ಅಧಿಕ ಕಾಫಿ ಹಾಗು ಮೆಣಸು ಇಳುವರಿಗೆ ಜೇನುಕೃಷಿ

0

ಲೇಖಕರು: ಮಂಜುನಾಥ ಹೊಳಲು

ಮಾನವನ ಉಳುವಿಗಾಗಿ ಜೇನುಹುಳುಗಳ ಸಂತತಿ ಅತಿಮುಖ್ಯ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ ಐನ್‌ಸ್ಟನ್ ಹೇಳಿದ್ದಾರೆ. ಆಹಾರ ಉತ್ಪಾದನೆಯಲ್ಲಿ ಜೇನುಹುಳುಗಳ ಪಾತ್ರ ಅನನ್ಯ. ಜೇನುಹುಳುಗಳು ಸಂಘಜೀವಿಗಳು. ಒಂದೊಂದು ಸಂಸಾರವೂ ಒಂದೊಂದು ಹುಟ್ಟಿನಲ್ಲಿ ನೆಲೆಸುತ್ತವೆ.

ಪ್ರತಿ ಕುಟುಂಬದಲ್ಲಿ ಮೂರು ಬಗೆಯ ಜೇನುಹುಳುಗಳಿವೆ. ಅವುಗಳು ರಾಣಿಜೇನು, ಗಂಡುಜೇನು ಹಾಗು ದುಡಿಮೆಗಾರ ಜೇನುಹುಳುಗಳು. ಹೀಗೆ ಒಂದು ಜೇನು ಕುಟುಂಬದಲ್ಲಿ ಕೇವಲ ಒಂದೇ ಒಂದು ರಾಣಿಜೇನು, ನೂರಾರು ಗಂಡುಹುಳುಗಳು ಹಾಗು ಹತ್ತಾರು ಸಾವಿರ ದುಡಿಮೆಗಾರ ಜೇನುಹುಳುಗಳಿರುತ್ತವೆ.

ಜೇನುಕೃಷಿ ಉಳಿದೆಲ್ಲಾ ಕೃಷಿಗಿಂತ ಭಿನ್ನವಾಗಿದೆ. ಪರಿಸರದಲ್ಲಿನ ಸಸ್ಯ ಸಂಪತ್ತನ್ನು ಅವಲಂಭಿಸಿದ್ದು. ವ್ಯರ್ಥವಾಗುವ ಮಕರಂದದಿಂದ ಜೇನುತುಪ್ಪ ಉತ್ಪತ್ತಿಯಾಗುತ್ತದೆ. ಆದುದರಿಂದ ಜೇನುನೊಣಗಳಿಗೆ ಆಹಾರ ಸಿಕ್ಕುವ ಕಡೆ ಜೇನು ಕುಟುಂಬಗಳನ್ನು ಇಟ್ಟರೆ ಸಾಕು ತಾವೇ ಆಹಾರವನ್ನು ಶೇಖರಿಸುತ್ತವೆ. ಈ ಕೃಷಿ ಕಡಿಮೆ ಬಂಡವಾಳದಲ್ಲಿ ಮಾಡುವಂತಹ ಉಪಕಸುಬು. ವಿಶೇಷವಾಗಿ ನೀರನ್ನು ಬಳಸಬೇಕಿಲ್ಲ ಹಾಗು ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ. ಅಗತ್ಯವೆನಿಸಿದರೆ ಮನೆಗಳ ಮೇಲೂ ಸಾಕಬಹುದು. ಕಾಫಿ ತೋಟದಲ್ಲಿ ಜೇನುಕೃಷಿ ಉತ್ತಮ ಆದಾಯ ತರಬಲ್ಲದು.

ಬಹುಕಾಲದಿಂದಲೂ ಜೇನನ್ನು ಔಷಧ ಚಿಕಿತ್ಸೆಯಲ್ಲಿ ಪಥ್ಯಾಕಾರದ ಭಾಗವಾಗಿ ಬಳಸಲಾಗಿದೆ. ಭಾರತೀಯ ಔಷಧಿ ಪದ್ಧತಿಯಲ್ಲಿ ಜೇನನ್ನು ರೋಗ ಪರಿಹಾರಕವನ್ನಾಗಿ ಹಾಗು ರೋಗ ನಿವಾರಕವನ್ನಾಗಿ ಬಳಸಬಹುದೆಂದು ಸೂಚನೆಗಳಿವೆ. ಬಹುಕಾಲದಿಂದಲೂ ವಿಷಕಾರಿ ಅಥವಾ ಮತ್ತು ಬರಿಸುವ ಜೇನಿನ ಪರಿಚಯವಿದೆ.

