ಬಹುತೇಕ ತೋಟ, ಹೊಲದ ಬದುಗಳಲ್ಲಿ ಇಂದಿಗೂ ಕತ್ತಳೆ ಬೇಲಿಯಾಗಿ ರಕ್ಷಣೆ ನೀಡುತ್ತಿದೆ. ಸಾಕಷ್ಟು ಪ್ರದೇಶಗಳಲ್ಲಿ ಈ ಹಿಂದೆ ಕೆಲಸ ಮಾಡದೇ ಮೈಗಳ್ಳತನ ಮಾಡುವವರನ್ನು ಕತ್ತಾಳೆ ಗಿಡಕ್ಕೆ ಹೋಲಿಸಿ ಕರೆಯುವುದು ರೂಢಿಯಲ್ಲಿತ್ತು. ಇದರ ನಾರಿನಿಂದ ಬಲವಾದ ಹಗ್ಗ ಹೊಸೆಯುವುದು ಹೊಸ ವಿಚಾರವಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಇದರ ಬಹುಬಳಕೆ ಅಚ್ಚರಿ ಮೂಡಿಸುತ್ತದೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.
ಸರ್ಕಾರಿ ಭೂಮಿ, ಬಂಜರುಭೂಮಿ, ಗುಡ್ಡಬೆಟ್ಟಗಳ ಕಲ್ಲುಪೊದೆಗಳ ನಡುಬೆಯೂ ಬೆಳೆಯುವ ಕತ್ತಾಳೆಯನ್ನು ವ್ಯವಸ್ಥಿತ ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತಿದೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿಯೂ ಬೆಳೆಸುತ್ತಿರುವವರ ಸಂಖ್ಯೆ ಗಣನೀಯವಾಗಿದೆ. ವಿದೇಶಗಳಲ್ಲಿ ಇವುಗಳದ್ದೇ ಫಾರಂಗಳೂ ಇವೆ.
ಕ್ಯಾಕ್ಟಸ್ ಜಾತಿಗೆ ಸೇರಿದ ಕತ್ತಾಳೆಯಲ್ಲಿ 275 ವಿಧಗಳಿವೆ. ಆಂಗ್ಲ ಭಾಷೆಯಲ್ಲಿ ಅಗೇವ್, ಕನ್ನಡದಲ್ಲಿ ಕತ್ತಾಳೆ, ತುಳುವಿನಲ್ಲಿ ದಡ್ಪಲೆ ಎಂದು ಕರೆಯುತ್ತಾರೆ. ಇದು ಅಮರಿಲಿಡೇಸೀ ಅಥವಾ ಅಗೇವೇಸೀ ಸಸ್ಯ ಕುಟುಂಬಕ್ಕೆ ಸೇರಿದೆ. ಮೂಲಯಃ ಇದು ಮೆಕ್ಸಿಕೊ ದೇಶದ್ದು. 15ನೇ ಶತಮಾನದಲ್ಲಿ ಪೊರ್ಚುಗೀಸರು ಇದನ್ನು ಭಾರತಕ್ಕೆ ತಂದರು ಎನ್ನಲಾಗುತ್ತದೆ. ಉಷ್ಣ-ಶುಷ್ಕ ಹಾಗೂ ಮಳೆ ಪ್ರಮಾಣ ಅತ್ಯಂತ ಕಡಿಮೆ ಇರುವ ಪ್ರದೇಶಗಳಲ್ಲಿ ಬೆಳೆಯುವ ಇದರಿಂದ ನಾರು, ನೂಲು, ಟಾರ್ಪಲೀನ್, ವ್ಯಾನಿಟಿ ಬ್ಯಾಗ್, ಕೈ ಚೀಲ ಇತ್ಯಾದಿ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ.
ಈ ಸಸ್ಯಗಳು ಮಳೆಯ ನೀರನ್ನು ಭಾರೀ ಪ್ರಮಾಣದಲ್ಲಿ ಹೀರಿಕೊಳ್ಳುವ ಶಕ್ತಿ ಪಡೆದಿದೆ. ಎಲೆಯ ಅಂಚುಗಳು ಅಲೆಯಲೆಯಾಗಿದ್ದು ಮುಳ್ಳುಗಳಿಂದ ಕೂಡಿವೆ. ಎಲೆಯ ತುದಿಯಲ್ಲಿ ಮೊನಚಾದ ಗಟ್ಟಿ ಮುಳ್ಳು ಇರುರುತ್ತದೆ. ಇವುಗಳ ಬೇರು, ಆಳವಾಗಿ ಹಾಗೂ ವಿಸ್ತಾರವಾಗಿ ಹರಡಿ ಕೊಂಡಿರುತ್ತವೆ. ಇದರ ಮತ್ತೊಂದು ವಿಶೇಷತೆ ಎಂದರೆ ಕಾಂಡವೇ ಎಲೆಯಾಗಿ ಪರಿವರ್ತನೆಯಾಗಿರುವುದು. ಹೀಗಾಗಿ ಈ ಸಸ್ಯದಿಂದ ನೀರು ಆವಿಯಾಗಿ ಹೊರಹೋಗುವುದಿಲ್ಲ. ಇಂಥ ಗುಣದಿಂದಾಗಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಗಿಡಗಳು ಹೆಚ್ಚಾಗಿರುವ ಪ್ರದೇಶಗಳು ಮರುಭೂಮಿಗೆ ಹತ್ತಿರವಾಗಿವೆ ಎಂದರ್ಥ.
