ಕೆಲವೇ ದಶಕಗಳ ಹಿಂದೆ ಬಿತ್ತನೆ ಬೀಜಗಾಗಿ ಮಾರುಕಟ್ಟೆ ಮುಖ ನೋಡಬೇಕಾದೀತು ಎಂದರೆ ರೈತರು ಆಶ್ಚರ್ಯಪಡುತ್ತಿದ್ದರು. ಆದರೆ ಕಳೆದ ಮೂರು ದಶಕಗಳಿಂದೀಚೆಗೆ ಬಿತ್ತನೆ ಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡದ ರೈತರ ಸಂಖ್ಯೆಯೇ ಅತ್ಯಲ್ಪ. ಇದಕ್ಕೆ ಅನೇಕ ಕಾರಣಗಳಿವೆ. ಸಾವಯವ ಕೃಷಿಕರು ಬಿತ್ತನೆಬೀಜದ ವಿಚಾರದಲ್ಲಿ ಸ್ವಾವಲಂಬಿಗಳಾಗಿರಬೇಕು. ಆಗ ಸಾವಯವ ಕೃಷಿಯ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಬಗ್ಗೆ ತಿಳಿವಳಿಕೆ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಆದರೂ ಬಿತ್ತನೆಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡುವ ಕೃಷಿಕರ ಸಂಖ್ಯೆ ಅಪಾರವಾಗಿದೆ. ಇಂಥ ರೈತರು ಬಿತ್ತನೆ ಬೀಜ ಖರೀದಿಸುವಾಗ ಕೆಲವೊಂದು ಅಂಶಗಳನ್ನು...
ಕ್ಷೇತ್ರಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಬೆಳೆಯುವುದು ಕೃಷಿಗೆ ಸುಸ್ಥಿರತೆಯನ್ನು ತಂದು ಕೊಡುತ್ತದೆ. ಇದರಿಂದ ಆಗುವ ಅನುಕೂಲಗಳು ಅಪಾರ. ಹೆಚ್ಚಿನ ತರಕಾರಿಗಳು ಅಲ್ಪಾವಧಿ ಬೆಳೆಗಳಾಗಿವೆ. ಕಡಿಮೆ ಸಮಯದಲ್ಲಿ ಮಾರುಕಟ್ಟೆಗೆ ಬೆಳೆಗಳನ್ನು ಕಳಿಸುವುದು ಸಾಧ್ಯವಾಗುತ್ತದೆ. ಇದಲ್ಲದೇ ಕ್ಷೇತ್ರಬೆಳೆ ನಂತರ ತರಕಾರಿ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯೂ ವೃದ್ಧಿಸುತ್ತದೆ. ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ವ್ಯಾಪ್ತಿಯಲ್ಲಿದೆ ಬೆಟ್ಟಳ್ಳಿ. ಇಲ್ಲಿನ ಪ್ರಗತಿಪರ ಕೃಷಿಕ ಜಯರಾಮಯ್ಯ ಅವರು ಪ್ರಯೋಗಶೀಲ ಪ್ರವೃತ್ತಿಯವರು. ನಿರಂತರವಾಗಿ ಬೆಳೆ ಬದಲಾವಣೆ ಮಾಡುವುದರಿಂದ ಸಾಕಷ್ಟು ಅನುಕೂಲಗಳಿವೆ ಎಂದು ಕಂಡುಕೊಂಡವರು. ಏಕಬೆಳೆ ಪದ್ಧತಿಯಿಂದ ಆಗುವ ಅನಾನುಕೂಲಗಳನ್ನು...
ಹೈನುಗಾರಿಕೆ ಮಾಡುವಾಗ ಅದನ್ನು ಸುಸ್ಥಿರ ಮಾದರಿಯಲ್ಲಿ ಮಾಡುವುದು ಅಗತ್ಯ. ಹೀಗೆ ಮಾಡಿದಾಗ ಲಾಭಾದಾಯಕ ರೀತಿ ನಿರ್ವಹಣೆ ಮಾಡುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛತೆ, ಪೋಷಕಾಂಶ ಮತ್ತು ಸೂಕ್ತ ಪ್ರಮಾಣದ ಪೋಷಕಾಂಶ ಪೂರೈಕೆ ಅತ್ಯಗತ್ಯ. ಹೈನುರಾಸುಗಳು ಸಾಮಾನ್ಯವಾಗಿ ಸೂಕ್ಷ್ಮ ಆರೋಗ್ಯ ಪ್ರಕೃತಿ ಹೊಂದಿರುತ್ತವೆ. ಆದ್ದರಿಂದ ಅವುಗಳಿಗೆ ಬಾಧಿಸಬಹುದಾಗ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ. ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬ ಅಂಶಗಳು ನಿಮ್ಮ ಮುಂದೆ…
ಹೈನುರಾಸುಗಳಿಗೆ ಅಗತ್ಯ ಪ್ರಮಾಣದಲ್ಲಿ ಪೋಷಕಾಂಶಗಳು ಅಗತ್ಯ. ಇವುಗಳಿಗೆ ಕೊರತೆ ಉಂಟಾದರೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸುಣ್ಣ ಅಂದರೆ...
