ತಪೂರ್ವ 2600 ರಷ್ಟು ಹಿಂದೆಯೇ ಮೆಕ್ಸಿಕೋದಲ್ಲಿ ಅಡುಗೆ ಎಣ್ಣೆಗಾಗಿ ಇದನ್ನು ಕೃಷಿ ಮಾಡಲಾಗುತ್ತಿತ್ತು. ಸ್ಪ್ಯಾನಿಷ್...
ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದ ರಾಷ್ಟ್ರೀಕೃತ ವಿಮಾ ಕಂಪನಿಯಾಗಿದೆ. ಇದು ಭಾರತದ ಸುಮಾರು 500 ಜಿಲ್ಲೆಗಳಲ್ಲಿ ಇಳುವರಿ ಆಧಾರಿತ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಕಾರ್ಯಕ್ರಮಗಳನ್ನು ನೀಡುತ್ತದೆ. ಇದು ಸುಮಾರು 20 ಮಿಲಿಯನ್ ರೈತರನ್ನು ಒಳಗೊಂಡಿದೆ. ಇದು ರೈತರಿಗೆ ಸೇವೆ ಸಲ್ಲಿಸುತ್ತಿರುವ ವಿಶ್ವದ ಅತಿದೊಡ್ಡ ಬೆಳೆ ವಿಮಾದಾರ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನವ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಸಂಸ್ಥೆಯ...
ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ತರಕಾರಿಗಳು ನೆರೆ ರಾಜ್ಯ ಗೋವಾ, ಮಹಾರಾಷ್ಟ್ರದ ಸತಾರಾ, ಪೂನಾ, ಮುಂಬೈ ಹೀಗೆ ಹತ್ತು ಹಲವು ಕಡೆ ಸರಬರಾಜು ಆಗುತ್ತವೆ. ರುಚಿಗೆ ಇವುಗಳು ಪ್ರಸಿದ್ದಿ. ಹೀಗೆ ಹೆಚ್ಚು ಪ್ರಸಿದ್ಧಿ ಹೊಂದಿರುವುದು ಹೈಬ್ರೀಡ್‌ ಅಥವಾ ಬಿ.ಟಿ. ತಳಿಗಳಲ್ಲ. ಬದಲಾಗಿ ದೇಸೀ ತಳಿ ತರಕಾರಿಗಳು. ಈ ದೇಸೀ ತಳಿ ತರಕಾರಿಗಳಲ್ಲಿ ಅವರಾದಿಯ ಬದನೆ ಕೂಡ ಸೇರಿದೆ. ಆದರೆ ಪ್ರಚಾರವಿಲ್ಲ. ಬೆಳಗಾವಿ ಜಿಲ್ಲೆಯ ಜನರಿಗೂ ಅವರಾದಿ ಬದನೆಯಿಂದ ಮಾಡಿದ ಖಾದ್ಯಗಳೆಂದರೆ ಬಲು ಅಚ್ಚುಮೆಚ್ಚು. ಅಬ್ಬರದ ಆಧುನಿಕ ತಳಿ ಬೀಜಗಳ ನಡುವೆ ಇದು  ತನ್ನ ಖದರನ್ನು...
ಮಣ್ಣಿನ ಸಂರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಬಿದಿರು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ಷೀಣಿಸಿದ ಭೂಮಿಯ ಪುನರ್ವಸತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.  "ಅವನತಿಗೊಂಡ ಮಣ್ಣನ್ನು ಮತ್ತೆ ಸಜೀವಗೊಳಿಸಲು ಸಂಬಂಧಿಸಿದಂತೆ, ಬಿದಿರು ಹಸಿರು ಚಿನ್ನವಾಗಿದೆ" ಎಂದೇ ಹೇಳಲಾಗುತ್ತದೆ.  ಮಣ್ಣನ್ನು ಮರುಸ್ಥಾಪಿಸಲು  ಅಮೂಲ್ಯ ಸಾಧನವಾಗಿಸುವ ಈ 'ಪವಾಡ ಸಸ್ಯ'ದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಪ್ರಪಂಚದಾದ್ಯಂತ ಕನಿಷ್ಟ ೩೦ ಮಿಲಿಯನ್‌ ಬಿದಿರು ತನ್ನ ೧೪೦೦ ಕ್ಕೂ ಅಧಿಕ ತಳಿಗಳೊಂದಿಗೆ ಹರಡಿಕೊಂಡಿದೆ. ಇದು ಅತೀ ವೇಗವಾಗಿ ಬೆಳೆಯುವ ಸಸ್ಯಗಳ ಗುಂಪಿಗೆ ಸೇರಿದೆ. ಭೂಮಿಯ ಅವನತಿ ಭೂಮಿ ಮತ್ತು ಅರಣ್ಯದ ಅವನತಿಯು ಅನೇಕ ದೇಶಗಳಲ್ಲಿ ಕಂಡುಬರುತ್ತದೆ. ...
When you been to the dense forest, you observe the humble bees nest from distance on trees.  Like other parts of the forest, there will be no jumping, romping, twig-branch of monkeys. Wild elephants don’t rub their body to such trees.  They do not leave their young ones near those trees.  Even the wild pigs don’t shatter the stocks...
ನಗರ ಪ್ರದೇಶಗಳ ಸುತ್ತಮುತ್ತ ಇರುವ ಸಾಕಷ್ಟು ರೈತರು ತರಕಾರಿ ಬೆಳೆಯಲು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಕೊಳಚೆ ಹಾಗು ಕಲುಷಿತವಾಗಿರುವ ಕೆರೆಗಳ ನೀರನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೊಳಚೆ ನೀರಿನಲ್ಲಿ ಪಾದರಸ, ಸತು, ನಿಕ್ಕಲ್, ಕ್ರೋಮಿಯಂ, ಜಿಂಕ್, ಆರ್ಸೆನಿಕ್ ಮುಂತಾದ ಭಾರಲೋಹದ ವಿಷದ ಪ್ರಮಾಣ ಹೆಚ್ಚಾಗಿರುತ್ತವೆ. ಈ ನೀರನ್ನು ತರಕಾರಿ ಮತ್ತು ಸೊಪ್ಪು ಬೆಳೆಯಲು ಬಳಸುವುದರಿಂದ  ತರಕಾರಿಯ ಒಳಗೆ ವಿಷ ಸೇರಿಕೊಳ್ಳುತ್ತವೆ. ಕೊಳಚೆ ನೀರಿನ ಜೊತೆಯಲ್ಲೇ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದಲೂ ವಿಷ ಮಣ್ಣು ಮತ್ತು ನಮ್ಮ ಆಹಾರದಲ್ಲಿ ಸೇರ್ಪಡೆಯಾಗುತ್ತಿವೆ. ಮಣ್ಣಿನಲ್ಲಿ ವಿಷ...

Recent Posts