ಹವಾಮಾನ ಮುನ್ಸೂಚನೆ; ಭಾರಿಮಳೆ ಮುನ್ನೆಚ್ಚರಿಕೆ

0

ಸೆಪ್ಟೆಂಬರ್ 05 (ಅಗ್ರಿಕಲ್ಚರ್ ಇಂಡಿಯಾ) ಭಾರೀ ಮಳೆ ಮುನ್ನೆಚ್ಚರಿಕೆ:   ಮುಂದಿನ 24 ಘಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ; ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 48 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ; ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ:   ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.

ಬೆಂಗಳೂರು

07ನೇ ಆಗಸ್ಟ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು:  ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ  ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಮತ್ತು ಒಮ್ಮೊಮ್ಮೆ ಭಾರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

07ನೇ ಸೆಪ್ಟೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ಕರಾವಳಿ ಹಾಗು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ಕರಾವಳಿ ಹಾಗು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಸೋಮವಾರ, 05ನೇ ಸೆಪ್ಟೆಂಬರ್  2022 /14 ನೇ ಭಾದ್ರಪದ 1943 ಶಕ, ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಅತಿ ಚುರುಕಾಗಿತ್ತು ಆದಾಗ್ಯೂ ಕರಾವಳಿಯಲ್ಲಿ  ದುರ್ಬಲವಾಗಿತ್ತು. ಕರಾವಳಿ ಹಾಗು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ  ಮಳೆಯಾಗಿದೆ.

ಅತಿ ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ):  ಬೆಂಗಳೂರು ನಗರ, ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 13, ಬೇಗೂರು (ಚಾಮರಾಜನಗರ ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲಾ 12.

ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಕೆರೂರು (ಬಾಗಲಕೋಟೆ ಜಿಲ್ಲೆ), ನುಗ್ಗೇಹಳ್ಳಿ (ಹಾಸನ ಜಿಲ್ಲೆ), ಹೆಸರುಘಟ್ಟ, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ (ಎರಡೂ ಬೆಂಗಳೂರು ನಗರ ಜಿಲ್ಲೆ) ತಲಾ 11; ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಕೆ ಇ ಆರ್ ಎಸ್ (ಮಂಡ್ಯ ಜಿಲ್ಲೆ), ಐಟಿಸಿ ಜಾಲ (ಬೆಂಗಳೂರು ನಗರ ಜಿಲ್ಲೆ) ತಲಾ 10; ನಂಜನಗೂಡು (ಮೈಸೂರು ಜಿಲ್ಲೆ), ಚಾಮರಾಜನಗರ, ಬೆಳ್ಳೂರು, ಮಳವಳ್ಳಿ (ಎರಡೂ ಮಂಡ್ಯ ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 9; ಅರಸೀಕೆರೆ (ಹಾಸನ ಜಿಲ್ಲೆ), ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಯಲಹಂಕ ಐಎಎಫ್ (ಬೆಂಗಳೂರು ನಗರ ಜಿಲ್ಲೆ) ತಲಾ 8; ರಾಯಚೂರು, ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ), ಕೋಣನೂರು (ಹಾಸನ ಜಿಲ್ಲೆ), ಎಚ್ ಡಿ ಕೋಟೆ (ಮೈಸೂರು ಜಿಲ್ಲೆ), ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ), ಎಲೆಕ್ಟ್ರಾನಿಕ್ ಸಿಟಿ ಎಆರ್‌ಜಿ, ಜಿಕೆವಿಕೆ, ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಎಲ್ಲವೂ ಬೆಂಗಳೂರು ನಗರ ಜಿಲ್ಲೆ), ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ), ಕಿಬ್ಬನಹಳ್ಳಿ, ಬರಗೂರು (ಎರಡೂ ತುಮಕೂರು ಜಿಲ್ಲೆ) ತಲಾ 7.

