ಇಂದು ಚಾಮರಾಜನಗರ, ಮಂಡ್ಯ ಮತ್ತು ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಿದೆ. ಇದು ಮುಂಗಾರು ರಾಜ್ಯಕ್ಕೆ ಅಡಿಯಿರಿಸಿದ ಸೂಚನೆಯಾಗಿದೆ.

ವಾಡಿಕೆಯ ದಿನಗಳಿಗಿಂತ ಮೂರು ದಿನ ಮುಂಚಿತವಾಗಿ ಅಂದರೆ ಮೇ ೨೯ಕ್ಕೆ ಮುಂಗಾರು ಕೇರಳಕ್ಕೆ ಕಾಲಿರಿಸಿದೆ. ಸಾಮಾನ್ಯವಾಗಿ ಅಲ್ಲಿಗೆ ಜೂನ್‌ ೧ ಅಥವಾ ಜೂನ್ ಮೊದಲ ವಾರಕ್ಕೆ ಅಡಿಯಿರಿಸುತ್ತಿತ್ತು.‌

ಇಂದು ಸಂಜೆಯಿಂದಲೇ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದು ಮುಂಗಾರು ಪೂರ್ವ ಮಳೆಯಲ್ಲ ಎಂಬುದಕ್ಕೆ ಸಾಕಷ್ಟು ಲಕ್ಷಣಗಳು‌ ಕಾಣಿಸುತ್ತಿವೆ. ಸಾಮಾನ್ಯವಾಗಿ ಮುಂಗಾರುಪೂರ್ವ ಮಳೆಯಲ್ಲಿ ಗುಡುಗು, ಸಿಡಿಲು ಮತ್ತು ಮಿಂಚಿನ ಲಕ್ಷಣಗಳಿರುತ್ತವೆ.‌ಇದ್ಯಾವುದೂ ಇಲ್ಲದಿರುವುದರಿಂದ ಈ ಮಳೆಯನ್ನು ಮುಂಗಾರು ಆರಂಭ ಎಂದು ಹೇಳಬಹುದು.

ಈ ಬಗ್ಗೆ ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅವರನ್ನು ಮಾತನಾಡಿಸಿದಾಗ ” ಲಕ್ಷಣಗಳನ್ನು ಗಮನಿಸಿದಾಗ ಮುಂಗಾರು ಮಳೆ ಆರಂಭ ಎಂದು ಹೇಳಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಹವಾಮಾನ‌ ಇಲಾಖೆಯ ವಿಮಾನ ನಿಲ್ದಾಣ ಕಚೇರಿಗೆ ಕರೆ ಮಾಡಿದರೆ ಅವರು‌ ನಗರ ಕಚೇರಿಗೆ‌ ಮಾಡಿ ಎಂದರು. ಅಲ್ಲಿಗೆ ಸತತ ಪ್ರಯತ್ನಪಟ್ಟರೂ ಯಾರೊಬ್ಬರೂ ಕರೆ ಸ್ವೀಕರಿಲಿಲ್ಲ.

ಚಂಡಮಾರುತಗಳ ಕಾರಣದಿಂದ ಮೇ ೧೬ಕ್ಕೆ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಬಹುದೆಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಹವಾಮಾನದಲ್ಲಾದ ವ್ಯತ್ಯಯಗಳ ಕಾರಣದಿಂದ ಮುಂಗಾರು ಪ್ರವೇಶ ಆಗಲಿಲ್ಲ. ಮೇ ೨೯ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ ಎಂದು ಇಲಾಖೆ ಟ್ವೀಟ್ ಮಾಡಿತ್ತು.

ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿಯೂ ಮುಂಗಾರು ಆರಂಭವಾಗುತ್ತದೆ. ಈಗ ಮೇ 30ಕ್ಕೆ ಮಳೆ ಆರಂಭವಾಗಿದೆ. ಅಂದತೆ ವಾಡಿಕೆಗಿಂತ ಮುಂಚಿತವಾಗಿ ಮಳೆ‌ ಪ್ರಾರಂಭವಾಗಿದೆ.

1 COMMENT

LEAVE A REPLY

Please enter your comment!
Please enter your name here