ಅಂಡಮಾನ್‌ ಪ್ರವೇಶಿಸಿದ ಮುಂಗಾರು ಮೋಡಗಳು

0

ಕರಾವಳಿ ಜಿಲ್ಲೆಗಳ ದ.ಕ ಕಾಸರಗೋಡು ಉಡುಪಿ ಉ.ಕ. ಜಿಲ್ಲೆಗಳ ಹಲವೆಡೆ ನಿನ್ನೆ ಸಾಧಾರಣ ಮಳೆಯಾಗಿತ್ತು. ಮಲೆನಾಡು ಒಳನಾಡಿನ ಜಿಲ್ಲೆಗಳ ಅಲ್ಲಲ್ಲಿ ಸಿಡಿಲು ಮಳೆಯಾಗಿದ್ದು ಉ.ಕ ಜಿಲ್ಲೆಯ ಕುಮಟಾ ತಾಲ್ಲೂಕು ಹೆಗಡೆ ಗ್ರಾಮದಲ್ಲಿ 91mm ಗರಿಷ್ಠ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಸಂಜೆ ದ.ಕ ಉಡುಪಿ ಉ.ಕ ಜಿಲ್ಲೆಗಳ ಘಟ್ಟಪ್ರದೇಶಗಳ ಸಮೀಪದ ತಾಲ್ಲೂಕುಗಳ ಅಲ್ಲಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ರಾತ್ರಿ ಕಾಸರಗೋಡು ಮಂಗಳೂರು ಉಡುಪಿ ಉ.ಕ ಕರಾವಳಿ ತೀರಪ್ರದೇಶಗಳಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಎಲ್ಲೆಡೆ ಮಳೆಯಾಗಬಹುದು. ಮುಂಗಾರು ಆರಂಭವಾಗುವ ತನಕ ಘಟ್ಟಪ್ರದೇಶಗಳಲ್ಲಿ ಸಂಜೆಯ ಗುಡುಗು ಮಳೆ ಮುಂದುವರೆಯಲಿದೆ.

ಮಲೆನಾಡಿನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಕೊಡಗು ಹಾಸನ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 4-5 ದಿನ ಸಂಜೆ ಮಳೆ ಮುಂದುವರೆಯಲಿದೆ.

ದಕ್ಷಿಣ ಒಳನಾಡಿನ ದಾವಣಗೆರೆ ತುಮಕೂರು ಚಿತ್ರದುರ್ಗ ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಮೈಸೂರು ಚಾಮರಾಜನಗರ ಮಂಡ್ಯ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆಯ ನಂತರ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಕೊಪ್ಪಳ ಬಳ್ಳಾರಿ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಬಾಗಲಕೋಟೆ ಬಿಜಾಪುರ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ ಮೋಡ ಗುಡುಗಿನ ವಾತಾವರಣ ಇರಲಿದ್ದು ಎಲ್ಲಾ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.

ಬಂಗಾಳಕೊಲ್ಲಿಯ ಲೋ ಪ್ರೆಷರ್ ಇವತ್ತು ಮುಂದುವರೆಯಲಿರುವ ಕಾರಣ ಕೇರಳ ಕರ್ನಾಟಕದಲ್ಲಿಮೇ 20 ತನಕ ಗುಡುಗು ಮಳೆ ಮುಂದುವರೆಯವ ಸಾಧ್ಯತೆ ಇದೆ. ನಂತರ ಮುಂಗಾರು ಆರಂಭವಾಗುವ ತನಕ ಮಳೆ ಪ್ರಮಾಣ ಕಡಿಮೆ ಆಗಬಹುದು. ನಾಳೆ ಅಂಡಮಾನಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇರಲಿದ್ದು ಗಾಳಿಯು ಅನುಕೂಲಕರವಾಗಿದ್ದರೆ ಮೇ 25 ರ ನಂತರ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ.‌

ಕೃಪೆ: ಕಂಪದಕೋಡಿ ವೆದರ್‌ ರಿಪೋರ್ಟ್

LEAVE A REPLY

Please enter your comment!
Please enter your name here