Home Blog Page 99
ಮಹಾರಾಷ್ಟ್ರ ರಾಜ್ಯದಲ್ಲಿ 2021ರ ವರ್ಷಸ ಅವಧಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅತಿ ಹೆಚ್ಚು ಸಾವುಗಳನ್ನು ಅನುಭವಿಸಿದೆ. ಸಿಎಸ್ಇ  ರಾಜ್ಯವಾರು ಈ ಅಂಇಅಂಶಗಳನ್ನು ತಿಳಿಸುತ್ತದೆ. ಏರುತ್ತಿರುವ ಪಾದರಸ,  ಹೆಚ್ಚುತ್ತಿರುವ ಶಾಖದ ಅಲೆಗಳು, ವಿನಾಶಕಾರಿ ಹವಾಮಾನ ಘಟನೆಗಳು, ಕರಗುವ ಹಿಮನದಿಗಳು ಕುರಿತ ಸಮಗ್ರ ವರದಿಯು ಕರಾಳ ಭವಿಷ್ಯವನ್ನು ಸೂಚಿಸುವ  ಅಂಕಿಅಂಶಗಳ ಪುರಾವೆಗಳನ್ನು ನೀಡುತ್ತದೆ 2021 ರಲ್ಲಿ ಭಾರತದಲ್ಲಿ ಹವಾಮಾನ ವೈಪರೀತ್ಯ (ಮಿಂಚು ಮತ್ತು ಗುಡುಗು, ಚಂಡಮಾರುತಗಳು, ಪ್ರವಾಹಗಳು, ಭಾರೀ ಮಳೆ ಮತ್ತು ಭೂಕುಸಿತಗಳು ಕಾರಣಗಳಿಂದ ) ತಮ್ಮ ಪ್ರಾಣ ಕಳೆದುಕೊಂಡ 1,700 ಕ್ಕೂ ಹೆಚ್ಚು ಜನರಲ್ಲಿ 350 ಜನರು...
Maharashtra suffered the most deaths due to extreme weather events in 2021 – says a state-wise analysis by CSE in its State of India’s Environment 2022: In Figures report Rising mercury, increasing heatwaves, devastating extreme weather events, melting glaciers… the report gives statistical evidence of events that point to a dark future Of the over 1,700 people who lost their lives to extreme...
ಪರಿಸರ ಸಂರಕ್ಷಣೆಯಲ್ಲಿ ಒಬ್ಬ ಸಾಮಾನ್ಯ ನಾಗರೀಕನಾಗಿ ನಾನೇನು ಮಾಡಬಹುದು? ಇಂಥ ಜಿಜ್ಞಾಸೆ ಪರಿಸರದ ಬಗ್ಗೆ ಕಾಳಜಿ ಇರುವ ಸಾಮಾನ್ಯ ನಾಗರಿಕರಲ್ಲಿ ಮೂಡಿರುತ್ತದೆ. ಇದರ ಬಗ್ಗೆ ವಿವೇಚಿಸಿರುವ ಪರಿಸರ ಪರಿವಾರ ಉಪಯುಕ್ತ ಸಲಹೆಗಳನ್ನು ನೀಡಿದೆ. ಪರಿಸರ ಸಂರಕ್ಷಣೆಯಲ್ಲಿ ಮೊದಲ ಹಾಗೂ ಅತಿಮುಖ್ಯ ಅಂಶವೆಂದರೆ ಅರಣ್ಯ, ಮುಖ್ಯವಾಗಿ ಸಹಜ ಕಾಡುಗಳ ಸಂರಕ್ಷಣೆ, ಇವುಗಳ ಸಂರಕ್ಷಣೆಯಾದರೆ ಮಾತ್ರ ವನ್ಯಜೀವಿಗಳು, ಜೀವವೈವಿಧ್ಯತೆಯ ರಕ್ಷಣೆ ಸಾಧ್ಯ. ಹಾಗಾಗಿ ಇರುವ ಅತ್ಯಲ್ಪ ಸಹಜ ಕಾಡುಗಳನ್ನು ಜತನದಿಂದ ಕಾಪಾಡಲು ಒತ್ತಾಸೆಯಾಗುವುದು. ಅರಣ್ಯ ಒತ್ತುವರಿ, ವನ್ಯಜೀವಿ ಬೇಟೆ, ಅಕ್ರಮ ಮರ ಕಡಿತಲೆ ಮತ್ತಿತ್ಯಾದಿ ಅರಣ್ಯ ಅಪರಾಧಗಳನ್ನು ತಡೆಯಲು...