ಈ ಬಗ್ಗೆ ಗ್ಸೆನೊಫಾನ್, ಸ್ಟಾçಬೊ ಮತ್ತು ಪ್ಲೀನಿ ಬರಹಗಳಲ್ಲಿ ಉಲ್ಲೇಖಿಸಲಾಗಿದೆ. ಗ್ಸೆನೊಫಾನ್ ಎಂಬುವನು ತನ್ನ ಅನಾಬಿಸ್ ಅಥವಾ ಸೈರಸ್ ಕಡೆಗೆ ಯಾತ್ರೆ ಎಂಬ ಬರಹದಲ್ಲಿ ಗ್ರೀಕ್ ಸೈನ್ಯವು ಜೇನು ಸೇವಿಸಿದ್ದರ ಪರಿಣಾಮವಾಗಿ ಸೋವಿಯತ್ ಜಾರ್ಜಿ ಬಳಿಯಲ್ಲಿನ ಘಟನೆಯನ್ನು ವಿವರಿಸಿದ್ದಾನೆ. ಶಿಖರವನ್ನು ದಾಟಿದ ಮೇಲೆ ಗ್ರೀಕರು ಅಧಿಕವಾಗಿ ಆಹಾರ ಸಾಮಾಗ್ರಿ ದೊರೆಯುವ ಹಲವಾರು ಹಳ್ಳಿಗಳಲ್ಲಿ ಬೀಡುಬಿಟ್ಟರು. ಅಲ್ಲಿ ಸೈನಿಕರು ಜೇನನ್ನು ಸೇವಿಸಿದರು. ಕೆಲವೇ ಸಮಯದಲ್ಲಿ ಜ್ಞಾನ ತಪ್ಪಿದರು, ವಾಂತಿ ಮಾಡಿಕೊಂಡರು, ಹಲವರಿಗೆ ಭೇದಿಯೂ ಶುರುವಾಯಿತು. ಯಾರಿಗೂ ಎದ್ದು ನಿಲ್ಲಲೂ ಶಕ್ತಿ ಉಳಿಯಲಿಲ್ಲ. ಕೊಂಚ ಮಾತ್ರ ತಿಂದವರಿಗೆ ಮತ್ತೇರಿತು.

  ಇನ್ನೂ ಹೆಚ್ಚು ತಿಂದವರು ಹುಚ್ಚರಂತಿದ್ದರು. ಅವರಲ್ಲಿ ಕೆಲವರಂತೂ ಸಾವಿನ ಸಮ್ಮುಖದಲ್ಲಿದ್ದವರಂತೆಯೇ ಆಡುತ್ತಿದ್ದರು. ಅವರೆಲ್ಲರೂ ಬೇಕಾಬಿಟ್ಟಿಯಾಗಿ ಯುದ್ದದಲ್ಲಿ ಸೋತವರಂತೆ ವಿರಾಗವನ್ನು ಹೊಂದಿದವರAತೆ ನೆಲದ ಮೇಲೆಲ್ಲಾ ಬಿದ್ದು ಹೊರಳಾಡುತ್ತಿದ್ದರು. ಮಾರನೆಯ ದಿನ ನೋಡಿದಾಗ ಅವರಲ್ಲಿ ಯಾರು ಸತ್ತಿರಲಿಲ್ಲ. ಹಿಂದಿನ ದಿನ ಯಾವ ಹೊತ್ತಿನಲ್ಲಿ ತಮ್ಮ ಪ್ರಜ್ಞೆಯನ್ನು ಕಳೆದುಕೊಂಡಿದ್ದರೂ ಸರಿಸುಮಾರು ಅದೇ ಹೊತ್ತಿಗೆ ಮರುದಿನ ಮರಳಿ ಪ್ರಜ್ಞೆಯನ್ನು ಪಡೆದರು.