ಕರ್ನಾಟಕದಲ್ಲಿ ಹಲಸು ಪ್ರಧಾನ ಬೆಳೆಯಲ್ಲ. ಜಮೀನು-ತೋಟದ ಬದಿಗಳಲ್ಲಿ ಒಂದೋ ಎರಡೋ ಮರಗಳಿರುತ್ತವೆ. ಹೆಚ್ಚು ಮರಗಳಿರುವೆಡೆಯಲ್ಲಿಯೂ ಇದು ಆದ್ಯತೆಯ ಕೃಷಿಯೇನಲ್ಲ. ಬಹುಮಟ್ಟಿಗೆ ಪ್ರಕೃತಿಯ ಪಾಲನೆಯಿಂದಲೇ ಬೆಳೆಯುವ ಸಸ್ಯವಿದು ಎಂದರೆ ಉತ್ಪ್ರೇಕ್ಷೆ ಮಾತಾಗದು. ಕಾರಣ ಇಲ್ಲಿ ಇದಕ್ಕೆ ಗೊಬ್ಬರ, ನೀರು, ಪ್ರೂನಿಂಗ್ ಇತ್ಯಾದಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆದರೆ ಹಲಸಿನ ಪ್ರಯೋಜನಗಳನ್ನು ನೋಡಿದಾಗ ಇದು ಅಪತ್ಕಾಲದ ಬಂಧು ಎಂಬುದು ಅರಿವಾಗುತ್ತದೆ. ಇಂಥ ಹಲಸನ್ನು ವಿವಿಧ ರೀತಿ ಮೌಲ್ಯವರ್ಧನೆ ಮಾಡಿ-ವಿಸ್ತಾರ ಮಾರುಕಟ್ಟೆಯನ್ನು ಕಂಡು ಕೊಂಡಿರುವ ಕೇರಳಿಗರ ಸಾಧನೆ ಅಚ್ಚರಿ ಮೂಡಿಸುತ್ತದೆ.
ಹಲಸಿನ ತೊಳೆ ತುಂಬ ಸಿಹಿಯಾಗಿದ್ದರೆ ಒಂದಷ್ಟು ತಿನ್ನುತ್ತಾರೆ....
"ಹೈನುರಾಸುಗಳು ಹಸಿರು ಹುಲ್ಲಿಗಿಂತಲೂ ಅಡಿಕೆ ಹಾಳೆಯನ್ನು ಹೆಚ್ಚು ಇಷ್ಟ ಪಟ್ಟು ಮೇಯುತ್ತವೆ. ಅವುಗಳು ಉತ್ಪಾದಿಸುವ ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಇನ್ನೂ ಮಹತ್ವದ ಅಂಶವೆಂದರೆ ಅವುಗಳ ಹಾಲಿನಲ್ಲಿರುವ ಕೊಬ್ಬಿನ ಅಂಶದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ" ಹೀಗೆಂದು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಅಡಿಗರು ಹೇಳಿದರು. ನನಗೆ ನಂಬುವುದಕ್ಕೆ ಕಷ್ಟವೆನಿಸಿತು. ಒಣಗಿಸಿದ ಅಡಿಕೆ ಹಾಳೆಗಳನ್ನು ಹಸುಗಳು ನಿರಾಸಕ್ತಿಯಿಂದ ಮೇಯುವುದನ್ನು ಕಂಡಿದ್ದ ನನಗೆ ಹೀಗೆ ಅನಿಸಿದ್ದು ಸಹಜವೇ ಆಗಿತ್ತು. ನನ್ನ ಮನಸಿನ ಭಾವನೆಗಳನ್ನು ಓದಿಕೊಂಡವರಂತೆ ಅಡಿಗರು...