ಬೆಂಗಳೂರು ಜೂನ್ 04: 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿಯ ಬೆಳೆ ಸ್ಪರ್ಧೆಗಾಗಿ  ಭಾಗವಹಿಸಲಿಚ್ಚಿಸುವ ರೈತರ / ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ /ಜಿಲ್ಲಾ/ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಪ್ರಸಕ್ತ 2022-23ನೇ ಸಾಲಿನಿಂದ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ರೈತ ಮಹಿಳೆಯರಿಗೆ ರಾಜ್ಯ / ಜಿಲ್ಲಾ / ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ...
ಬೆಂಗಳೂರು: ಜೂನ್‌ ೦೪ (ಯು.ಎನ್.‌ಐ.) ಈ ವಾರಾಂತ್ಯದಲ್ಲಿ ಕೇರಳ, ಕರ್ನಾಟಕ, ತಮಿಳುನಾಡಿಗೆ ಭಾರೀ ಮಳೆ; ಕರಾವಳಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಸಿಗಾಳಿಯ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಭಾರತದ ದಕ್ಷಿಣದ ರಾಜ್ಯಗಳಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ, ಈ ಪ್ರದೇಶದಲ್ಲಿ ಮಳೆಯ ಚಟುವಟಿಕೆಯು ವಿತರಣೆ ಮತ್ತು ತೀವ್ರತೆಯ ದೃಷ್ಟಿಯಿಂದ ಸ್ಥಿರವಾಗಿ ಹೆಚ್ಚಾಗಿದೆ. ಇಂದಿನಿಂದ, ನೈಋತ್ಯ ಕರ್ನಾಟಕ ಮತ್ತು ಪಶ್ಚಿಮ ತಮಿಳುನಾಡಿನ ಕೆಲವು ಭಾಗಗಳಲ್ಲಿ ಹಾಗೂ ಕೇರಳದಲ್ಲಿ ಮಾನ್ಸೂನ್ ಸಂಪೂರ್ಣವಾಗಿ ಆವರಿಸಿದೆ. ಈಗ, ಅರೇಬಿಯನ್ ಸಮುದ್ರದಿಂದ ಒಳಬರುವ ಮಾನ್ಸೂನ್ ಪಶ್ಚಿಮ ಮಾರುತಗಳು ಮತ್ತು ಶ್ರೀಲಂಕಾದ ಮೇಲೆ ಚಂಡಮಾರುತದ...
ಬೆಂಗಳೂರು: ಜೂನ್‌ ೦೨:  ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಹಿರಿಯ ಅಧಿಕಾರಿಗಳು ಖುದ್ದು ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು ಇಂದು ಕೃಷಿ ಇಲಾಖೆಯ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ರಾಜ್ಯದಲ್ಲಿ ಮೇ 31ರ ಮಾಹಿತಿಯಂತೆ 1.26 ಲಕ್ಷ ಮೆಟ್ರಿಕ್ ಟನ್ ಡಿಎಪಿ ಲಭ್ಯವಿದ್ದು, ಒಟ್ಟಾರೆ, 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ರಾಜ್ಯದ ಬೇಡಿಕೆ ಪೂರೈಸಲು ಯಾವುದೇ ಕೊರತೆ ಇಲ್ಲ. ಆದರೆ, ವ್ಯವಸ್ಥಿತವಾಗಿ ಅಗತ್ಯ...
ಬೆಂಗಳೂರು, ಜೂನ್ 2: ಕಲಬುರಗಿ ಮತ್ತು ಹಾವೇರಿಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಹಂಚಿಕೆ ಆಗಿದೆ. ಜೂನ್ ಅಂತ್ಯದೊಳಗೆ ಡಿ.ಪಿ.ಆರ್. ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು. ಅವರು ಇಂದು ರೇಷ್ಮೆ ಇಲಾಖೆ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯನ್ನು ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸುವಂತೆಯೂ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು. ಬೈವೋಲ್ಟೀನ್ ರೇಷ್ಮೆ ಗೂಡಿಗೆ ಪ್ರತಿ ಟನ್‍ ಗೆ 10 ಸಾವಿರ ರೂ. ಪ್ರೋತ್ಸಾಹಧನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ. ಶೀಘ್ರವೇ ಡಿ.ಬಿ.ಟಿ. ಮೂಲಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಮದ್ದೂರು,...
