Home Blog Page 89
ಸಾಂಬಾರು ಬೆಳೆಯ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸನ್ನು ಪಶ್ಚಿಮ ಘಟ್ಟಗಳಲ್ಲಿ ಏಕ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕರಿ ಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ ತಿನಿಸುಗಳಲ್ಲಿ ಬಳಸುವುದಲ್ಲದೆ, ಅದರಿಂದ ಓಲಿಯೋರೈಸಿನ್ ಎಂಬ ಅಂಶವನ್ನು ಬೇರ್ಪಡಿಸಿ ಔಷಧ ಸುಗಂಧ ದ್ರವ್ಯ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ರೈತರು ಕಾಳುಮೆಣಸನ್ನು ಕೊಯ್ದು ನಂತರ ನೇರವಾಗಿ ಬಿಸಿಲಿನಲ್ಲಿ ಒಣಗಿಸುವುದರಿಂದ ಅದರ ಬಣ್ಣ ಹಾಗೂ ಗಾತ್ರದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸಂಸ್ಕರಣೆ ಮಾಡುವುದರಿಂದ ಕಾಳುಮೆಣಸಿನಲ್ಲಿ ಒಂದೇ...
ಬೆಂಗಳೂರು: ಆಗಸ್ಟ್ 25: ಕೋಳಿ ಸಾಕಾಣಿಕೆಯಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದ ಕುಕ್ಕುಟ ಉದ್ಯಮವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಕುಕ್ಕುಟೋದ್ಯಮ ಅಭಿವೃದ್ದಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಭಯ ನೀಡಿದರು. ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ ಮತ್ತು ಕೋಳಿ ರೋಗ ನಿರ್ಣಯ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಆಹಾರ ಧಾನ್ಯಗಳನ್ನು ಉಪಯೋಗಿಸಿಕೊಂಡು ಪೌಷ್ಠಿಕ ಮಾಂಸ ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ...
ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ  ಆಹಾರೋದ್ಯಮ ಭರದಿಂದ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಆಹಾರೋದ್ಯಮವೆಂದರೆ ಕೇವಲ ಊಟ- ಉಪಹಾರವಲ್ಲ. ಸಿದ್ದಪಡಿಸಿದ ಉತ್ತಮ ದರ್ಜೆಯ ಚಾಕೋಲೆಟ್ , ಬಿಸ್ಕೆಟ್ ಗಳು, ನ್ಯೂಡಲ್ ಗಳು, ತಕ್ಷಣ ತಯಾರಿಸಿ ತಿನ್ನಲು ಅನುಗುಣವಾದ ವಿವಿಧ ಆಹಾರದ ಪ್ಯಾಕೃಟುಗಳು (ಉದಾಹರಣೆಗೆ ಉಪ್ಪಮ ಮಿಕ್ಸ್,) ವಿವಿಧ ರೀತಿಯ ಪಾನೀಯಗಳು, ದೀರ್ಘಕಾಲ ಹಾಳಾಗದಂತ ವಿವಿಧ ರೀತಿಯ ಆಹಾರ ಪ್ಯಾಕೇಟುಗಳು, ಹಾಲು ಆಧಾರಿಸಿದ ವೈವಿಧ್ಯ ಉತ್ಪನ್ನಗಳು ಇತ್ಯಾದಿ ಸೇರುತ್ತವೆ. ಇವುಗಳು ದೈನಂದಿನ ಬದುಕಿನಲ್ಲಿ ಅವಶ್ಯಕತೆಯ ಉತ್ಪನ್ನಗಳಾಗಿವೆ. ಇಂಥ ಸಂದರ್ಭದಲ್ಲಿ  ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷನ್ ಕೋರ್ಸ್‌ಗಳು ಉತ್ತಮ ಉದ್ಯೋಗ ನಿರೀಕ್ಷೆಗಳೊಂದಿಗೆ...
