ಮುಂಗಾರು ಹಂಗಾಮು ಸಕ್ರಿಯ ಹಂತವನ್ನು ಪ್ರವೇಶಿಸುತ್ತಿದೆ. ಅತ್ಯಂತ ಭಾರೀ ಮಳೆಯು ಪ್ರಸ್ತುತ ಭಾರತದ ಹಲವಾರು ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಮಧ್ಯಪ್ರದೇಶ, ಪೂರ್ವ ರಾಜಸ್ಥಾನ, ಗುಜರಾತ್, ಕೊಂಕಣ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಈ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ನರೇಶ್ ಕುಮಾರ್ ಹೇಳಿದರು.
ಅತೀ ಭಾರಿ ಮಳೆ ನಿರೀಕ್ಷೆ ನಡುವೆಯೂ ದೆಹಲಿ-ಎನ್‌ಸಿಆರ್ ಪ್ರದೇಶವು ಮುಂದಿನ ಎರಡು ದಿನಗಳವರೆಗೆ ಶುಷ್ಕವಾಗಿರುವ ಸಾಧ್ಯತೆ ಇದೆ.
ಉತ್ತರ ಮತ್ತು ಮಧ್ಯ ಭಾರತದಲ್ಲಿ ಭಾರೀ ಮಳೆ
ಉತ್ತರ ಮತ್ತು...
ಭಾರತದ ಹಲವು ರಾಜ್ಯಗಳಲ್ಲಿ ಮಳೆ ಪ್ರಮಾಣವು ಆಗಸ್ಟ್ 3 ರ 5.7% ಕ್ಕೆ ಹೆಚ್ಚಾಗಿದೆ. ಹದಿನೆಂಟು ರಾಜ್ಯಗಳಲ್ಲಿ ಇಂಥ ಅತೀವೃಷ್ಟಿ ಉಂಟಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಮುಂಗಾರು ಹಂಗಾಮಿನ ಎರಡನೇ ಹಂತದಲ್ಲಿ (ಆಗಸ್ಟ್-ಸೆಪ್ಟೆಂಬರ್) ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್‌ನಲ್ಲಿ ಮುಂಗಾರು ಆರಂಭವಾದ ನಂತರ ಹಲವೆಡೆ ಅತಿ ಹೆಚ್ಚು ಹೆಚ್ಚು ಮಳೆಯಾಗಿದೆ. ಆಗಸ್ಟ್ 3 ರಂದು ಒಟ್ಟಾರೆಯಾಗಿ ರಾಷ್ಟ್ರದಲ್ಲಿ ಶೇಕಡ 74 ರಷ್ಟು ಅಧಿಕ ಮಳೆಯಾಗಿದೆ. ಮಳೆಯ ಸಂದರ್ಭದಲ್ಲಿ, ಒಂಬತ್ತು ರಾಜ್ಯಗಳು ಮತ್ತುಕೆಲವು...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ. ದಿನಾಂಕ: ಭಾನುವಾರ, 04ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 1200 ಗಂಟೆ
ಕರ್ನಾಟಕಕ್ಕೆ ಮುನ್ಸೂಚನೆ
ದಿನ 1 (04.08.2024): ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳ ಮೇಲೆ ಕೆಲವು ಕಡೆಗಳಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ.
ದಿನ...
ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ “ಆರೋಗ್ಯ ಭಾಗ್ಯ”ವೇ ಮೇಲು. ಪ್ರತಿನಿತ್ಯ ಸೇವಿಸುವ ಆಹಾರಕ್ಕೂ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ. ಶೈವಾವಸ್ಥೆಯಿಂದ ಜೀವಾಂತ್ಯದವರೆಗೂ ಉತ್ತಮ ಆರೋಗ್ಯ ಹೊಂದಬೇಕಾದರೆ ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ/ಸಮತೋಲನ ಆಹಾರ ಬೇಕು.
ಭಾರತೀಯರ ಆಹಾರ ಪದ್ಧತಿಯು ಏಕದಳ ಧಾನ್ಯ ಆಧಾರಿತವಾಗಿದೆ. ನಾವು ಸೇವಿಸುವ ಬೆಳಗಿನ ಉಪಹಾರವಿರಲಿ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವಿರಲಿ, ಇವರ ಊಟದ ತಟ್ಟೆಯಲ್ಲಿ ಏಕದಳ ಧಾನ್ಯದಿಂದ ತಯಾರಿಸಿದ ಪದಾರ್ಥಗಳಾದ ಅನ್ನ, ಚಪಾತಿ, ರೊಟ್ಟಿ ಮುಂತಾದವುಗಳೆ ಪ್ರಧಾನವಾಗಿರುತ್ತವೆ.
