ಕರ್ನಾಟಕ: ಅಕ್ಟೋಬರ್ 15: ಇನ್ನೂ ನಾಲ್ಕುದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಹವಾಮಾನ ಮುನ್ಸೂಚನೆ ಇದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವಾರು ಸ್ಥಳಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ.
ಅಕ್ಟೋಬರ್ ತಿಂಗಳು:
ಸಾಮಾಣ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಮಳೆಯಾಗುವುದಾದರೂ ಭಾರಿ ಮಳೆಯಾಗುವ ವಾಡಿಕೆ ಕಡಿಮೆ. ಆದರೆ ಕಳೆದ ಐದಾರು ವರ್ಷಗಳಿಂದ ಅಕ್ಟೋಬರ್ ತಿಂಗಳಿನಲ್ಲಿಯೂ ಭಾರಿ ಮಳೆಯಾಗುತ್ತಿದೆ. ವಾತಾವರಣದ ವೈಪರಿತ್ಯ, ಜಾಗತಿಕ ತಾಪಮಾನ ಇದಕ್ಕೆ ಕಾರಣವೆಂದು ಕೆಲವಾರು ತಜ್ಞರು ವಿಶ್ಲೇಷಣೆ ಮಾಡುತ್ತಾರೆ.
2022ರ ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉದಾಹರಣೆಗೆ ಹೇಳುವುದಾದರೆ ಈ ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 200 ಮಿಲಿ ಮೀಟರ್ ಮಳೆಯಾಗುತ್ತದೆ. ಆದರೆ ತಿಂಗಳು ಪೂರ್ಣಗೊಳ್ಳಲು ಇನ್ನೂ ಹದಿನೈದು ದಿನ ಬಾಕಿ ಇರುವಾಗಲೇ ಬೆಂಗಳೂರಿನಲ್ಲಿ 200 ಮಿಲಿ ಮೀಟರಿಗಿಂತ ಹೆಚ್ಚು ಮಳೆಯಾಗಿದೆ ಎಂದು ಗಾಂಧಿ ಕೃಷಿ ಕೇಂದ್ರದ ಹವಾಮಾನ ತಜ್ಞ ಡಾ. ತಿಮ್ಮೇಗೌಡ ಅಭಿಪ್ರಾಯಪಡುತ್ತಾರೆ.
ವಾಯುಭಾರ ಕುಸಿತ :
ವಾಡಿಕೆ ಮ:ಳೆ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಪ್ರಬಲ ವಾಯುಭಾರ ಕುಸಿತ ಕೂಡ ಭಾರಿ ಮಳೆಗೆ ಕಾರಣವಾಗಿದೆ. ಇದು ದಕ್ಷಿಣ ಒಳನಾಡು, ಉತ್ತರ ಒಳನಾಡಿನವರೆಗೂ ಪ್ರಭಾವ ಉಂಟು ಮಾಡಿದೆ. ಇದರಿಂದಾಗಿಯೇ ಕಳೆದ ಒಂದು ವಾರದಿಂದ ಪ್ರತಿದಿನ ಭಾರಿ ಮಳೆಯಾಗುತ್ತಿದೆ.
ಇನ್ನೂ ನಾಲ್ಕುದಿನ ಮಳೆ :
ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತದ ಪ್ರಭಾವ ಇನ್ನೂ ನಾಲ್ಕುದಿನ ಿರಲಿದ್ದು ಅಲ್ಲಿಯ ತನಕ ಮಳೆ ಇರುತ್ತದೆ. ದಕ್ಷೀನ ಒಳನಾಡು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.
ರೈತರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು :
ಭಾರಿಮಳೆ ಬೀಳುವ ಕಾರಣ ಮಣ್ಣು ಸಡಿಲವಾಗಿ ಅದು ಸಸ್ಯಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಜಮೀನು, ತೋಟದಲ್ಲಿ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗುವಂತೆ ಬಸಿಗಾಲುವೆಗಳ ನಿರ್ಮಾಣ ಮಾಡಬೇಕು.
ಭಾರಿಮಳೆ ಮುಸುಕಿನ ಜೋಳ, ಸೂರ್ಯಕಾಂತಿ ಬೆಳೆಗಳ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭತ್ತದ ಬೆಳೆ ಮೇಲೆ ಭಾರಿಮಳೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ ರಾಗಿಪೈರುಗಳು ನೆಲದತ್ತ ಬಿದ್ದಿರುತ್ತದೆ.. ಇವುಗಳನ್ನು ಎತ್ತಿಕಟ್ಟದಿದ್ದರೆ ತೆನೆಗಳು ಹಾಳಾಗುತ್ತವೆ. ಆದ್ದರಿಂದ ಪೈರುಗಳನ್ನು ಎತ್ತಿಕಟ್ಟುವುದು ಅವಶ್ಯಕ.
ಮಳೆ ಬೀಳಲು ಆರಂಭಿಸುವ ಮುನ್ನವೇ ಬಸಿಗಾಲುವೆಗಳ ನಿರ್ಮಾಣ ಮಾಡಿರುವುದು ಅವಶ್ಯಕ. ಭಾರಿ ಮಳೆ ಕಾರಣ ಬಸಿಗಾಲುವೆ ಒಳಗೆ ಮಣ್ಣು ಜರಿದು ಮುಚ್ಚಿ ಹೋಗಬಹುದು. ಆದ್ದರಿಂದ ಗಮನಿಸುತ್ತಿರುವುದು ಸೂಕ್ತ.