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ದನ, ಆಡು, ಹಂದಿ ಮತ್ತು ಕೋಳಿಗಳಿಗೆ ಶೆಡ್‌ಗಳನ್ನು ನಿರ್ಮಿಸಲು ವೈಯಕ್ತಿಕ ಮಟ್ಟದಲ್ಲಿ ರೈತರಿಗೆ ನಗದು ಪ್ರಯೋಜನಗಳನ್ನು ನೀಡಲಾಗುತ್ತದೆ, ಜೊತೆಗೆ ಇತರ ಕೃಷಿ ಚಟುವಟಿಕೆಗಳಿಗೆ ಸಹಾಯ ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ನೇತೃತ್ವದ ಆಡಳಿತವು ಜಾನುವಾರು ಕೊಟ್ಟಿಗೆಗಳ ನಿರ್ಮಾಣಕ್ಕಾಗಿ ರೈತರು ಪಡೆಯಬಹುದಾದ ನಗದು ಪ್ರಯೋಜನಗಳಲ್ಲಿ ಗಮನಾರ್ಹ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಎಸ್‌ಸಿ/ಎಸ್‌ಟಿ ರೈತರಿಗೆ ಇತರರಿಗೆ ಹೋಲಿಸಿದರೆ ಹೆಚ್ಚು ನಗದು ಪಡೆಯುವ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸರ್ಕಾರ ತೆಗೆದುಹಾಕಿದೆ. ಗೋಶಾಲೆ ನಿರ್ಮಿಸಲು ಪ್ರತಿ ಎಸ್‌ಸಿ/ಎಸ್‌ಟಿ ರೈತರಿಗೆ 43,500 ರೂ., ಇತರೆ...
ಕೀಟ ಜಗತ್ತಿನ ನಿಸ್ವಾರ್ಥ ಸೇವಕ ; ಜೇನುನೊಣ ವಿವಿಧ ಉತ್ಪನ್ನಗಳ ಸಲುವಾಗಿ  ಮುಖ್ಯವಾಗಿ ಮೂರು ತರಹದ ಕೀಟಗಳನ್ನು ಅವಲಂಬಿಸಲಾಗಿದೆ. ಅವುಗಳೆಂದರೆ ರೇಷ್ಮೆ ಹುಳು, ಅರಗು ಕೀಟ ಮತ್ತು ಮಧು ಜೇನು. ಇವುಗಳಲ್ಲಿ ಜೇನುನೊಣದ ದಣಿವರಿಯದ ಜೀವನದಿಂದ ಉಂಟಾಗುವ ಲಾಭಗಳು ಪ್ರಸಿದ್ಧ. ಜೇನುನೊಣದ ದುಡಿಮೆ ಮತ್ತು ಉಪಯುಕ್ತತೆಯ ಬಗ್ಗೆ ಅನೇಕ ದಂತಕಥೆಗಳಿವೆ. ದೇಹದ ರಚನೆ ಇತರ ಕೀಟಗಳಂತೆ, ಜೇನುನೊಣವು ಸಹ ಸಾಮಾನ್ಯ ತಲೆ, ಎದೆ ಮತ್ತು ಹೊಟ್ಟೆ ಎಂಬ ಮೂರು ಪ್ರತ್ಯೇಕ ಬಾಗಗಳುಳ್ಳ ದೇಹವನ್ನು ಹೊಂದಿರುತ್ತದೆ. ತಲೆಯಿಂದ ಒಂದು ಜೊತೆ ಕುಡಿಮೀಸೆಗಳು ಹೊರಟಿರುತ್ತವೆ, ಎದೆಯ ಭಾಗದಲ್ಲಿ ಮೂರು ಜೊತೆ...
ಬೆಂಗಳೂರು: ಆಗಸ್ಟ್ 24: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ನೇತೃತ್ವದಲ್ಲಿ ಜರುಗಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಒಂಭತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಕೃಷಿ ಸಹಕಾರ ಸಂಘಗಳು, ರೈತರ ಗುಂಪುಗಳನ್ನು ರಚಿಸಿ ಅವುಗಳಿಗೆ ಪ್ರೋತ್ಸಾಹ ನೀಡುವುದೂ ಸೇರಿದೆ. ಜಗತ್ತಿನಾದ್ಯಂತ ಕೃಷಿಯಲ್ಲಿ ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದ್ದರೂ ಇನ್ನೂ ಬಡತನ, ಹಸಿವು ತಾಂಡವವಾಡುತ್ತಿದೆ ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಯುವಜನತೆಯನ್ನು ಸಜ್ಜಾಗುವಂತೆ ಮಾಡುತ್ತಿದೆ. ಸೋಲು ಮತ್ತು ಗೆಲುವನ್ನು ಸಮಾನಾಂತರವಾಗಿ ತೆಗೆದುಕೊಂಡಾಗ ಮಾತ್ರ ಗುರಿಯೆಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ನವದೆಹಲಿಯ ರಾಷ್ಟ್ರೀಯ  ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ  ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ....
