ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನವೆಂಬರ್ 3: ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಇಂದು ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪಡೆದವರ ವಿವರಗಳನ್ನು ಮುಂದೆ ನೀಡಲಾಗಿದೆ.
- ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
ಹೆಚ್.ಜಿ. ಗೋಪಾಲಗೌಡ ಬಿನ್ ಲೇಟ್ ಗೋಪಾಲಗೌಡ ಹಿತ್ತಲಹಳ್ಳಿ, ಮಾಳಮಾಚನಹಳ್ಳಿ ಅಂಚೆ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ. ಇವರು ಸಮಗ್ರ ಕೃಷಿಗೆ ಒತ್ತು ನೀಡುತ್ತಿದ್ದು, ರಾಗಿ, ಅವರೆ, ಹುರುಳಿ, ಅಲಸಂದೆ, ಜೋಳ, ಕಡಲೆ, ಹಾಗೂ ಸಿರಿಧಾನ್ಯಗಳಾದ ಸಾಮೆ, ನವಣೆಯನ್ನು ಬೆಳೆಯುತ್ತಿದ್ದಾರೆ.
ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಈರುಳ್ಳಿ, ಬೆಳ್ಳುಳ್ಳಿ, ಬೆಂಡೆ, ಟೊಮ್ಯಾಟೊ, ಗೋರಿಕಾಯಿ, ದಂಟು, ಸಬ್ಬಕ್ಕಿ, ಕೊತ್ತಂಬರಿ, ಪಾಲಕ್, ಬಾಳೆ, ಪಪ್ಪಾಯ, ನಿಂಬೆ, ಹಲಸು ಮತ್ತು ಸಪೋಟ ಬೆಳೆಯುತ್ತಿದ್ದಾರೆ. ರೇಷ್ಮೆಕೃಷಿ ಜೊತೆಗೆ ಅರಣ್ಯ ಕೃಷಿಯಲ್ಲಿ ಸಿಲ್ವರ್ ಓಕ್, ಹೊಂಗೆ, ಹೆಬ್ಬೇವು, ನೇರಳೆ, ಶ್ರೀಗಂಧ, ಹಲಸು ಮತ್ತು ಬೇವಿನ ಮರಗಳನ್ನು ತೋಟದ ಬದುವಿನಲ್ಲಿ ಬೆಳೆದಿದ್ದಾರೆ.
ಕೃಷಿ ಹೊಂಡ ನಿರ್ಮಿಸಿ ಕಾಮನ್ ಕಾರ್ಪ್ ಮತ್ತು ಕಾಟ್ಲ ಮೀನುಗಳನ್ನು ಹಾಗೂ ಜೇನು ಸಾಕಣಿಕೆಯನ್ನು ಕೈಗೊಂಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹನಿ ಮತ್ತು ತುಂತುರು ನೀರಾವರಿ ಬಳಸಿ ನೀರಿನ ಸದ್ಭಳಕೆ ಮಾಡುತ್ತಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆ ತ್ಯಾಜ್ಯವನ್ನು ಬಳಸಿ ಎರೆಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳಿಗೆ ಬಳಕೆ ಮಾಡುತ್ತಿದ್ದಾರೆ
ಸಮಗ್ರ ಕೀಟ ಮತ್ತು ರೊಗ ನಿರ್ವಹಣೆಯಲ್ಲಿ ಬೇವಿನ ಬೀಜದ ಕಷಾಯ, ಹಳದಿ ಅಂಟು ಪಟ್ಟಿ, ಮೋಹಕ ಬಲೆ, ಟ್ರೆöÊಕೋಡರ್ಮ, ಸುಡೋಮಾನಸ್, ಪರತಂತ್ರ ಜೀವಿಗಳನ್ನು, ಬಳಕೆ ಮಾಡುತ್ತಿದ್ದಾರೆ.
- ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿ
ಸಿ. ನವಿಕ್ರಮ್ ಬಿನ್ ಎಂ.ಚಂದ್ರಪ್ಪ, ಲಕ್ಷ್ಮೀದೇವಿಪುರ,, ತೂಬಗೆರೆ, ಹಾಡೋನಹಳ್ಳಿ, ದೊಡ್ಡಬಳ್ಳಾಪುರ-ಇವರು 24 ಎಕರೆಯಲ್ಲಿ ತೋಟಗಾರಿಕಾ ಬೆಳೆಗಳಾದ ಮಾವು , ದ್ರಾಕ್ಷಿ, ಸೀಬೆ, ಸಪೋಟ, ನೇರಳೆ, ಹಲಸು, ಡ್ರಾಗನ್ ಫ್ರೂಟ್, ನಿಂಬೆ, ದಾಳಿಂಬೆ, ಬಾಳೆ, ಪರಂಗಿ, ಮೂಸಂಬಿ, ಸೀತಾಫಲ, ಚಕೋತ, ಅಂಜೂರ, ನೆಲ್ಲಿ, ಕಿತ್ತಳೆ, ಅನಾನಸ್ ಬೆಳೆಯುತ್ತಿದ್ದಾರೆ.
ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆಯನ್ನು ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಗಳಾದ ಸೌತೆಕಾಯಿ, ಕೊತ್ತಂಬರಿ, ಹೂಕೋಸು, ಆಲೂಗಡ್ಡೆ, ಟೊಮ್ಯಾಟೊ, ಹೀರೆಕಾಯಿ, ಹಾಗಲಕಾಯಿ, ಬೂದಗುಂಬಳ, ಮೂಲಂಗಿ, ಕುಂಬಳ, ನುಗ್ಗೆ, ಗಡ್ಡೆಕೋಸು, ಹೂವಿನ ಬೆಳೆಗಳಾದ ಚೆಂಡುಹೂವು, ಸೇವಂತಿಗೆ ಬೆಳೆದು ಲಾಭ ಗಳಿಸುತ್ತಿದ್ದಾರೆ.
ಕೀಟ ಮತ್ತು ರೋಗ ನಿರ್ವಹಣೆಗೆ ಬೇವಿನ ಬೀಜದ ಕಷಾಯ, ಹಳದಿ ಅಂಟು ಪಟ್ಟಿ, ಮೋಹಕ ಬಲೆ, ಟ್ರೆöÊಕೋಡರ್ಮ, ಸುಡೋಮಾನಸ್, ಪರತಂತ್ರ ಜೀವಿಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾವಯವ ಕೃಷಿಗೂ ಆದ್ಯತೆ ನೀಡಿದ್ದು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್, ಜೀವಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರ, ಮೈಕ್ರೋಬಿಯಲ್ ಕನ್ಷಾರ್ಸಿಯ ಮತ್ತು ಜೈವಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದ್ದಾರೆ.
ಕೃಷಿ ಯಂತ್ರೋಪಕರಣಗಳಾದ ಟ್ರಾö್ಯಕ್ಟರ್, ಪವರ್ ಸ್ಪೆçÃಯರ್, ರೊಟೊವೇಟರ್ ಮತ್ತು ಬೂಮರ್ ಸ್ಪೆçಯರ್ ಬಳಸಿ ಕೃಷಿ ಚಟುವಟಿಕೆಗಳನ್ನು ಸುಲಭವಾಗಿಸಿಕೊಂಡಿದ್ದಾರೆ ಮತ್ತು ಶ್ರಮ ಹಾಗೂ ಸಮಯದ ಉಳಿತಾಯ ಮಾಡಿದ್ದಾರೆ
3. ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ
ಅ) ಸಿ.ಪಿ. ಕೃಷ್ಣ ಬಿನ್ ಪುಟ್ಟಸ್ವಾಮಿ, ಗೂಳುರು ದೊಡ್ಡಿ (ಚಿಕ್ಕದೊಡ್ಡಿ), ಗೂಳೂರು ಅಂಚೆ, ಮದ್ದೂರು ತಾ., ಮಂಡ್ಯ. ಇವರು 24 ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಭತ್ತ, ರಾಗಿ, ಕಬ್ಬು, ಬಿಳಿಜೋಳ, ಸಾಮೆ, ನವಣೆ, ಕೊರಲೆ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆದಿರುತ್ತಾರೆ. ತೋಟಗಾರಿಕಾ ಬೆಳೆಗಳಾದ ಬಾಳೆ, ತೆಂಗು, ಅಡಿಕೆ, ಸಪೋಟ, ಕಿತ್ತಳೆ, ಹಲಸು, ನೇರಳೆ, ಸೀತಾಫಲ, ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಬದುಗಳ ಮೇಲೆ ಅರಣ್ಯ ಕೃಷಿಗೆ ಒತ್ತು ನೀಡಿ ಹೆಬ್ಬೇವು, ತೇಗ, ಹುಲುಚಿ, ಮಹಾಗನಿ, ಆಲ, ಸಿಲ್ವರ್ ಓಕ್, ಬಾಗೆ, ಬೇವು, ಹೊಂಗೆ ಮರಗಳನ್ನು ಬೆಳೆದಿದ್ದು ಸುಸ್ಥಿರ ಆದಾಯ ಪಡೆಯುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆಗಾಗಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರಗಳು, ಎರೆಗೊಬ್ಬರ, ಜೈವಿಕ ಅನಿಲ ಬೊಗಡು, ಕೆರೆಗೋಡು, ಜೈವಿಕ ಗೊಬ್ಬರಗಳು, ಜೀವಾಮೃತ, ಬೇವಿನ ಹಿಂಡಿ, ಹೊಂಗೆ ಹಿಂಡಿಯನ್ನು ಬಳಕೆ ಮಾಡುತ್ತಿದ್ದಾರೆ.
