ಇಂಡೋನೇಷ್ಯಾದ ವಲಸಿಗ ಆಕ್ರಮಣಕಾರಿ ಕೀಟವಾದ ಥ್ರಿಪ್ಸ್ ಪಾರ್ವಿಸ್ಪಿನಸ್ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳಲ್ಲಿ ವೇಗವಾಗಿ ಹರಡಿತ್ತು. ಇದರಿಂದ ತೆಲಂಗಾಣದಲ್ಲಿ ಬೆಳೆಯುವ ಕೆಂಪು ಮೆಣಸಿನಕಾಯಿ ಬೆಳೆಯಲ್ಲಿ ಒಟ್ಟು ಅರ್ಧದಷ್ಟು ಬೆಳೆಗೆ ಹಾನಿಯಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳಿದ್ದರು.
ಇಂಥ ಹಾನಿಕಾರಕ ಕೀಟಬಾಧೆಗೆ ರಾಸಾಯನಿಕ ಕೀಟನಾಶಕಗಳು ಸೂಕ್ತ ಪರಿಹಾರವಾಗುವುದಿಲ್ಲ. ಏಕೆಂದರೆ ಇತ್ತೀಚಿನ ದಶಕಗಳಲ್ಲಿ ಕೀಟಗಳು ರಾಸಾಯನಿಕ ಕೀಟನಾಶಕಗಳಿಗೆ ನಿರೋಧಕ ಗುಣ ಬೆಳೆಸಿಕೊಂಡಿರುವುದು ಕಂಡು ಬಂದಿದೆ. ಕೀಟಗಳು ಇಂಥ ನಿಯಂತ್ರಕಗಳಿಗೆ ನಿರೋಧಕ ಗುಣ ಬೆಳೆಸಿಕೊಳ್ಳದಿರಲು ಸಕಾಲಿಕವಾಗಿ ತಜ್ಞರು ಹೇಳುವ ಮಿತ ಪ್ರಮಾಣದಲ್ಲಿ ಸಿಂಪಡಣೆ...
ಮಹಬೂಬಾದ್: ತೆಲಂಗಾಣದ ಮಹಬೂಬಾದ್ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗೆ ಉಂಟಾಗಿರುವ ಕೀಟಬಾಧೆಯಿಂದ ರೈತರು ಕಂಗಾಲಾಗಿದ್ದಾರೆ.
ಕೀಟಬಾಧೆ ನಿಯಂತ್ರಿಸಿ ಬೆಳೆ ರಕ್ಷಿಸಿಕೊಳ್ಳಲು ಆಗದ ಕಾರಣ ದಿಕ್ಕು ತೋಚದಂತಾಗಿದ್ದಾರೆ. ಇದರಿಂದ ಉಂಟಾದ ಆರ್ಥಿಕ ನಷ್ಟದಿಂದಾಗಿ 2022 ರ ಜನವರಿಯಿಂದ ಇಲ್ಲಿಯವರೆಗೆ 20 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ವೇದಿಕೆ (HRF) ಮತ್ತು ರೈತ ಸ್ವರಾಜ್ಯ ವೇದಿಕೆ (RSV) ದ ಭೂ ಸಮೀಕ್ಷೆ ಹೇಳಿದೆ. ಖಮ್ಮಂ ಜಿಲ್ಲೆಯಲ್ಲಿಯೂ ಐದು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಇಂಡೋನೇಷ್ಯಾದ ವಲಸಿಗ ಆಕ್ರಮಣಕಾರಿ ಕೀಟವಾದ ಥ್ರೈಪ್ಸ್ ಪಾರ್ವಿಸ್ಪಿನಸ್ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎರಡು...
ಏರುತ್ತಿರುವ ತಾಪಮಾನವು ನೀರಿನ ಭದ್ರತೆಗೆ ಗಂಭೀರ ಕಂಟಕ ಉಂಟು ಮಾಡಬಹುದು ಎಂದು ಸಿಎಸ್‌ಇ ತೀವ್ರ ಆತಂಕ ವ್ಯಕ್ತಪಡಿಸಿದೆ. “ಈ ಬೇಸಿಗೆಯ ಆರಂಭದಲ್ಲಿಯೇ ಭಾರತದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆಗಳು ಉಂಟಾಗತೊಡಗಿವೆ. ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಶಾಖದ ಬಗ್ಗೆ - ಹೆಚ್ಚಿದ, ಸುಡುವ ತಾಪಮಾನ, ಮತ್ತು ಅತಿವೃಷ್ಟಿ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇವುಗಳು ಜಲಚಕ್ರದೊಂದಿಗೆ ನೇರ ಸಂಬಂಧ ಹೊಂದಿವೆ. ಆದ್ದರಿಂದ ನೀರು ಮತ್ತು ಅದರ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಹೆಚ್ಚುತ್ತಿರುವ ಶಾಖವು ನೀರಿನ ಭದ್ರತೆ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ ಎಂದು...
ಬೆಂಗಳೂರು: ಮಾರ್ಚ್ 09: ಕೃಷಿ ಬೆಳೆಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿಗಳನ್ನು ತಯಾರಿಸುವ ಮೊದಲು ಅವುಗಳನ್ನು ಪುಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ಈ ಕೀಟನಾಶಕಗಳು ಬೆಳೆಗಳ ಮೇಲೆ ಹಾಗೂ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದೇ ಇಲ್ಲವೇ ಎಂಬುದನ್ನು ಸಂಶೋಧನೆ ನಡೆಸಲಾಗುವುದು. ಈ ನಂತರವೇ ರೈತರಿಗೆ ಕೀಟನಾಶಕ ಔಷಧಿಗಳನ್ನು ನೀಡುವ ಸಲುವಾಗಿ ರಾಜ್ಯದಲ್ಲಿ ಒಟ್ಟು 06 ಕೀಟ ನಾಶಕ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ...
ನಿರಂತರ ಸುರಿಯುತ್ತಿದ್ದ ಮಳೆ ಕೃಷಿಮೇಳಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೋ ಇಲ್ಲವೋ ಎಂಬ ಆತಂಕ ಸೃಷ್ಟಿಸಿತ್ತು. ಇದರ ನಡುವೆಯೂ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.
ನವೆಂಬರ್ 11. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಆಯೋಜಿಸಿದ್ದ ಕೃಷಿಮೇಳದ ಮೊದಲ ದಿನ. ಹಿಂದಿನ ದಿನವೇ ಮಹಾನಗರದಲ್ಲಿ ಮಹಾಮಳೆ ಹಿಡಿಯಿತು. ಅಂದು ಸಂಜೆಯೇ ರಾಜ್ಯದ, ದೇಶದ ವಿವಿಧೆಡೆಗಳಿಂದ ಆಗಮಿಸಿ ಪೂರ್ವ ನಿರ್ಮಿತ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಜೋಡಿಸುತ್ತಿದ್ದವರಿಗೆ ತೀವ್ರ ಆತಂಕ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿದ್ದರೆ ? ಆಯೋಜಕರಿಗೂ ಇದೇ ಆತಂಕ. ಕೃಷಿಮೇಳದ ದಿನಗಳನ್ನು ಮುಂದೂಡಬೇಕಿತ್ತೆ ?
ಮರುದಿನ ಕೃಷಿಮೇಳದ ಅಂಗಳವೆಲ್ಲ...
ಕೃಷಿ ವಿಶ್ವವಿದ್ಯಾನಿಲಯದ ನೂತನ ತಂತ್ರಜ್ಞಾನಗಳು ಮತ್ತು ಕೃಷಿಯಲ್ಲಿ ನೂತನ ಅವಿಷ್ಕಾರಗಳು ರೈತರಿಗೆ ಸಕಾಲದಲ್ಲಿ ತಲುಪುವಂತಾಗಲು ಈ ವರ್ಷದ ಕೃಷಿ ಮೇಳವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 2021ರ ನವೆಂಬರ್, 11, 12, 13 ಮತ್ತು 14 ರಂದು ನಾಲ್ಕು ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು.
ಅವರಿಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿರುವ ಆಡಳಿತ ಕಚೇರಿ ನಾಯಕ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ...
ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ ಬೆಳೆದಿರುವ ಎರಡು ವರ್ಷದ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.
ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು. “ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು...
"ಸ್ವಲ್ಪವೂ ಲಾಭವಿಲ್ಲದೆ ನಷ್ಟವಿಲ್ಲ" ಲಾರಾ ಇಂಗಲ್ಸ್ ರ ಕಾದಂಬರಿಗಳನ್ನು ಓದಿದವರಿಗೆ ಮತ್ತೆ ಮತ್ತೆ ನೆನಪಾಗುವ ಅಮೆರಿಕನ್ ಗಾದೆ ಮಾತು, ಅದಕ್ಕೆ ಹೋಲಿಕೆಯಾಗುವ ಗಾದೆ ಮಾತು ನಮ್ಮಲ್ಲೂ ಇದೆ. ಈವರ್ಷ ಬಂದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾದರು. ಗಿಡದಲ್ಲಿದ್ದ ಕಾಫಿ ಉದುರಿತು, ಅಂಗಳದಲ್ಲಿ ಒಣಗಲು ಹಾಕಿದ್ದು ಕೊಚ್ಚಿಕೊಂಡು ಹೋಯಿತು. ಒಂದು ವಾರದ ಮೋಡದ ವಾತಾವರಣದಿಂದ ಒಣಗಿದ ಕಾಫಿ ಮುಗ್ಗಿತು... ಹೀಗೆ ಬೆಳೆಗಾರರು ಹೈರಾಣಾದರು.
ಈಗ ಮತ್ತೆ ಸಾರ್ವತ್ರಿಕ ವಾಗಿ ಮಳೆಯಾಗಿದೆ. ಕಾಫಿ ನಾಡಿನ ಎಲ್ಲ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಅರೇಬಿಕಾ ಕಾಫಿಗೆ ಸ್ವಲ್ಪ ಬೇಗ...
ಪರಿಸರ – ಕೃಷಿಕರು – ಗ್ರಾಹಕರು ಜೊತೆಗೆ ಇತರ ಜೀವಿಗಳ ಮೇಲೆ ದುಷ್ಪರಿಣಾಮ ಬೀರದ ಕೃಷಿಪದ್ಧತಿ ಅವಶ್ಯಕ. ಇದರ ಜೊತೆಜೊತೆಗೆ ಕೃಷಿಕರ ಆದಾಯ ಹೆಚ್ಚಳವೂ ಅಗತ್ಯ. ಇವೆಲ್ಲ ಕಾರ್ಯಗಳನ್ನು ಬಹುದೂರದ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಮಂಡ್ಯದ ಯುವತಿ ಸಾಧಿಸಿ ತೋರಿಸುತ್ತಿದ್ದಾರೆ. ಇದರ ವಿವರಗಳು ವಿಡಿಯೋದಲ್ಲಿವೆ.
https://www.youtube.com/watch?v=13Z38lDma1Q&t=165s
ಬೋರ್ ಕೊರೆಸುವುದೆಂದರೆ ಈಗಿನ ಕಾಲದಲ್ಲಿ ತುಂಬ ಈಸಿ. ಏಜೆಂಟರಿಗೆ ಕಾಲ್ ಮಾಡಿದ ತಕ್ಷಣ ರಿಗ್ ಬಂದುಬಿಡುತ್ತದೆ. ಬೋರ್ ಕೊರೆದಾಯಿತು. ನೀರೂ ಕೂಡ ಬಂದುಬಿಡ್ತು. ಡ್ರಿಲ್ಲರ್ ಬೋರ್ ಕೊರೆಯಬೇಕಾದರೆ ಅದೇನೋ ಜಲ್ಲಿ ಕಲ್ಲುಗಳನ್ನು ಹಿಡಿದು ತಂದು 160 ಫೀಟಿನ ಗ್ಯಾಪಲ್ಲಿ ನೀರು ಸಿಕ್ಕಿದೆ ಸಾರ್,”ನಲ್ಲ ತಣ್ಣಿ” ಅಂತಂದು ಜಲ್ಲಿ ಕಲ್ಲುಗಳನ್ನು ನಿಮ್ಮ ಕೈಯಲ್ಲಿಟ್ಟು ಹೋಗಿಬಿಡುತ್ತಾನೆ..ನೀರು ಭರಭರ ಹಾರುವುದ ನೋಡಿ ಎಲ್ಲರಿಗೂ ಖುಷಿಯೋ ಖುಶಿ..
ಮುನ್ನೂರಡಿ ಕೊರೆದು ಕ್ಯಾಪ್ ಹಾಕಿ ರಿಗ್ ಹೋಗಿಬಿಡುತ್ತದೆ. ಇಷ್ಟಕ್ಕೇ ಮುಗೀತಾ. ಉಹುಃ ಪಂಪ್ ಹಾಕಬೇಕಲ್ವಾ...ಪಂಪ್ ನವರಿಗೆ ಕಾಲ್ ಮಾಡಿ ಚೆನ್ನಾಗಿ ನೀರು...