ಎರೆಹುಳುಗಳು, ಬೆಳೆಗಳ ಬೇರುಗಳನ್ನು ತಿನ್ನುತ್ತವೆ. ಇದರಿಂದ ಬೆಳೆ ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥದೊಂದು ತಪ್ಪು ಅಭಿಪ್ರಾಯ ಇಂದಿಗೂ ಸಾಕಷ್ಟು ಕೃಷಿಕರಲ್ಲಿದೆ. ಅಕ್ಷರಸ್ಥ ಕೃಷಿಕರಲ್ಲಿಯೂ ಇಂಥ ತಪ್ಪು ತಿಳಿವಳಿಕೆ ಹೊಂದಿದವರು ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಎರೆಹುಳುಗಳಿಂದ ಕೃಷಿಗೆ ಆಗುವ ಪ್ರಯೋಜನ- ಪರಿಣಾಮ ಅಪಾರ. ಆದ್ದರಿಂದ ಅವುಗಳ ಇರುವಿಕೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕೃಷಿಭೂಮಿಯಲ್ಲಿ ನಿರ್ಮಾಣ ಮಾಡುವುದು ಅತ್ಯವಶ್ಯಕ.
ಮಣ್ಣಿನ ಫಲವತ್ತತೆ, ಉತ್ಪಾದಕತೆ ಹೆಚ್ಚಿಸಲು ಪ್ರಕೃತಿ ತನ್ನದೇ ವಿಧಾನಗಳನ್ನು ಆಧರಿಸಿದೆ.ಇದನ್ನು ಅರ್ಥ ಮಾಡಿಕೊಂಡು ಪೂರಕ ರೀತಿಯಲ್ಲಿ ಬೆಳೆ ಬೆಳೆಯಲು ಸಾವಯವ ಕೃಷಿ ಸಹಾಯಕ. ಏಕೆಂದರೆ ಇಲ್ಲಿ ರಾಸಾಯನಿಕ ಕೃಷಿ...
‘ನನ್ನ ಯಶಸ್ಸಿನ ತಳಹದಿಯೇ ಸಮಗ್ರ ಕೃಷಿ. ಇದೇ ಸಾಧನೆಯ ಮಂತ್ರ ಮತ್ತು ಜೀವಾಳ’ ಹೀಗೆನ್ನುತ್ತಾರೆ ಇಡೀ ಕೃಷಿರಂಗವೇ ತಮ್ಮತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ರೈತ ಸದಾನಂದ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದ ತಪಸೀಹಳ್ಳಿ ಗ್ರಾಮ ನಿವಾಸಿ. ವ್ಯವಸಾಯ ಎಂದರೆ ನಷ್ಟದಾಯಕ ಬಾಬತ್ತು ಎನ್ನುವ ಭಾವನೆ ದಟ್ಟವಾಗಿದೆ. ಇಂಥ ಸಂದರ್ಭದಲ್ಲಿ ಐವತ್ತರ ವಯೋಮಾನದ ಅತಿ ಸಣ್ಣ ರೈತ ಸದಾನಂದ ಅವರು ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಇದೇ ಹಾದಿಯಲ್ಲಿ ಮುಂದುವರಿಲು ರೂಪಿಸಿಕೊಂಡಿರುವ ಯೋಜನೆಗಳು ಬಲು ಅಪರೂಪದ ವಿದ್ಯಮಾನ...
ಹೆಚ್. ಸದಾನಂದ ಅವರದು ಕೃಷಿಕ ಕುಟುಂಬದ...
ಉತ್ತಮ ಪ್ರಚಾರ ನೀಡಿ ತರಕಾರಿ-ಫಲ ಪ್ರದರ್ಶನ ಮಾಡಿದರೆ ಬೆಂಗಳೂರಿಗರು ಸ್ಪಂದಿಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ; ಬೆಂಗಳೂರಿನ ಲಾಲ್ಬಾಗಿನಲ್ಲಿ ನವೆಂಬರ್ನಲ್ಲಿ ಐದು ದಿನ ಫಲ ಪ್ರದರ್ಶನ-ಮಾರಾಟ ಏರ್ಪಾಡು. ಈಶಾನ್ಯ ರಾಜ್ಯಗಳವರಿಗಾಗಿಯೇ ಈ ವಿಶೇಷ ವ್ಯವಸ್ಥೆ. ಈಶಾನ್ಯ ರಾಜ್ಯಗಳ ಕೃಷಿ-ತೋಟಗಾರಿಕೆ ಇಲಾಖೆಗಳವರು ರೈತರೊಂದಿಗೆ ಬಂದು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಳಿಗೆ ತೆರೆದಾಗ ಸ್ಪಂದನೆ ದೊರೆಯುತ್ತದೋ ಇಲ್ಲವೂ ಎಂಬ ಆತಂಕ ಹೆಚ್ಚಿನವರಲ್ಲಿತ್ತು. ಸಂಜೆ ಇವರ ಆಕಂಕ ಮರೆಯಾಗಿ ಉತ್ಸಾಹ-ಉಲ್ಲಾಸ ಮನೆಮಾಡಿತ್ತು. ತಂದ ಸರಕು ಕೂಡ ಸಾಲುವುದಿಲ್ಲ ಎಂಬ ವಿಶ್ವಾಸ ಮೊದಲದಿನವೇ ಮೂಡಿತ್ತು.
