ಕೃಷಿಯುತ್ಪನ್ನ ಮೌಲ್ಯವರ್ಧನೆ, ಉದ್ಯಮಶೀಲತೆಗೆ ಒತ್ತು

ಇತ್ತೀಚೆಗೆ ಬಿಡುಗಡೆಯಾದ ಪ್ರಬೇಧಗಳು, ತಂತ್ರಜ್ಞಾನಗಳ ಜತೆಗೆ ಹೆಚ್ಚಿನ ಇಳುವರಿ ನೀಡುವ , ಕೀಟ - ರೋಗ ನಿರೋಧಕ ಶಕ್ತಿಯುಳ್ಳ ತಳಿಗಳು, ಅರ್ಕಾ ಸೂಷ್ಮಜೀವಿಯ ಒಕ್ಕೂಟ, ಬೆಳೆ ಆಧಾರಿತ ಲಘು ಪೋಷಕಾಂಶಗಳ ವಿಶೇಷತೆಗಳು, ಕೀಟ ಆಕರ್ಷಣ ಬಲೆಗಳು, ಮೌಲ್ಯವರ್ಧಿತ ಕೊಯ್ಲೋತ್ತರ ಉತ್ಪನ್ನಗಳು, ಜೈವಿಕ ಕೀಟನಾಶಕಗಳು, ಕೊಯ್ಲೋತ್ತರ ಯಂತ್ರೋಪಕರಣಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗಿದೆ.

0
ಕೃಷಿ – ತೋಟಗಾರಿಕೆ ಆದಾಯ ದ್ವಿಗುಣಗೊಳಿಸುವುದರ ಜತೆಗೆ ಕೃಷಿಕರಲ್ಲಿ ಉದ್ದಿಮೆಶೀಲತೆ ಬೆಳೆಸಲು ಒತ್ತು ನೀಡಲಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ ಮಹಾ ನಿರ್ದೇಶಕ ಮಹಾನಿರ್ದೇಶಕ ತ್ರಿಲೋಚನಾ ಮಹಾಪಾತ್ರ ಹೇಳಿದರು
ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆಯೋಜಿಸಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ನೂತನ ಮೊಬೈಲ್ ಆ್ಯಪ್, ವೆಬ್ ಸೈಟ್‍ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ತಳಿಗಳ ಅಭಿವೃದ್ಧಿ ಜತೆಗೆ ಮೌಲ್ಯವರ್ಧನೆ ಕಾರ್ಯಗಳಿಗೂ ಆದ್ಯತೆ ನೀಡಿದೆ. ಇದಲ್ಲದೇ ಪೋಷಕಾಂಶ ಕೊರತೆಯನ್ನು ನೀಗಿಸಲು ಪೌಷ್ಟಿಕಾಂಶ ಕೈತೋಟ- ತಾರಸಿ ತೋಟದ ಪರಿಕಲ್ಪನೆಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಈಗ ಸಾಕಷ್ಟು ಸುಧಾರಿತ ನೀರಾವರಿ ತಂತ್ರಜ್ಞಾನಗಳಿವೆ.‌ಅವುಗಳನ್ನು ಬಳಸಿಕೊಳ್ಳಬೇಕು. ತೀರಾ ಕಡಿಮೆ ನೀರು ಬಳಸಿ ಅಧಿಕ ಉತ್ಪಾದನೆ ಮಾಡಬೇಕು. ಇದಲ್ಲದೇ ವಿದ್ಯುತ್ ಮೇಲೆ ಅವಲಂಬಿತರಾಗದೇ ಸೌರಶಕ್ತಿಯನ್ನೇ ಹೆಚ್ಚೆಚ್ಚು ಬಳಸಬೇಕು. ರಾಷ್ಟ್ರದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು.‌ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರುವ ಭಾರತೀಯ ತೋಟಗಾರಿಕೆ ಸಂಸ್ಥೆ ಕಿರಿದು ವಿಸ್ತೀರ್ಣದಲ್ಲಿ ಹಿರಿದು ಲಾಭ ತರುವ ಹಣ್ಣು ಮತ್ತು ತರಕಾರಿ ತಳಿಗಳನ್ನು ಬಿಡುಗಡೆ ಮಾಡಿದೆ  ಎಂದವರು ಹೇಳಿದರು.

