ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ಆಗುತ್ತಿರುವ ಆಗುತ್ತಿರುವ ಪ್ರತಿಕೂಲ ಪರಿಣಾಮಗಳು ಆನೇಕ. ಇದರ ಬಗ್ಗೆ ಜಗತ್ತಿನ ಹಲವು ರಾಷ್ಟ್ರಗಳು ಕಣ್ತೇರೆದಿವೆ. ಇತ್ತೀಚಿಗೆ ಪ್ಯಾರಿಸಿನಲ್ಲಿ ಜಾಗತಿಕ ತಾಪಮಾನ ಏರಿಕೆ ಮತ್ತು ನಿಯಂತ್ರಣ ಕುರಿತು ಹಲವು ದೇಶಗಳ ಸಭೆಗಳ ಸಭೆ ಆಯೋಜಿತವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ತಾಪಮಾನ ಏರಿಕೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಇದರ ಬಗ್ಗೆ ಪ್ರಪಂಚದ ರಾಷ್ಟ್ರಗಳು ಜೀವವೈವಿಧ್ಯತೆ ಉಳಿಸಲು ಏಕತೆಯಿಂದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ತಾಪಮಾನ ಏರಿಕೆ ನಿಯಂತ್ರಣದಲ್ಲಿ ಜೀವವೈವಿಧ್ಯತೆ ಅದರಲ್ಲಿಯೂ ಬಹುಬಗೆಯ ಗಿಡಮರಗಳು ಪರಿಣಾಮ ಬೀರುತ್ತವೆ. ಆದರಲ್ಲಿಯೂ ಈ ನಿಟ್ಟಿನಲ್ಲಿ ಬಿದಿರು ಬಹು ಪ್ರಯೋಜನಕಾರಿಯಾಗಿದೆ. ಬಹುಶೀಘ್ರವಾಗಿ ಬೆಳೆತಯುವ ಇದು ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ತನ್ನದೇ ಆದ ಕೊಡುಗೆ ನೀಡುತ್ತದೆ. ಇದಲ್ಲದೇ ಅಂತರ್ಜಲ ಹೆಚ್ಚಳಿಕೆಗೆ, ಮೇಲ್ಮಣು ಕೊಚ್ಚಿಹೋಗುವುದನ್ನು ತಡೆಯುವಲ್ಲಿಯೂ ಮಹತ್ತರ ಕಾಣಿಕೆ ಸಲ್ಲಿಕೆ ಸಲ್ಲಿಸುತ್ತದೆ.
ಭಾರತೀಯರ ಬದುಕಿನಲ್ಲಿ ಬಿದಿರು:
ಭಾರತೀಯರ ಹುಟ್ಟಿನಿಂದ ಸಾವಿನ ತನಕ ಬಿದಿರು ಹಾಸುಹೊಕ್ಕಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಮಹತ್ವ ಕಡೆಗಾಣಿತವಾಗಿದೆ. ಇದರಿಂದ ಮಾನವಕುಲ ಅನುಭವಿಸುತ್ತಿರುವ ಕಷ್ಟನಷ್ಟ ಅಪಾರ. ಈ ನಿಟ್ಟಿನಲ್ಲಿ ಬಿದಿರು ಮಹತ್ವ ಅರಿಯಬೇಕಾಗಿದೆ. ಬಿದಿರು ನೆಟ್ಟು ಸಂರಕ್ಷಿಸಬೇಕಾಗಿದೆ.
ಜಾಗತಿಕ ಮಟ್ಟದಲ್ಲಿ ನೂರಾರು ಬಿದಿರು ತಳಿಗಳಿವೆ. ಭಾರತದ ವೈವಿಧ್ಯ ನೆಲಕ್ಕೆ ಹೊಂದಿಕೊಂಡು ಸೊಗಸಾಗಿ ಬೆಳೆಯುವ ಸಾಕಷ್ಟು ತಳಿಗಳಿವೆ. ಇಂಥ ಬಿದಿರನ್ನು ನೆಟ್ಟು ಬೆಳೆಸುವುದರಿಂದ ಅನೇಕ ಪ್ರಯೋಜನಗಳಿವೆ. ಸಾವಿರಾರು ವರ್ಷಗಳಿಂದಲೂ ಭಾರತೀಯರು ತಮ್ಮ ದೈನಂದಿನ ಜೀವನದಲ್ಲಿ ಬಿದಿರನ್ನು ಬಳಸುತ್ತಾ ಬಂದಿದ್ದಾರೆ. ಇದು ಬಹುಬಗೆಯ ಬಳಕೆ.