ಮಿಜೋರಾಂ, ಮಣಿಪಾಲ್, ನಾಗಾಲ್ಯಾಂಡ್ ರೈತರಲ್ಲದೇ ಮಹಾರಾಷ್ಟ್ರದ ರೈತರೂ...
ರಾಜ್ಯದ ಬಹುತೇಕ ಗ್ರಾಮೀಣರ ಜೀವನಾಧಾರ ಹೈನುಗಾರಿಕೆ. ಇದನ್ನು ಕ್ರಮಬದ್ಧ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಮಾಡಬೇಕು. ಇಲ್ಲದಿದ್ದರೆ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ. ಆದ್ದರಿಂದ ಹೈನುಗಾರಿಕೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಡುವುದು ಹೇಗೆ ಎಂದು ತಿಳಸುವ ಆ್ಯಪ್ ಅಗತ್ಯ. ಇತ್ತೀಚೆಗೆ ಇಂಥ ಆ್ಯಪ್ ಬಿಡುಗಡೆಯಾಗಿದೆ.
ರಾಜ್ಯದಲ್ಲಿ ಹೈನುಗಾರಿಕೆ ಕ್ರಾಂತಿಯೇ ಉಂಟಾಗಿದೆ. ಇದಕ್ಕೆ ಕಾರಣ ತಜ್ಞರ ಮಾರ್ಗದರ್ಶನ ಮತ್ತು ಗ್ರಾಮೀಣರ ಆಸಕ್ತಿ. ಬಹುತೇಕ ಗ್ರಾಮೀಣರಿಗೆ ಇದು ಜೀವನಾಧಾರ. ಅವರ ದೈನಂದಿನ ಜೀವನಾವಶ್ಯಕತೆಗೆ ಅವಶ್ಯಕವಾದ ಹಣ ಇದರಿಂದಲೇ ದೊರೆಯುತ್ತದೆ. ಒಂದು ವೇಳೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತವಾಗಿ ತಿಳಿಯದಿದದ್ದರೆ...
"ಕೇಂದ್ರಸರ್ಕಾರ ಅಪಾರ ಖರ್ಚುಮಾಡಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. ಇದರೊಂದಿಗೆ ಎಳನೀರು ನೀಡಿದರೆ ತೆಂಗು ವಲಯ ಊಹೆಗೂ ಮೀರಿದ ನಿಟ್ಟಿನಲ್ಲಿ ಚೇತರಿಸಿಕೊಳ್ಳುತ್ತದೆ. ಎಳನೀರು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಅದರ ಪ್ರಯೋಜನ ಮಕ್ಕಳಿಗೆ ದೊರೆಯುತ್ತದೆ" ಹೀಗೊಂದು ಬೇಡಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ವಿ. ಆನಂದ್ ಬೋಸ್ ಅವರು ಕೇಂದ್ರಸರ್ಕಾರದ ಮುಂದಿಟ್ಟಿದ್ದಾರೆ.
ಕೃತಕ ತಂಪುಪಾನೀಯಗಳ ಭರಾಟೆಯಲ್ಲಿ ನೈಸಗರ್ಿಕ ತಂಪುಪಾನೀಯ ಎಳನೀರು ಮಂಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಭರಾಟೆ ಹೇಗಿದೆಯೆಂದರೆ ಶಾಲಾ ಮಕ್ಕಳಿರಲಿ ಐದು ವರ್ಷದ ಮಕ್ಕಳು ಕೂಡಾ ಕೃತಕ ತಂಪುಪಾನೀಯವೇ ಬೇಕೆಂದು ಹಠ ಹಿಡಿಯುವಷ್ಟು....