ಶೇಕಡ 60 ರಷ್ಟು ಪ್ರೋಟೀನ್‌ನ್ನು ಏಕದಳ ಧಾನ್ಯವೇ ಪೂರೈಸುತ್ತವೆ (ಓಓಒಃ ವರದಿ). ಆದರೆ, ಏಕದಳ ಧಾನ್ಯದಲ್ಲಿರುವ...
ಸೂರ್ಯಕಾಂತಿ ನಮ್ಮ ದೇಶದ ಹಾಗೂ ರಾಜ್ಯದ ಪ್ರಮುಖವಾದ ಎಣ್ಣೆಕಾಳು ಬೆಳೆ. ಇದನ್ನು ಕರ್ನಾಟಕ ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸುಮಾರು 1.36 ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ, ಹಾಗೂ ಇದರ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ 850 ಕೆ.ಜಿ./ ಹೆಕ್ಟೇರ್‌ಯಷ್ಟಿದೆ. ಈ ಬೆಳೆಯನ್ನು ಭಾರತದಲ್ಲಿ ಸುಮಾರು 2.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಭಾರತದಲ್ಲ್ಲಿ ಸೂರ್ಯಕಾಂತಿ ಬೆಳೆಯ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ ಸರಾಸರಿ 923 ಕೆ.ಜಿ./ ಇದ್ದು ಸೂರ್ಯಕಾಂತಿ ಬೆಳೆಯುವ ಇತರ ಪ್ರಗತಿ ಪರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆ. ದೇಶದ ಸೂರ್ಯಕಾಂತಿ ಬೆಳೆಯ...
ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆ:
ದಿನ 1 (03.08.2024): ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು (30-40 ಕಿಮೀ) ತಲುಪುವ ಸಾಧ್ಯತೆಯಿದೆ.
ಶಿವಮೊಗ್ಗ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು (30-40 ಕಿಮೀ) ತಲುಪುವ ಸಾಧ್ಯತೆಯಿದೆ.
ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು...
ಆರ್ಥಿಕ ಅಭಿವೃದ್ಧಿ ಸಾಧನೆ ಮಾತ್ರ ಅಭಿವೃದ್ಧಿಯ ಏಕೈಕ ಮಾನದಂಡ ಎಂಬ ಹುಚ್ಚು ಪೈಪೋಟಿಯಲ್ಲಿ ಪ್ರಮುಖವಾಗಿ ಸಾಗುತ್ತಿರುವ ಚೀನಾ, ಅಮೇರಿಕಾ,ಜಪಾನ್,ಯುರೋಪ್,ರಷ್ಯಾ,ಭಾರತ, ಇನ್ನಿತರೇ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50 ರಿಂದ 60 ವರ್ಷದಲ್ಲಿ ಕಲ್ಲಿದ್ದಲು,ತೈಲಬಾವಿಗಳು, ಖನಿಜ ಸಂಪತ್ತು ಬರಿದಾಗುತ್ತದೆ.
ಕೈಗಾರಿಕೆ ಕ್ರಾಂತಿ, ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ವಾತಾವರಣದಲ್ಲಿ ತಾಪಮಾನ ಏರಿಕೆ ಉಂಟಾಗುತ್ತಿದೆ. ಇದರ ಹೊಡೆತ ಪರಿಸರದಲ್ಲಿರುವ ಸಕಲ ಜೀವರಾಶಿಗಳ ಮೇಲೆ ಆಗುತ್ತಿದೆ. ಆರ್ಥಿಕವಾಗಿ ಇದರ ನೇರ ಬಲಿಪಶು ರೈತ ಮತ್ತು ಕೃಷಿ ಕ್ಷೇತ್ರವಾಗಿರುತ್ತದೆ.
ಹವಾಮಾನ ಬದಲಾವಣೆ ಹೆಸರಿನಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಯೋಜನೆ...
ರೈತ ಸಂಘಟನೆಗಳ ಮುಖಂಡರು, ರೈತರ ಹಿತಾಸಕ್ತಿ ಸಲುವಾಗಿ ಕೆಲಸ ಮಾಡುವ ಸಂಘಟನೆಗಳ ಮುಖಂಡರು, ಕೆಲವಾರು ಸಸ್ಯ ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಬಿಡುಗಡೆ ಮಾಡಿದ ಎರಡು ಸಸ್ಯನಾಶಕ ಸಹಿಷ್ಣು ಇರುವ ಎರಡು ಭತ್ತದ ತಳಿಗಳ ವಿತರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಕೃಷಿ ಸಚಿವಾಲಯವನ್ನು ಅವರು ತೀವ್ರವಾಗಿ ಆಗ್ರಹಿಸಿದ್ದಾರೆ. ಅವುಗಳು ಸೂಪರ್ವೀಡ್ಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು. ಇದರಿಂದ ಬಾಸ್ಮತಿ ರಫ್ತು ಮತ್ತು ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದ ಕೃಷಿ...
