ಕರಾವಳಿಯಲ್ಲಿ ಒಣಹವೆ ಮುಂದುವರಿದಿತ್ತು. ಒಳನಾಡಿನಲ್ಲಿ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗಿದೆ. ಚಾಮರಾಜನಗರ, ನಂದಿಪುರದಲ್ಲಿ ೪ ಸೆಂಟಿ ಮೀಟರ್, ಇತ್ತು. ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ ದಾಖಲಾಗಿದೆ. ಅಲ್ಲಿ ೪೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶ ೩೩೩ ರಿಂದ ೩೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉತ್ತರ ಒಳನಾಡಿನಲ್ಲಿ ಇದು ೩೫ ರಿಮದ ೪೦ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ೩೧ ರಿಂದ ೩೯ ಡಿಗ್ರಿ ಸೆಲ್ಸಿಯಸ್ ದಅಖಲಾಗಿದೆ.
ತಾಪಮಾನ ಏರಿಕೆ
ಕರಾವಳಿಯಲ್ಲಿ ಸಾಮಾನ್ಯಕ್ಕಿಂತಲೂ ೨ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಹೆಚ್ಚು ಬದಲಾವಣೆಗಳಾಗುವ ಸಾಧ್ಯತೆ ಇಲ್ಲ.
ಇಂದಿನ ವಾತಾವರಣದ ಮಾಹಿತಿ:
ಇಂದು ಸಮುದ್ರಮಟ್ಟದ ಮೇಲ್ಮೆಯಲ್ಲಿ ಗಾಳಿದಿಕ್ಕಿನ ಬದಲಾವಣೆಯಾಗಿದೆ. ದಕ್ಷಿಣ ಛತ್ತಿಸ್ ಗಡ್ ನಿಂದ ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಒಳನಾಡು ಮೂಲಕ ದಕ್ಷಿಣ ತಮಿಳುನಾಡಿನವರೆಗೂ ಹಾದು ಹೋಗಲಿದೆ.
ಮುಂದಿನ ಐದು ದಿನಗಳವರೆಗೆ ರಾಜ್ಯದಲ್ಲಿಬ ಮಳೆ ಮುನ್ಸೂಚನೆ
ರಾಜ್ಯದ ಕರಾವಳಿಯಲ್ಲಿ ಇಂದು ಮತ್ತು ನಾಳೆ ಒಣಹವೆ ಮುಂದುವರಿಯಲಿದೆ. ಏಪ್ರಿಲ್ ೨೬, ೨೭ ಮತ್ತು ೨೮ರಂದು ಒಂದೆರಡ ಕಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ನಾಲ್ಕು ಮತ್ತು ಐದನೇ ದಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಒಳನಾಡಿನಲ್ಲಿ ಇಂದು ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ನಾಳೆಯಿಂದ ಮುಂದಿನ ನಾಲ್ಕು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿನ ಒಳನಾಡಿನಲ್ಲಿ ಇಂದಿನಿಂದ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ನಿನ್ನೆ ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ ೩೫ ಡಿಗ್ರಿ ಸೆಲ್ಸಿಯಸ್ ಇತ್ತು. ಕನಿಷ್ಟ ೨೨.೫ ಡಿಗ್ರಿ ಸೆಲ್ಸಿಯಸ್. ಮಾರ್ಚ್ ೧ ರಿಂದ ಇಂದಿನ ತನಕ ೧೭ ಮಿಲಿ ಮೀಟರ್ ಮಳೆ ವರದಿಯಾಗಿದೆ. ಇದರ ಸಾಮಾನ್ಯ ದರ ೪೮ ಮಿಲಿ ಮೀಟರ್, ಅತೀ ಕಡಿಮೆ ಎಂದರೆ ೨೮ ಮಿಲಿ ಮೀಟರ್
ಹೆಚ್. ಎ.ಎಲ್. ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ ೩೪.೪ ಡಿಗ್ರಿ ಸೆಲ್ಸಯಸ್, ಕನಿಷ್ಟ ೨೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮಾರ್ಚ್ ೧ ರಿಂದ ೬೫ ಮಿಲಿ ಮೀಟರ್ ಮಳೆ ವರದಿಯಾಗಿದೆ. ಸಾಮಾನ್ಯ ದರ ೪೧ ಮಿಲಿ ಮೀಟರ್.
ಕೆಂಪಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ ೩೪.೬, ಕನಿಷ್ಟ ಉಷ್ಣಾಂಶ ೨೨ ಡಿಗ್ರಿ ಸೆಲ್ಸಿಯಸ್. ಮಾರ್ಚ್ ೧ ರಿಂದ ಇಂದಿನ ತನಕ ೬೨ ಮಿಲಿ ಮೀಟರ್ ಮಳೆ ವರದಿಯಾಗಿದೆ.
ನಗರದ ಹವಾಮಾನ ಮುನ್ಸೂಚನೆ
ಇಂದು ಮತ್ತು ನಾಳೆ ಆಕಾಶವು ಭಾಗಶಃ ಮೋಡವಾಗಿರುತ್ತದೆ. ಸಂಜೆಗೆ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ಮತ್ತು ಕನಿಷ್ಟ ಉಷ್ಣಾಂಶ ಕ್ರಮವಾಗಿ ೩೪, ೨೨ ಡಿಗ್ರಿ ಸೆಲ್ಸಿಯಸ್.