ಕೋಲಾರ, ಚಾಮರಾಜನಗರದಲ್ಲಿ ಒಂದು ಮಿಲಿ ಮೀಟರ್ ಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಒಣಹವೆ ಇತ್ತು. ದಾವಣಗೆರೆಯಲ್ಲಿ ಅತೀ ಕಡಿಮೆ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಮೂರು ದಿನಗಳಲ್ಲಿ ವಿಜಯಪುರ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಕನಿಷ್ಟ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ.
ಹವಾಮಾನ ಮನ್ಸೂಚನೆ: ಡಿಸೆಂಬರ್ 04ರ ಸುಮಾರಿಗೆ ಬಂಗಾಳಕೊಲ್ಲಿಯ ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಮೇಲ್ಮೆ ಸುಳಿಗಾಳಿ ಉಂಟಾಗುವ ಸಾಧ್ಯತೆ ಇದೆ. ಅದರ ಪ್ರಭಾವದಿಂದ ಡಿಸೆಂಬರ್ 05ನೇ ತಾರೀಖು ಸುಮಾರಿಗೆ ವಾಯುಭಾರ ಕುಸಿತ ( ಲೋ ಪ್ರೆಶರ್ ಏರಿಯಾ) ಈಶಾನ್ಯ ಬಂಗಾಳಕೊಲ್ಲಿಯ ಅಂಡಮಾನ್ ಪ್ರದೇಶದಲ್ಲಿ ಉಂಟಾಗುವ ಸಾಧ್ಯತೆಗಳಿವೆ.
ಈ ವಾಯುಭಾರ ಕುಸಿತ ಪಶ್ಚಿಮ ಭಾಗಕ್ಕೆ ಚಲಿಸಿ ಡಿಸೆಂಬರ್ 07ನೇ ತಾರೀಖು ವೇಳೆಗೆ ವಾಯುಭಾರ ಕುಸಿತ ತೀವ್ರವಾಗುವ ಸಾಧ್ಯತೆ ಇದೆ. ಅದರ ನಂತರ ಅದೇ ದಿಕ್ಕಿನಲ್ಲಿ ಚಲಿಸಿ ತಮಿಳುನಾಡಿನ ಉತ್ತರ ಭಾಗ, ದಕ್ಷಿಣ ಆಂಧ್ರ ಕರಾವಳಿಯತ್ತ ಚಲಿಸುವ ಸಾಧ್ಯತೆಗಳಿವೆ.
ಮುಂದಿನ ಐದು ದಿನಗಳಲ್ಲಿ ರಾಜ್ಯಕ್ಕೆ ಮಳೆಯಾಗುವ ಸೂಚನೆ ಇದೆ. ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಹಗುರ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕು ಮತ್ತು ಐದನೇ ದಿನ ಒಣಹವೆ ಮುಂದುವರಿಯಬಹುದು.
ಉತ್ತರ ಒಳನಾಡಿನಲ್ಲಿ ಇಂದಿನಿಂದ ಐದು ದಿನ ಒಣಹವೆ ಮುಂದುವರಿಯುತ್ತದೆ. ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಇಂದಿನಿಂದ ಮೂರು ದಿನ ಹಗುರ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕು ಮತ್ತು ಐದನೇ ದಿನ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ನಾಳೆ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಬೆಂಗಳೂರು ನಗರದಲ್ಲಿ ಗರಿಷ್ಟ ಉಷ್ಣಾಂಶ 25.5 ಡಿಗ್ರಿ ಸೆಲ್ಸಿಯಸ್ ಇತ್ತು. ಕನಿಷ್ಟ 19.8 ದಾಖಲಾಗಿದೆ. ನಗರದಲ್ಲಿ ನಾಳೆ ಮತ್ತು ನಾಳಿದ್ದು ಬೆಳಗ್ಗಿನ ಸಮಯ ಮಂಜು ಮುಸುಕಿದ ವಾತಾವರಣವಿರುತ್ತದೆ.