ಮನುಷ್ಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಇದ್ದಾಗ ವೈದ್ಯರನ್ನು ಕಾಣುತ್ತೇವೆ. ಅವರು ವಿವರವಾದ ಪರಿಶೀಲನೆ ನಂತರ ಸೂಕ್ತವಾದ ಔಷಧವನ್ನು ಬರೆದುಕೊಟ್ಟು ನಿಯಮಿತವಾಗಿ ಇಂತಿಷ್ಟು ದಿನ ತೆಗೆದುಕೊಳ್ಳಲು ಹೇಳುತ್ತಾರೆ. ವಿಶೇಷವಾದ ಅಂಶವೆಂದರೆ ಬೇರೆಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆಬೇರೆ ರೀತಿಯ ಔಷಧಗಳು ಇರುತ್ತವೆ. ಇದೇ ಮಾದರಿ ಸಸ್ಯಗಳಿಗೂ ಅನ್ವಯಿಸುತ್ತದೆ. ಎಲ್ಲ ಸಸ್ಯಸಂಬಂಧಿ ತೊಂದರೆಗಳಿಗೂ ಒಂದೇ ಮಾದರಿಯ ಪರಿಹಾರ ಇರುವ ಬದಲು ಬೇರೆಬೇರೆ ರೀತಿಯ ಪರಿಹಾರಗಳು ಇರುತ್ತವೆ. ಅವುಗಳು ಏನೆಂದು ತಿಳಿಯಲು ಕೃಷಿವಿಜ್ಞಾನಿಗಳು ಸಸ್ಯವನ್ನು ವಿವರವಾಗಿ ಪರಿಶೀಲನೆ ನಡೆಸುತ್ತಾರೆ.
ನಿಯಮಿತವಾಗಿ ಪೂರೈಕೆಯಾಗಬೇಕಾದ ಪೋಷಕಾಂಶಗಳನ್ನು ನೀಡಿದ ಸಂದರ್ಭಗಳಲ್ಲಿಯೂ ಕೆಲವೊಮ್ಮೆ ಸಸ್ಯಗಳು ಬೆಳವಣಿಗೆ ಹೊಂದಿರುವುದಿಲ್ಲ. ಕಾಂಡಗಳಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ, ಪೋಷಕಾಂಶಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕುಗ್ಗಿರುತ್ತವೆ. ಎಲೆಗಳು ಒಣಗಿರುತ್ತವೆ. ಇಡೀ ಸಸ್ಯವೇ ನಿಸ್ತೇಜಿತವಾಗಿರುತ್ತದೆ. ಇದನ್ನು ಪರಿಶೀಲಿಸಲು ಮಾದರಿಗಾಗಿ ಒಂದು ಸಸ್ಯವನ್ನು ಕಿತ್ತು ನೋಡಿದಾಗ ಕೆಲವೊಮ್ಮೆ ಅದರ ಬೇರು ಬೆಳವಣಿಗೆಯೇ ಹೊಂದಿರುವುದಿಲ್ಲ.
ಬೇರುಗಳು ಬೆಳವಣಿಗೆ ಹೊಂದದಿರಲು ಫಂಗಸ್, ನೆಮೆಟೋಡ್ ಇತ್ಯಾದಿ ಕಾರಣವಾಗಿರುತ್ತವೆ. ಬೇರು ಬೆಳವಣಿಗೆ ಹೊಂದಲು ಬೇಕಾದ ಪೂರಕ ಅಂಶಗಳ ಕೊರತೆ ಇರುತ್ತದೆ. ನೆಮಿಟೋಡ್ ಇದ್ದಾಗ ಬೇರುಗಳು ಗಂಟುಗಂಟಾಗಿರುತ್ತವೆ. ಇದು ಸಸ್ಯಗಳ ಬೆಳವಣಿಗೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ. ಆದ್ದರಿಂದ ಈ ಬಗ್ಗೆ ತುರ್ತಾಗಿ ಸೂಕ್ತಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಸ್ಯಗಳ ಬೆಳವಣಿಗೆ ಕುಂಠಿತಗೊಂಡು ನಷ್ಟ ಉಂಟಾಗುತ್ತದೆ.