ಸಮಗ್ರ ಪೀಡೆ ನಿರ್ವಹಣೆಗಾಗಿ ಬೇವಿನ ಎಣ್ಣೆ, ಹುಳಿ ಮಜ್ಜಿಗೆ, ಸುಣ್ಣ, ಮೋಹಕ ಬಲೆಗಳು, ಹಳದಿ ಅಂಟು ಪಟ್ಟಿಗಳು, ಜೈವಿಕ ಪೀಡೆನಾಶಕಗಳು, ಹಸಿವಿನ ಗಂಜಲದ ಮಿಶ್ರಣ ಬಳಸುತ್ತಿದ್ದಾರೆ.
ಆ) ಎಂ. ಕವಿತಾ ಕೋ. ಶಿವರಾಮೇಗೌಡ, ಬಿ.ಎ. ಬಂಟರತಳಾಲು, ಶ್ರವಣನಾರ್ ಪೋ., ಹಳೆಮೈಸೂರು ಹೋ., ಹೊಳೇನರಸೀಪುರ ತಾ., ಹಾಸನ ಜಿಲ್ಲೆ ಇವರು 9 ಎಕರೆಯಲ್ಲಿ ಸಮಗ್ರ ಕೃಷಿಯಲ್ಲಿ ಕೃಷಿ ಬೆಳೆಗಳಾದ ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಬೆಳೆಯುತ್ತಿದ್ದಾರೆ.
ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ದಾಳಿಂಬೆ, ಚಕೋತಾ, ಮೂಸಂಬಿ, ನಿಂಬೆ, ಪಪ್ಪಾಯ, ಸಪೋಟ, ಸೀತಾಫಲ, ಬೆಣ್ಣೆಹಣ್ಣು, ಸೀಬೆ, ಪನ್ನೇರಳೆ, ಜಂಬು ನೇರಳೆ, ಅಂಜೂರ, ತರಕಾರಿಗಳು, ಹೂವಿನ ಬೆಳೆಗಳನ್ನು ಬೆಳೆಯುತ್ತಾರೆ. ಬದುಗಳಲ್ಲಿ ಅರಣ್ಯ ಮರಗಳಾದ ತೇಗ, ಸಿಲ್ವರ್ ಓಕ್, ಬೇವು, ರಕ್ತ ಚಂದನ ಹಾಗೂ ಹೊಂಗೆ ಮರಗಳನ್ನು ಬೆಳೆದಿದ್ದಾರೆ.
ಸಮಗ್ರ ಪೀಡೆ ನಿರ್ವಹಣೆಯಲ್ಲಿ ಬೇವಿನ ಎಣ್ಣೆ, ಸುಣ್ಣ, ಮೋಹಕ ಬಲೆಗಳು, ಹಳದಿ ಅಂಟು ಪಟ್ಟಿಗಳು, ಜೈವಿಕ ಪೀಡೆನಾಶಕಗಳು, ಹಸಿವಿನ ಗಂಜಲದ ಮಿಶ್ರಣ ಬಳಸುತ್ತಿದ್ದಾರೆ. ಮೌಲ್ಯವರ್ಧನೆಯಲ್ಲಿ ಹಪ್ಪಳ, ಉಪ್ಪಿನಕಾಯಿ, ಚಟ್ನಿ ಪುಡಿಗಳು, ಲಡ್ಡು, ಮಾಲ್ಟ್, ಸಾಂಬಾರ್ ಪಡಿಗಳು, ಸಿರಿಧಾನ್ಯಗಳ ಲಡ್ಡು, ಹೋಳಿಗೆ, ಇತ್ಯಾದಿಗಳನ್ನು ತಯಾರಿಸಿ ಮಾರಾಟ ಮೂಲಕ ಆದಾಯ ಗಳಿಸುತ್ತಿದ್ದಾರೆ.
4. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ
ಎಂ.ಟಿ. ಮುನೇಗೌಡ ಬಿನ್ ಲೇಟ್ ತಮ್ಮಣ್ಣ ಮಳ್ಳೂರು, ಜಂಗಮಕೋಟೆ ಶಿಡ್ಲಘಟ್ಟ ತಾ., ಚಿಕ್ಕಬಳ್ಳಾಪುರ-ಇವರು 28 ಎಕರೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ರಾಗಿ, ಜೋಳ, ತೊಗರಿ, ಅವರೆ ಮತ್ತು ಕಡಲೆ ಜೊತೆಗೆ ತೋಟಗಾರಿಕೆ ಬೆಳೆಗಳಾದ ಮಾವು, ದ್ರಾಕ್ಷಿ, ತೆಂಗು, ಹಲಸು, ಕೊತ್ತಂಬರಿ, ಮೆಂತ್ಯೆ ಸೊಪ್ಪನ್ನು ಬೆಳೆದು ಲಾಭಗಳಿಸುತ್ತಿದ್ದಾರೆ. 7 ಎಕರೆಯಲ್ಲಿ ಎಂ-5 ಮತ್ತು ವಿ-1 ಹಿಪ್ಪುನೇರಳೆ ತಳಿಗಳನ್ನು ಬೆಳೆಯುತ್ತಿದ್ದು, ರೇಷ್ಮೆ ಹುಳು ಸಾಕಣೆಯನ್ನು ಆಧುನಿಕ ಸ್ಟ್ಯಾಂಡ್ ಪದ್ಧತಿಯಲ್ಲಿ ಕೈಗೊಂಡು ವಾರ್ಷಿಕ ಸರಾಸರಿ 3750 ಕಿ. ಗ್ರಾಂ ಗೂಡಿನ ಇಳುವರಿಯನ್ನು ಪಡೆದು 10 ಲಕ್ಷದಷ್ಟು ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ.
ಆಧುನಿಕ ಕೊಟ್ಟಿಗೆಯನ್ನು ನಿರ್ಮಿಸಿ 3 ಹೆಚ್. ಎಫ್. ಹಸು, 1 ಜರ‍್ಸಿ ಹಸು ಮತ್ತು ನಾಟಿ ಎಮ್ಮೆ ಸಾಕಣೆ ಮಾಡಿ ವಾರ್ಷಿಕವಾಗಿ ರೂ. 75,000/- ನಿವ್ವಳ ಆದಾಯವನ್ನು ಗಳಿಸುತ್ತಿದ್ದಾರೆ. 15 ಕುರಿ, 20 ನಾಟಿ ಕೋಳಿಗಳನ್ನು ಸಹ ಸಾಕಣೆ ಮಾಡುತ್ತಿದ್ದಾರೆ. ಬೆಳೆಗಳ ಉತ್ಪನ್ನಗಳನ್ನು ನೇರ ಮಾರಾಟ ಮಾಡಿ ಮಧ್ಯವರ್ತಿಗಳ ಹಾವಳಿಯನ್ನು ಕಡಿತಗೊಳಿಸಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.
- ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ
ಡಾ. ರಾಜೇಗೌಡ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನ ಜಿಲ್ಲೆ-ಹಾಸನ ಜಿಲ್ಲೆಯ ಶ್ರೀಮತಿ ಈರಾಜಮ್ಮ ಮತ್ತು ಶ್ರೀಯುತ ಕೃಷ್ಣೇಗೌಡ ರವರ ಪುತ್ರ. ರೇಷ್ಮೆ ಕೃಷಿಯಲ್ಲಿ ಪದವಿ, ಸಾತ್ನಕ ಪದವಿ, ಮತ್ತು ಡಾಕ್ಟೋರಲ್ ಪದವಿಯನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಿAದ ಪಡೆದಿರುತ್ತಾರೆ.
16 ವರ್ಷಗಳ ಸುದೀರ್ಘ ಸೇವೆಯನ್ನು ಕೃವಿವಿ, ಬೆಂಗಳೂರಿನಲ್ಲಿ ಸಲ್ಲಿಸಿರುತ್ತಾರೆ. ಹಾಲಿ ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನದಲ್ಲಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ. ಆಲೂಗೆಡ್ಡೆಯಲ್ಲಿ ಬೀಜೋತ್ಪಾದನೆಗೆ ಉತ್ತೇಜಿಸಲು ನೂತನ ತಂತ್ರಜ್ಞಾನವಾದ ಕುಡಿಕಾಂಡ ಸಸಿಗಳ ತಂತ್ರಜ್ಞಾನವನ್ನು ದೇಶದಲ್ಲೇ ಪ್ರಪ್ರಥಮವಾಗಿ ಹಾಸನ ಜಿಲ್ಲೆಯ ರೈತರ ತಾಕಿನಲ್ಲಿ ಮೌಲ್ಯಮಾಪನ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಪರಿಚಯಿಸಿದ್ದಾರೆ.