“ಡಾಕ್ಟ್ರೇ ನಮ್ಮ ಎಮ್ಮೆಗೆ ಮೈತುಂಬಾ ತೊನ್ನು. ಇದು ನಮಗೆ ಬರುತ್ತಾ!? ಇದರ ಹಾಲು ಹಿಂಡಬಹುದಾ? ಇದರ ಹಾಲು ಕುಡಿವ ಕರುವಿಗೂ ಈ ಕಾಯಿಲೆ ಬರುತ್ತಾ?? ಎಂದು ಬಹಳ ರೈತರು ವಿಚಾರಿಸುತ್ತಾ ಇರುತ್ತಾರೆ. ಇನ್ನು ಕೆಲವರು “ ಈ ತೊನ್ನು ಒಂದು ಅನಿಷ್ಟವಂತೆ.. ಮನೆಲಿ ಏಳ್ಗೆ ಇಲ್ವಂತೆ.. ಈ ಎಮ್ಮೆ ಮಾರಿ ಬಿಡ್ತೀವಿ..ಆದ್ರೂ ಇದನ್ನ ಯಾರು ಕೊಳ್ಳದೇ ಇರುವುದರಿಂದ ಏನು ಮಾಡೋದು ?" ಎಂದು ಅಲವತ್ತು ಕೊಳ್ಳುತ್ತಾ ಇರುತ್ತಾರೆ. ತೊನ್ನು ಅಥವಾ ವಿಟಿಲಿಗೊ(Vitiligo)ಎನ್ನುವುದು ಚರ್ಮದಲ್ಲಿನ ಮೆಲನಿನ್ ಕಡಿಮೆಯಾಗಿ ಚರ್ಮ ಬಿಳಿಯಾಗುವ ಒಂದು ಕಾಯಿಲೆ. ಎಮ್ಮೆಗಳಲ್ಲಿ ಇದು ಸಾಮಾನ್ಯವಾಗಿ...
ಸೊಳ್ಳೆಗಳು ಕಾಯಿಲೆಗಳನ್ನು ತರುವುದಷ್ಟೇ ಅಲ್ಲ; ನಿದ್ರೆಯನ್ನು ಹಾಳು ಮಾಡುತ್ತವೆ. ಮಲಗುವ ಸ್ಥಳದಲ್ಲಿ ಹೊಕ್ಕ ಒಂದೇ ಒಂದು ಸೊಳ್ಳೆ ಭಾರಿ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಅಸಂಖ್ಯಾತ ಸೊಳ್ಳೆಗಳು ಸೇರಿದರೆ ಪರಿಸ್ಥಿತಿ ಏನಾಗಬೇಡ ? ಸೊಳ್ಳೆಯನ್ನು ದೂರವಿರಿಸಲು ಮಸ್ಕಿಟೋ ಕಾಯಿಲ್ ಗಳು, ಲಿಕ್ವಿಡ್ ಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಸೂಕ್ತವಲ್ಲವೆಂದು ಹೇಳುತ್ತಾರೆ. ಹಾಗಿದ್ದರೆ ಪರಿಹಾರ ? ಖಂಡಿತ ಮನೆಯಲ್ಲಿಯೇ ಮಾಡಿಕೊಳ್ಳುವ ಪರಿಹಾರಗಳಿವೆ. ಸಿಟ್ರೊನೆಲ್ಲ ಹುಲ್ಲು ಸಿಟ್ರೊನೆಲ್ಲ ಹುಲ್ಲು ಎಲ್ಲೆಡೆ ಸಿಗುತ್ತದೆ. ಇವುಗಳ ಬೇರುಗಳ ಕಟಿಂಗ್ ತಂದು ಮನೆಮುಂದಿನ ಕುಂಡದಲ್ಲಿ ನೆಟ್ಟರೂ ಹುಲುಸಾಗಿ ಬೆಳೆಯುತ್ತದೆ.  ಇವುಗಳ ನಾಲ್ಕೈದು ಎಸಳುಗಳನ್ನು...
