ಬೆಂಗಳೂರು: ಅಕ್ಟೋಬರ್ 22: ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳು: ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.
ಗುಡುಗು ಮುನ್ಸೂಚನೆ: ಮುಂದಿನ 24 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳ; ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಿಂಚಿನಿಂದ ಕೂಡಿದ ಗುಡುಗಿನ ಸಾಧ್ಯತೆಯಿದೆ.
ಮುಂದಿನ 48 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳ; ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಿಂಚಿನಿಂದ ಕೂಡಿದ ಗುಡುಗಿನ ಸಾಧ್ಯತೆಯಿದೆ.
ಭಾರೀ ಮಳೆ ಮುನ್ನೆಚ್ಚರಿಕೆ: ಮುಂದಿನ 24 ಘಂಟೆಗಳು: ಇಲ್ಲ. ಮುಂದಿನ 48 ಘಂಟೆಗಳು: ಇಲ್ಲ. ಮೀನುಗಾರರಿಗೆ ಎಚ್ಚರಿಕೆ: ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.
24ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಂದೆರಡು ಬಾರಿ ಮಳೆ/ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.
ಶನಿವಾರ, 22ನೇ ಅಕ್ಟೋಬರ್ 2022 / 30 ನೇ ಆಶ್ವೀಜ 1943 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು ಮತ್ತು ಕರಾವಳಿಯಲ್ಲಿ ದುರ್ಬಲವಾಗಿತ್ತು. ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ.
ಪ್ರಮುಖ ಮಳೆ ಪ್ರಮಾಣ (ಸೆಂ.ಮಿ): ರಾಯಬಾಗ (ಬೆಳಗಾವಿ ಜಿಲ್ಲೆ), ಕಂಪ್ಲೀ (ಬಳ್ಳಾರಿ ಜಿಲ್ಲೆ) ತಲಾ 5 ; ನಿಪ್ಪಾಣಿ (ಬೆಳಗಾವಿ ಜಿಲ್ಲೆ), ಹಡಗಲಿ (ಬಳ್ಳಾರಿ ಜಿಲ್ಲೆ) ತಲಾ 4; ಅಣ್ಣಿಗೆರೆ (ಧಾರವಾಡ ಜಿಲ್ಲೆ), ಮುನಿರಾಬಾದ್, ಗಂಗಾವತಿ (ಎರಡೂ ಕೊಪ್ಪಳ ಜಿಲ್ಲೆ), ಇಳಕಲ್ (ಬಾಗಲಕೋಟೆ ಜಿಲ್ಲೆ) ತಲಾ 3; ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಖಜೂರಿ, ಸುಲೇಪೇಟ್ (ಎರಡೂ ಕಲಬುರ್ಗಿ ಜಿಲ್ಲೆ), ಗಂಗಾವತಿ (ಕೊಪ್ಪಳ ಜಿಲ್ಲೆ), ಭಾಲ್ಕಿ (ಬೀದರ್ ಜಿಲ್ಲೆ), ಸಂಕೇಶ್ವರ, ಸೇಡಬಾಲ್ (ಎರಡೂ ಬೆಳಗಾವಿ ಜಿಲ್ಲೆ), ಮುದಗಲ್ (ರಾಯಚೂರು ಜಿಲ್ಲೆ), ಸವಣೂರು (ಹಾವೇರಿ ಜಿಲ್ಲೆ), ಮದ್ದೂರು, ಕೃಷ್ಣರಾಜಪೇಟೆ, ಮಳವಳ್ಳಿ (ಎಲ್ಲಾ ಮಂಡ್ಯ ಜಿಲ್ಲೆ), ಬಂಡೀಪುರ (ಚಾಮರಾಜನಗರ ಜಿಲ್ಲೆ), ಮಡಿಕೇರಿ ಎಡಬ್ಲ್ಯುಎಸ್, ನಾಪೋಕ್ಲು (ಕೊಡಗು ಜಿಲ್ಲೆ), ಹೊಸಪೇಟೆ (ಬಳ್ಳಾರಿ ಜಿಲ್ಲೆ) ತಲಾ 2; ಮಸ್ಕಿ (ರಾಯಚೂರು ಜಿಲ್ಲೆ), ನೆಲೋಗಿ, ಅಫಜಲಪುರ, ಚಿಂಚೋಳಿ (ಎಲ್ಲವೂ ಕಲಬುರ್ಗಿ ಜಿಲ್ಲೆ), ಗುತ್ತಲ (ಹಾವೇರಿ ಜಿಲ್ಲೆ), ಗೋಕಾಕ (ಬೆಳಗಾವಿ ಜಿಲ್ಲೆ), ಔರಾದ್ (ಬೀದರ್ ಜಿಲ್ಲೆ), ಕಕ್ಕೇರಿ (ಯಾದಗಿರಿ ಜಿಲ್ಲೆ), ಕುಣಿಗಲ್ (ತುಮಕೂರು ಜಿಲ್ಲೆ), ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ), ಕುಡತಿನಿ, ಸಿರುಗುಪ್ಪ (ಎರಡೂ ಬಳ್ಳಾರಿ ಜಿಲ್ಲೆ), ಹಾರಂಗಿ, ಭಾಗಮಂಡಲ (ಎರಡೂ ಕೊಡಗು ಜಿಲ್ಲೆ), ಮೈಸೂರು, ಹುಣಸೂರು (ಮೈಸೂರು ಜಿಲ್ಲೆ), ಜಯಪುರ (ಚಿಕ್ಕಮಗಳೂರು ಜಿಲ್ಲೆ) ತಲಾ 1.
ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 34.8 ಡಿ.ಸೆ. ಶಿರಾಳಿಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 19.0 ಡಿ.ಸೆ. ಗದಗ, ಬೀದರ್ ಮತ್ತು ಬಾಗಲಕೋಟೆಯಲ್ಲಿ ದಾಖಲಾಗಿದೆ.