ಈ ಕುರಿತು ಅರಿವು ಮೂಡಿಸಲು, ಬಿದಿರು ಬಳಕೆ ಹೆಚ್ಚಿಸಲು, ಕೃಷಿಕ್ಷೇತ್ರ ವಿಸ್ತರಿಸಲು ಪ್ರಯತ್ನಗಳು ಜರುಗುತ್ತಿವೆ. ಈ ನಿಟ್ಟಿನಲ್ಲಿ ಭಾರತದ ಬಾಂಬೂ ಸೊಸೈಟಿ ತನ್ನದೇ ಆದ ಕಾಣಿಕೆ ಸಲ್ಲಿಸುತ್ತಿದೆ. ಪ್ರಸ್ತುತ ಬಿದಿರು ಬಹುಬಳಕೆ ಕುರಿತು ಬೆಂಗಳೂರಿನ ಲಾಲ್ ಬಾಗ್ ಬಾಟನಿಕಲ್ ಗಾರ್ಡನಿನಲ್ಲಿ ಸೆಪ್ಟೆಂಬರ್ 18ರಂದು ಬೆಳಗ್ಗೆ 11ರಿಂದ “ಬಿದಿರು ಉತ್ಸವ ಆಯೋಜನೆಗೊಂಡಿದೆ. ಇದು ಬಿದಿರಿನ ಬಳಕೆ ಕುರಿತು ಮಹತ್ವದ ಅಂಶಗಳನ್ನು ನಗರದ ನಾಗರಿಕರಿಗೆ ತಿಳಿಸಲಿದೆ.
ಉಚಿತ
:ಉತ್ಸವದಲ್ಲಿ ಅಬಾಲವೃದ್ಧರವರೆಗೆ ಆಸಕ್ತಿಕರ ಎನಿಸುವ ಕಾರ್ಯಕ್ರಮಗಳಿವೆ. ಬೆಂಗಳೂರು ಮತ್ತು ಸುತ್ತಮುತ್ತಲ ನಾಗರಿಕರು ಇದರ ಪ್ರಯೋಜನ ಪಡೆಯಬೇಕೆಂಬುದು ಆಯೋಜಕರ ಆಶಯ. ಹೆಚ್ಚಿನ ವಿವರಗಳಿಗೆ 97318 14333/ 94443 35600 ಸಂಪರ್ಕಿಸಬಹುದು.
ಬಿದಿರುಮೇಳದ ವೈಶಿಷ್ಟತೆ
- ವೈವಿಧ್ಯಮಯ ಬಾಂಬೂ ಸಸಿಗಳ ವಿತರಣೆ ಮತ್ತು ಮಾರಾಟ
- ಬಾಂಬೂ ಫ್ಯಾಷನ್ ಶೋ
- ವೈವಿಧ್ಯಮಯ ಬಿದಿರು ಆಹಾರ
- ಬಿದಿರು ಬಹುಬಳಕೆ ವಸ್ತುಗಳ ಪ್ರದರ್ಶನ
- ಬಿದಿರು ಬಹುಬಳಕೆ ಕಾರ್ಯಾಗಾರ
- ಬಿದಿರು ಜನಪದ ಸಂಗೀತ
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರನ್ನು ಬಾಂಬೂ ಸೊಸೈಟಿ ಆಫ್ ಇಂಡಿಯಾ ಸ್ವಾಗತಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಈ ಮೇಲ್ಕಂಡಂತೆ ನೀಡಿರುವ ದೂರವಾಣಿಗಳಿಗೆ ಆಸಕ್ತರು ಕರೆಮಾಡಬದು. ಬನ್ನಿ ಬಿದಿರು ಬಳಕೆ ಹೆಚ್ಚಿಸೋಣ, ಜಾಗತಿಕ ತಾಪಮಾನ ನಿವಾರಿಸೋಣ.
ಈ ಕುರಿತ ವಿವರಗಳನ್ನು ಬಾಂಬೂ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ, ಅರಣ್ಯ ಸಂರಕ್ಷಣೆ ಹೆಚ್ಚುವರಿ ಪ್ರಧಾನ ಸಂರಕ್ಷಕ ಡಾ. ಕೆ. ಸುಂದರ ನಾಯಿಕ್, ವ್ಯವಸ್ಥಾಪನಾ ಕಾರ್ಯನಿರ್ವಹಣಾಧಿಕಾರಿ ನೀಲಮ್ ಮಂಜುನಾಥ್, ವಾಸ್ತುಶಿಲ್ಪಿ ರಂಗನಾಥ್ ತಿಳಿಸಿದರು. ಇದರ ಬಗ್ಗೆ ಬೆಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಇಂದು ಪತ್ರಿಕಾಗೋಷ್ಠಿ ಆಯೋಜಿತವಾಗಿತ್ತು.