ಆಲೂಗಡ್ಡೆ ಕುಡಿ ಕೊರಕ

0

ಆಲೂಗಡ್ಡೆಯನ್ನು ಭಾರತದಲ್ಲಿ ತರಕಾರಿಯಂತೆ ಉಪಯೋಗಿಸಿದರೆ ಐರೋಪ್ಯ ರಾಷ್ಟ್ರಗಳಲ್ಲಿ ಜನರ ದಿನನಿತ್ಯದ ಆಹಾರವಾಗಿದೆ. ಜಗತ್ತಿನ ಅತಿ ಹೆಚ್ಚು ಜನರ ಪ್ರಮುಖ ಆಹಾರ ಧಾನ್ಯವಾದ ಅಕ್ಕಿ ಮತ್ತು ಗೋದಿಯ ಉತ್ಪಾದನೆಯು ಆಲೂಗಡ್ಡೆಯ ಉತ್ಪಾದನೆಗೆ ಸಮವಾಗಿದೆ. ಆಲೂಗಡ್ಡೆಯಲ್ಲಿ ಅನೇಕ ರೀತಿಯ ಕೀಟಗಳು ಕಂಡುಬಂದರೂ ಅವುಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ಆರ್ಥಿಕ ನಷ್ಟವನ್ನುಂಟು ಮಾಡುತ್ತವೆ. ಇದರಲ್ಲಿ ಕುಡಿ ಕೊರಕದ ಪಾತ್ರ ಹಿರಿದು.ಆದುದ್ದರಿಂದ ಈ ಕೀಟದ ಬಗ್ಗೆ ಮತ್ತು ಅದರ ಹತೋಟಿ ಕ್ರಮಗಳನ್ನು ತಿಳಿದುಕೊಳ್ಳುವುದು ರೈತರಿಗೆ ಅತ್ಯಾವಶ್ಯಕ.

ಈ ಕೀಟದ ವೈಜ್ಞಾನಿಕ ಹೆಸರು ಲ್ಯುಸಿನೋಡೆಸ್ ಓರ್ಬುನಾಲೆಸ್. ಅಧಿಕ ಉಷ್ಣಾಂಶ ಮತ್ತು ಆರ್ಧ್ರತೆ ಇರುವ ಪ್ರದೇಶಗಳಲ್ಲಿ ಈ ಕೀಟವು ಬದನೆ ಬೆಳೆಯಲ್ಲಿ ಕಂಡುಬರುತ್ತದೆ. ಈ ಕೀಟದ ಹಾವಳಿ ನಾಟಿ ಮಾಡಿದ ಹಂತದಿಂದ ಪ್ರಾರಂಭವಾಗಿ ಮತ್ತು ಗಿಡದ ಬೆಳವಣಿಗೆ ಮುಗಿಯುವವರೆಗೆ ಎಲ್ಲ ಹಂತಗಳಲ್ಲಿ ಕಾಣಲಾಗುತ್ತದೆ.

 ಚಿಟ್ಟೆಯು ಬಿಳಿಯಾದ ರೆಕ್ಕೆಗಳನ್ನು ಹೊಂದಿದ್ದು ಕೇಸರಿ ಕಂದು ಮಿಶ್ರಿತ ಮಚ್ಚೆಗಳಿಂದ ಕೂಡಿರುತ್ತದೆ. ಇದು ಸಹ ಆಲೂಗಡ್ಡೆಗೆ ಆಕ್ರಮಿಸಿ ಕುಡಿ ಮತ್ತು ದೇಟನ್ನು ಕೊರದು, ಬಾಡಿ, ಒಣಗಿ ಹೋಗುವಂತೆ ಮಾಡುತ್ತದೆ. ಹಾಗೆ ಬಾಡಿ ಇಳಿಬಿದ್ದ ಗಿಡಗಳ ಕುಡಿ ಮತ್ತು ದೇಟನ್ನು ಸೀಳಿ ನೋಡಿದರೆ ನಸುಗೆಂಪು ಕೀಡೆ ಕಾಣಿಸುತ್ತದೆ. ಪೂರ್ತಿ ಬೆಳೆದ ಕೀಡೆಯು ಕೊರೆದ ಕುಡಿಯೊಳಗೆ ಕೋಶಾವಸ್ಥೆಗೆ ಹೋಗುತ್ತದೆ.

ನಿರ್ವಹಣಾ ಕ್ರಮಗಳು

ಕುಡಿ ಕೊರಕಗಳಿಗೆ ಲಿಂಗಾಕರ್ಷಕ ಬಲೆಗಳನ್ನು ಒಂದು ಹೆಕ್ಟೇರಿಗೆ 12 ರಂತೆ ಬಳಸಿ ಗಂಡು ಚಿಟ್ಟೆಗಳನ್ನು ಆಕಿರ್ಷಿಸಿ ಕೀಟಗಳ ವೀಕ್ಷಣೆಯನ್ನು ಮಾಡಬೇಕು.

ತಡೆ ಬೆಳೆಯನ್ನು ಆಲೂಗಡ್ಡೆ ಹೊಲದ ಸುತ್ತ ಬೆಳೆಯುವುದರಿಂದ ಇದರ ಬಾಧೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ಹೂವಾಡುವ ಮುಂಚೆ ಬಾಧೆಗೊಳಗಾದ ಬಾಡಿದ ಕುಡಿಗಳನ್ನು ಕತ್ತರಿಸಿ ತೆಗೆದು ಕೀಡೆ ಸಮೇತ ಸುಟ್ಟು ಹಾಕಬೇಕು.

ಮೊಟ್ಟೆ ಪರತಂತ್ರ ಜೀವಿಗಳಾದ ಟ್ರೈಕೋಡರ್ಮಾ ಒಂದು ಹೆಕ್ಟೇರಿಗೆ 50,000 ರಂತೆ ನಾಲ್ಕು ವಾರ ಬಿಡುಗಡೆ ಮಾಡಬೇಕು. ಪರೋಪ ಜೀವಿಗಳ ಚಟುವಟಿಕೆ ಅಧಿಕವಾಗಿದ್ದಾಗ ಕೀಟನಾಶಕವನ್ನು ಸಿಂಪರಣೆ ಮಾಡಬಾರದು.

  • ಬೆಳೆ ಪರಿವರ್ತನೆ ಮಾಡುವುದರಿಂದಲೂ ಈ ಕೀಟದ ನಿಯಂತ್ರಣವನ್ನು ಮಾಡಬಹುದು.

ಲೇಖಕರು: ಪ್ರಶಾಂತ ಕೆ. ನಾಟೀಕಾರ ಮತ್ತು ಆರ್. ಎ. ಬಾಳಿಕಾಯಿ

LEAVE A REPLY

Please enter your comment!
Please enter your name here