ಬೆಂಗಳೂರು: ಜೂನ್‌ ೦೨: ರಾಜ್ಯ ಕೃಷಿ ಇಲಾಖೆಗೆ ಹಿರಿಯ ಐಎಎಸ್‌ ಅಧಿಕಾರಿ ಶರತ್‌ ಪಿ ಅವರು ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ಆಯುಕ್ತ ಬ್ರಿಜೇಶ್‌ ಕುಮಾರ್‌ ಅವರ ವರ್ಗಾವಣೆ ನಂತರ ತೆರವಾದ ಸ್ಥಾನಕ್ಕೆ ಈ ನೇಮಕವಾಗಿದೆ, ನೂತನ ಆಯುಕ್ತ ಶರತ್‌ ಅವರನ್ನು ಕೃಷಿಸಚಿವ ಬಿ.ಸಿ. ಪಾಟೀಲ್‌ ಅವರು ಹೂಗುಚ್ಛ ನೀಡಿ ಹಾರ್ದಿಕವಾಗಿ ಇಲಾಖೆಗೆ ಬರಮಾಡಿಕೊಂಡು ಶುಭಾಶಯ ಕೋರಿದರು.
bommai
ಬೆಂಗಳೂರು: ಜೂನ್ ೦೨: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರಿಂದು ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಿದ್ದು, 2018-19 ರಿಂದ 2021-22 ರವರೆಗೆ ಭಾರತ ಸರ್ಕರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ ಒಟ್ಟು 3864.66 ಕೋಟಿ ರೂ. ರಾಜ್ಯದ ರೈತರಿಗೆ ಪಾವತಿಯಾಗಿದೆ. 2021-22 ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1975.12 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ...
ಇಂದು ಚಾಮರಾಜನಗರ, ಮಂಡ್ಯ ಮತ್ತು ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಿದೆ. ಇದು ಮುಂಗಾರು ರಾಜ್ಯಕ್ಕೆ ಅಡಿಯಿರಿಸಿದ ಸೂಚನೆಯಾಗಿದೆ. ವಾಡಿಕೆಯ ದಿನಗಳಿಗಿಂತ ಮೂರು ದಿನ ಮುಂಚಿತವಾಗಿ ಅಂದರೆ ಮೇ ೨೯ಕ್ಕೆ ಮುಂಗಾರು ಕೇರಳಕ್ಕೆ ಕಾಲಿರಿಸಿದೆ. ಸಾಮಾನ್ಯವಾಗಿ ಅಲ್ಲಿಗೆ ಜೂನ್‌ ೧ ಅಥವಾ ಜೂನ್ ಮೊದಲ ವಾರಕ್ಕೆ ಅಡಿಯಿರಿಸುತ್ತಿತ್ತು.‌ ಇಂದು ಸಂಜೆಯಿಂದಲೇ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದು ಮುಂಗಾರು ಪೂರ್ವ ಮಳೆಯಲ್ಲ ಎಂಬುದಕ್ಕೆ ಸಾಕಷ್ಟು ಲಕ್ಷಣಗಳು‌ ಕಾಣಿಸುತ್ತಿವೆ. ಸಾಮಾನ್ಯವಾಗಿ ಮುಂಗಾರುಪೂರ್ವ ಮಳೆಯಲ್ಲಿ ಗುಡುಗು, ಸಿಡಿಲು ಮತ್ತು ಮಿಂಚಿನ ಲಕ್ಷಣಗಳಿರುತ್ತವೆ.‌ಇದ್ಯಾವುದೂ ಇಲ್ಲದಿರುವುದರಿಂದ ಈ ಮಳೆಯನ್ನು ಮುಂಗಾರು ಆರಂಭ ಎಂದು...

Recent Posts