ಹವಾಮಾನ ವರದಿ; ಭಾರಿ ಮಳೆ ಮುನ್ನೆಚ್ಚರಿಕೆ

0

ಶುಕ್ರವಾರ, 01 ನೇ  ಸೆಪ್ಟೆಂಬರ್ 2023 / 10ನೇ  ಭಾದ್ರಪದ 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನ ಚುರುಕಾಗಿತ್ತು ;ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಹಾಗೂ ಕರಾವಳಿಯಲ್ಲಿ ದುರ್ಬಲವಾಗಿತ್ತು .

ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ  ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ

ಅತಿ ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ):  ಹಿರಿಯೂರು (ಚಿತ್ರದುರ್ಗ ಜಿಲ್ಲೆ) 12

ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):  ಹಿಡಕಲ್ ಅಣೆಕಟ್ಟು (ಬೆಳಗಾವಿ ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ) ತಲಾ 11; ಬೆಂಗಳೂರು ನಗರ 9; ಮಧುಗಿರಿ ಬರಗೂರು (ಎರಡೂ ತುಮಕೂರು ಜಿಲ್ಲೆ), ಬೆಂಗಳೂರು ಹಾಲ್ ವಿಮಾನ ನಿಲ್ದಾಣ, ರಾಮನಗರ ತಲಾ 7.

ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):   ಎಲೆಕ್ಟ್ರಾನಿಕ್ ಸಿಟಿ ಎಆರ್‌ಜಿ, ಉತ್ತರಹಳ್ಳಿ (ಎರಡೂ ಬೆಂಗಳೂರು ನಗರ ಜಿಲ್ಲೆ), ಗುಬ್ಬಿ (ತುಮಕೂರು ಜಿಲ್ಲೆ), ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 6;ಧಾರವಾಡ, ಕಣಬರ್ಗಿ ಅವ್ಸ್ (ಬೆಳಗಾವಿ ಜಿಲ್ಲೆ), ಬಾದಾಮಿ (ಬಾಗಲಕೋಟೆ ಜಿಲ್ಲೆ), ಹುಣಸೂರು (ಮೈಸೂರು ಜಿಲ್ಲೆ), ಮಾಗಡಿ (ರಾಮನಗರ ಜಿಲ್ಲೆ), ತುಮಕೂರು, ಮಿಡಿಗೇಶಿ, ಬುಕ್ಕಪಟ್ಟಣ (ಎರಡೂ ತುಮಕೂರು ಜಿಲ್ಲೆ), ಚನ್ನಪಟ್ಟಣ (ರಾಮನಗರ ಜಿಲ್ಲೆ, ಜ್ಞಾನಘಟ್ಟ), ಹೆಸರಘಟ್ಟ, ಬೆಂಗಳೂರು ಕೆಐಎಎಲ್. ಬು ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ ಎರಡೂ) ತಲಾ 5; ಹುಬ್ಬಳ್ಳಿ (ಧಾರವಾಡ ಜಿಲ್ಲೆ), ಬೇಲೂರು (ಹಾಸನ ಜಿಲ್ಲೆ), ಹರಪನಹಳ್ಳಿ (ವಿಜಯನಗರ ಜಿಲ್ಲೆ), ಚಿಂತಾಮಣಿ, ಗೌರಿಬಿದನೂರು (ಚಿಕಬಳ್ಳಾಪುರ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಬೆಳ್ಳೂರು (ಮಂಡ್ಯ ಜಿಲ್ಲೆ), ತೊಂಡೆಭಾವಿ (ಚಿಕಬಳ್ಳಾಪುರ ಜಿಲ್ಲೆ) 4.ಶಿರಹಟ್ಟಿ (ಗದಗ ಜಿಲ್ಲೆ), ಬೆಳಗಾವಿ ವಿಮಾನ ನಿಲ್ದಾಣ, ಹುಕ್ಕೇರಿ, ಕಟ್ಕೋಳ, ಯಡವಾಡ (ಎಲ್ಲಾ ಬೆಳಗಾವಿ ಜಿಲ್ಲೆ) , ನರಗುಂದ (ಗದಗ ಜಿಲ್ಲೆ) ಧಾರವಾಡ, ಸಿರಾ, ವೈ ಎನ್ ಹೊಸಕೋಟೆ (ಎರಡೂ ತುಮಕೂರು ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 3;ಸಂಕೇಶ್ವರ, ನಿಪ್ಪಾಣಿ, ಬೈಲಹೊಂಗಲ (ಎಲ್ಲಾ ಬೆಳಗಾವಿ ಜಿಲ್ಲೆ), ರೋನ್ (ಗದಗ ಜಿಲ್ಲೆ), ಚಿಕ್ಕಬಳ್ಳಾಪುರ, ಶ್ರವಣಬೆಳಗೊಳ (ಹಾಸನ ಜಿಲ್ಲೆ), ಚಿಕ್ಕನಹಳ್ಳಿ ಎಡಬ್ಲ್ಯೂಎಸ್ (ತುಮಕೂರು ಜಿಲ್ಲೆ) ತಲಾ 2,ಲಕ್ಷ್ಮೇಶ್ವರ (ಗದಗ ಜಿಲ್ಲೆ), ಚಿಕ್ಕೋಡಿ, ಮುರಗೋಡ, ಮತ್ತಿಕೊಪ್ಪ, ಸುತಗಟ್ಟಿ (ಎಲ್ಲಾ ಬೆಳಗಾವಿ ಜಿಲ್ಲೆ), ಅಣ್ಣಿಗೆರೆ ಆರ್ಸ್ (ಧಾರವಾಡ ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ), ಚಿತ್ರದುರ್ಗ, ಕೋಲಾರ, ಮಂಡ್ಯ, ಮಾಲೂರು (ಕೋಲಾರ ಜಿಲ್ಲೆ), ಸಾಲಿಗ್ರಾಮ (ಮೈಸೂರು) ಪ್ರತಿಯೊಂದೂ.

03 ನೇ ಸೆಪ್ಟೆಂಬರ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ,  ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ; ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು

ಭಾರೀ ಮಳೆ ಮುನ್ನೆಚ್ಚರಿಕೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 48 ಘಂಟೆಗಳು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಗುಡುಗು ಮುನ್ನೆಚ್ಚರಿಕೆ:

ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ಇಲ್ಲ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

03 ನೇ ಸೆಪ್ಟೆಂಬರ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಮ್ಮೊಮ್ಮೆ ಭಾರಿ ಮಳೆ ಹಾಗು ಕೆಲವು ಬಾರಿ ಮಳೆ/ಗುಡುಗು ಸಹಿತ  ಮಳೆಯಾಗುವ  ಬಹಳಷ್ಟು ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.

.ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಮ್ಮೊಮ್ಮೆ ಭಾರಿ ಮಳೆ ಹಾಗು ಕೆಲವು ಬಾರಿ ಮಳೆ/ಗುಡುಗು ಸಹಿತ  ಮಳೆಯಾಗುವ  ಬಹಳಷ್ಟು ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here