ಇಂದಿನಿಂದ ಆರಂಭವಾಗಿರುವ ತೋಟಗಾರಿಕಾ ಮೇಳದ ವಿಶೇಷ:
ಮತ್ತೊಂದು ವಿಶೇಷತೆ ಎಂದರೆ 2020ರ ಸಾಲಿನ ಮೇಳವನ್ನು “ಉದ್ದಿಮೆಯಾಗಿಸಲು ತೋಟಗಾರಿಕೆ” ಶೀರ್ಷಿಕೆಯಡಿ ಆಚರಿಸಲಾಗುತ್ತಿರುವುದು. ತಳಿ ಅಭಿವೃದ್ಧಿ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಬುಡಕಟ್ಟು  ಸಮುದಾಯಗಳಿಗೆ ಅನುಕೂಲವಾಗುವ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗಿದೆ
ಹೆಸರಘಟ್ಟದಲ್ಲಿರುವ ಐ.ಐ.ಹೆಚ್.ಆರ್. ಅಭಿವೃದ್ಧಿಪಡಿಸಿದ ಸಾವಯವ ತೋಟಗಾರಿಕೆ, ಉತ್ತಮ ಕೃಷಿಪದ್ಧತಿಗಳ ಕುರಿತು ಕೆಲವು ಬೆಳೆಗಳ ಕೃಷಿಪದ್ಧತಿಗಳು, ತೋಟಗಾರಿಕಾ ಉತ್ಪನ್ನಗಳ ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಖಚಿತಪಡಿಸಿಕೊಳ್ಳಲು, ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕ ಕೀಟನಾಶಕಗಳಿಂದ ಮುಕ್ತವಾಗಿರುವ ಉತ್ಪನ್ನಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ
ಇತ್ತೀಚೆಗೆ ಬಿಡುಗಡೆಯಾದ ಪ್ರಬೇಧಗಳು, ತಂತ್ರಜ್ಞಾನಗಳ ಜತೆಗೆ ಹೆಚ್ಚಿನ ಇಳುವರಿ ನೀಡುವ , ಕೀಟ – ರೋಗ ನಿರೋಧಕ ಶಕ್ತಿಯುಳ್ಳ ತಳಿಗಳು, ಅರ್ಕಾ ಸೂಷ್ಮಜೀವಿಯ ಒಕ್ಕೂಟ, ಬೆಳೆ ಆಧಾರಿತ ಲಘು ಪೋಷಕಾಂಶಗಳ ವಿಶೇಷತೆಗಳು, ಕೀಟ ಆಕರ್ಷಣ ಬಲೆಗಳು, ಮೌಲ್ಯವರ್ಧಿತ ಕೊಯ್ಲೋತ್ತರ ಉತ್ಪನ್ನಗಳು, ಜೈವಿಕ ಕೀಟನಾಶಕಗಳು, ಕೊಯ್ಲೋತ್ತರ ಯಂತ್ರೋಪಕರಣಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗಿದೆ.
ಇದೇ ಸಂದರ್ಭದಲ್ಲಿ ತೋಟಗಾರಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕೃಷಿಕರನ್ನು ಸನ್ಮಾನಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೆಕಲ್ ಕೆಂಪರಾಜ್ಚಾ (ಬಾಳೆ) ಚಾಮರಾಜನಗರ ಜಿಲ್ಲೆಯ ಬಸಮ್ಮ ( ಅಣಬೆ), , ರಾಮನಗರ ಜಿಲ್ಲೆಯ ಮಹಾದೇವಯ್ಯ (ಮಾವು)    ಬೀದರ್ ಜಿಲ್ಲೆಯ ಚೇತನ್ ದಾಬ್ಕೆ (ಟೊಮ್ಯೊಟೋ) ತಮಿಳುನಾಡು ಅಯ್ಯನಕುಡಿಯ ಕಾರ್ತೀರ್ ವೇಲ್ (ಸೀಬೆ) ಆಂಧ್ರದ ಗುಂಟೂರ್ ಜಿಲ್ಲೆಯ ಸೈಯದ್ ಸುಬಾನಿ (ತಂತ್ರಜ್ಞಾನ ಬಳಕೆ), ಗಜಪತಿ ಜಿಲ್ಲೆಯ ಕೈಲಾಸ್ ಮಲ್ಲಿಕ್ (ನರ್ಸರಿ), ಮಿಜೋರಾಂನ ಲಲ್ಲಿಯತ್ಲುಂಗ (ಟೊಮ್ಯಾಟೋ)
ವೇದಿಕೆಯಲ್ಲಿ ಐ.ಐ.ಹೆಚ್.ಆರ್.ನಿರ್ದೇಶಕ ದಿನೇಶ್ ಇದ್ದರು. ಇಂದಿನಿಂದ ಆರಂಭವಾಗಿರುವ ಮೇಳ ಫೆಬ್ರವರಿ 8ರ ತನಕ ನಡೆಯುತ್ತದೆ.

LEAVE A REPLY

Please enter your comment!
Please enter your name here