ಭಾರತದಲ್ಲಿನ ಜೇನುಹುಳುಗಳ ಪ್ರಭೇಧಗಳು

  1. ಕಿರು ಜೇನು 2. ಕೋಲು ಜೇನು, 3. ಮೂಲಿ ಜೇನು ಮತ್ತು 4. ಹೆಜ್ಜೇನು
ಕಿರುಜೇನು:

ಇದನ್ನು ವೈಜ್ಞಾನಿಕವಾಗಿ ಏಪಿಸ್ ಇಂಡಿಕಾ ಎಂದು ಕರೆಯುತ್ತಾರೆ. ದೇಶದ ತುಂಬೆಲ್ಲಾ ಕಂಡು ಬರುವ ಸಾಮಾನ್ಯ ಜೇನುಹುಳು. ಉತ್ತಮ ಪರಾಗಸ್ಪರ್ಶಿ ಜೇನು. ಈ ಜೇನುಹುಳುಗಳನ್ನು ಪೆಟ್ಟಿಗೆಯಲ್ಲಿ ಸಾಕಬಹುದು. ಆಧುನಿಕ ರೀತಿಯಲ್ಲಿ ಸಾಕುವುದಕ್ಕೆ ಇದು ಉತ್ತಮ ತಳಿ. ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ, ಬಂಡೆಗಳ ಇಕ್ಕುಳಲ್ಲಿ, ಪೊದೆಗಳಲ್ಲಿ ತನ್ನ ಗೂಡುಗಳನ್ನು ಕಟ್ಟುತ್ತದೆ. ಕಿರುಜೇನು ಕಚ್ಚಿದರೂ ಅಪಾಯವಿಲ್ಲ

ಹೆಜ್ಜೇನು:

ಇದನ್ನು ವೈಜ್ಞಾನಿಕವಾಗಿ ಏಪಿಸ್ ಡರ‍್ಸಾಟ ಎಂಬ ಶಿರೋನಾಮೆಯಿಂದ ಕರೆಯುದುಂಟು. ಎತ್ತರವಾದ ಮರಗಳಲ್ಲಿ, ದೊಡ್ಡದಾದ ಬಂಡೆಗಳಲ್ಲಿ, ಬೃಹತ್ತ ಕಟ್ಟಡಗಳಲ್ಲಿ ಗೂಡು ಕಟ್ಟುವ ದೊಡ್ಡ ಜೇನು. ಹೆಜ್ಜೇನು ಕಡಿತದಿಂದ ಮನುಷ್ಯ ಸತ್ತ ಉದಾಹರಣೆಗಳು ಬಹಳಿಷ್ಟಿವೆ. ಆಗಾಗಿ ಈ ಜೇನು ಬಿಡಿಸುವ ಉಸಾಬರಿಗೆ ಯಾರು ಕೈಹಾಕುವುದಿಲ್ಲ. ಹೆಚ್ಚಾಗಿ ಮನುಷ್ಯನ ಚಟುವಟಿಕೆ ಕಡಿಮೆವಿರುವ ಜಾಗದಲ್ಲಿ ಗೂಡನ್ನು ಕಟ್ಟುತ್ತವೆ. ತುಂಬಾ ದೊಡ್ಡದಾದ ಗೂಡು ಕಟ್ಟುವುದರಿಂದ ತುಂಬಾ ಜೇನುತುಪ್ಪನು ಕೊಡುತ್ತೆ. ಆದರೆ, ಹೆಜ್ಜೇನು ತುಪ್ಪವನ್ನು ಅಷ್ಟಾಗಿ ಯಾರು ಇಷ್ಟ ಪಡುವುದಿಲ್ಲ. ಅತಿಯಾಗಿ ಹೆಜ್ಜೇನು ತುಪ್ಪ ತಿಂದರೆ ಹೊಟ್ಟೆ ಉರಿ ಪ್ರಾರಂಭವಾಗುತ್ತೆ

ಕೋಲು ಜೇನು:

