ಇಂಡೋನೇಷ್ಯಾದ ವಲಸಿಗ  ಆಕ್ರಮಣಕಾರಿ ಕೀಟವಾದ  ಥ್ರಿಪ್ಸ್ ಪಾರ್ವಿಸ್ಪಿನಸ್ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳಲ್ಲಿ ವೇಗವಾಗಿ ಹರಡಿತ್ತು. ಇದರಿಂದ ತೆಲಂಗಾಣದಲ್ಲಿ ಬೆಳೆಯುವ ಕೆಂಪು  ಮೆಣಸಿನಕಾಯಿ ಬೆಳೆಯಲ್ಲಿ ಒಟ್ಟು ಅರ್ಧದಷ್ಟು  ಬೆಳೆಗೆ ಹಾನಿಯಾಗಿದೆ ಎಂದು  ಅಲ್ಲಿನ ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳಿದ್ದರು.

ಇಂಥ ಹಾನಿಕಾರಕ ಕೀಟಬಾಧೆಗೆ ರಾಸಾಯನಿಕ ಕೀಟನಾಶಕಗಳು ಸೂಕ್ತ ಪರಿಹಾರವಾಗುವುದಿಲ್ಲ. ಏಕೆಂದರೆ ಇತ್ತೀಚಿನ ದಶಕಗಳಲ್ಲಿ ಕೀಟಗಳು  ರಾಸಾಯನಿಕ ಕೀಟನಾಶಕಗಳಿಗೆ ನಿರೋಧಕ ಗುಣ ಬೆಳೆಸಿಕೊಂಡಿರುವುದು ಕಂಡು ಬಂದಿದೆ. ಕೀಟಗಳು ಇಂಥ ನಿಯಂತ್ರಕಗಳಿಗೆ ನಿರೋಧಕ ಗುಣ ಬೆಳೆಸಿಕೊಳ್ಳದಿರಲು ಸಕಾಲಿಕವಾಗಿ ತಜ್ಞರು ಹೇಳುವ ಮಿತ ಪ್ರಮಾಣದಲ್ಲಿ ಸಿಂಪಡಣೆ ಮಾಡುವುದು ಅಗತ್ಯ.

ಈ ದಿಶೆಯಲ್ಲಿ ಸ್ವಾಭಾವಿಕ ಮಾದರಿಯಲ್ಲಿ ಥ್ರಿಪ್ಸ್ ಪಾರ್ವಿಸ್ಪಿನಸ್ ಕೀಟಬಾಧೆಗೆ ವರ್ಣ ಬಲೆಗಳು ಅಪಾರವಾಗಿ ಸಹಾಯ ಮಾಡುತ್ತವೆ. ಇದನ್ನರಿತ ತೆಲಂಗಾಣ ರಾಜ್ಯd ಅಧಿಕಾರಿಗಳು ಸ್ಟಿಕ್ಕಿ ಟ್ರಾಪ್ಸ್‌ ಗಳನ್ನು ಬಳಸಲು ಶಿಫಾರಸು ಮಾಡುತ್ತಿದ್ದಾರೆ.

ತೆಲಂಗಾಣ ರಾಜ್ಯದ ಗಣಪುರಂ ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಣಸಿಕಾಯಿ ಬೆಳೆಯುವ ತೋಟಗಳಿವೆ. ರೈತರು ತೋಟದಲ್ಲಿ ಕೀಟನಾಶಕ ಬಳಕೆ ವಿಷಯದಲ್ಲಿ ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ನಿರಂತರವಾಗಿ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲ್ಲೂಕು ಕೃಷಿ ಅಧಿಕಾರಿ ಐಲಯ್ಯ ಹೇಳಿದ್ದಾರೆ..

ತಾಲ್ಲೂಕಿನ ಸೀತಾಪುರಂ ಗ್ರಾಮದ ಆಷಾಡ ಸಾಂಬಯ್ಯ ಅವರ ಮಾಲಿಕತ್ವದ ಮೆಣಸಿನಕಾಯಿ ತೋಟದಲ್ಲಿ ರೈತರೊಂದಿಗೆ ಸೇರಿ ಕ್ಷೇತ್ರವನ್ನು‌ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೆಣಸಿನ ತೋಟದಲ್ಲಿ ಬ್ಲಾಕ್ ಥ್ರಿಪ್ಸ್  ತಾಮರ ಕೀಟ ನಿವಾರಣೆಗೆ ವೈಟ್ ಸ್ಟಿಕರ್ ಮತ್ತು ಬ್ಲೂ ಸ್ಟಿಕರ್ ಬಳಸಬೇಕೆಂದು ಸಲಹೆ ನೀಡಿದ್ದಾರೆ..

