ದಿನಾಂಕ: 31.08.2022 ಸಂಚಿಕೆಯ ಸಮಯ: 1815 IST ಮಾನ್ಯತೆ: 03 ಗಂಟೆಗಳು
ಆಗಸ್ಟ್ 31 (ಯು.ಎನ್.ಐ.) ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಈ ಮುಂದೆ ಸೂಚಿಸಲಾದ ಜಿಲ್ಲೆಗಳಲ್ಲಿ ಮಳೆ ಜೊತೆ ರಭಸದ ಗಾಳಿ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಗುಡುಗು ಸಹಿತ ಮಿಂಚು ಮಿಂಚಿನ ಜೊತೆಗೆ ಸಾಧಾರಣ ಮಳೆಯ ಜೊತೆಗೆ ರಭಸದ ಗಾಳಿಯ ವೇಗ 30-40 ಕಿಮೀ ವೇಗವನ್ನು ತಲುಪುವ ಸಾಧ್ಯತೆಯಿದೆ.
ಈ ಹಿನ್ನೆಯಲ್ಲಿ ಮರಗಳ ಸನಿಹ ಅಥವಾ ಕೆಳಗೆ ನಿಲ್ಲುವುದು, ಕೆರೆಗಳು, ಬಯಲು ಪ್ರದೇಶಗಳಲ್ಲಿ, ಹೊಲ – ಗದ್ದೆಗಳಲ್ಲಿ ನಿಲ್ಲುವುದು ಸೂಕ್ತವಲ್ಲ.
ಸೂಚಿಸಲಾದ ಜಿಲ್ಲೆಗಳು:
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು