ನಾಗರಿಕತೆ ಬೆಳೆಯುತ್ತಾ ಹತ್ತು ಹಲವು ಬದಲಾವಣೆಗಳನ್ನು ಕಂಡಿದೆ. ಕೃಷಿಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ನಿತ್ಯ ಹಲವು ರೈತರು ಕೃಷಿ ಉತ್ಪನ್ನಗಳನ್ನು ಬೆಳೆಯುವುದರ ಜೊತೆಗೆ ಸುಸ್ಥಿರ ಬದುಕು ಕಂಡುಕೊಳ್ಳಲು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಅಂತಹ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.
ದಯಾನಂದ ಅಪ್ಪಯ್ಯನವರಮಠ ಅವರು ಬೈಲಹೊಂಗಲ ತಾಲೂಕಿನ ಕರುಗುಂದ ನಿವಾಸಿ . ಚಿತ್ರಕಲೆಯಲ್ಲಿ ಬಿ.ಎಫ್.ಎ ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಇವರಿಗೆ 15 ಏಕರೆ ಜಮೀನಿದೆ. ಅದರಲ್ಲಿ ಮನೆಯ ಸುತ್ತ್ತಲಿನ 2 ಎಕರೆಯಲ್ಲಿ ವೃಕ್ಷಾಧಾರಿತ ಬೇಸಾಯ ಮಾಡುತ್ತಿದ್ದಾರೆ. ಜೇನುಕೃಷಿಯ ಜೊತೆ ಮಾವು ಚಿಕ್ಕು...
ರಾಜ್ಯದಲ್ಲಿ ವೈವಿಧ್ಯಮಯ ಮಾವು ತಳಿಗಳಿವೆ. ಬೆಳೆಗಾರರು ಇದನ್ನು ಶ್ರಮ-ಸಮಯ-ಹಣ ತೊಡಗಿಸಿ ಬೆಳೆಯುತ್ತಿದ್ದಾರೆ. ಇವರ ಪರಿಶ್ರಮಕ್ಕೆ ತಕ್ಕಮೌಲ್ಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಮಾವು ಮಂಡಳಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ಅವರು “ಅಗ್ರಿಕಲ್ಚರ್ ಇಂಡಿಯಾ”ಕ್ಕೆ ವಿವರಿಸಿದ್ದಾರೆ.
ವಾಣಿಜ್ಯಿಕ ಹೈನುಗಾರಿಕೆಯಲ್ಲಿ ಪಶು ಆಹಾರವನ್ನು(ಹಿಂಡಿ) ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದೇ ಪಶು ಆಹಾರದಿಂದ ಹಸುಗಳಿಗೆ ಒಂದು ತರಹದ ಚರ್ಮರೋಗವೂ ಬರಬಹುದು. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂಡಿಯನ್ನು ಬದಲಿಸುವುದೇ ಇದಕ್ಕಿರುವ ಪರಿಹಾರ.
“ನನ್ನ ಒಂದು ಹಸು ಯಾಕೋ ಪದೇ ಪದೇ ಹಿಂದಿನ ಕಾಲು ಕೊಡವಿಕೊಳ್ಳೋಕೆ ಶುರು ಮಾಡಿದೆ, ಕೊಂಚ ರಕ್ತಾನೂ ಬರ್ತಾ ಇದೆ. ಸ್ವಲ್ಪ ಬಂದು ನೋಡಬೇಕಾಗಿತ್ತು ಡಾಕ್ಟ್ರೇ ಅಂದು ಮಧ್ಯಾಹ್ನ ರೈತರೊಬ್ಬರ ಪೋನ್ ಕರೆ. ಹೋಗಿ ನೋಡಿದರೆ ಅದು ಬರೀ ಗಾಯದಿಂದ ಆಗುತ್ತಿದ್ದ ರಕ್ತಸ್ರಾವವಾಗಿರಲಿಲ್ಲ. ಎರಡೂ ಹಿಂಗಾಲುಗಳ ಗೊರಸಿನ ಸುತ್ತಲೂ ಚರ್ಮ ಬಿರುಕು ಬಿಟ್ಟಿತ್ತು....