ಇದನ್ನು ವೈಜ್ಞಾನಿಕವಾಗಿ ಏಪಿಸ್ ಫ್ಲೋರಿಯಾ ಎಂಬ ಹೆಸರಿನಿಂದ ಗುರಿತಿಸುವುದುಂಟು. ಇದು ಚಿಕ್ಕ ಜೇನು ನೋಣ. ಬೆಳಕಿನಲ್ಲಿ ಒಂದೊಂದೇ ಸಣ್ಣ ಗೂಡುಗಳನ್ನು ಕಟ್ಟುತ್ತದೆ. ಈ ಜೇನುನಿಂದ ದೊರೆಯುವ ಜೇನು ಕಡಿಮೆ. ಇದರ ಮೇಣ ಉತ್ತಮ ಗುಣಮಟ್ಟದಾಗಿರುವುದರಿಂದ ತುಂಬಾ ಬೇಡಿಕೆಯಿದೆ. ಚಿಕ್ಕ ಹೂವುಗಳಲ್ಲಿ ಪರಾಗಸ್ಪರ್ಶದ ಕೆಲಸ ಈ ಜೇನು ಹುಳುಗಳದ್ದು

ಮೂಲಿ ಜೇನು:

ಇದನ್ನು ವೈಜ್ಞಾನಿಕವಾಗಿ ಏಪಿಸ್ ಟ್ರೆöÊಗೋನ್ ಜಾತಿಗೆ ಸೇರಿದ ಜೇನು. ಇದಕ್ಕೆ ಕುಟುಕುವ ಕೊಂಡಿ ಇಲ್ಲದ ಅತಿ ಸಣ್ಣ ಜೇನು. ಮರಗಳ ಸಂದುಗಳಲ್ಲಿ, ಗೋಡೆಗಳ ಬಿರುಕಿನಲ್ಲಿ ಗೂಡು ಕಟ್ಟುತ್ತದೆ

ಜೇನುಹುಳುಗಳ ಕಣ್ಮರೆಗೆ ಕಾರಣಗಳು
  1. ಕಾಫಿ ಹಾಗು ಮೆಣಸು ಉತ್ಪಾದನೆಯಲ್ಲಿ ಅತಿಯಾದ ಕಾರ್ಕೋಟಕ ರಾಸಾಯನಿಕಗಳ ಬಳಕೆ, ಅವುಗಳಲ್ಲಿ ಮುಖ್ಯವಾಗಿ ಕ್ಲೋರೊಪೆರಿಫಾಸ್, ಸೈಪರ್ ಮೈರ್ಥ್ರಿನ್, ಡೆಲ್ಟಾ ಮೈರ್ಥ್ರಿನ್, ಎಕಲೇಕ್ಸ, ಪ್ಯಾರಾಕ್ವಾಟ್, ರೌಡಫ್ ಹಾಗು ಪಿಪ್ರೋನಿಲ್
  2. ನೆರಳು ಆಧಾರಿತ ಕಾಫಿ ಉತ್ಪಾದನೆಯಿಂದ ಬಿಸಿಲು ಕೇಂದ್ರಿತ (ಅತಿಯಾದ ಮರಗಸಿ ಹಾಗು ಟಿಂಬರ್ ಲಾಭಕ್ಕಾಗಿ ಸ್ಥಳೀಯ ಮರಗಳ ಮಾರಣಹೋಮ) ಕಾಫಿ ಉತ್ಪಾದನೆಯತ್ತ ಬೆಳೆಗಾರರ ಚಿತ್ತ
  3. ಕಾಫಿ ಕೃಷಿಯಲ್ಲಿ ನೆರಳಿಗಾಗಿ ಅತಿಯಾದ ಸಿಲ್ವರ್ ಮರಗಳ ಮೇಲೆ ಅವಲಂಬನೆ
  4. ಅರಣ್ಯನಾಶದಿಂದ ಜೇನುಹುಳುಗಳಿಗೆ ವರ್ಷಪೂರ್ತಿ ಬೇಕಾಗಿರುವ ಮಕರಂದದ ಕೊರತೆ ಹಾಗು ನೀರಿನ ಸೆಲೆ ಕಡಿಮೆ ಆಗಿರುವುದು
ಹೂವುಗಳ ವಿಶಿಷ್ಟ ರಚನೆ ಮತ್ತು ಪರಾಗಕ್ರಿಯೆ