ತೊಂದರೆ ಕಂಡುಬಂದ ಮೇಲೆ ಪರಿಹಾರ ಹುಡುಕುವುದಕ್ಕಿಂತ ಮುಂಚಿತವಾಗಿಯೇ ಜಾಗ್ರತೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ರೂಟ್ ಛಾರ್ಜರ್ (ಬೇರುಗಳ ಬೆಳವಣಿಗೆ ವರ್ಧಕ) ಬಳಸಬಹುದು. ಇದು ಪೊಲಿಯರ್ ಸ್ಪ್ರೇ ಮಾದರಿಯಲ್ಲಿಯೂ ದೊರೆಯುತ್ತದೆ. ಇದನ್ನು ಬೀಜಗಳ ಬಿತ್ತನೆ, ಬೆಳವಣಿಗೆ ಹಂತಗಳಲ್ಲಿ ಬಳಸಬಹುದು. ಇದರಿಂದ ಮುಖ್ಯವಾಗಿ ಬೀಜಗಳ ಮೊಳಕೆ ಹೊಡೆಯುವಿಕೆ, ಬೇರುಗಳ ಬೆಳವಣಿಗೆ, ಬೇರುಗಳು ನೀರನ್ನು ಹೀರಿಕೊಳ್ಳುವ, ಪೋಷಕಾಂಶಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುವ ತನ್ಮೂಲಕ ಹೂ, ಕಾಯಿ, ಹಣ್ಣಾಗುವ ಪ್ರಕ್ರಿಯೆಗಳು ಅತ್ಯುತ್ತಮವಾಗಿರುತ್ತವೆ.
ಬೇರುಗಳ ಬೆಳವಣಿಗೆ ವರ್ಧಕವನ್ನು ಎಲೆಗಳ ಮೂಲಕ ಸಿಂಪಡಿಸಿದಾಗ ಅದು ಬೇರುಗಳಿಗೆ ತಲುಪುತ್ತದೆ. ಇದರಲ್ಲಿ ಬೇರುಗಳ ರಕ್ಷಣೆಗೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಅಂಶಗಳಿರುತ್ತವೆ.ಇದರಿಂದ ಬೇರಿನಲ್ಲಿ ನೆಮೆಟೋಡ್ಸ್, ಫಂಗೈ ಉಂಟಾಗುವಿಕೆ ಆಗುವುದಿಲ್ಲ. ಬೇರಿನ ಬೆಳವಣಿಗೆಗೆ ಸಂಬಂಧಿಸಿದ ಪೋಷಕಾಂಶಗಳು ಕೂಡ ಇರುವುದರಿಂದ ಸಸ್ಯಗಳ ಒಟ್ಟಾರೆ ಬೆಳವಣಿಗೆ ಕಾರ್ಯ ಅತ್ಯುತ್ತಮವಾಗಿರುತ್ತದೆ.
ಈ ಬೆಳೆವರ್ಧಕ ದ್ರಾವಣವನ್ನು ಒಂದು ಲೀಟರ್ ನೀರಿಗೆ ಒಂದು ಎಂಎಲ್ ಮಾತ್ರ ಮಿಶ್ರಣ ಮಾಡಬೇಕು. ಅಂದರೆ 15 ಲೀಟರ್ ಸಾಮರ್ಥ್ಯದ ಬ್ಯಾಕ್ ಪ್ಯಾಕ್ ಸ್ಪ್ರೇಯರಿಗೆ 15 ಎಂಎಲ್, 50 ಲೀಟರ್ ಸಾಮರ್ಥ್ಯದ ಬ್ಯಾಕ್ ಪ್ಯಾಕಿಗೆ 50 ಎಂಎಲ್ ಮಾತ್ರ ಮಿಶ್ರಣ ಮಾಡಿ ಬೆಳಗ್ಗೆ ಅಥವಾ ಸಂಜೆಯ ವೇಳೆ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು.
ಸಾವಯವ ಕೃಷಿ: ಮುಖ್ಯವಾಗಿ ಈ ರೂಟ್ ಛಾರ್ಜರ್, ಸಾವಯವ ದ್ರಾವಣವಾಗಿದ್ದು, ಸಾವಯವ ಕೃಷಿಪದ್ಧತಿಗೆ ಪೂರಕವಾಗಿದೆ. ವಿಶೇಷವಾಗಿ ಇದು ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಲು ಮತ್ತು ಅವುಗಳ ಚಟುವಟಿಕೆ ವೃದ್ಧಿಸಲು ಪೂರಕವಾಗಿರುತ್ತದೆ. ಸೂಕ್ಷ್ಮಾಣುಗಳ ಸಂಖ್ಯೆ, ಚಟುವಟಿಕೆ ಹೆಚ್ಚಾದರೆ ಮಣ್ಣಿನ ಫಲವತ್ತತೆಯೂ ಕೂಡ ವೃದ್ಧಿಯಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಬ್ಯಾರಿಕ್ಸ್ ಕೃಷಿ ಸಂಶೋಧನಾ ಸಂಸ್ಥೆ 99008 00033
Good Innformation Elabrate Explanation Good Informotive To Progressive Forming Community