ಕಾಂಕ್ರಿಟ್ ಕಾಡುಗಳ ನಡುವೆ ಕೈತೋಟಗಳು ಕಾಣಿಸುವುದು ಅಪರೂಪ. ಅದರಲ್ಲಿಯೂ ತುಂಬ ವ್ಯವಸ್ಥಿತವಾದ ಯೋಜನೆ ಮಾಡಿ ಸಾಧ್ಯವಿರುವಷ್ಟು ಸಸ್ಯಗಳನ್ನು ಬೆಳೆಸುವುದು ಸವಾಲೇ ಸರಿ. ಇಂಥ ಸವಾಲು ಸ್ವೀಕರಿಸಿ ಅತ್ಯುತ್ತಮ ಕೈತೋಟ ಮಾಡಿರುವ ಬೆಂಗಳೂರು, ಬನಶಂಕರಿ ನಿವಾಸಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರತಿಷ್ಠಿತ ಆಸ್ಪೀ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿಂದು (ಮೇ 5, 2019) ಆಸ್ಪೀ ಪ್ರತಿಷ್ಠಾನ ಆಯೋಜಿಸಿದ ಸಮಾರಂಭದಲ್ಲಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಇವರ ಪತಿ ಉದಯಶಂಕರ್ ಅವರನ್ನೂ ಪತ್ನಿಯ ಯಶಸ್ಸಿಗೆ ನಿರಂತರ ಪ್ರೋತ್ಸಾಹ, ಸಹಕಾರ ನೀಡುತ್ತಿರುವ ದೃಷ್ಟಿಯಿಂದ...
ಮಾನವನ ಉಳುವಿಗಾಗಿ ಜೇನುಹುಳುಗಳ ಸಂತತಿ ಅತಿಮುಖ್ಯ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ ಐನ್ಸ್ಟೈನ್ ಹೇಳಿದ್ದಾರೆ. ಆಹಾರ ಉತ್ಪಾದನೆಯಲ್ಲಿ ಜೇನುಹುಳುಗಳ ಪಾತ್ರ ಅನನ್ಯ. ಜೇನುಹುಳುಗಳು ಸಂಘಜೀವಿಗಳು. ಒಂದೊಂದು ಸಂಸಾರವೂ ಒಂದೊಂದು ಹುಟ್ಟಿನಲ್ಲಿ ನೆಲೆಸುತ್ತವೆ. ಪ್ರತಿ ಕುಟುಂಬದಲ್ಲಿ ಮೂರು ಬಗೆಯ ಜೇನುಹುಳುಗಳಿವೆ. ಅವುಗಳು ರಾಣಿಜೇನು, ಗಂಡುಜೇನು ಹಾಗು ದುಡಿಮೆಗಾರ ಜೇನುಹುಳುಗಳು. ಹೀಗೆ ಒಂದು ಜೇನು ಕುಟುಂಬದಲ್ಲಿ ಕೇವಲ ಒಂದೇ ಒಂದು ರಾಣಿಜೇನು, ನೂರಾರು ಗಂಡುಹುಳುಗಳು ಹಾಗು ಹತ್ತಾರು ಸಾವಿರ ದುಡಿಮೆಗಾರ ಜೇನುಹುಳುಗಳಿರುತ್ತವೆ.
ಜೇನುಕೃಷಿ ಉಳಿದೆಲ್ಲಾ ಕೃಷಿಗಿಂತ ಭಿನ್ನವಾಗಿದೆ. ಪರಿಸರದಲ್ಲಿನ ಸಸ್ಯ ಸಂಪತ್ತನ್ನು ಅವಲಂಭಿಸಿದೆ. ಮಕರಂದದಿಂದ ಜೇನುತುಪ್ಪ ಉತ್ಪತ್ತಿಯಾಗುತ್ತದೆ....
ಮನುಷ್ಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಇದ್ದಾಗ ವೈದ್ಯರನ್ನು ಕಾಣುತ್ತೇವೆ. ಅವರು ವಿವರವಾದ ಪರಿಶೀಲನೆ ನಂತರ ಸೂಕ್ತವಾದ ಔಷಧವನ್ನು ಬರೆದುಕೊಟ್ಟು ನಿಯಮಿತವಾಗಿ ಇಂತಿಷ್ಟು ದಿನ ತೆಗೆದುಕೊಳ್ಳಲು ಹೇಳುತ್ತಾರೆ. ವಿಶೇಷವಾದ ಅಂಶವೆಂದರೆ ಬೇರೆಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆಬೇರೆ ರೀತಿಯ ಔಷಧಗಳು ಇರುತ್ತವೆ. ಇದೇ ಮಾದರಿ ಸಸ್ಯಗಳಿಗೂ ಅನ್ವಯಿಸುತ್ತದೆ. ಎಲ್ಲ ಸಸ್ಯಸಂಬಂಧಿ ತೊಂದರೆಗಳಿಗೂ ಒಂದೇ ಮಾದರಿಯ ಪರಿಹಾರ ಇರುವ ಬದಲು ಬೇರೆಬೇರೆ ರೀತಿಯ ಪರಿಹಾರಗಳು ಇರುತ್ತವೆ. ಅವುಗಳು ಏನೆಂದು ತಿಳಿಯಲು ಕೃಷಿವಿಜ್ಞಾನಿಗಳು ಸಸ್ಯವನ್ನು ವಿವರವಾಗಿ ಪರಿಶೀಲನೆ ನಡೆಸುತ್ತಾರೆ.
ನಿಯಮಿತವಾಗಿ ಪೂರೈಕೆಯಾಗಬೇಕಾದ ಪೋಷಕಾಂಶಗಳನ್ನು ನೀಡಿದ ಸಂದರ್ಭಗಳಲ್ಲಿಯೂ ಕೆಲವೊಮ್ಮೆ ಸಸ್ಯಗಳು ಬೆಳವಣಿಗೆ...
'ಕೃಷಿಕರು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಉತ್ತಮ. ಇದರಿಂದ ಖರ್ಚನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ಉತ್ತಮ ಇಳುವರಿ ಪಡೆಯಲು ಸುಸ್ಥಿರವಾದ ಸಾಕಷ್ಟು ವಿಧಾನಗಳಿವೆ. ಇವುಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ' ಹೀಗೆನ್ನುತ್ತಾರೆ ಸಾವಯವ ಕೃಷಿಕ ಆಲೂರು ವಿಜಯಕುಮಾರ್.
ಭತ್ತದ ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಪಡೆಯಲು 'ಜೈವಿಕ ಸಾರ' ಒದಗಿಸಿ ಯಶಸ್ವಿಯೂ ಆಗಿದ್ದಾರೆ. ಇದು ಇವರೆ ಸಂಶೋಧಿಸಿದ ವಿಧಾನ. ಇದಕ್ಕೆ 'ಭೂ ನಿಧಿ' 'ಬಯೋಬಾಂಬ್'ಎಂದು ಹೆಸರಿಸಿದ್ದಾರೆ. ಈ ಸಾರವನ್ನು ಎಲ್ಲ ಬೆಳೆಗಳಿಗೂ ಬಳಸಬಹುದು. ಭತ್ತದ ಬೆಳೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ.
ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸಬೇಕು. ದಪ್ಪ...