ಜರ್ಮನಿಯ ರಾಸಾಯನಿಕ ಶಾಸ್ತ್ರದ ವಿಜ್ಞಾನಿ ಜಸ್ಟಸ್ ವಾನ್ ಲೀಬಿಗ್,ಸಸ್ಯಗಳಿಗೆ ರಾಸಾಯನಿಕ ಗೊಬ್ಬರ ಪ್ರಯೋಗ ಮಾಡಿದ ಮೊದಲಿಗ.ನಂತರ ರಸಗೊಬ್ಬರ ಮಣ್ಣಿನ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಅವರು ಅಧ್ಯಯನ ಮಾಡುತ್ತಾರೆ 'ರಾಸಾಯನಿಕ ಗೊಬ್ಬರ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳನ್ನು ಕೊಲ್ಲುತ್ತದೆ' ಎಂದು ತಿಳಿದು ಬರುತ್ತದೆ.ಆಗ ಆತ ಚರ್ಚ್ ನಲ್ಲಿ ದೇವರ ಮುಂದೆ ಮಂಡಿಯೂರಿ 'ನಾನು ಗೊತ್ತಿಲ್ಲದೇ ತಪ್ಪು ಮಾಡಿಬಿಟ್ಟೆ, ಆ ಕೆಲಸ ಮಾಡಬಾರದಿತ್ತು.ಈಗ ನನ್ನ ಮಾತನ್ನು ಯಾರು ಕೇಳುತ್ತಿಲ್ಲ,ದಯಮಾಡಿ,ನನ್ನನ್ನು ಕ್ಷಮಿಸು' ಎಂದು ಪಶ್ಚಾತಾಪದ ಬೇಗೆಯಲ್ಲಿ ಬೆಂದು ಹೋಗುತ್ತಾರೆ. *'ಕೃಷಿ ಭೂಮಿ ತಂತಾನೇ ಸ್ವಾಲಂಬನೆ ಸಾಧಿಸಬೇಕು.ಹೊರಗಿನಿಂದ ಯಾವುದೇ ಒಳಸುರಿ...
ಇಲ್ಲಿ  ನೀವು ನೋಡುತ್ತಿರುವ  ಕೆಂಪು ಕೀಟವೆಂದರೆ ಕ್ರಿಸೋಪಾ, ”ಎಂದು ಹರ್ಷಚಿತ್ತದಿಂದ 24ವರ್ಷದ ಮನಿಶಾ ಹರಿಯಾಣದ ನಿದಾನ ಹಳ್ಳಿಯಲ್ಲಿ ತನ್ನ ಹತ್ತಿ ಹೊಲದಲ್ಲಿ ಸಂಚರಿಸುವಾಗ ಹೇಳುತ್ತಾರೆ. "ಒಂದೇ ಒಂದು ಮಾಂಸಾಹಾರಿ ಕೀಟವಾದ ಕ್ರಿಸೋಪಾ ದಿನಕ್ಕೆ ಸುಮಾರು 125-150 ಬಿಳಿ ನೊಣಗಳನ್ನು ತಿನ್ನುತ್ತದೆ" ಎಂದವರು ಹೇಳುತ್ತಾರೆ. ತನ್ನ 0.8 ಹೆಕ್ಟೇರ್ ಹತ್ತಿ ತೋಟದಲ್ಲಿ ಡೀಡರ್ಬೋರಾ ಎಂದು ಕರೆಯುವ ಕೀಟವನ್ನು ತೋರಿಸಲು ಮತ್ತೊಂದು ಸಸ್ಯದ ಎಲೆಯನ್ನು ಆರಿಸುತ್ತಾರೆ. “ಈ ದೊಡ್ಡ ಕಣ್ಣಿನ ಕೀಟವು ತನ್ನ ಮೊಟ್ಟೆಗಳನ್ನು ಬಿಳಿನೊಣಗಳಂತಹ ಸಸ್ಯಾಹಾರಿ ಕೀಟಗಳಲ್ಲಿ ಚುಚ್ಚುತ್ತದೆ ಮತ್ತು ಅವುಗಳನ್ನು ಕೊಲ್ಲುತ್ತದೆ. ಇದು ಬೆಳೆ...

Recent Posts