ಬೆಂಗಳೂರು,ಆ.20: (ಯು.ಎನ್.ಐ.) ರೈತರನ್ನು ರಫ್ತುದಾರರನ್ನಾಗಿ ಮಾಡಿ ಅವರು ಶಕ್ತಿಶಾಲಿಯಾಗಿ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಕ್ಸ್ಪೋರ್ಟ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಕೃಷಿ ಇಲಾಖೆ ಜಲಾನಯನ ಅಭಿವೃದ್ಧಿ ಇಲಾಖೆ ಅಪೆಡಾ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಐದು ರೈತರ ಎಕ್ಸ್ಪೋರ್ಟ್ ಲ್ಯಾಬ್‌ಗಳನ್ನು ಗುರುತಿಸಲಾಗಿದೆ.ಇಂಡಿ, ಹನುಮನಮಟ್ಟಿ, ನಾಗೇನಹಳ್ಳಿ, ವರದಗೇರಾ ಬನವಾಸಿಗಳಲ್ಲಿ ರಫ್ತುದಾರರ ಲ್ಯಾಬ್ ಆರಂಭಿಸಲು ಗುರುತಿಸಲಾಗಿದೆ ಎಂದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.ಪ್ರೊಸೆಸ್ ಇಂಡಸ್ಟ್ರಿಯಿಂದ ರೈತ ಲಾಭ ಹೊಂದಬೇಕು. ಅಪೆಡಾದ ಡಿಜಿಎಂ ನಮ್ಮ ಕರ್ನಾಟಕದವರೇ ಇದ್ದಾರೆ.ಬಾಂಬೆಯಲ್ಲಿ ರಫ್ತುದಾರರನ್ನು ನೋಡಿ ನಮ್ಮಲ್ಲಿಯೂ ರೈತರ್ಯಾಕೆ ರಫ್ತುದಾರರಾಗಬಾರದೆಂದು ಚಿಂತನೆ ನಡೆಸಲಾಯಿತು.ಎಕ್ಸ್ಪೋರ್ಟ್ ಮಾಡಲು ಫುಡ್ ಯುನಿಟ್‌ಗಳನ್ನು ಬಳಸಿಕೊಳ್ಳಬೇಕು ಎಂದರು.
ಜನಸಂಖ್ಯೆ ಹೆಚ್ಚಿದಂತೆ ಅನ್ನ ಕೊಡುವ ಕೊಡುವ ಶಕ್ತಿಯೂ ನಮ್ಮ ರೈತರಲ್ಲಿ ಹೆಚ್ಚಿದೆ.ಅಂಬಾನಿಯಂತವರಿಂದ ಅನ್ನ ಕೊಡಲು ಸಾಧ್ಯವಿಲ್ಲ.ಅನ್ನಕೊಡುವ ಶಕ್ತಿ ಇರುವುದು ನಮ್ಮ ರೈತರಲ್ಲಿ. ಇದು ಹೆಮ್ಮೆಯ ವಿಷಯ,.ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳ್ಳದ ಕಾಯಕವೆಂದರೆ ಕೃಷಿ.ಕಾಯಕ. ಯೋಗಿ ಎಂದರೆ ರೈತ.ಕೃಷಿ ಇಲಾಖೆ ಕೆಪೆಕ್ ಸ್ಥಾಪಿಸುವ ಮೂಲಕ ರೈತ ತನ್ನ ಬೆಳೆಯನ್ನು ದಿಲ್ಲಿ ವಿದೇಶಕ್ಕೂ ಮಾರುವಂತಾಗಬೇಕು. ರೈತರೇ ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಮಾಡುವಂತಾಗಬೇಕು.ನಮ್ಮ ರೈತ ರಫ್ತುದಾರ ಉದ್ಯಮಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರೈತ ಇನ್ನೊಬ್ಬರಿಗೆ ಪರಾವಲಂಭನೆಯಾಗದೇ ತಾನೇ ವೈಜ್ಞಾನಿಕ ಬೆಲೆ ಪಡೆಯುವಂತಾಗಬೇಕು.ಸೃಷ್ಟಿಸುವಂತಾಗಬೇಕು.ಸಾಮಾನ್ಯ ರೈತ ಸ್ವಾವಲಂಬಿ ಯಾಗಬೇಕು.ರೈತ ಮತ್ತು ರಫ್ತುದಾರರ ಮಧ್ಯೆ ಸೇತುವೆಯಂತೆ ಕೊಂಡಿ ಜೋಡಿಸುವ ಕೆಲಸ ಕೆಪೆಕ್ ಮಾಡುತ್ತಿದೆ ಎಂದು ಬಿ.ಸಿ.ಪಾಟೀಲರು ವಿವರಿಸಿದರು.
