ಅಪ್ಪನ ಕಾಲದಿಂದ ಅರಿಶಿಣ ಬೆಳೆಯುತ್ತಿದ್ದೇವೆ.ಮೂರು ದಶಕಗಳ ಅನುಭವ ನಮ್ಮದು.ತಮಿಳುನಾಡಿನ ರೈತರು ನಮ್ಮಲ್ಲಿ ಬೇಸಾಯ ಮಾಡಲು ಬಂದಾಗ ನಮಗೆ ಅರಿಶಿಣ ಬೇಸಾಯ ಕಲಿಸಿಕೊಟ್ಟರು. ಅರಿಶಿನದ ಜೊತೆ ಈರುಳ್ಳಿ ಅಥವಾ ಬೀನ್ಸ್ ಅನ್ನು ಮಿಶ್ರ ಬೆಳೆಯಾಗಿ ಮಾಡುತ್ತಿದ್ದೆವು. ಅದನ್ನು ಬಿಟ್ಟರೆ ಬೇರೆ ಪ್ರಯೋಗ ಮಾಡುತ್ತಿರಲಿಲ್ಲ.
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದ ಯುವರೈತ ಮಹಾದೇವಶೆಟ್ಟಿ ಅರಿಶಿಣದ ಜೊತೆ ಕೊತ್ತಂಬರಿ (ಧನಿಯಾ), ಈರುಳ್ಳಿ, ಮೆಣಸಿನಕಾಯಿ ಹೀಗೆ ಒಟ್ಟು ನಾಲ್ಕು ಬೆಳೆಗಳನ್ನು ಸಂಯೋಜನೆ ಮಾಡಿ ಮಿಶ್ರ ಬೇಸಾಯ ಮಾಡುವುದರಿಂದ ಹೇಗೆ ಲಾಭ ಪಡೆಯಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಂಡಾಗ ನಮಗೆಲ್ಲಾ ಅಚ್ಚರಿ !.
ಆಯರಹಳ್ಳಿಯ...
ಹಸಿರೆಲೆ ಗೊಬ್ಬರಗಳು ಮಣ್ಣಿನ ಭೌತಿಕ ರಚನೆ ಹಾಗೂ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಭೂಮಿಯ ಮೇಲೆ ಹೇರಳವಾಗಿ ಸ್ವಾಭಾವಿಕವಾಗಿ ಬೆಳೆದಿರುವ ಅನೇಕ ಜಾತಿಯ ಹಸಿರು ಗಿಡಗಳನ್ನು ಹಸಿರೆಲೆ ಗೊಬ್ಬರವಾಗಿ ಬಳಸಬಹುದಾಗಿದೆ. ಈ ಸಾಲಿಗೆ ಲ್ಯಾಂಟನಾ (ಲಂಟಾನ)ಕೂಡ ಸೇರ್ಪಡೆಯಾಗುತ್ತದೆ. ಇದರ ವೈಜ್ಞಾನಿಕ ಹೆಸರು Lantana camera
ಲ್ಯಾಂಟನಾ ಸಸ್ಯ : ಗ್ರಾಮೀಣ ಪ್ರದೇಶಗಳಲ್ಲಿ ಲ್ಯಾಂಟನ ಪೊದೆಗಳನ್ನು 'ರೋಜುವಾಳಿ' 'ಹುಣ್ಣಿ ಗಿಡ' ಎಂಬ ಹೆಸರಿನಿಂದ ಕರೆಯುತ್ತಾರೆ. ಅತ್ಯಂತ ವೇಗವಾಗಿ ಬೆಳೆಯುವ ಈ ಸಸ್ಯ ಹೊಲ, ಗದ್ಧೆ, ಕಾಡು, ಒಣಭೂಮಿ ಹೀಗೆ ಎಲ್ಲೆಂದರಲ್ಲಿ ಕೃಷಿ ಹಾಗೂ ಕೃಷಿಯೇತರ ಭೂಮಿಯನ್ನು ಆವರಿಸಿಕೊಂಡು...
