ಮುಂಗಾರು ಮಾರುತಗಳು ಪಶ್ಚಿಮ ಕರಾವಳಿಯ ಮೂಲಕ ಕರ್ನಾಟಕ ಪ್ರವೇಶಿವೆ. ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆಯ ನರ್ತನ ಆರಂಭವಾಗಿದೆ. ಜೂನ್ 8 ರಂದು ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಆಗಮನ ಆರಂಭವಾಗಿದೆ. ಅಲ್ಲಿ ಉತ್ತಮ ಪ್ರಮಾಣದ ಮಳೆಯಾಗುತ್ತಿದೆ.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದ ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಎ ಪ್ರಸಾದ್ ಈ ಮಾಹಿತಿ ನೀಡಿದ್ದಾರೆ. ಈಗ ಆರಂಭವಾಗಿರುವ ಮಳೆ ಚಂಡಮಾರುತದ ಪರಿಣಾಮದಿಂದ ಆಗಿಲ್ಲ. ಇದು ಮುಂಗಾರು ಮಾರುತಗಳ ಆಗಮನದ ಕಾರಣದಿಂದ ಆಗಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನೈರುತ್ಯ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಇದು ಕೂಡ ನೈರುತ್ಯ ಮುಂಗಾರಿನ ಲಕ್ಷಣಗಳಲ್ಲಿ ಒಂದಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಮಳೆಯಾಗುತ್ತಿದ್ದು ಈ ಮಾರುತಗಳು ದಕ್ಷಿಣ ಒಳನಾಡನ್ನು ಪ್ರವೇಶಿಸಿ ಮುಂದುವರಿಯುತ್ತಿವೆ. ಇಂದು ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಸೇರಿದಂತೆ ಇತರ ಕೆಲವು ಭಾಗಗಳಲ್ಲಿ ಇಂದು ಮಳೆಯಾಗಬಹುದು ಎಂದು ಹೇಳಿದ್ದಾರೆ.
ನೈಋತ್ಯ ಮುಂಗಾರು ಮಧ್ಯ ಅರೇಬಿಯನ್ ಸಮುದ್ರದ ಇನ್ನೂ ಕೆಲವು ಭಾಗಗಳಿಗೆ ಮುಂದುವರೆದಿದೆ, ಕೇರಳ, ಕರ್ನಾಟಕದ ಕೆಲವು ಭಾಗಗಳು, ನೈಋತ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಪೂರ್ವ ಮಧ್ಯ ಕೊಲ್ಲಿಯ ಸಂಪೂರ್ಣ ಭಾಗಗಳು ಬಂಗಾಳ, ಈಶಾನ್ಯ ಬಂಗಾಳ ಕೊಲ್ಲಿಯ ಹೆಚ್ಚಿನ ಭಾಗಗಳು, ವಾಯುವ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ಈಶಾನ್ಯದ ಹೆಚ್ಚಿನ ಭಾಗಗಳತ್ತ ಮುಂದುವರಿಯುತ್ತಿವೆ
ನೈಋತ್ಯ ಮಾನ್ಸೂನ್ ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳಿಗೆ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ತಜ್ಞರು ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಭಾಗಗಳು, ಗೋವಾ, ಮಹಾರಾಷ್ಟ್ರದ ಕೆಲವು ಭಾಗಗಳು, ತಮಿಳುನಾಡಿನ ಕೆಲವು ಭಾಗಗಳು, ನೈಋತ್ಯ ಮತ್ತು ಪಶ್ಚಿಮ ಬಂಗಾಳ ಕೊಲ್ಲಿ, ಸಂಪೂರ್ಣ ಈಶಾನ್ಯ ಬಂಗಾಳ ಕೊಲ್ಲಿ, ವಾಯುವ್ಯ ಕೊಲ್ಲಿಯ ಕೆಲವು ಭಾಗಗಳಲ್ಲಿ, ಬಂಗಾಳ, ಈಶಾನ್ಯ ರಾಜ್ಯಗಳ ಉಳಿದ ಭಾಗಗಳು ಮತ್ತು ಉಪ-ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಕೆಲವು ಭಾಗಗಳಲ್ಲಿ ಮುಂದುವರಿಯುತ್ತದೆ
ಉತ್ತರದ ಮಿತಿಯು ಕರ್ನಾಟಕ ರಾಜ್ಯದ ಕಾರವಾರ ಮಡಿಕೇರಿ ಮತ್ತು ಕೊಡೈಕೆನಾಲ್ ಮತ್ತು ತಮಿಳುನಾಡಿನ ಆದಿರಾಮಪಟ್ಟಣದ ಮೂಲಕ ಹಾದುಹೋಗುತ್ತದೆ ಎಂದು ಹೇಳಲಾಗಿದೆ.