ಇಡೀ ಜಗತ್ತಿನ ಬಹುತೇಕ ಕಡೆ ಆರ್ಗನಿಕ್ ಫುಡ್(ಸಾವಯವ ಆಹಾರ) ಬಗ್ಗೆ ಹೆಚ್ಚು ಜನರು ಒಲವು ತೋರುತ್ತಿದ್ದಾರೆ.ಗ್ಲೋಬಲೈಜೇಷನ್ ವಾರ್ಮ್ ಹೆಚ್ಚು ರಾಸಾಯನಿಕ ಬಳಕೆಯಿಂದಾಗುತ್ತಿದೆ.ಹಸಿರೆಲೆ ಗೊಬ್ಬರ ಸೆಣಬು ಸೇರಿದಂತೆ ಭೂಮಿಯ ಫಲವತ್ತತೆ ಹೆಚ್ಚಿಸಬೇಕು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ಐದು ನೂರು ಜನರಿಗೆ ಸಿಎಫ್‌ಡಿಆರ್‌ಐ ನಲ್ಲಿ ರೈತರಿಗೆ ತರಬೇತಿ ನೀಡಲಾಗಿದ್ದು ಅವರೆಲ್ಲ ಈಗ ರೈತೋದ್ಯಮಿಗಳಾಗಿದ್ದಾರೆ.ಕಿರು ಉದ್ಯಮಗಳನ್ನು ರೈತರು ಆರಂಭಿಸಬೇಕು ಎಂದು ಕರೆ ನೀಡಿದರು.
ಒಟ್ಟು ೧ ೧ಲಕ್ಷ ರೈತರಿಗೆ ಎರಡೆರಡು ಲಕ್ಷರೈತರಂತೆ ಮುಂದಿನ ದಿನಗಳಲ್ಲಿ ಸಮಾವೇಶ ಮಾಡಲಾಗುವುದು ಎಂದು ಬಿ.ಸಿ.ಪಾಟೀಲ್ ತಮ್ಮ ದೂರದೃಷ್ಟಿಯನ್ನು ವಿವರಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ರೈತ ಉತ್ಪಾದಕ ಸಂಸ್ಥೆಯಾಗಿದೆ.ಕೃಷಿ ಸಚಿವರು ರೈತರಿಗೆ ಲಾಭಒದಗಿಸುವ ನಿಟ್ಟಿನಲ್ಲಿ ರೈತರನ್ನು ಎಂಟರ್‌ಪ್ರೈನರ್ಸ್‌ಗಳಾಗಿ ಮಾಡಿ ರೈತರುರೈತೋದ್ಯಮಿಗಳಾಗಬೇಕಂಬ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಿಗೆ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಅಧ್ಯಯನ ಮಾಡಿ ನಮ್ಮ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.ಈ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ ಆಯೋಜಿಸಿ ರೈತರನ್ನು ಉತ್ತೇಜಿಸುತ್ತಿದ್ದಾರೆ ಎಂದರು.
ಐದು ಪ್ರಾಂತ್ಯಗಳಲ್ಲಿ ರಫ್ತುಉದ್ಯಮ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ.ನಮ್ಮ ಇಲಾಖೆ ಇಡೀ ದೇಶದಲ್ಲಿ ನಂ.1ಆಗಿದೆ.ಇದರ ಮುಂದಾಳತ್ವ ಕೃಷಿ ಸಚಿವ ಬಿ.ಸಿ.ಪಾಟೀಲರಾಗಿದೆ.ರೈತರು ಬೆಳೆದರಷ್ಟೇ ಅಲ್ಲ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗಿ ರೈತರು ನೇರವಾಗಿ ಮಾರುಕಟ್ಟೆ ನೇರವಾಗಿ ರಫ್ತುದಾರರಾಗಬೇಕು ನೇರವಾಗಿ ಗ್ರಾಹಕರನ್ನು ಮುಟ್ಟಬೇಕೆಂಬ ಎಂಬ ಉದ್ದೇಶ ನಮ್ಮದು ಎಂದರು.
ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ,ಜರ್ಮನಿ,ಇಟಲಿ,ಸ್ವಿಜರ್ಲೆಂಡ್ ದೇಶಗಳಿಗೆ ಇಲಾಖೆಯ ಅಧಿಕಾರಗಳಿಗೆ ಸಚಿವರೊಂದಿಗೆ ಇತ್ತೀಚೆಗೆ ಕೃಷಿ ಅಧ್ಯಯನಕ್ಕೆ ಭೇಟಿ ನೀಡಲಾಗಿದೆ.ನಿಜವಾದ ಅರ್ಥದಲ್ಲಿ ಬೆಳೆದ ರೈತನಿಗೆ ಯೋಗ್ಯ ಬೆಲೆಯ ಜೊತೆಗೆ ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ.ರೈತ ಬೆಳೆಗಷ್ಟೇ ಸೀಮಿತವಾಗದೇ ರೈತನ ಲಾಭವನ್ನು ದ್ಚಿಗುಣಗೊಳಿಸಲು ರೈತರನ್ನು ತಂಡತಂಡವಾಗಿ ತರಬೇತುಗೊಳಿಸಿ ರೈತ ಉದ್ಯಮಿಯಾಗಿ ಆದಾಯವನ್ನು ಹೆಚ್ಚಿಸುವುದು ಈ ಸಮಾವೇಶವಾಗಿದೆ.ರೈತ ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ನೇರವಾಗಿ ರಫ್ತುದಾರರನಾಗಿ ಮಾಡುವ ಉದ್ದೇಶ ಯೋಜನೆ ಇದಾಗಿದ್ದು,ಈಗಾಗಲೇ ರಾಜ್ಯದಲ್ಲಿ ಹತ್ತು ಲಕ್ಷ ರೈತೋತ್ಪಾದನ ಸಂಘಟನೆ ಸದ್ಯ ನಮ್ಮ ರಾಜ್ಯದಲ್ಲಿ ಆಗಿದೆ.ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದರು.
ಐಐಪಿಎಂ ಬೆಂಗಳೂರು ಇದರ ನಿರ್ದೇಶಕ ಡಾ.ರಾಕೇಶದ ಮೋಹನ್ ಜೋಷಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಕೃಷಿ ಸಚಿವರು ಜೈಕಿಸಾನ್ ಎಂಬ ರೂಢಿಯನ್ನು ಇಲಾಖೆಯಲ್ಲಿ ತರುವ ಮೂಲಕ ಮಾಜಿ ಪ್ರಧಾನಿ ಲಾಲದ ಬಹದ್ದೂರ್ ಶಾಸ್ತ್ರಿಯವರ ನುಡಿಯನ್ನು ಸದಾ ಅಮರವಾಗಿಸಿದ್ದಾರೆ. ಕೃಷಿ ಸಚಿವರ ದೂರದೃಷ್ಟಿಯ ಫಲವಾಗಿ ಈ ಸಮಾವೇಶ ನಡೆಯುತ್ತಿದೆ ಎಂದು ನಿರ್ದೇಶಕ ಬಿ.ವೈ.ಶ್ರೀನಿವಾಸ್ ಹೇಳಿದರು
ನಿರ್ದೇಶಕ ಬಿ.ವೈ.ಶ್ರೀನಿವಾಸ್ ಸ್ವಾಗತಿಸಿ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಹೆಚ್.ಬಂಥನಾಳ ವಂದಿಸಿದರು.
ಕೃಷಿ ರಫ್ತು ಅಗತ್ಯತೆಗಳ ಬಗ್ಗೆ, ಕೃಷಿ ರಫ್ತಿಗ ಇರುವ ಅವಕಾಶಗಳು ಹಾಗೂ ಕೃಷಿ ರಫ್ತು ಯೋಜನೆಗಳು,ರಫ್ತುದಾರರ ಅನುಭವ ಹಂಚಿಕೆ,ಕೃಷಿ ರಫ್ತಿನಲ್ಲಿ ಎಫ್‌ಪಿಒಗಳು ಎದುರಿಸುತ್ತಿರುವ ಸವಾಲುಗಳು, ಕೃಷಿ ರಫ್ತಿನಲ್ಲಿ ವಿವಿಧ ನಿಗಮಮಂಡಳಿಗಳ ಪಾತ್ರ,ಕೃಷಿ ರಫ್ತಿಗೆ ಲಭ್ಯವಿರುವ ಮೂಲಭೂತ ಸೌಲಭ್ಯಗು,ರಫ್ತು ಕುರಿತಾದ ಯೋಜನೆ ಕುರಿತು ಸಮಾವೇಶದಲ್ಲಿ ಕಾರ್ಯಾಗಾರ ನಡೆಯಿತು.
ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ಆಯುಕ್ತರಾದ ಶರತ್ ಕುಮಾರ್, ಜಿಕೆವಿಕೆ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್,ತೋಟಗಾರಿಕಾ ನಿರ್ದೇಶಕ ನಾಗೇಂದ್ರ ಪ್ರಸಾದ್,ಕೃಷಿ ಇಲಾಖೆನಿರ್ದೇಶಕಿ ನಂದಿನಿಕುಮಾರಿ,ಕೆಪೆಕ್ ಸಂಸ್ಥೆ ನಬಾರ್ಡ್ನ ಪ್ರಮುಖರು ಅಂತರಗಂಗೆ ಇಲಾಖೆ ನಿರ್ದೇಶಕರು ಕೃಷಿ ಇಲಾಖೆಯ ಅಪರ ಕೃಷಿನಿರ್ದೇಶಕರು ಸೇರಿದಂತೆ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.