ಉದುರಿದ ಎಲೆಗಳಿಂದಾಗುವ ಪ್ರಯೋಜನ

0
ಲೇಖಕರು: ಸಾಯಿಲ್‌ ವಾಸು, ಕೃಷಿತಜ್ಞರು

ಗಿಡ-ಮರಗಳಿಂದ ಉದುರುವ ಒಣಗಿದ ಎಲೆಗಳು ಮತ್ತು ಕಡ್ಡಿಗಳಲ್ಲಿ ಇಂಗಾಲದ ಅಂಶವಿರುತ್ತದೆ . ಜೊತೆಗೆ ಕ್ಯಾಲ್ಸಿಯಂ, ಸಿಲಿಕಾ, ಬೊರಾನ್ , ಕಬ್ಬಿಣ ಹಾಗೂ ಮ್ಯಾಂಗನೀಸ್ ಅಂಶಗಳಿರುತ್ತವೆ.

ನಮ್ಮ ಮಣ್ಣಿಗೆ ಒಂದು ಬಗೆಯ ರೂಪವನ್ನು ನೀಡಿ – ಚೇತರಿಕೆ ತುಂಬಿ – ತಾಕತ್ತು ತರುವ ಒಣಗಿದ ಎಲೆ – ಕಡ್ಡಿಗಳಿಂದ ಬಹುಬಗೆಯ ಪ್ರಯೋಜನಗಳಿವೆ.

– ಸಾವಯವ ಅಂಶದ ರೂಪದಲ್ಲಿ ಮಣ್ಣಿಗೆ ಸೇರುವ ಸಾವಯವ ಇಂಗಾಲಾಂಶ ನಮ್ಮ ಹೊಲತೋಟಗಳ ಮಣ್ಣನ್ನು ಸಜೀವಗೊಳಿಸುತ್ತವೆ.

– ತನ್ನ ಒಡಲಲ್ಲಿರುವ ಪೋಷಕಾಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉತ್ಪಾದಕಾ ಘಟಕಗಳಾಗಿ ಮಣ್ಣನ್ನು ಪರಿವರ್ತನೆಗೊಳ್ಳುತ್ತವೆ

– ಮಣ್ಣಲ್ಲಿನ ಜೀವಾಣುಗಳಿಗೆ ಹಾಗೂ ಬೆಳೆಯುವ ಗಿಡಗಳಿಗೆ ಅಗತ್ಯವಾದ ಸಾವಯವ ಆಹಾರ – ಪೋಷಕಾಂಶಗಳನ್ನು ಹಂತಹಂತವಾಗಿ ಹಾಗೂ ಸಾವಧಾನದಿಂದ ಬಿಡುಗಡೆ ಮಾಡುತ್ತದೆ

– ಅತೀ ಹೆಚ್ಚು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ, ತನ್ನಲ್ಲಿನ ತೇವಾಂಶವನ್ನು ಅಗತ್ಯ ಸಮಯದಲ್ಲಿ ಗಿಡಗಳಿಗೆ ನೀಡಿ, ಗಿಡಗಳು ಬಿಸಿಲಿನಿಂದ ಒಣಗುವುದನ್ನು ತಪ್ಪಿಸುತ್ತವೆ

  • ಮಣ್ಣಿನ ರಸಸಾರದ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ
  • ಮಣ್ಣಲ್ಲಿನ ಕ್ಷಾರೀಯ ಹಾಗೂ ಆಮ್ಲೀಯ ಅಂಶವನ್ನು ತಗ್ಗಿಸುತ್ತದೆ
  • ಇಂಗಾಲಾಂಶ ಹೊಂದಿರುವ ಮಣ್ಣುಗಳು ದಟ್ಟ ಬಣ್ಣಗಳಲ್ಲಿರುತ್ತವೆ.
  • ಮಣ್ಣಲ್ಲಿ ಬೆರೆಯುವ ಸಾವಯವ ಅಂಶ ಮಣ್ನಿನ ಕಣಕಣಗಳನ್ನು (ಮರಳು – ಗೋಡು – ಜೇಡಿ ಕಣಗಳನ್ನು ) ಒಂದುಗೂಡಿಸುತ್ತವೆ.
  • ಇದರಿಂದ ಮಣ್ಣು ಸವೆಯುವುದು ತಪ್ಪುತ್ತದೆ.

ಇದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳ ಅಯಾನುಗಳು ವ್ಯರ್ಥವಾಗದಂತೆ ತಡೆಯುತ್ತದೆ. ಮಣ್ಣಿನಲ್ಲಿ ಮೆಗ್ನೀಸಿಯಮ್  ನಷ್ಟ  ತಡೆಯುತ್ತದೆ. ಸಸ್ಯ ಬೆಳವಣಿಗೆಯ ಉತ್ತೇಜಕಗಳಾಗಿ ಕಾರ್ಯ ನಿರ್ವಹಿಸುತ್ತದೆ. ಮಣ್ಣಿನ ಹ್ಯೂಮಸ್‌ ಅಭಿವೃದ್ಧಿಗೆ ಎಲೆಗಳ ಸಾವಯವ ವಸ್ತುಗಳು ಕಾರ್ಯನಿರ್ವಹಿಸುತ್ತವೆ . ಮಣ್ಣಿನ ಸಾವಯವ ಪದಾರ್ಥವು ಭೂಮಿಯ ಇಂಗಾಲ ಚಕ್ರದ ಪ್ರಮುಖ ಭಾಗವಾಗಿದೆ. ಸಾವಯವ ಪದಾರ್ಥವು ಮಣ್ಣಿನ ಫಲವತ್ತತೆಯ ಸಾಮರ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುತ್ತದೆ. ಮಣ್ಣುಜೀವಿಗಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ.  ಇದರಿಂದ     ಆರೋಗ್ಯಕರ ಕೃಷಿ ವ್ಯವಸ್ಥೆ ಉಂಟಾಗುತ್ತದೆ.

LEAVE A REPLY

Please enter your comment!
Please enter your name here