ಕೃಷಿ ಜಾಗೃತದಳದ ದಾಳಿ, ನಕಲಿ ಬಿತ್ತನೆಬೀಜ ವಶ

ಬಿ.ಸಿ. ಪಾಟೀಲ್ ಅವರು ಕೃಷಿ ಸಚಿವರಾದ ನಂತರ ಇಲಾಖೆಯ ಜಾಗೃತದಳವನ್ನು ಮತ್ತಷ್ಟೂ ಚುರುಕಾಗಿಟ್ಟಿದ್ದಾರೆ. ಅಗತ್ಯ ಸಿಬ್ಬಂದಿ ಮತ್ತು ವಾಹನಗಳನ್ನು ಒದಗಿಸಿದ್ದಾರೆ. ಯಾವುದೇ ಜಿಲ್ಲೆ – ತಾಲ್ಲೂಕಿನಲ್ಲಿ ನಕಲಿ ಬಿತ್ತನೆಬೀಜ – ಗೊಬ್ಬರಗಳಿಂದ ರೈತರಿಗೆ ತೊಂದರೆಯಾಯಿತು ಎಂದು ಕಂಡು ಬಂದರೆ ಸಂಬಂಧಿಸಿದ ಕೃಷಿ ಜಂಟಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಹ ಎಚ್ಚರಿಸಿದ್ದರು.

0

ಬೆಂಗಳೂರು: ರಾಜ್ಯದ ಕೃಷಿ ಜಾಗೃತದಳದ ಅಧಿಕಾರಿಗಳು ಅನುಮಾನ ಮತ್ತು ಮಾಹಿತಿ ಬಂದ ಮಾರಾಟ ಕೇಂದ್ರ – ಗೋದಾಮುಗಳ ಮೇಲೆ ನಿರಂತೆರ ದಾಳಿ ಮುಂದುವರಿಸಿದ್ದಾರೆ. ಇಂದು ಅಪಾರ ಪ್ರಮಾಣದ ನಕಲಿ ಬಿತ್ತನೆಬೀಜಗಳನ್ನು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯ ಎಪಿಎಂಸಿ ಯಾರ್ಡ್ ವಿಜಯ ಕೋಲ್ಡ್ ಸ್ಟೋರೇಜ್ ನಲ್ಲಿ 270 ಕ್ವೀಂಟಲ್ ಪ್ರಮಾಣ ನಕಲಿ ಮೆಕ್ಕೆಜೋಳ ಬಿತ್ತನೆಬೀಜ ಸಂಗ್ರಹಿಸಲಾಗಿತ್ತು. ದಳಕ್ಕೆ ಮಾಹಿತಿ ಬಂದ ಕೂಡಲೇ ಧಾರವಾಡ ಜಂಟಿ  ಕೃಷಿ ನಿರ್ದೇಶಕರ ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ಬೀಜ ದಾಸ್ತಾನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿ.ಸಿ. ಪಾಟೀಲ್ ಅವರು ಕೃಷಿ ಸಚಿವರಾದ ನಂತರ ಇಲಾಖೆಯ ಜಾಗೃತದಳವನ್ನು ಮತ್ತಷ್ಟೂ ಚುರುಕಾಗಿಟ್ಟಿದ್ದಾರೆ. ಅಗತ್ಯ ಸಿಬ್ಬಂದಿ ಮತ್ತು ವಾಹನಗಳನ್ನು ಒದಗಿಸಿದ್ದಾರೆ. ಯಾವುದೇ ಜಿಲ್ಲೆ – ತಾಲ್ಲೂಕಿನಲ್ಲಿ ನಕಲಿ ಬಿತ್ತನೆಬೀಜ – ಗೊಬ್ಬರಗಳಿಂದ ರೈತರಿಗೆ ತೊಂದರೆಯಾಯಿತು ಎಂದು ಕಂಡು ಬಂದರೆ ಸಂಬಂಧಿಸಿದ ಕೃಷಿ ಜಂಟಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಹ ಎಚ್ಚರಿಸಿದ್ದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳಪೆ ಬಿತ್ತನೆಬೀಜಗಳನ್ನು ಮಾರಾಟ ಮಾಡುವುದು ರೈತರ ಬದುಕನ್ನು ಹಾಳು ಮಾಡುವಂಥ ಕೃತ್ಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಇದಕ್ಕೆ ಕಾರಣರಾದವರ ಮೇಲೆ ಮುಲಾಜಿಲ್ಲದೇ ಶಿಸ್ತುಕ್ರಮ ಜರುಗಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ಸೂಚಿಸಿದ್ದೇನೆ ಎಂದರು.

ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು 6 ಕೋಟಿ ರೂ.ಮೌಲ್ಯದ ಅಕ್ರಮ ಬಿಡಿಬೀಜಗಳ ದಾಸ್ತಾನು ವಶಪಡಿಸಿಕೊಂಡಿದೆ, ದಳದ ಕಾರ್ಯಾಚರಣೆಯನ್ನು ಸಚಿವರು ಶ್ಲಾಘಿಸಿದ್ದಾರೆ. ಸಂಬಂಧಿಸಿದ ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿ ನಂತರ ಪ್ರಕರಣವನ್ನು ನ್ಯಾಯಾಲಯಕ್ಕೆ ವಹಿಸಲಾಗುವುದು ಎಂದರು.

ಕಳಪೆ ಅಕ್ರಮ ಬೀಜ-  ಗೊಬ್ಬರ ಮಾರಾಟ ಮಾಡುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅವರು ಪುನರುಚ್ಚರಿಸಿದರು.

LEAVE A REPLY

Please enter your comment!
Please enter your name here