ಇತರೆ ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಬೀದರ್, ಹಾಸನ, ಬಂಡೀಪುರ (ಚಾಮರಾಜನಗರ ಜಿಲ್ಲೆ), ಸೋಂಪುರ ಎಆರ್‌ಜಿ (ಬೆಂಗಳೂರು ನಗರ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 6; ಹುಣಸೂರು, ಸರಗೂರು (ಎರಡೂ ಮೈಸೂರು ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಜ್ಞಾನಭಾರತಿ ಕ್ಯಾಂಪಸ್, ಎಂಪ್ರಿ, ಉತ್ತರಹಳ್ಳಿ (ಎಲ್ಲವೂ ಬೆಂಗಳೂರು ನಗರ ಜಿಲ್ಲೆ), ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ), ಶಿಡ್ಲಘಟ್ಟ (ಚಿಕ್ಕಬಳ್ಳಾಪುರ ಜಿಲ್ಲೆ), ಹೆಬ್ಬೂರು (ತುಮಕೂರು ಜಿಲ್ಲೆ), ಮಾಗಡಿ (ರಾಮನಗರ ಜಿಲ್ಲೆ) ತಲಾ 5; ಅಗ್ರಹಾರ ಕೊಣನಂದೂರು (ಶಿವಮೊಗ್ಗ ಜಿಲ್ಲೆ), ಭಾವಿಕೆರೆ AGRO, ಕಡೂರು (ಎರಡೂ ಚಿಕ್ಕಮಗಳೂರು ಜಿಲ್ಲೆ), ಹಿರಿಯೂರು (ಚಿತ್ರದುರ್ಗ ಜಿಲ್ಲೆ), ತೊಂಡೆಭಾವಿ (ಚಿಕ್ಕಬಳ್ಳಾಪುರ ಜಿಲ್ಲೆ), ಗುಬ್ಬಿ, ಕುಣಿಗಲ್, ಬುಕ್ಕಾಪಟ್ಟಣ (ಎಲ್ಲಾ ತುಮಕೂರು ಜಿಲ್ಲೆ), ರಾಮನಗರ 4; ಧಾರವಾಡ, ಬಬಲೇಶ್ವರ, ಟಿಕ್ಕೋಟ (ಎರಡೂ ವಿಜಯಪುರ ಜಿಲ್ಲೆ), ನಾಪೋಕ್ಲು, ಸೋಮವಾರಪೇಟೆ (ಎರಡೂ ಕೊಡಗು ಜಿಲ್ಲೆ), ಕೊಪ್ಪ (ಚಿಕ್ಕಮಗಳೂರು ಜಿಲ್ಲೆ), ಅರಕಲಗೂಡು (ಹಾಸನ ಜಿಲ್ಲೆ), ಮೈಸೂರು, ಸುತ್ತೂರು ಎಡಬ್ಲ್ಯುಎಸ್ (ಮೈಸೂರು ಜಿಲ್ಲೆ), ಮಂಡ್ಯ, ಕೋಲಾರ, ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ), ಚಿತ್ರದುರ್ಗ, ಬಿ ದುರ್ಗ, ಶ್ರೀರಾಮಪುರ, ನಾಯಕನಹಟ್ಟಿ, ಪರಶುರಾಮಪುರ (ಎಲ್ಲಾ ಚಿತ್ರದುರ್ಗ ಜಿಲ್ಲೆ), ಚಿಕ್ಕಬಳ್ಳಾಪುರ, ಚಿಂತಾಮಣಿ ಪಿಟಿಒ (ಚಿಕ್ಕಬಳ್ಳಾಪುರ ಜಿಲ್ಲೆ), ತುಮಕೂರು, ತಿಪಟೂರು, ಮಧುಗಿರಿ, ಸಿರಾ (ಎಲ್ಲಾ ತುಮಕೂರು ಜಿಲ್ಲೆ) ತಲಾ 3; ಕದ್ರಾ (ಉತ್ತರ ಕನ್ನಡ ಜಿಲ್ಲೆ), ಕುಂದಗೋಳ (ಧಾರವಾಡ ಜಿಲ್ಲೆ), ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ), ಮಂಠಾಳ (ಬೀದರ್ ಜಿಲ್ಲೆ), ವಿರಾಜಪೇಟೆ, ಭಾಗಮಂಡಲ, ಪೊನ್ನಂಪೇಟೆ, ಕುಶಾಲನಗರ (ಎಲ್ಲಾ ಕೊಡಗು ಜಿಲ್ಲೆ), ಹುಂಚದಕಟ್ಟೆ, ಆನವಟ್ಟಿ, ನಿಡಿಗೆ (ಎಲ್ಲಾ ಶಿವಮೊಗ್ಗ ಜಿಲ್ಲೆ), ಕಳಸ, ಅಜ್ಜಂಪುರ, ಪಂಚನಹಳ್ಳಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ), ಕೆ ಆರ್ ನಗರ (ಮೈಸೂರು ಜಿಲ್ಲೆ), ನಾಗಮಂಗಲ (ಮಂಡ್ಯ ಜಿಲ್ಲೆ), ಆನೇಕಲ್ (ಬೆಂಗಳೂರು ನಗರ ಜಿಲ್ಲೆ), ಸಿರುಗುಪ್ಪ, ಕಂಪ್ಲಿ (ಎರಡೂ ಬಳ್ಳಾರಿ ಜಿಲ್ಲೆ), ಹೊಳಲ್ಕೆರೆ, ಹೊಸದುರ್ಗ, ಭರಮಸಾಗರ (ಎಲ್ಲಾ ಚಿತ್ರದುರ್ಗ ಜಿಲ್ಲೆ), ಚನ್ನಪಟ್ಟಣ, ಕನಕಪುರ (ಎರಡೂ ರಾಮನಗರ ಜಿಲ್ಲೆ) ತಲಾ 2; ಬೆಳ್ತಂಗಡಿ, ಧರ್ಮಸ್ಥಳ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಬಾದಾಮಿ, ರಬಕವಿ (ಎರಡೂ ಬಾಗಲಕೋಟೆ ಜಿಲ್ಲೆ), ಫರಹತಾಬಾದ್ (ಕಲಬುರ್ಗಿ ಜಿಲ್ಲೆ), ಶಿವಮೊಗ್ಗ, ಶಿರಾಳಕೊಪ್ಪ, ಭದ್ರಾವತಿ, ಕಟ್ಟಿಕೆರೆ (ಎಲ್ಲಾ ಶಿವಮೊಗ್ಗ ಜಿಲ್ಲೆ), ಚಿಕ್ಕಮಗಳೂರು, ಕೊಟ್ಟಿಗೆಹಾರ, ಜಯಪುರ, ಯಗಟಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ), ಬಾಳ್ಳುಪೇಟೆ, ಸಕಲೇಶಪುರ, ಬೇಲೂರು, ಹಳೇಬೀಡು, ಹೊಳೆನರಸೀಪುರ, ಶ್ರವಣಬೆಳಗೊಳ (ಎಲ್ಲವೂ ಹಾಸನ ಜಿಲ್ಲೆ), ಭೇರ್ಯ, ಸಾಲಿಗ್ರಾಮ (ಎರಡೂ ಮೈಸೂರು ಜಿಲ್ಲೆ), ಕೆ ಆರ್ ಪೇಟೆ, ಪಾಂಡವಪುರ, ಹೊನಕೆರೆ (ಎಲ್ಲಾ ಮಂಡ್ಯ ಜಿಲ್ಲೆ), ಮುಳಬಾಗಲು (ಕೋಲಾರ ಜಿಲ್ಲೆ), ಕುಡತಿನಿ, ಹೊಸಹಳ್ಳಿ (ಎರಡೂ ಬಳ್ಳಾರಿ ಜಿಲ್ಲೆ), ದಾವಣಗೆರೆ, ಸಂತೆಬೆನ್ನೂರು (ದಾವಣಗೆರೆ ಜಿಲ್ಲೆ), ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ (ಎಲ್ಲವೂ ಚಿಕ್ಕಬಳ್ಳಾಪುರ ಜಿಲ್ಲೆ), ಮಿಡಿಗೇಶಿ, ಪಾವಗಡ, ವೈ ಎನ್ ಹೊಸಕೋಟೆ (ಎಲ್ಲಾ ತುಮಕೂರು ಜಿಲ್ಲೆ) ತಲಾ 1.

LEAVE A REPLY

Please enter your comment!
Please enter your name here