ಸಾಂಪ್ರದಾಯಿ ರೀತಿಯಲ್ಲಿ ಜೇನು ಸಂಗ್ರಹಣೆ ಮಾಡುವುದರಿಂದ ಜೇನುಕುಟುಂಬಗಳು ನಾಶವಾಗುವ ಸಾಧ್ಯತೆಗಳು ಅಧಿಕ. ಆದ್ದರಿಂದ ಈ ಕಾರ್ಯ ಮಾಡುವಾಗ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರಪ್ರಸಾದ್ ಸಲಹೆ ನೀಡಿದದರು.
ಅವರು ಇಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಅಖಿತ ಭಾರತ ಸುಸಂಘಟಿತ ಜೇನುನೋಣ ಮತ್ತು ಪರಾಗಸ್ಪರ್ಶಗಳ ಸಂಶೋಧನಾ ಪ್ರಾಯೋಜನೆ, ಕರ್ನಾಟಕ ರಾಜ್ಯ ತೋಟಗಾರಿಕೆ ಮಿಷನ್ ಏಜೆನ್ಸಿ. ತೋಟಗಾರಿಕೆ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಂಯುಕ್ತ ಆಶ್ರಯದಲ್ಲಿ "ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಅದಾಯಕ್ಕಾಗಿ ಜೇನುಕೃಷಿ" ರಾಜ್ಯಮಟ್ಟದ ಜೇನು...
ಸೂಬಾಬುಲ್,ಇದನ್ನು ಮೆಕ್ಸಿಕೋದ ಮಾಯಾ ಮತ್ತು ಜಾಪೋಟೆಕ್ ಎಂಬ ಗುಡ್ಡಗಾಡು ಜನರು ಬೆಳೆಯುತ್ತಿದ್ದರು. ಇದೊಂದು ಬಹುಪಯೋಗಿ. ಇದು ಹೆಚ್ಚು ಪ್ರೋಟೀನು ಒಳಗೊಂಡ ಮೇವು, ಸಾವಯವ ಗೊಬ್ಬರವಾಗಿ, ಮರವಾಗಿ, ಉರುವಲಾಗಿ, ಪ್ಲಾಂಟೇಷನುಗಳಲ್ಲಿ, ಕೋಕೋ, ಕ್ವಿನೈನ್, ಕಾಫಿ, ಟೀ, ವೆನಿಲ್ಲಾಗಳಿಗೆ ನೆರಳು ಕೊಡುವ ಮರ.
ಸೂಬಾಬುಲ್ (ಲ್ಯುಸೇನಾ ಲ್ಯೂಕೋಸೆಫಲಾ) ಮುಳ್ಳಿಲ್ಲದ ಗರಿಯೋಪಾದಿಯ ಎಲೆಗಳುಳ್ಳ, ಸಣ್ಣ ಆಕರ್ಷಕ ಹೂವುಗಳುಳ್ಳ, ಹಚ್ಚ ಹಸಿರಾದ ಕಾಯಿಗಳಿಂದ ಕೂಡಿದ ಮರ.ಕಾಯಿ ಬಲಿಯುತ್ತಿದ್ದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಇದರ ಬೇರುಗಳು ಗಟ್ಟಿಯಾದ ಮಣ್ಣಿನಲ್ಲೂ ಬಹು ಆಳಕ್ಕೆ ಇಳಿಯುತ್ತವೆ. ವಾತಾವರಣದಲ್ಲಿನ ಸಾರಜನಕವನ್ನು ನೇರವಾಗಿ ಬಳಸುವ ಸಾಮಥ್ರ್ಯವುಳ್ಳ ವೃಕ್ಷ....
