ಜಾಗತಿಕ ತಾಪಮಾನ, ಭಾರತೀಯ ಕೃಷಿರಂಗದ ಮೇಲೆ ಅನುಕೂಲ – ಅನಾನುಕೂಲ ಪರಿಣಾಮಗಳನ್ನು ಬೀರುತ್ತಿದೆ. ಅನುಕೂಲ ಎಂಬುದು ಸಹ ತಾತ್ಕಾಲಿಕ. 1960 ದಶಕದಿಂದೀಚೆಗೆ ಭಾರತದಲ್ಲಿ ಪ್ರತಿ ಹೆಕ್ಟೇರಿಗೆ ಬಾಳೆ ಇಳುವರಿ 1.37 ಟನ್ನುಗಳಷ್ಟು ಏರಿಕೆಯಾಗಿದೆ. ಇದೇ ಪರಿಣಾಮ ಇತರ 26 ದೇಶಗಳ ಮೇಲೆಯೂ ಉಂಟಾಗಿದೆ. ಆದರೆ ಇದು 1950ರ ಹೊತ್ತಿಗೆ ಪ್ರತಿ ಹೆಕ್ಟೇರಿಗೆ 0.59 ರಿಂದ 0.19 ತನಕ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗೆಂದು ನೇಚರ್ ಕ್ಲೈಮೇಟ್ ಚೆಂಜ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ.

ವಿಶ್ಚದ ಅತಿಹೆಚ್ಚು ಬಾಳೇಹಣ್ಣು ಉತ್ಪಾದಿಸುವ ಕ್ಷೇತ್ರಗಳ ಸಾಲಿಗೆ ಭಾರತ, ಬ್ರೆಜಿಲ್ ಮತ್ತು ಇನ್ನಿತರ ಒಂಭತ್ತು ದೇಶಗಳು ಸೇರಿವೆ. ಮುಖ್ಯವಾಗಿ ಈ ದೇಶಗಳಲ್ಲಿ ಪ್ರತಿ ಹೆಕ್ಟೇರ್ ಸರಾಸರಿ ಇಳುವರಿ ಕಡಿಮೆಯಾಗಬಹುದು. ಇದೇ ಸಂದರ್ಭದಲ್ಲಿ ಈಕ್ವೆಡಾರ್, ಹೊಂಡುರಾಸ್, ಆಫ್ರಿಕಾ ಖಂಡದ ಸಾಕಷ್ಟು ದೇಶಗಳಲ್ಲಿ ಏರಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಕ್ಸೆಟರ್ ವಿಶ್ವವಿದ್ಯಾಲಯ ತಜ್ಞರ ತಂಡದ ಅಧ್ಯಂಯನ ವರದಿ ಹೇಳಿದೆ.

1960ರಿಂದೀಚೆಗೆ ಭಾರತ ಮತ್ತಿತರ ರಾಷ್ಟ್ರಗಳ ಬಾಳೆಕ್ಷೇತ್ರದಲ್ಲಿ ಜಾಗತಿಕ ತಾಪಮಾನ ಏರಿಕೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಲೇ ಬಂದಿವೆ. ಆದರೆ ಇದೇ ತಾಪಮಾನ ಹೆಚ್ಚಳ ಅನುಕೂಲದ ಬದಲು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು. ಇದರಿಂದ ಭಾರತ ಗಮನಾರ್ಹ ಹಿನ್ನಡೆ ಅನುಭವಿಸಬೇಕಾಗಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ. ಆದರೆ ಭಾರತದಲ್ಲಿ ಇಂಥ ಇಳುವರಿ ಕುಸಿತವನ್ನ ತಂತ್ರಜ್ಞಾನ ಕ್ಷೇತ್ರದ ಬಲವಾದ ಸಹಕಾರದೊಂದಿಗೆ ತಡೆಯಬಹುದು ಅಥವಾ ಕಡಿಮೆ ಮಾಡಬಹುದು.

ಆಹಾರ ಮತ್ತು ಕೃಷಿಸಂಸ್ಥೆ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 2010 ಮತ್ತು 2017ರ ನಡುವೆ ವಾರ್ಷಿಕ 29 ಲಕ್ಷಕ್ಕೂ ಅಧಿಕ ಬಾಳೆಹಣ್ಣು ಉತ್ಪಾದನೆಯಾಗಿದೆ. ಇದರಿಂದ ಈ ಅವಧಿಯಲ್ಲಿ, ಬಾಳೆಕ್ಷೇತ್ರದ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲಿಯೇ ಭಾರತದ ಮೊದಲ ಸ್ಥಾನದಲ್ಲಿದೆ. ಎಫ್.ಎ.ಒ. ಪ್ರಕಾರ ಭಾರತದಲ್ಲಿ ಪ್ರತಿ ಹೆಕ್ಟೇರಿಗೆ ಸರಾಸರಿ ಇಳುವರಿ ಪ್ರಮಾಣ 60 ಮಿಲಿಯನ್ ಟನ್. ಈ ನಂತರದ ಸ್ಥಾನದಲ್ಲಿ ಚೀನಾವಿದೆ. ಇದರ ವಾರ್ಷಿಕ ಉತ್ಪಾದನೆ ಪ್ರಮಾಣ 11 ಮಿಲಿಯನ್ ಟನ್

ಈ ಅಧ್ಯಯನದ ಸಂದರ್ಭದಲ್ಲಿ ಕೃಷಿ-ಆರ್ಥಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಬಳಕೆಯಲ್ಲಿರುವ ನೀರಾವರಿ ಕ್ಷೇತ್ರದ ವ್ಯಾಪ್ತಿಯೂ ಪರಿಗಣಿತವಾಗಿಲ್ಲ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಈ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡಾಗ ಯಾವ ರೀತಿಯ ಮಾಹಿತಿ ದೊರಕುತ್ತಿತ್ತು ಎಂಬ ಅಂಶ ಕುತೂಹಲಕರ.

LEAVE A REPLY

Please enter your comment!
Please enter your name here