"ಇದು ನಿಸರ್ಗದ ಪ್ರಕೋಪ ತಾನೆ? ಇಂಥ ಭಾರೀ ಮಳೆ ಬಿದ್ದರೆ ಗುಡ್ಡಗಳು ಕುಸಿಯುವುದು ಸಹಜ ಅಲ್ಲವೆ?"- ಹೀಗೆಂದು ವಿಜ್ಞಾನಿ ಡಾ. ಮಾಧವ ಗಾಡ್ಗೀಳರನ್ನು `ಇಂಡಿಯಾ ಟುಡೇʼ ವಾಹಿನಿಯ ರಾಜದೀಪ್ ಸರ್ದೇಸಾಯಿ ಕೇಳುತ್ತಾರೆ.
"ಭಾರೀ ಮಳೆ ಮತ್ತೆ ಮತ್ತೆ ಬರಲಿಕ್ಕೂ ಮನುಷ್ಯನೇ ಕಾರಣ" ಎನ್ನುತ್ತ ಗಾಡ್ಗೀಳರು ಅದಕ್ಕೂ ಒಂದು ವೈಜ್ಞಾನಿಕ ಕಾರಣವನ್ನು ಕೊಡುತ್ತಾರೆ:
"ವಾಯುಮಂಡಲದಲ್ಲಿ ದೂಳಿನ ಅಥವಾ ಹೊಗೆಯ ಸೂಕ್ಷ್ಮ ಕಣಗಳ (ʻಏರೊಸೋಲ್ʼ) ದಟ್ಟಣೆ ಜಾಸ್ತಿ ಇದ್ದರೆ ಅವು ದಟ್ಟ ಮಳೆಗೆ ಕಾರಣವಾಗುತ್ತವೆ. ನಾಲ್ಕು ಗಂಟೆಗಳಲ್ಲಿ ನಿಧಾನಕ್ಕೆ ತುಂತುರಾಗಿ ಬೀಳಬೇಕಿದ್ದ ಮಳೆ ದಿಢೀರೆಂದು ಅರ್ಧಗಂಟೆ, ಒಂದು ಗಂಟೆಯಲ್ಲಿ...
ಭೂ ಕುಸಿತ, ಕೆಸರಿನ ಪ್ರವಾಹ, ಸಾವುನೋವು, ಆಸ್ತಿ ಪಾಸ್ತಿ ನಷ್ಟ ಎಲ್ಲವೂ ಘಟಿಸಿ ಮುಗಿದುಹೋಯ್ತು. ದುಃಖಿಸಿಯೂ ಆಯ್ತು. ಆದದ್ದಾಯಿತು ಎಂದು ಸುಮ್ಮನೆ ಎಲ್ಲಾ ಮರೆತು ಮುಂದುವರಿದು ಬಿಡುತ್ತೇವೆ. ಆದರೆ ಇದು ಇಷ್ಟಕ್ಕೇ ಮುಗಿದುಬಿಡುತ್ತದೆ ಎಂದು ಭಾವಿಸಿಕೊಂಡರೆ ತಪ್ಪಾಗಲಾರದೇ?
ಹತ್ತಿಪ್ಪತ್ತು ಅಡಿ ಅಗಲದ ಮಳೆಗಾಡಿನ ಕಿರುನದಿಯೊಂದು ಈಗ ತನ್ನ ಪಾತ್ರವನ್ನು ನೂರಾರು ಅಡಿಗಳಿಗೆ ವಿಸ್ತರಿಸಿಕೊಂಡಿದೆ. ಅಲ್ಲದೆ ತನ್ನ ಪಾತ್ರದ ಆಳವನ್ನೂ ಕಳೆದುಕೊಂಡು ಹೇಗೆ ಮತ್ತು ಯಾವ ಮಾರ್ಗದಲ್ಲಿ ಯಾವ ತರಹದ ಅಂಕುಡೊಂಕು ನಿರ್ಮಿಸಿ ಹರಿಯಬೇಕು ಎಂಬುದನ್ನೇ ಅರಿಯದೆ ದಿಗ್ಮೂಡವಾಗಿ ಚದುರಿ ನಿಂತಿದೆಯಲ್ಲವೇ? ಇದರ ಮುಂದಿನ ಪರಿಣಾಮ...