ಕರ್ನಾಟಕ ರಾಜ್ಯ ಸರಾಸರಿ ಕಬ್ಬು ಇಳುವರಿ 1 ಎಕರೆಗೆ 27 ರಿಂದ 28 ಟನ್. ಮಂಡ್ಯ ಜಿಲ್ಲೆಯಲ್ಲಿ 1 ಎಕರೆಗೆ ಸರಾಸರಿ 35 ರಿಂದ 40 1 ಟನ್ ಬೆಳೆದರೆ ಭಾರಿ. ಬೆಳಗಾವಿ ಜಿಲ್ಲೆ ರೈತರು 1 ಎಕರೆಗೆ 80 ಟನ್ ತನಕ ಬೆಳೆಯುತ್ತಾರಾದರೂ ಪ್ರತಿವರ್ಷ ಇಷ್ಟೆ ಪ್ರಮಾಣದ ಇಳುವರಿ ಬರುವುದಿಲ್ಲ. ಆದರೆ ಇದೇ ಜಿಲ್ಲೆ ಅಥಣಿ ತಾಲೂಕಿನ ರೈತನೋರ್ವ 1 ಎಕರೆಯಲ್ಲಿ ಕಳೆದ 25 ವರ್ಷಗಳಿಂದ ಸರಾಸರಿ 80 ರಿಂದ 90 ಟನ್ ತೆಗೆಯುತ್ತಾರೆ. ಈ ಬಾರಿ ಅವರು 161 ಟನ್...
ಸಾವಿರದೊಂಬೈನೂರ ಅರವತ್ತೇಳು ಅರವತ್ತೆಂಟರಲ್ಲಿ, ನಾನು ರಾಗಿ ಬೆಳೀತಿದ್ದ ಕಾಲದಲ್ಲಿ, ಒಂದು ಕ್ವಿಂಟಾಲ್ ರಾಗಿಗೆ ಇನ್ನೂರೈವತ್ತು ರೂಪಾಯಿತ್ತು. ಅದೇ ಟೈಮಲ್ಲಿ ರೈತ್ರು ಉಪಯೋಗಿಸುವ ಪವರ್ ಟಿಲ್ಲರ್ರಿಗೆ ನಾಲ್ಕೂವರೆ ಸಾವಿರ ರೂಪಾಯಿತ್ತು. ಈಗ, ಅಂದರೆ ಸುಮಾರು ನಲವತ್ಮೂರು ವರ್ಷಗಳ ನಂತರ ರಾಗಿ ಬೆಲೆ ಕ್ವಿಂಟಾಲ್ ಗೆ ಒಂಬೈನೂರು ಚಿಲ್ಲರೆ ಆಗಿದೆ. ಅದೇ ಪವರ್ ಟಿಲ್ಲರ್ ಬೆಲೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಆಗಿದೆ. ರೈತ ಬೆಳೆದ ಫಸಲಿಗೆ ಅಂದು ಸಿಗುತ್ತಿದ್ದ ಬೆಲೆಗೂ, ಇಂದು ಸಿಗುತ್ತಿರುವ ಬೆಲೆಗೂ ಅಂತ ವ್ಯತ್ಯಾಸ ಕಾಣುತ್ತಿಲ್ಲ. ಆದರೆ ಕೃಷಿ ಪರಿಕರದ...
ಹದಿನೈದು ವರ್ಷದ ಹಿಂದಿನ ಸಂದರ್ಶನ ಬರಹವಿದು. ಕೃಷಿ ಸಾಧಕ ಎಲ್. ನಾರಾಯಣರೆಡ್ಡಿ ಅವರ ಗ್ರಾಮಕ್ಕೆ ಹೋಗಿ ಮಾತನಾಡಿಸಿದ್ದೆ. ಸಾವಯವ ಕೃಷಿಕ್ಷೇತ್ರಕ್ಕೆ ಪುನಶ್ಚೇತನ ತಂದುಕೊಂಡುವಲ್ಲಿ ಅಪಾರವಾಗಿ ಶ್ರಮಿಸಿದ ಇವರು ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರೂ ಮಾಡಿರುವ ಅನುಪಮ ಕಾರ್ಯಗಳ ಮೂಲಕ ಅವರ ಚೇತನ ಎಂದಿಗೂ ಪ್ರಕಾಶಿಸುತ್ತದೆ.
"ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ" ಎಂಬುದನ್ನು ಚೆನ್ನಾಗಿ ಅರಿತವರು ಬೆಂಗಳೂರು ನಗರ ಜಿಲ್ಲೆ. ವರ್ತೂರು ಹೋಬಳಿ ಸೋರಹುಣಿಸೆ ಗ್ರಾಮದ ನಾರಾಯಣರೆಡ್ಡಿ. "ಕೈ ಕೆಸರಾದರೆ ಬಾಯಿ ಮೊಸರು" ಎಂಬ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರು. ಈಗ 69 ವರ್ಷ...
