ಹಸಿರು ಮೇವಿನ ದಿಗ್ಗಜ !

0

ಗದ್ಯ ಹಾಲು ಉತ್ಪಾದನೆಗಾಗಿ ಹೈನು ರಾಸುಗಳಿಗೆ ಆತ್ಯಂತ ಪ್ರಿಯವಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಬೆಳೆದು ಅದರ ಮೇವು ನೀಡಬಹುದು. ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲ ಹಂತಗಳಲ್ಲಿಯೂ ಇದನ್ನು ಬೆಳೆಯಬಹುದು. ಈ ಜೋಳ ಅಧಿಕ ಪ್ರಮಾಣದಲ್ಲಿ ಕಚ್ಚಾ ಸಾರಜನಕ ಹೊಂದಿದೆ.

ಈ ಎಲ್ಲ ಕಾರಣಗಳಿಂದ ಈ ಮೇವನ್ನು ‘ಹಸಿರು ಮೇವಿನ ದಿಗ್ಗಜ’ ಎಂದು ಕರೆಯಲಾಗುತ್ತದೆ. ಇದನ್ನು ಮತ್ತು ವೆಲ್ವೇಟ್ ಬೀನ್ಸ್ ಅನ್ನು ಒಟ್ಟಿಗೆ ಬೆಳೆದಾಗ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಇದಲ್ಲದೇ ಇವೆರಡರ ಸೂಕ್ತ ಸಂಮಿಶ್ರಣದ ಮೇವು ಸೇವಿಸಿದ ಹೈನುರಾಸುಗಳು: ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತವೆ.

ಒಂದು ಹೈನುರಾಸಿಗೆ ಆಫ್ರಿಕನ್ ಟಾಲ್ ಮುಸುಕಿನ ಜೋಳ ಮತ್ತು ವೆಲ್ವೇಟ್ ಬೀನ್ಸ್ ಮಿಶ್ರಣವನ್ನು ೧೫ ಕೆಜಿಯಷ್ಟು ನೀಡಬಹುದು. ಏಕದಳ ಮೇವಾದರೆ ೧೫ ರಿಂದ ೨೦ ಕೆಜಿಯಷ್ಟು ನೀಡಬಹುದು. ಒಂದು ಎಕರೆಯಲ್ಲಿ ವೆಲ್ವೇಟ್ ಬೀನ್ಸ್ ಒಂದನ್ನೇ ಬೆಳೆಯುವುದಾದರೆ ೬ ಕೆಜಿ ಬಿತ್ತನೆಬೀಜ ಬೇಕು. ಮುಸುಕಿನ ಜೋಳದೊಂದಿಗೆ ಬೆಳೆಯುವುದಾದರೆ ೪ ಕೆಜಿ ಬೇಕು. ಮುಸುಕಿನ ಜೋಳ ಒಂದನ್ನೇ ಬೆಳೆಯುವುದಾದರೆ ಒಂದು ಎಕರೆಗೆ ೩೦ ಕೆಜಿ ಬೇಕು. ಮುಸುಕಿನ ಜೋಳದೊಂದಿಗೆ ಅಲಸಂದೆ ಅಥವಾ ಅವರೆಯನ್ನು ಬೆಳೆಯಬಹುದು.

ಮೇವಿನ ಬೆಳೆಯಲ್ಲಿ ಉತ್ತಮ ಇಳುವರಿ ಹೈನುರಾಸುಗಳಲ್ಲಿ ಅಧಿಕ ಹಾಲು ಉತ್ಪಾದನೆಗೆ ಮುಸುಕಿನ ಜೋಳ ಮತ್ತು ವೆಲ್ವೇಟ್ ಬೀನ್ಸ್ ಅನ್ನು ಒಟ್ಟಿಗೆ ಬೆಳೆಯುವುದು ಸೂಕ್ತ. ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಮೇವನ್ನು ಹೈನುರಾಸುಗಳಿಗೆ ನೀಡಿದರೆ ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಮಾತ್ರ ಮೇವು ನೀಡಬೇಕು. ಈ ದಿಶೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಮೇವು ನಿರ್ವಹಣೆ ಅತ್ಯಗತ್ಯ

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here