ಸುಸ್ಥಿರ ಕೃಷಿ ತರಬೇತಿ  ಕಾರ್ಯಾಗಾರ

0
ಸಾಂದರ್ಭಿಕ ಚಿತ್ರ

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ ಮೂರು ದಿನಗಳ ‘ಸುಸ್ಥಿರ ಕೃಷಿ ತರಬೇತಿ’  ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 📋: 2024, ಮೇ 28, 29 & 30 ಸಮಯ : ಬೆಳಗ್ಗೆ 8 🕗 ರಿಂದ ಸಂಜೆ 6 🕕 ರ ವರೆಗೆ

ತರಬೇತಿ ನೇತೃತ್ವ :
ಡಾ|| ಮಂಜುನಾಥ ಹೆಚ್.,
ಸಹಜ ಕೃಷಿ ವಿಜ್ಞಾನಿಗಳು, ಗಾಂಧೀಜಿ ಸಹಜ ಬೇಸಾಯಾಶ್ರಮ, ತುಮಕೂರು, ಜೊತೆಗೆ
ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು, ಪರಿಣಿತರು, ಕೃಷಿ ವಿಜ್ಞಾನಿಗಳು ಮತ್ತು ಅನುಭವಿ ಕೃಷಿಕರಿಂದ..

ಸುಸ್ಥಿರ ಕೃಷಿಯಲ್ಲಿ ಆಸಕ್ತಿಯುಳ್ಳವರು, ಉತ್ತಮ ಆರೋಗ್ಯ ಮತ್ತು ಜೀವನಕ್ಕಾಗಿ, ಪೌಷ್ಟಿಕ ಆಹಾರ ಮತ್ತು ಒತ್ತಡ ಮುಕ್ತ ಜೀವನ ಬಯಸುವ, ಹೊಸ ತೋಟವನ್ನು ನಿರ್ಮಿಸುವ ಕನಸು ಹೊಂದಿರುವವರು, ಈಗಾಗಲೇ ಕೃಷಿಯಲ್ಲಿ ತೊಡಗಿರುವವರನ್ನು ಮೂರು ದಿನಗಳ ಸಮಗ್ರ, ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರಕ್ಕೆ ಆಹ್ವಾನಿಸಲಾಗಿದೆ.

ಕಾರ್ಯಗಾರದಲ್ಲಿ :
ಮಣ್ಣಿನ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು, ಸೂಕ್ಷ್ಮ ಜೀವಾಣುಗಳ ತಯಾರಿಕೆ, ಉತ್ತಮ ಗೊಬ್ಬರ ತಯಾರಿಕೆ, ತೋಟಗಳ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

* ಕೃಷಿ ಭೂಮಿ ವಿನ್ಯಾಸ.
* ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು.
* ಗೊಬ್ಬರ ಮತ್ತು ಜೀವಾಣುಗಳ ತಯಾರಿಕೆ.
* ಬೀಜ ಮತ್ತು ಗಿಡಗಳ ಆಯ್ಕೆ.
* ಬೆಳೆ ಆಯೋಜನೆ.
* ರೋಗ ಮತ್ತು ಕೀಟಗಳ ನೈಸರ್ಗಿಕ ನಿಯಂತ್ರಣ.
* ನೀರಾವರಿ ನಿರ್ವಹಣೆ.
* ಬೆಳೆ ಉಳಿಕೆಗಳ ಸದ್ಭಳಕೆ.
* ಕೃಷಿಯ ಇತಿಮಿತಿ ಮತ್ತು ಅದರ ಪ್ರಾಮುಖ್ಯತೆ.
* ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಅವಕಾಶಗಳು ಮತ್ತು ಸವಾಲುಗಳು,
* ಆಹಾರ ಮೈಲುಗಳನ್ನು ಕಡಿಮೆ ಮಾಡುವುದು.
* ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ.
* ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆ.
* ಕೃಷಿ ಮಾರುಕಟ್ಟೆ ಬಿಕ್ಕಟ್ಟು ಮತ್ತು ಸವಾಲುಗಳು ಹಾಗೂ ಇನ್ನಷ್ಟು ವಿಚಾರಗಳು.

ಬಿಡುವಿನ ವೇಳೆಯಲ್ಲಿ : ಗುಂಪು ಚರ್ಚೆಗಳು, ಪ್ರಾತ್ಯಕ್ಷಿಕೆ, ವಿಚಾರ ವಿನಿಮಯ ಮತ್ತು ಶ್ರಮದಾನ

➡️ ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ✒️ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ನೇರ ಭೇಟಿಗೆ ಅವಕಾಶವಿಲ್ಲ.

➡️ ತರಬೇತಿ ಶುಲ್ಕ : ₹1000 / ಒಬ್ಬರಿಗೆ

➡️ ವಸತಿ ಸಹಿತ ಕಾರ್ಯಕ್ರಮವಾಗಿದ್ದು, ಸರಳ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ರಾತ್ರಿ ವೇಳೆ ತಂಗಲು ಹೊದಿಕೆ, ತಲೆದಿಂಬು ತರಲು ಕೋರಲಾಗಿದೆ.

➡️ ಕಾರ್ಯಗಾರವನ್ನು ಹೆಚ್ಚು ಪ್ರಯೋಜನಕಾರಿಯಾಗಿ ಮಾಡಲು, ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಹಂಚಿಕೊಳ್ಳಲು ಕಾರ್ಯಗಾರಕ್ಕೆ ಗರಿಷ್ಠ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸ್ಥಳ 📍 : ಶ್ರೀ ರಾಜೇಶ್ ಅವರ ತೋಟ, ದುಗ್ಗಹಟ್ಟಿ, ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ

Google Location 📍: https://maps.app.goo.gl/ogdQvEEz6iHQ5cPHA

ನೋಂದಣಿಗಾಗಿ ಸಂಪರ್ಕಿಸಿ –
ಶಶಿಕುಮಾರ್ ಎಸ್.

ಮೊ 9880949689

ಶ್ರೀ ಪ್ರಶಾಂತ ಜಯರಾಂ, ಸತ್ತೇಗಾಲ
ಕೃಷಿಕರು ಮತ್ತು ಕೃಷಿ ಸಲಹೆಗಾರರು,
ಮೊ: 9342434530

LEAVE A REPLY

Please enter your comment!
Please enter your name here