ಮನುಷ್ಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರ ಹಿರಿದು. ನಿಯಮಿತವಾಗಿ ಇದರ ಸೇವನೆ ಮಾಡುತ್ತಿದ್ದರೆ ಇತ್ತೀಚಿನ ‘ಲೈಫ್ ಸ್ಟೈಲ್’ ಕಾಯಿಲೆಗಳನ್ನು ದೂರವಿಡಬಹುದು. ಕಾಯಿಲೆ ಬಂದಿದ್ದ ಸಂದರ್ಭದಲ್ಲಿ ಗುಣಪಡಿಸಲೂ ಬೆಳ್ಳುಳ್ಳಿ ಉಪಯುಕ್ತ. ಮಾರಕ ಕಾಯಿಲೆಗಳನ್ನು ತಡೆಯುವ ಶಕ್ತಿ ಇದಕ್ಕಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಮನುಷ್ಯರಿಗೆ ಇಷ್ಟೆಲ್ಲ ಉಪಯುಕ್ತವಾದ ಬೆಳ್ಳುಳ್ಳಿ ಬಳಸಿ ಬೆಳೆಗಳಿಗೆ ಬರುವ ರೋಗಗಳನ್ನು ಮತ್ತು ಹಾನಿಕಾರಕ ಕೀಟಗಳನ್ನು ತಡೆಗಟ್ಟಬಹುದು.
ಕೀಟನಾಶಕ ತಯಾರಿಕೆ:
1.ಬೆಳ್ಳುಳ್ಳಿ ತೈಲ ಮತ್ತು ಸಾಬೂನು ದ್ರಾವಕ: 950 ಮಿಲಿ ಲೀಟರ್ ಶುದ್ದ ನೀರು, 50 ಮಿಲಿ ಲೀಟರ್ ಬೆಳ್ಳುಳ್ಳಿರಸ ಮತ್ತು 1 ಮಿಲಿ...
ಕೇಂದ್ರ ಸರ್ಕಾರ “ Operation Greens” ಹೆಸರಿನಲ್ಲಿ ಟೊಮ್ಯಾಟೋ ಮತ್ತು ಈರುಳ್ಳಿ ಬೆಳೆಗಳ ಸಮಗ್ರ ಅಭಿವೃದ್ಧಿ ಹಾಗೂ ಮೌಲ್ಯವರ್ಧನೆಗಾಗಿ ಯೋಜನೆಯನ್ನು ಹಮ್ಮಿಕೊಂಡಿದೆ. ಆಹಾರ ಸಂಸ್ಕರಣಾ ಮಂತ್ರಾಲಯ; 2018-19 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಟೊಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆ ತರಕಾರಿಗಳ ಹೊಸ ಮಹತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿತ್ತು, ಅದರಂತೆ, ಕಾರ್ಯಾತ್ಮಕ ಮಾರ್ಗಸೂಚಿಗಳನ್ನು
[email protected]ನಲ್ಲಿ ಪ್ರಕಟಿಸಿದೆ. ಯೋಜನೆಯ ಅನುಷ್ಠಾನ ಅವಧಿ 2 ವರ್ಷಗಳು. (2018-19 ಮತ್ತು 2019-20) ಈರುಳ್ಳಿ ಬೆಳೆ ಮೌಲ್ಯವರ್ಧನೆ ಕಾರ್ಯಕ್ಕಾಗಿ ಗದಗ ಮತ್ತು ಧಾರವಾಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳ FPOs/NGOs /...
ಬೆಂಗಳೂರು, ಜನವರಿ 9: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಅಕ್ಕಿ ಮಿಲ್‍ಗಳು ಠೇವಣಿ ಇಡುವುದಕ್ಕೆ ಪರ್ಯಾಯ ಉಪಾಯ ರೂಪಿಸುವ ಕುರಿತು ಕೂಡಲೇ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಿಲ್ ಮಾಲೀಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬದಲಿಸಿದ್ದು, ಇದರನ್ವಯ ರೈತರು ನೇರವಾಗಿ...