ಜೇನುನೊಣಗಳು ಮಾನವನಿಗೆ ನೀಡುತ್ತಿರುವ ಅದ್ಭುತ ಕೊಡಿಗೆ ಜೇನು ಮತ್ತು ಪರಾಗಸ್ಪರ್ಶ ಸೇವೆ. ಕ್ರಿ.ಶ 1950ರಲ್ಲಿ ಇಂಗ್ಲೆಂಡ್ ದೇಶದ ಅರ್ಥರ್ ಡಾಬ್ಸ್ ಎನ್ನುವವರು ಮೊದಲಿಗೆ ಜೇನುನೊಣಗಳು ಹೂವುಗಳಿಂದ ಫಲೋತ್ಪತ್ತಿಗೆ ಕಾರಣವಾಗಬಲ್ಲ ಪರಾಗವನ್ನು ಸಂಗ್ರಹಿಸುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟರು.

ಇದಕ್ಕೂ ಮೊದಲು ಪರಾಗಸ್ಪರ್ಶ ಕ್ರಿಯೆಯ ವಿಧಾನವನ್ನು ಡಾ. ಮುಲ್ಲರ್‌ರವರು ಸುಮಾರು 1882ರಲ್ಲಿಯೇ ಕಂಡುಕೊಂಡಿದ್ದರು ಹಾಗು 1887ರಲ್ಲಿ ಜೀವ ವಿಕಾಸವಾದ ಪಿತಾಮಹ ಡಾರ್ವಿನ್ನರು ಕೈಯಿಂದ ಹಾಗೂ ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆಂದು ತಿಳಿಸಿದ್ದರು. ಆನಂತರದ ಸಂಶೋಧನೆಗಳಲ್ಲಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೀನುನೊಣಗಳ ಮಹತ್ವದ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದ್ದು. ಇದರಿಂದಾಗಿ ಇಳುವರಿಯಲ್ಲಿನ ಹೆಚ್ಚಳ ಹಾಗು ಆನೆ ಕಾಟಕ್ಕೆ ಮದ್ದಾಗಿ ಕೆಲಕಡೆ ಜೇನುಕೃಷಿ ಆರಂಭಿಸಿದ್ದಾರೆ.

ಕೆಲ ಬೆಳೆಗಳ ಹೂವುಗಳು ಪರಕೀಯ ಪರಾಗಸ್ಪರ್ಶದಿಂದ ಮಾತ್ರ ಫಲೋತ್ಪತ್ತಿ ಸಾಧ್ಯ, ಯಾಕೆಂದರೆ ಹೂವುಗಳ ರಚನೆ ಕ್ಲೀಷ್ಟವಾಗಿದ್ದು ಜೇನುಹುಳು ಅಥವಾ ಇತರೆ ಕೀಟಗಳ ಸಹಾಯದಿಂದ ಮಾತ್ರ ಪರಾಗಕ್ರಿಯೆ ನಡೆಯುತ್ತದೆ. ಇಂತಹ ಬೆಳೆಗಳ ಇಳುವರಿಯಲ್ಲಿ ಕೀಟಗಳ ಪಾತ್ರ ಅನನ್ಯ. ಈ ಕೆಳಗಿನ ಮೂರು ವಿಧವಾದ ಹೂವುಗಳ ಕ್ಲೀಷ್ಟತೆಯಿಂದ ಜೇನು ಕೃಷಿ ಅನಿವಾರ್ಯವಾಗಿದೆ.