ಮೆಣಸಿನಕಾಯಿ ತೋಟದಲ್ಲಿ ಅಳವಡಿಸಿದ್ದ  ಬ್ಯಾರಿಕ್ಸ್ ವೈಟ್,ಎಲ್ಲೋ , ಬ್ಲೂ ಸ್ಟಿಕರ್ಸ್ ಗಳನ್ನು ಅವರು  ರೈತರ ಸಮ್ಮುಖದಲ್ಲೆ ಪರಿಶೀಲಿಸಿದರು. ಇಂಥ ಸ್ಟಿಕ್ಕಿ ಟ್ರಾಪ್ಸ್‌ಗಳು ಮೆಣಸಿನಕಾಯಿ  ಬಾಧಿಸುವ ಥ್ರಿಪ್ಸ್‌ ಕೀಟ ನಿಯಂತ್ರಣಕ್ಕೆ ಸಹಾಯಕಾರಿ ಎಂದ ಅವರು ಒಂದು ಎಕರೆಗೆ 50 ರಿಂದ 100 ವೈಟ್‌ ಸ್ಟಿಕ್ಕರ್‌ ಮತ್ತು ಬ್ಲೂ ಸ್ಟಿಕ್ಕರುಗಳನ್ನು ಬಳಸುವುದು ಸೂಕ್ತವೆಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೀಟತಜ್ಞ ಪ್ರಭುಶಂಕರ್‌ ಅವರು ಈ ಕುರಿತು “ಅಗ್ರಿಕಲ್ಚರ್‌ ಇಂಡಿಯಾ”ಜೊತೆ ಮಾತನಾಡಿದರು. ಮೆಣಸಿನಕಾಯಿ ಬಾಧಿಸುವ ಥ್ರಿಪ್ಸ್‌ ಎಸ್ಜಿಮಾ ನಿಯಂತ್ರಣಕ್ಕೆ ಬ್ಲೂ (ನೀಲಿ) ಸ್ಟಿಕ್ಕಿ ಟ್ರಾಫ್‌ ಗಳು ಸಹಕಾರಿ. ಆದರೆ ಇವುಗಳನ್ನು ಸೂಕ್ತ ಹಂತದಲ್ಲಿ ಈ ಬೆಳೆ ಬೆಳೆಯುವ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಕೀಟಬಾಧೆ ಗಣನೀಯವಾಗಿ ನಿಯಂತ್ರಣವಾಗುತ್ತದೆ ಎಂದು ಹೇಳಿದರು.

ಥ್ರಿಪ್ಸ್‌ ಕೀಟಬಾಧೆಯಿಂದ ಮೆಣಸಿನಕಾಯಿ ಹೂಗಳು ಉದುರಿ ಹೋಗುತ್ತವೆ. ಆದ್ದರಿಂದ ಅದನ್ನು ತಡೆಯಲು ಮೊಗ್ಗು ಬಿಡುವ ಹಂತದಲ್ಲಿಯೇ ಕ್ಷೇತ್ರದಲ್ಲಿ ಬ್ಲೂ ಸ್ಟಿಕ್ಕಿ ಟ್ರಾಫ್ಸ್‌ಗಳನ್ನು ಅಳವಡಿಸುವುದು ಅಗತ್ಯ. ಈ ಕೀಟಬಾಧೆ ಕಡಿಮೆಯಿದೆಯೋ ಹೆಚ್ಚಿದೆಯೋ ಎಂಬುದು ರೈತರ ಗಮನಕ್ಕೆ ಬರುತ್ತದೆ. ರೈತರು ಬೆಳೆಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆದ್ದರಿಂದ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಸಲಹೆ ಮಾಡಿದರು.

ಸಾವಯವ ಕೃಷಿಪದ್ಧತಿಯಲ್ಲಿ ಕೀಟ ನಿಯಂತ್ರಣಕ್ಕೆ ಅಗತ್ಯವಾದ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬ್ಯಾರಿಕ್ಸ್‌ ಸಂಸ್ಥೆ ನಿರತವಾಗಿದೆ. ಇದರ ಮುಖ್ಯಸ್ಥರಾದ ಲೋಕೇಶ್‌ ಮಕ್ಕಂ ಅವರು “ಅಗ್ರಿಕಲ್ಚರ್‌ ಇಂಡಿಯಾ” ಜೊತೆ ಮಾತನಾಡಿದರು. “ ಬೇರೆಬೇರೆ ಬೆಳೆಗಳನ್ನು ಕಾಡುವ ಕೀಟಗಳ ನಿಯಂತ್ರಣಕ್ಕೆ ಹಾಳೆಯ ಮಾದರಿಯಲ್ಲಿರುವ ಬಿಳಿ, ನೀಲಿ ಮತ್ತು ಹಳದಿ ಸ್ಟಿಕ್ಕಿ ಟ್ರಾಪ್ಸ್‌ ಗಳು ಸಹಕಾರಿ. ಮೆಣಸಿನಕಾಯಿ ಕಾಡುವ ಥ್ರಿಪ್ಸ್ ಪಾರ್ವಿಸ್ಪಿನಸ್ ಕೀಟ ಬಾಧೆಗೆ ಬಿಳಿ ಮತ್ತು ನೀಲಿ ಟ್ರಾಪ್ಸ್‌ ಗಳ ಬಳಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಇಂಥ ಸ್ಟಿಕ್ಕಿ ಟ್ರಾಪ್ಸ್‌ ಗಳ ಬೆಲೆಯೂ ಕಡಿಮೆ. ಇವುಗಳನ್ನು ಬಳಕೆ ಮಾಡುವುದರಿಂದ ರಾಸಾಯನಿಕ ಕೀಟನಾಶಕಗಳ ಬಳಕೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಕೃಷಿಯ ವೆಚ್ಚ ಬಹಳ ಕಡಿಮೆಯಾಗುತ್ತದೆ. ಸ್ಟಿಕ್ಕಿ ಟ್ರಾಪ್‌ ಗಳ ಬಳಕೆಯಿಂದ ರೈತರ ಆರೋಗ್ಯ, ಬೆಳೆಯ ಆರೋಗ್ಯ ಒಟ್ಟಾರೆಯಾಗಿ ಪರಿಸರದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅವರು ವಿವರಿಸಿದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  99008 00033

1 COMMENT

  1. Very good suggestions from Telangana and Bangalore Agriculture officers, they are having lot of efforts to the formers, dear formers please adopt this, and always follow the Agricultural news from your local languages DD channels, please honor expert agri officers suggestions. God bless all our Indian formers

LEAVE A REPLY

Please enter your comment!
Please enter your name here