ರವಿಯ ಬಾಳು ಬೆಳಗುತ್ತಿರುವ ಸಮಗ್ರ ಕೃಷಿ ; ಪ್ರಶಸ್ತಿಗೆ ಭಾಜನ

0

ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನವೆಂಬರ್ 04: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿನ ಹಿರಿಯ ಕೃಷಿವಿಜ್ಞಾನಿ ಹಾಗೂ ವಾರ್ತಾತಜ್ಞ ಡಾ. ಕೆ. ಶಿವರಾಮು ಅವರು ಸಹಲೇಖಕರೊಂದಿಗೆ “ಸಮಗ್ರ ಕೃಷಿ” ಮಹತ್ವದ ಬಗ್ಗೆ ರಚಿಸಿದ ಲೇಖನಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ರವಿಯ ಬಾಳು ಬೆಳಗುತ್ತಿರುವ ಸಮಗ್ರ ಕೃಷಿ ಲೇಖನಕ್ಕೆ ಪ್ರತಿಷ್ಠಿತ ಡಾ. ಆರ್.ದ್ವಾರಕೀನಾಥ್ ಪ್ರಶಸ್ತಿ ಸಂದಿದೆ. ಈ ಲೇಖನ ರಚಿಸಿದ ಡಾ. ಶಿವರಾಮು, ಸಹಲೇಖಕರಾದ ಡಾ. ಎಂ.ಎ. ಮೂರ್ತಿ, ಡಾ. ಸಿ.ವಿ. ವೆಂಕಟೇಶಮೂರ್ತಿ, ಪ್ರಗತಿಪರ ರೈತ ಎಂ.ಎನ್. ರವಿಶಂಕರ್ ಅವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ”ಮಳೆಯಾಶ್ರಿತ ಕೃಷಿಯಲ್ಲಿಸುಸ್ಥಿರ ಜೀವನೋಪಾಯಕ್ಕಾಗಿ ಸಂಯೋಜಿತ ಬೆಳೆ ಹೈನುಗಾರಿಕೆ ಪದ್ಧತಿ ಲೇಖನ ಡಾ. ಬಿ.ವಿ. ವೆಂಕಟರಾವ್ ಪ್ರಶಸ್ತಿಗೆ ಪಾತ್ರವಾಗಿತ್ತು. ಇದರ ಲೇಖಕರಾದ ಡಾ. ಆರ್. ಮೋಹನ್ ಕುಮಾರ್, ಡಾ. ಯಮನೂರ, ಡಾ. ಬಿ. ಬೋರಯ್ಯ  ಅವರುಗಳನ್ನು ಗೌರವಿಸಲಾಯಿತು.

ಕೃಷಿಮೇಳ – 2022ರ 2ನೇ ದಿನದ ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಾಗೂ ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾ: ಆರ್. ದ್ವಾರಕೀನಾಥ್ ಮತ್ತು ಪ್ರೋ. ಬಿ.ವಿ. ವೆಂಕಟರಾವ್ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಡಾ: ಎಸ್. ವಿ. ಸುರೇಶ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ: ಪಿ.ಎಲ್. ಪಾಟೀಲ, ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಡಾ: ಎಂ.ಎನ್. ಶೀಲವಂತರ್, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಡಾ. ಕೆ. ನಾರಾಯಣಗೌಡ, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಡಾ: ಎಂ. ಹನುಮಂತಪ್ಪ, ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಡಾ: ಆರ್. ಸಿ. ಜಗದೀಶ, ಕುಲಪತಿಗಳು, ಕೆಳದಿ ಶಿಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ: ಎನ್.ಬಿ. ಪ್ರಕಾಶ್, ಡೀನ್ (ಕೃಷಿ) ಮತ್ತು ಡಾ. ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಕೃವಿವಿ, ಜಿಕೆವಿಕೆ, ಬೆಂಗಳೂರು ರವರು ಉಪಸ್ಥಿತರಿದ್ದರು. ಡಾ: ಎಂ.ಎನ್. ಶೀಲವಂತರ್, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು

ಈ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎನ್. ಶೀಲವಂತರ್ ಮಾತನಾಡಿದರು. ಪ್ರಸ್ಥುತ ಸನ್ನಿವೇಶದಲ್ಲಿ ರೈತರ ಜೀವನ ಸಂಕಷ್ಟದಲ್ಲಿದೆ. ರೈತರಿಗೆ ಅತ್ಯಂತ ಅವಶ್ಯವಾಗಿ ಬೇಕಾಗಿರುವುದು ಆರ್ಥಿಕ ಭದ್ರತೆ, ಪೌಷ್ಠಿಕ ಭದ್ರತೆ, ಪೋಷಕಾಂಶಗಳ ಭದ್ರತೆ, ಮಾರುಕಟ್ಟೆ ಭದ್ರತೆ ಮತ್ತು ಬೆಳೆಗಳಿಗೆ ನೀರು ಎಂದು ಅಭಿಪ್ರಾಯಪಟ್ಟರು.

ರೈತರು ತಾವು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಜೊತೆಗೆ ಅವರ ಶ್ರಮ ಮತ್ತಿತರೆ ದಿನನಿತ್ಯದ ಕನಿಷ್ಟ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಬೇಕಾದಂತಹ ಆರ್ಥಿಕ ಭದ್ರತೆ. ತಾವು ಬೆಳೆದ ಬೆಳೆಗಳಿಗೆ ನಿರಂತರ ಮಾರುಕಟ್ಟೆ ಭದ್ರತೆ. ಮಣ್ಣಿನಲ್ಲಿ ಬೆಳೆಗಳಿಗೆ ಬೇಕಾದಂತಹ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬರುತ್ತಿರುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಭದ್ರತೆ, ಆರೋಗ್ಯವಂತರಾಗಿ ಜಮೀನಿನಲ್ಲಿ ಕಾರ್ಯನಿರ್ವಹಿಸಲು ಪೌಷ್ಠಿಕ ಭದ್ರತೆ. ಕೃಷಿ ವಿಶ್ವವಿದ್ಯಾನಿಲಯಗಳು ಹವಾಮಾನ ವೈಪರಿತ್ಯಕ್ಕೆ ಸೂಕ್ತವಾದಂತಹ ಬೆಳೆಗಳು ಮತ್ತು ಬೆಳೆ ಪದ್ಧತಿಗಳ ಬಗ್ಗೆ ಸಂಶೋಧನೆ ಕೈಗೊಳ್ಳುವುದು ಅವಶ್ಯಕವೆಂದರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕುಲಪತಿ  ಡಾ: ಎಸ್. ವಿ. ಸುರೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಶ್ವವಿದ್ಯಾಲಯ, ಧಾರವಾಡ ಕುಲಪತಿ ಡಾ: ಪಿ.ಎಲ್. ಪಾಟೀಲ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ರಾಂತ ಕುಲಪತಿ ಡಾ. ಕೆ. ನಾರಾಯಣಗೌಡ,  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಕುಲಪತಿ ಡಾ: ಎಂ. ಹನುಮಂತಪ್ಪ, ಮತ್ತು ಕೆಳದಿ ಶಿಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ ಕುಲಪತಿ ಡಾ: ಆರ್. ಸಿ. ಜಗದೀಶ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here