  1. ಹುಣಸೆ, ಕರಿಮೆಣಸು, ಇತ್ಯಾದಿಗಳು ಗಂಡು ಮತ್ತು ಹೆಣ್ಣು ಭಾಗಗಳನ್ನು ಹೊಂದಿರುವ ಪರಿಪೂರ್ಣ ಹೂವುಗಳನ್ನು ಹೊಂದಿರುತ್ತವೆ. ಆದರೆ ಶಲಾಕಾಗ್ರ, ಪರಾಗಕೋಶಗಳಿಂತ ಹೆಚ್ಚು ಎತ್ತರದಲ್ಲಿರುವುದರಿಂದ ಪರಾಗರೇಣುಗಳು ಶಲಾಕಾಗ್ರವನ್ನು ತಲುಪಲು ಪರಕೀಯ ಪರಾಗಸ್ಪರ್ಶ ಅವಶ್ಯಕ.
  2. ಸಾಸಿವೆ, ಕಾಫಿ, ಹೂಕೋಸು, ಮೂಲಂಗಿ ಕೆಲವು ಬೆಳೆಗಳಲ್ಲಿ ಅದೇ ಸಸ್ಯದ ಹೂವಿನ ಪರಾಗರೇಣು ಅದೇ ಹೂವಿನ ಶಲಾಕೆಯನ್ನು ಪ್ರವೇಶಿಸಲು ಗಾತ್ರದಲ್ಲಿನ ವ್ಯತ್ಯಾಸ ಮತ್ತಿತರ ಕಾರಣಗಳಿಂದ ಅಸಮರ್ಥವಾಗಿರುತ್ತದೆ. ಇವುಗಳಲ್ಲಿ ಪರಿಣಾಮಕಾರಿ ಪರಾಗಸ್ಪರ್ಶಕ್ಕಾಗಿ ಬೇರೆ ಸಸ್ಯಗಳಿಂದ ಮಾತ್ರ ಪರಾಗರೇಣುಗಳ ವರ್ಗಾವಣೆಯಾಗಬೇಕಾಗುತ್ತದೆ.
  3. ಪಪಾಯ, ಖರ್ಜೂರ, ಸ್ಪಿನಾಚ್ ಮುಂತಾದವುಗಳಲ್ಲಿ ಗಂಡು ಮತ್ತು ಹೆಣ್ಣು ಹೂವುಗಳನ್ನು ಹೊಂದಿರುವ ಸಸ್ಯಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿ ಗಂಡು ಸಸ್ಯದ ಹೂವಿನಿಂದ ಪರಾಗರೇಣುಗಳು ಹೆಣ್ಣು ಸಸ್ಯದ ಹೂವಿಗೆ ವರ್ಗಾವಣೆಯಾದಲ್ಲಿ ಮಾತ್ರ ಫಲಬಿಡುತ್ತದೆ.
ಪರಾಗಸ್ಪರ್ಶದಿಂದ ಶ್ರೇಷ್ಠತೆಗೆ ಈ ಕೆಳಗಿನ ಅಂಶಗಳು ಕಾರಣಗಳಾಗಿವೆ
  1. ಜೇನುನೊಣಗಳು ಪರಾಗರೇಣುವು ಶಲಾಕಾಗ್ರದ ಮೇಲೆ ಮೊಳಕೆಯೊಡೆದುವುದನ್ನು ಪ್ರಚೋದಿಸುವುದರಿಂದ ಪರಾಗರೇಣುವಿನಲ್ಲಿರುವ ಜೀವಾಣು ಬೇಗನೆ ಅಂಡಾಶಯವನ್ನು ಪ್ರವೇಶಿಸಿ ಗರ್ಭಕಟ್ಟುವಿಕೆಯ ಕ್ರಿಯೆ ಅತಿ ಶೀಘ್ರದಲ್ಲಿ ನಡೆಯುತ್ತದೆ.
  2. ಜೇನುನೊಣಗಳ ಪರಾಗಸ್ಪರ್ಶದಿಂದ ಉತ್ಪತ್ತಿಯಾದ ಬೀಜಗಳು ಸದೃಢವಾಗಿದ್ದು ಅವುಗಳ ಬಾಳಿಕೆ, ಎಣ್ಣೆಯ ಅಂಶ, ಗಾತ್ರ ಮತ್ತು ತೂಕ ಹೆಚ್ಚಾಗಿರುತ್ತದೆ. ಅಲ್ಲದೇ ಅವುಗಳ ಮೊಳಕೆಯೊಡೆಯುವ ಶೇಕಡಾವಾರು ಪ್ರಮಾಣ ಅಧಿಕವಾಗಿದ್ದು, ಹುಟ್ಟಿಬರುವ ಸಸ್ಯಗಳು ಹೆಚ್ಚು ಆರೋಗ್ಯದಿಂದ ಬೇಗನೆ ಬೆಳೆಯುವ ಶಕ್ತಿಯನ್ನು ಹೊಂದಿರುತ್ತವೆ.
  3. ಕಾಫಿಯ ಕಾಯಿ ಮತ್ತು ಹೂವು ಉದುರುವುದು ಕಡಿಮೆ ಆಗುತ್ತೆ ಹಾಗು ಕಾಫಿಯ ಗುಣಮಟ್ಟ ಅಂದರೆ ಔಟನ್ ಚೆನ್ನಾಗಿ ಬರುತ್ತದೆ.