ಕೃಷಿಕರು, ಕೃಷಿಭೂಮಿಗೆ ಕಾಲಿಟ್ಟ ಕೂಡಲೇ ಮಣ್ಣುಮುಟ್ಟಿ ನಮಸ್ಕರಿಸುವುದು ಸಾಮಾನ್ಯ. ಈಗಲೂ ಬಹಳಷ್ಟು ಮಂದಿ ಪಾದರಕ್ಷೆ ಹಾಕಿಕೊಂಡು ಕೃಷಿಭೂಮಿಯ ಮಣ್ಣನ್ನು ತುಳಿಯುವುದಿಲ್ಲ. ಇಲ್ಲಿನ ಮಣ್ಣಿನ ಮಹತ್ವ ಅಪಾರ. ಇದರ ಫಲವತ್ತತೆ ಉಳಿಸಲು, ವೃದ್ಧಿಸಲು ಕೋಟ್ಯನುಕೋಟಿ ಸೂಕ್ಷ್ಮಾಣುಗಳು ನಿರಂತರವಾಗಿ ಶ್ರಮಿಸುತ್ತಿರುತ್ತವೆ. ಆದ್ದರಿಂದಲೇ ಮಣ್ಣು ಜೀವಂತ. ಇದರಿಂದಾಗಿಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯ
ಪ್ರಸ್ತುತ ಸಸ್ಯಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುವ ಸಿಲಿಸಿಕ್ ಆ್ಯಸಿಡ್ ಕುರಿತು ತಿಳಿದುಕೊಳ್ಳೋಣ. ಸಿಲಿಕಾನ್ ಡೈ ಆಕ್ಸೈಡ್ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಅಬಾಧಿತವಾಗಿ ನಡೆಯುವಾಗ ಸಿಲಿಸಿಕ್ ಆ್ಯಸಿಡ್ ಆಗಿ ಪರಿವರ್ತಿತವಾಗುತ್ತದೆ. ಈ ಅಂಶ ಸಸ್ಯಗಳಿಗೆ...
ಮಕ್ಕಳು ಬೆಳೆಯಲು ಪೌಷ್ಟಿಕಾಂಶಗಳು ಬೇಕು. ಅದಿಲ್ಲದಿದ್ದರೆ ಅವುಗಳು ರಕ್ತಹೀನತೆಯಿಂದ ಬಳಲುತ್ತವೆ. ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಅಗತ್ಯವಾಗಿ ಬೇಕಾದ ಆಹಾರ ನೀಡಬೇಕು. ಮುಖ್ಯವಾಗಿ ಅದರಲ್ಲಿ ಸತ್ವ ಇರಬೇಕು. ಸತ್ವವೇ ಇಲ್ಲದ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿದರೂ ಪರಿಸ್ಥಿತಿಯೇನು ಸುಧಾರಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಬೆಳವಣಿಗೆಗೆ ಕೃತಕ ಹಾರ್ಮೋನುಗಳನ್ನು ನೀಡಿದರೆ ಏನಾದರೂ ಪ್ರಯೋಜನವಾಗುತ್ತದೆಯೇ ಖಂಡಿತ ಇಲ್ಲ. ಇದೇ ಮಾತು ಸಸ್ಯಗಳಿಗೂ ಅನ್ವಯಿಸುತ್ತದೆ.
ಇಳುವರಿ ಕೊರತೆ: ಸಾಕಷ್ಟು ಮಂದಿ ರೈತರು ಹೊಲ-ಗದ್ದೆ-ತೋಟಗಳಲ್ಲಿರುವ ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಫರ್ಟಿಲೈಜರ್ ಗಳನ್ನು ತಂದು ಹಾಕುತ್ತಾರೆ. ಆದರೂ ಅವರು ನಿರೀಕ್ಷಿಸಿದಷ್ಟು ಇಳುವರಿ...
When you been to the dense forest, you observe the trees having humble bees nest from distance. Like other parts of the forest, there will be no jumping, romping, twig-branch of monkeys. Wild elephants don’t rub their body to such trees. They do not leave their young ones near those trees. Even the wild pigs don’t shatter the stocks...