ಕತ್ತಾಳೆ ಗಿಡಗಳನ್ನು ಕಬ್ಬಿನ ಹಾಲು ತೆಗೆಯುವಂಥ ಯಂತ್ರಗಳನ್ನು ಬಳಸಿ ನಾರು ತೆಗೆಯಲಾಗುತ್ತದೆ. ನಂತರ ನಾರನ್ನು ಒಣಗಿಸಿ ಮಾರಾಟ ಮಾಡಲಾಗುವುದು. ನಾರು ತೆಗೆದ ನಂತರ ಉಳಿಯುವ ರಸ ಹಾಗೂ ಸಿಪ್ಪೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾವಯವ ಗೊಬ್ಬರ. ಹೀಗಾಗಿ ಇದಕ್ಕೆ ಹೆಚ್ಚು ಬೇಡಿಕೆಯಿದೆ. ಮೂರು ತಿಂಗಳ ಕಾಲ ಕಳೆಸಿದ ನಂತರ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ.
ಹಿಂದಿನ ಕಾಲದಲ್ಲಿ ಈ ಸಸ್ಯದ ಮೊನಚಾದ ಮುಳ್ಳನ್ನು ಕಿವಿ ಹಾಗೂ ಮೂಗು ಚುಚ್ಚಲು ಉಪಯೋಗಿಸುತ್ತಿದ್ದರಂತೆ. ಅಲ್ಲದೆ ಹಚ್ಚೆ(tattoo) ಹಾಕಲೂ ಬಳಸುತ್ತಿದ್ದರು. ಜಾನುವಾರುಗಳಿಗೆ ಪರೆಂಗಿ ಎನ್ನುವ ರೋಗ ಬಂದಾಗ ಇದರ ರಸ ಕುಡಿಸುತ್ತಿದ್ದರು. ಮೆಕ್ಸಿಕೋ ದೇಶದಲ್ಲಿ ಇದರ ಎಲೆ ಮತ್ತು ಹೂಗೊಂಚಲಿನ ದಿಂಡಿನಿಂದ ರಸ ತೆಗೆದು ಅದನ್ನು ಹುಳಿಯಾಗಲು ಬಿಡುತ್ತಾರೆ. ಈ ಹುಳಿಯಾದ ರಸವನ್ನು ಪಲ್ಕ್ ಎನ್ನುತ್ತಾರೆ. ಮಾದಕ ಗುಣವುಳ್ಳ ಇದನ್ನು ಅಲ್ಲಿನ ರಾಷ್ಟ್ರೀಯ ಪಾನೀಯವಾಗಿ ಪರಿಗಣಿಸಲಾಗಿದೆ. ಇದರ ಕಾಂಡ ಅಥವಾ ತಿರುಳನ್ನು ಕಳೆಸಿ, ಎಚ್ಚರಿಕೆಯಿಂದ ಬಹುಹಂತಗಳಲ್ಲಿ ಸಂಸ್ಕರಿಸಿ ಟಕಿಲಾ (Tequila) ಎಂಬ ಮದ್ಯ ತಯಾರಿಸುತ್ತಾರೆ. ಎಂಬ ವಿಶಿಷ್ಟ ಕಿಕ್ ಕೊಡುವ ಇದು ವಿಶ್ವದಾದ್ಯಂತ ಪ್ರಸಿದ್ಧ.
ನನ್ನ ಕಿವಿಯಲ್ಲಿ ಇರುವ ಇನ್ನೂ ನಾಲ್ಕು ತೂತುಗಳು ಮುಳ್ಳಿನಿಂದ (ಡ್ಡಬ್ಬುಗಳ್ಳಿ ). ಚುಚ್ಚಿರುವುದು .
ಆದ್ರೆ ನೀವು ಹೇಳುವ /ತೋರಿಸಿರುವ ಕತ್ತಾಳೆಯ ಮುಳ್ಳು ಮಾತ್ರ ಅಲ್ಲ, ಅದು.
ಅದು ಬೇರೆಯದೇ.
ಕತ್ತಾಳೆಯಲ್ಲಿ ಅನೇಕ ಪ್ರಬೇಧಗಳಿದ್ದು ಬಲಿಷ್ಠವಾದ ಮುಳ್ಳಿರುವಂಥವುಗಳೂ ಇವೆ.
ಕತ್ತಾಳೆ ರಸದಿಂದ Tequila ಎಂಬ ಬಿಯರ್ ತಯಾರಿಸುತ್ತಾರೆ ಎಂಬುದನ್ನು ಕೆಲವು ವರ್ಷಗಳ ಹಿಂದೆ Readers Digest ನಲ್ಲಿ ಓದಿದ್ದು ನೆನಪಾಯಿತು.
ನಮ್ಮಲ್ಲಿ ಕತ್ತಾಳೆ ಇದೆಯಾದರೂ ಮಲೆನಾಡಿನ ವಾತಾವರಣದಲ್ಲಿ ಬೆಳವಣಿಗೆ ಸ್ವಲ್ಪ ನಿಧಾನ. ಆದರೆ ರಸದ ಪ್ರಮಾಣ ಹೆಚ್ಚು.
ನಮ್ಮಲ್ಲಿ ಇದರ ನಾರನ್ನು ಹೊಸೆದು ಹಗ್ಗ ವಾಗಿ ಬಳಸುತ್ತಿದ್ದರು. ಆದರೆ ಈಗ ಅಗ್ಗದ ಪ್ಲಾಸ್ಟಿಕ್ ಹಗ್ಗ ಬಂದು ಇದರ ಬಳಕೆ ನಿಂತುಹೋಗಿದೆ.