ನಿರ್ವಹಣಾ ಕ್ರಮಗಳು

ಬೆಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಜೇನುನೂಣಗಳಿಂದ ಪರಾಗಸ್ಪರ್ಶ ಕ್ರಿಯೆ ಉಂಟಾಗುವAತೆ ಮಾಡಲು ಕೃಷಿಕರು ಕೆಲವು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ ಬೆಳೆಯಲ್ಲಿ ಇರಿಸಿದ ಜೇನು ಕುಟುಂಬ ಆರೋಗ್ಯದಿಂದಿರುವಂತೆ ನೋಡಿಕೊಳ್ಳುವುದು. ಕುಟುಂಬವು ಯಾವುದೇ ನೈಸರ್ಗಿಕ ಶತ್ರುವಿನ ಅಥವಾ ರೋಗದ ಬಾಧೆಗೆ ತುತ್ತಾಗಿರಬಾರದು. ಆಹಾರದದ ಕೊರತೆಯಿದ್ದಲ್ಲಿ ಸಕ್ಕರೆ ಪಾಕವನ್ನು ಕೊಟ್ಟು ನೊಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಲು ಬೇರೆ ಕುಟುಂಬದಿಂ ದ ಮೊಟ್ಟೆ ಮರಿಗಳಿರುವ ಎರಿಗಳನ್ನು ಪ್ರೌಢನೊಣಗಳಿಂದ ಬೇರ್ಪಡಿಸಿ ಬೆಳೆಯಲ್ಲಿ ಇರಿಸಲಿರುವ ಕುಟುಂಬಕ್ಕೆ ಕೊಡಬೇಕು. ತೀರಾ ಹಳೆಯ ಮತ್ತು ಮೊಟ್ಟೆ ಇಡಲು ಸೂಕ್ತವಾಗಿಲ್ಲದ ಎರಿಗಳನ್ನು ತೆಗೆದು ಹಾಕಬೇಕು. ಕುಟುಂಬದ ರಾಣಿ ವಯಸ್ಸಾಗಿ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆಯಾಗಿದ್ದಲ್ಲಿ ಆ ಕುಟುಂಬಕ್ಕೆ ಮೊಟ್ಟೆ ಇಡಲು ಆರಂಭಿಸಿರುವ ಹೊಸ ರಾಣಿಯನ್ನು ಒದಗಿಸಬೇಕು.

ಚಳಿಗಾಲದಲ್ಲಿ ಮುಕ್ತವಾಗಿ ಸೂರ್ಯನ ಬಿಸಿಲು ಬೀಳುವಂತಹ ಸ್ಥಳದಲ್ಲಿ ಗೂಡಿನ ದ್ವಾರವು ಪೂರ್ವ ದಿಕ್ಕಿಗೆ ಇರುವಂತೆ ಹಾಗು ಬೇಸಿಗೆ ಕಾಲವಾಗಿದ್ದಲ್ಲಿ ತಂಪಾದ ನೆರಳಿರುವ ಜಾಗದಲ್ಲಿ ಇಡಬೇಕು

ಸಮಗ್ರ ಪರಿಸರದ ಸಮತೋಲನಕ್ಕಾಗಿ, ಉತ್ತಮ ಇಳುವರಿಗಾಗಿ, ಪರ್ಯಾಯ ಆದಾಯ ಮೂಲಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ ಹಾಗು ಕಾಫಿ ತೋಟದ ಮೇಲೆ ಆನೆ ದಾಂದಲೆ ನಿಯಂತ್ರಣಕ್ಕಾಗಿ ಜೇನು ಕೃಷಿಯನ್ನು ಆರಂಭಿಸಬಹುದು.

LEAVE A REPLY

Please enter your comment!
Please enter your name here