ಪರಿಸರ ಸಂರಕ್ಷಣೆಯಲ್ಲಿ ಒಬ್ಬ ಸಾಮಾನ್ಯ ನಾಗರೀಕನಾಗಿ ನಾನೇನು ಮಾಡಬಹುದು? ಇಂಥ ಜಿಜ್ಞಾಸೆ ಪರಿಸರದ ಬಗ್ಗೆ ಕಾಳಜಿ ಇರುವ ಸಾಮಾನ್ಯ ನಾಗರಿಕರಲ್ಲಿ ಮೂಡಿರುತ್ತದೆ. ಇದರ ಬಗ್ಗೆ ವಿವೇಚಿಸಿರುವ ಪರಿಸರ ಪರಿವಾರ ಉಪಯುಕ್ತ ಸಲಹೆಗಳನ್ನು ನೀಡಿದೆ.

ಪರಿಸರ ಸಂರಕ್ಷಣೆಯಲ್ಲಿ ಮೊದಲ ಹಾಗೂ ಅತಿಮುಖ್ಯ ಅಂಶವೆಂದರೆ ಅರಣ್ಯ, ಮುಖ್ಯವಾಗಿ ಸಹಜ ಕಾಡುಗಳ ಸಂರಕ್ಷಣೆ, ಇವುಗಳ ಸಂರಕ್ಷಣೆಯಾದರೆ ಮಾತ್ರ ವನ್ಯಜೀವಿಗಳು, ಜೀವವೈವಿಧ್ಯತೆಯ ರಕ್ಷಣೆ ಸಾಧ್ಯ. ಹಾಗಾಗಿ ಇರುವ ಅತ್ಯಲ್ಪ ಸಹಜ ಕಾಡುಗಳನ್ನು ಜತನದಿಂದ ಕಾಪಾಡಲು ಒತ್ತಾಸೆಯಾಗುವುದು.

ಅರಣ್ಯ ಒತ್ತುವರಿ, ವನ್ಯಜೀವಿ ಬೇಟೆ, ಅಕ್ರಮ ಮರ ಕಡಿತಲೆ ಮತ್ತಿತ್ಯಾದಿ ಅರಣ್ಯ ಅಪರಾಧಗಳನ್ನು ತಡೆಯಲು ಅರಣ್ಯ ಇಲಾಖೆಗೆ ಸಹಕಾರ ನೀಡುವುದು.

ಹೊಲಗದ್ದೆ, ಕೈತೋಟ, ಶಾಲಾ-ಕಾಲೇಜು, ಕಛೇರಿಯ ಆವರಣ, ಗ್ರಾಮದ ಸ್ಮಶಾನ, ರಸ್ತೆ ಬದಿ, ನಾಲೆಬದಿ ಸೇರಿ ಗಿಡಮರಗಳನ್ನು ಬೆಳೆಸಲು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಾಧ್ಯವಾದಷ್ಟು ಗಿಡಮರ ಬೆಳೆಸುವುದು. ಸಾಧ್ಯವಾದಷ್ಟು ಸ್ಥಳೀಯ ಪ್ರಭೇದದ, ಹಣ್ಣಿನ ಮರ-ಗಿಡಗಳನ್ನು ಬೆಳಸುವುದು. ಜನವಸತಿ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸಿಸುವ ಗುಬ್ಬಿ, ಕಾಗೆ ಸೇರಿ ವಿವಿಧ ಪಕ್ಷಿಗಳು, ವಿವಿಧ ಸರೀಸೃಪಗಳು, ನರಿ, ತೋಳದಂತಹ ವನ್ಯಜೀವಿಗಳ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದು. ಹಾಗಾಗಿ ಇವುಗಳ ಸಂರಕ್ಷಣೆಗೆ ಕೈಜೋಡಿಸುವುದು. ನದಿ-ತೊರೆ, ಕೆರೆ-ಕಟ್ಟೆ, ಸರೋವರಗಳ ರಕ್ಷಣೆ, ಅಭಿವೃದ್ಧಿಗೆ ಬದ್ಧತೆ ತೋರುವುದು.

ಪ್ಲಾಸ್ಟಿಕ್ ಮಿತ ಬಳಕೆ, ಪುನರ್ಬಳಕೆ, ಬಳಸಿದವುಗಳ ಸೂಕ್ತ ವಿಲೇವಾರಿಗೆ ಗಮನ ಕೊಡುವುದು. ಮಿತಬಳಕೆ, ಪುನರ್ಬಳಕೆ, ಮರುಬಳಕೆ ತತ್ವ ಪಾಲನೆ. ಕೃಷಿಯಲ್ಲಿ ರಾಸಾನಿಕಗಳ ಬಳಕೆಗೆ ಕಡಿವಾಣ. ಸಾವಯವ ಕೃಷಿ ಆಧ್ಯತೆ, ಉತ್ತೇಜನ ನೀಡುವುದು.

ಸಾಮಾಜಿಕ ಜಾಲತಾಣಗಳನ್ನು ಸೂಕ್ತವಾಗಿ ಬಳಸಿಕೊಂಡು ಪರಿಸರ ಸಂರಕ್ಷಣೆ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು.

LEAVE A REPLY

Please enter your comment!
Please enter your name here