09 ನೇ ನವೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.. ಉತ್ತರ ಒಳನಾಡಿನಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ..
ಮುಂದಿನ 48 ಘಂಟೆಗಳು: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.. ಉತ್ತರ ಒಳನಾಡಿನಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ..
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ. ಗುಡುಗು ಮುನ್ಸೂಚನೆ : ಮುಂದಿನ 48 ಘಂಟೆಗಳಲ್ಲಿ ಇಲ್ಲ. ಭಾರೀ ಮಳೆ ಮುನ್ನೆಚ್ಚರಿಕೆ ಮುಂದಿನ 48 ಘಂಟೆಗಳಲ್ಲಿ ಇಲ್ಲ. ಮೀನುಗಾರರಿಗೆ ಎಚ್ಚರಿಕೆ ಇಲ್ಲ.
ಬೆಂಗಳೂರು ಹವಾಮಾನ:
09 ನೇ ನವೆಂಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು/ದಟ್ಟ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.
ಮುಂದಿನ 48 ಗಂಟೆಗಳು : ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು/ದಟ್ಟ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.
ದಾಖಲಾಗಿರುವ ಹವಾಮಾನ ವರದಿ:
ಸೋಮವಾರ , 07 ನೇ ನವೆಂಬರ್ 2022 / 16 ನೇ, ಕಾರ್ತಿಕ 1944 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು.
ಮುಖ್ಯ ಮಳೆ ಪ್ರಮಾಣಗಳು (ಸೆಂ. ನಲ್ಲಿ): ಸಿದ್ದಾಪುರ, ಸಿದ್ದಾಪುರ (ARG) (ಎರಡೂ ಉಡುಪಿ ಜಿಲ್ಲೆ), ಮಡಿಕೇರಿ (AWS) ತಲಾ 1 ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 12.0 ಡಿ.ಸೆ. ಬೀದರ್ ನಲ್ಲಿ ದಾಖಲಾಗಿದೆ.